AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಂದ್ರಪ್ಪ ರೆಬಲ್ ಶಾಸಕನಲ್ಲ, ನೀತಿ ಇಲ್ಲದ ಶಾಸಕ: ಹೆಚ್ ಆಂಜನೇಯ ವಾಗ್ದಾಳಿ

ಪುತ್ರ ರಘುಚಂದನ್​ಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈತಪ್ಪಿದ ಬಗ್ಗೆ ಅಸಮಾಧಾನಗೊಂಡಿರುವ ಹೊಳಲ್ಕೆರೆ ಶಾಸಕ ಎಂ ಚಂದ್ರಪ್ಪ ಅವರು ಬಂಡಾಯ ಎದ್ದಿದ್ದಾರೆ. ಅಲ್ಲದೆ, ಬಿಜೆಪಿ ಮಾಜಿ ಶಾಸಕ ಜಿಹೆಚ್​ ತಿಪ್ಪಾರೆಡ್ಡಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಇದೇ ವಿಚಾರವಾಗಿ ಆಕ್ರೋಶ ಹೊರಹಾಕಿದ ಹೆಚ್​ ಆಂಜನೇಯ, ಚಂದ್ರಪ್ಪ ಅವರು ರೆಬಲ್ ಶಾಸಕ ಅಲ್ಲ, ನೀತಿ ಇಲ್ಲದ ಶಾಸಕ ಎಂದು ಹೇಳಿದ್ದಾರೆ.

ಚಂದ್ರಪ್ಪ ರೆಬಲ್ ಶಾಸಕನಲ್ಲ, ನೀತಿ ಇಲ್ಲದ ಶಾಸಕ: ಹೆಚ್ ಆಂಜನೇಯ ವಾಗ್ದಾಳಿ
ಚಂದ್ರಪ್ಪ ರೆಬಲ್ ಶಾಸಕನಲ್ಲ, ನೀತಿ ಇಲ್ಲದ ಶಾಸಕ: ಹೆಚ್ ಆಂಜನೇಯ ವಾಗ್ದಾಳಿ
ಬಸವರಾಜ ಮುದನೂರ್, ಚಿತ್ರದುರ್ಗ
| Updated By: Rakesh Nayak Manchi|

Updated on:Mar 31, 2024 | 10:18 PM

Share

ಚಿತ್ರದುರ್ಗ, ಮಾ.31: ಹೊಳಲ್ಕೆರೆ ಬಿಜೆಪಿ ಶಾಸಕ ಎಂ ಚಂದ್ರಪ್ಪ (M Chandrappa) ರೆಬಲ್ ಶಾಸಕನಲ್ಲ, ಆತ ನೀತಿ ಇಲ್ಲದ ಶಾಸಕ ಎಂದು ಮಾಜಿ ಸಚಿವ ಹೆಚ್​ ಆಂಜನೇಯ (H Anjaneya) ಅವರು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಚಂದ್ರಪ್ಪ ಅವರ ಕುರಿತು ಬಿಜೆಪಿ ಮಾಜಿ ಶಾಸಕ ಜಿಹೆಚ್ ತಿಪ್ಪಾರೆಡ್ಡಿ (GH Thippareddy) ಏಕವಚನದಲ್ಲೇ ಆಕ್ರೋಶ ಹೊರಹಾಕಿದ್ದರು. ಇದಕ್ಕೆ ಪ್ರತಿಯಾಗಿ ಚಂದ್ರಪ್ಪ ಅವರು ತಿಪ್ಪಾರೆಡ್ಡಿ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದರು. ತಿಪ್ಪಾರೆಡ್ಡಿ ವಿರುದ್ಧ ಎಕವಚನದಲ್ಲಿ ಮಾತನಾಡಿದ ಹಿನ್ನೆಲೆ ಕಾಂಗ್ರೆಸ್ ನಾಯಕ ಆಂಜನೇಯ ಅವರು ಚಂದ್ರಪ್ಪ ವಿರುದ್ಧ ಏಕವಚನದಲ್ಲೇ ಟೀಕಿಸಿದ್ದಾರೆ.

ಚಿತ್ರದುರ್ಗದಲ್ಲಿ ಚಂದ್ರಪ್ಪ ವಿರುದ್ಧ ವಾಗ್ದಾಳಿ ನಡೆಸಿದ ಆಂಜನೇಯ, ಅವನು ರೆಬಲ್ ಅಲ್ಲ, ಏನೂ ಅಲ್ಲ. ಎಂ.ಚಂದ್ರಪ್ಪ ನೀತಿ ಇಲ್ಲದ ಶಾಸಕ. ರೆಬಲ್ ಆಗಿದ್ದಾನೋ, ನಾಳೆ ಒಂದಾಗುತ್ತಾನೋ ಗೊತ್ತಿಲ್ಲ. ಜಿ.ಹೆಚ್‌.ತಿಪ್ಪಾರೆಡ್ಡಿ ಬಗ್ಗೆ ಎಂ.ಚಂದ್ರಪ್ಪ ಮಾತನಾಡಿದ್ದನ್ನು ನೋಡಿದ್ದೇನೆ. ಶಾಸಕ ಎಂ.ಚಂದ್ರಪ್ಪ ಹಾಗೆಲ್ಲ ಮಾತಾಡಬಾರದು, ಸಂಸ್ಕಾರ ಇದೆಯೇ? ತಿಪ್ಪಾರೆಡ್ಡಿ ಜಿಲ್ಲೆಯ ಹಿರಿಯ ನಾಯಕರು, ಹಗುರವಾಗಿ ಮಾತಾಡಬಾರದು. ಸಾವು ಯಾರ ಕೈಯಲ್ಲಿಲ್ಲ, ಸಾವಿನ ಬಗ್ಗೆ ಯಾರೂ ಮಾತನಾಡಬಾರದು. ಹಣದ ಕೊಬ್ಬಿನಿಂದ ಹಾಗೇ ಮಾತನಾಡಿದರೆ ಒಪ್ಪಲ್ಲ ಎಂದರು.

ಇದನ್ನೂ ಓದಿ: ಏ.3 ರಂದು ರಘುಚಂದನ್ ಪಕ್ಷೇತರ ಸ್ಪರ್ಧೆ: ನಾಮಪತ್ರ ಸಲ್ಲಿಕೆ ಸುಳಿವು ನೀಡಿದ ಬಿಜೆಪಿ ರೆಬಲ್ ಶಾಸಕ ಚಂದ್ರಪ್ಪ

ಕಾಂಗ್ರೆಸ್​ನಿಂದ ಸುಮಾರು 10 ಕಡೆ ಮಕ್ಕಳು, ಅಳಿಯಂದಿರಿಗೆ ಟಿಕೆಟ್ ನೀಡಿದ್ದರ ಬಗ್ಗೆ ಮಾತನಾಡಿದ ಆಂಜನೇಯ, ಸಚಿವ ಕೆ ಹೆಚ್ ಮುನಿಯಪ್ಪ ಸಹ ಅಳಿಯಂದಿರಿಗೆ ಟಿಕೆಟ್ ಕೇಳಿದ್ದರು. ಎರಡು ಗುಂಪು ಮೆಚ್ಚುವ ಅಬ್ಯರ್ಥಿ ಗೌತಮ್‌ಗೆ ಪಕ್ಷ ಟಿಕೆಟ್‌ ನೀಡಿದೆ. ಐದು ಎಸ್​ಸಿ ಮೀಸಲು ಕ್ಷೇತ್ರಗಳ ಪೈಕಿ ಎರಡು ಕಡೆ ಎಡಗೈ ಸಮುದಾಯಕ್ಕೆ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್ ಪಕ್ಷ ನಮ್ಮ ಸಮಾಜಕ್ಕೆ ಸಮಾಜಿಕ‌ ನ್ಯಾಯ ನೀಡಿದೆ. ಹೀಗಾಗಿ ನಮ್ಮ ಸಮುದಾಯವು ಕಾಂಗ್ರೆಸ್ ಪರವಿರಲು‌ ಮನವಿ ಮಾಡಿದರು.

ಹಳೇ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಕಾಂಗ್ರೆಸ್ ಸಮಾವೇಶ

ಚಿತ್ರದುರ್ಗ ಲೋಕಸಭೆ ಕ್ಷೇತ್ರದಲ್ಲಿ ನಮ್ಮ ಪಕ್ಷ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದ ಆಂಜನೇಯ, ಪಂಚ ಕಲ್ಯಾಣ ಯೋಜನೆ ಮೂಲಕ ಸಾಕಷ್ಟು ಉಪಕಾರ ಮಾಡಿದ್ದೇವೆ. ಎಪ್ರಿಲ್ 4 ರಂದು ನಮ್ಮ ಅಬ್ಯರ್ಥಿ ಬಿ ಎನ್ ಚಂದ್ರಪ್ಪ ನಾಮಪತ್ರ ಸಲ್ಲಿಸುತ್ತಾರೆ. ಬಳಿಕ ಹಳೇ ಮಾಧ್ಯಮಿಕ ಶಾಲಾ ಮೈದಾನದಲ್ಲಿ ಸಮಾವೇಶ ನಡೆಯಲಿದೆ. ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:53 pm, Sun, 31 March 24

171 ರನ್​ ಗಳಿಸಿದ ಪಾಕಿಸ್ತಾನ್: 184 ರನ್​ ಚೇಸ್ ಮಾಡಿ ಗೆದ್ದ ವಿಂಡೀಸ್
171 ರನ್​ ಗಳಿಸಿದ ಪಾಕಿಸ್ತಾನ್: 184 ರನ್​ ಚೇಸ್ ಮಾಡಿ ಗೆದ್ದ ವಿಂಡೀಸ್
Daily Devotional: ಮಕ್ಕಳಿಗೆ ಬಾಲಾರಿಷ್ಟ ದೋಷಕ್ಕೆ ಪರಿಹಾರ ತಿಳಿಯಿರಿ
Daily Devotional: ಮಕ್ಕಳಿಗೆ ಬಾಲಾರಿಷ್ಟ ದೋಷಕ್ಕೆ ಪರಿಹಾರ ತಿಳಿಯಿರಿ
Daily horoscope: ಹಿಂಜರಿಕೆಯಿಂದ ನಿಮಗೆ ಒಳ್ಳೆಯದೇ ಆಗಲಿದೆ
Daily horoscope: ಹಿಂಜರಿಕೆಯಿಂದ ನಿಮಗೆ ಒಳ್ಳೆಯದೇ ಆಗಲಿದೆ
ವಿದ್ಯುತ್​ ದೀಪಾಲಂಕಾರ ನೋಡುತ್ತ ಮೈಸೂರು ಅರಮನೆಗೆ ಬಂದ ದಸರಾ ಆನೆಗಳು
ವಿದ್ಯುತ್​ ದೀಪಾಲಂಕಾರ ನೋಡುತ್ತ ಮೈಸೂರು ಅರಮನೆಗೆ ಬಂದ ದಸರಾ ಆನೆಗಳು
ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾದರೆ 5 ಲಕ್ಷ ರೂ.: ಯತ್ನಾಳ್
ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾದರೆ 5 ಲಕ್ಷ ರೂ.: ಯತ್ನಾಳ್
ಮೋದಿ ತೆರಳುತ್ತಿದ್ದ ವೇಳೆ ಬ್ಯಾರಿಕೇಡ್​ ಜಂಪ್ ಮಾಡಲು ಯತ್ನಿಸಿದ ಯುವಕ
ಮೋದಿ ತೆರಳುತ್ತಿದ್ದ ವೇಳೆ ಬ್ಯಾರಿಕೇಡ್​ ಜಂಪ್ ಮಾಡಲು ಯತ್ನಿಸಿದ ಯುವಕ
8 ಸಿಕ್ಸರ್, 83 ರನ್; ಟಿಮ್ ಡೇವಿಡ್ ಸಿಡಿಲಬ್ಬರದ ಬ್ಯಾಟಿಂಗ್‌
8 ಸಿಕ್ಸರ್, 83 ರನ್; ಟಿಮ್ ಡೇವಿಡ್ ಸಿಡಿಲಬ್ಬರದ ಬ್ಯಾಟಿಂಗ್‌
‘ಸನ್ ಆಫ್ ಮುತ್ತಣ್ಣ’ ಸಿನಿಮಾದ ಬಗ್ಗೆ ನಟ ರಂಗಾಯಣ ರಘು ಮಾತು
‘ಸನ್ ಆಫ್ ಮುತ್ತಣ್ಣ’ ಸಿನಿಮಾದ ಬಗ್ಗೆ ನಟ ರಂಗಾಯಣ ರಘು ಮಾತು
ಮನೋರಂಜನ್ ರವಿಚಂದ್ರನ್ ಹೊಸ ಸಿನಿಮಾಗೆ ಮುಹೂರ್ತ; ಜೋಡಿಯಾದ ಬೃಂದಾ ಆಚಾರ್ಯ
ಮನೋರಂಜನ್ ರವಿಚಂದ್ರನ್ ಹೊಸ ಸಿನಿಮಾಗೆ ಮುಹೂರ್ತ; ಜೋಡಿಯಾದ ಬೃಂದಾ ಆಚಾರ್ಯ
ಮೋದಿ-ಸಿದ್ದರಾಮಯ್ಯ ಮಟ್ರೋನಲ್ಲಿ ಸಂಚಾರ: ಪ್ರಯಾಣದುದ್ದಕ್ಕೂ ನಗೆಯಲ್ಲಿ ತೇಲಾಟ
ಮೋದಿ-ಸಿದ್ದರಾಮಯ್ಯ ಮಟ್ರೋನಲ್ಲಿ ಸಂಚಾರ: ಪ್ರಯಾಣದುದ್ದಕ್ಕೂ ನಗೆಯಲ್ಲಿ ತೇಲಾಟ