ಬೆಂಗಳೂರಿನ ವಾಯು ಮಾಲಿನ್ಯದಿಂದ COPD ಹೆಚ್ಚಳ, ವೈದ್ಯರಿಂದ ಶಾಕಿಂಗ್ ಮಾಹಿತಿ

ಹೃದಯಾಘಾತದಿಂದ ಜನ ಜೀವ ಕಳೆದುಕೊಳ್ತಿದ್ದಾರೆ. ಕ್ಯಾನ್ಸರ್ ನಿಂದ ಸಾವನ್ನಪ್ಪುತ್ತಿದ್ದಾರೆ. ರಸ್ತೆ ಅಪಘಾತದಲ್ಲಿ ನಿತ್ಯ ಹತ್ತಾರೂ ಸಾವು ಸಂಭವಿಸುತ್ತಿದೆ. ಇದೆಲ್ಲದರ ಮಧ್ಯೆ ಸೈಲೆಂಟ್ ಕಿಲ್ಲರ್ ಆಗಿ ಶ್ವಾಸಕೋಶದ ಖಾಯಿಲೆಯೊಂದು ಮೂರನೇ ಒಂದು ಭಾಗದಷ್ಟು ಸಾವಿನ ಪ್ರಮಾಣಕ್ಕೆ ಕಾರಣವಾಗಿದೆ. ವಾಯುಮಾಲಿನ್ಯದಿಂದ ಸಿಟಿ ಜನರ ಆಯಸ್ಸು ಕಡಿಮೆಯಾಗುತ್ತಿರುವ ಆತಂಕಕಾರಿ ವಿಚಾರವನ್ನು ವೈದ್ಯರು ಹೊರಹಾಕಿದ್ದಾರೆ.

ಬೆಂಗಳೂರಿನ ವಾಯು ಮಾಲಿನ್ಯದಿಂದ COPD ಹೆಚ್ಚಳ, ವೈದ್ಯರಿಂದ ಶಾಕಿಂಗ್ ಮಾಹಿತಿ
ಸಾಂದರ್ಭಿಕ ಚಿತ್ರ
Follow us
Vinay Kashappanavar
| Updated By: ಆಯೇಷಾ ಬಾನು

Updated on:Oct 04, 2024 | 9:12 AM

ಬೆಂಗಳೂರು, ಅ.04: ಸಿಟಿ ಜನ ಸಿಕ್ಕಾಪಟ್ಟೆ ಹೆಲ್ತ್ ಕಾನ್ಶಿಯಸ್. ಮಾರ್ನಿಂಗ್ ವಾಕಿಂಗ್, ಜಿಮ್ನಿಂದ ಶುರುವಾಗುವ ದಿನ ಡಯಟ್ ಫುಡ್ನಿಂದ ಎಂಡ್ ಆಗುತ್ತೆ. ಇದರ ಮಧ್ಯೆ ಹೈಡ್ರೇಷನ್, ಡಿಟಾಕ್ಸಿಫಿಕೇಶನ್ ಅಂತ ಹತ್ತಾರು ಸರ್ಕಸ್ ಮಾಡಿ ಬಾಡಿ ಮೈಟೇನ್ ಮಾಡ್ತಾರೆ. ಆದರೆ ಇಷ್ಟೆಲ್ಲಾ ಹರಸಾಹಸ ಪಟ್ರೂ ಸಿಟಿ (Bengaluru) ಜನರ ಜೀವನ್ನು ಕಲುಷಿತ ಗಾಳಿ ಹಾಳು ಮಾಡುತ್ತಿದೆ. ವಾಯು ಮಾಲಿನ್ಯದಿಂದ (Pollution) ಸಿಟಿ ಜನರ ಶ್ವಾಸಕೋಶ (Lung) ಡ್ಯಾಮೇಜ್ ಆಗ್ತಿದೆ. ರಾಜಧಾನಿಯಲ್ಲಿ ಹೆಚ್ಚುತ್ತಿರುವ ಕಲುಷಿತ ಗಾಳಿಯಿಂದಾಗಿ ಕ್ರೋನಿಕ್ ಆಬ್ಸ್ಟ್ರೆಕ್ಟಿವ್ ಪಲುಮನರಿ ಡಿಸೀಸ್ ಪ್ರಮಾಣ ಶೇಕಾಡ 35ರಷ್ಟು ಏರಿಕೆಯಾಗಿದೆ.

ಹೊಸ ಅಧ್ಯಯನಕ್ಕೆ ತಯಾರಿ

ಹೃದಯಾಘಾತ, ಕ್ಯಾನ್ಸರ್ ಬಳಿಕ COPD ಅಂದ್ರೆ ಕ್ರೋನಿಕ್ ಅಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ ಸಿಟಿ ಜನರ ಪ್ರಾಣ ತೆಗೆಯುತ್ತಿದೆ. Chronic obstructive pulmonary disease ಪ್ರಮಾಣ ಶೇ 35% ಏರಿಕೆಯಾಗಿದ್ದು, ಇದು ಮೂರನೇ ಒಂದು ಭಾಗದಷ್ಟು ಸಾವಿನ ಪ್ರಮಾಣವನ್ನು ಹೆಚ್ಚಿಸಿದೆ. ಪ್ರತಿ ನೂರು ಜನರಲ್ಲಿ 30 ಜನರು ಈ ಡಿಸೀಜ್ ಗೆ ಬಲಿಯಾಗ್ತಿದ್ದಾರೆ. ಹೀಗಾಗಿ ಬೆಂಗಳೂರಿನ ಕಲುಷಿತ ಗಾಳಿ ಹಾಗೂ ಆರೋಗ್ಯದ ಸಮಸ್ಯೆಗಳ ಕುರಿತು ಅಧ್ಯಯನಕ್ಕೆ ಸರ್ಕಾರ ಮುಂದಾಗಿದೆ. ಯಾವ ಯಾವ ಭಾಗದಲ್ಲಿ ಹೆಚ್ಚಾಗಿ ಕಲುಷಿತ ಗಾಳಿ ಕಂಡು ಬರ್ತಿದೆ. ಇದರಿಂದ ಯಾವೆಲ್ಲ ಆರೋಗ್ಯದ ಸಮಸ್ಯೆಗಳು ಕಂಡು ಬರ್ತಿವೆ. ಯಾವೆಲ್ಲ ಅಪಾಯ ಆರೋಗ್ಯದ ಸಮಸ್ಯೆ ಕಂಡು ಬರ್ತಿವೆ. ವಾಯು ಮಾಲಿನ್ಯದಿಂದ Chronic obstructive pulmonary disease ಎಲ್ಲೆಲ್ಲಿ ಹೆಚ್ಚಾಗುತ್ತಿದೆ ಅಂತಾ ಸಂಪೂರ್ಣ ಅಧ್ಯಯನಕ್ಕೆ ರಾಜೀವ್ ಗಾಂಧಿ ಆಸ್ಪತ್ರೆ ಮುಂದಾಗಿದೆ.

COPD ಎಂದರೇನು?

ಕ್ರೋನಿಕ್ ಅಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್. ಕಲುಷಿತ ಗಾಳಿ ಸೇವಿಸುವುದರಿಂದ ಶ್ವಾಸಕೋಶದ ಮೇಲೆ ಉಂಟಾಗುವ ಪರಿಣಾಮದಿಂದ ಸಿಒಪಿಡಿ ಆರೋಗ್ಯ ಸಮಸ್ಯೆ ಉಲ್ಭಣಗೊಳ್ಳುತ್ತದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ, ಧೂಮಪಾನ ಹಾಗೂ ತಂಬಾಕು ಸೇವನೆ, ಜೈವಿಕ ಇಂಧನ ಹೊಗೆಯಿಂದಾಗಿ ಬಹುತೇಕರು ಸಿಒಪಿಡಿಯಿಂದ ಬಳಲುತ್ತಿದ್ದಾರೆ.

ಇದನ್ನೂ ಓದಿ: ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಬಹುತೇಕ ಖಚಿತ: ಜನರ ಅಭಿಪ್ರಾಯ ಕೋರಿದ ಬಿಎಂಆರ್​ಸಿಎಲ್

COPD ಗುಣಲಕ್ಷಣಗಳೇನು?

ನಿಲ್ಲದ ಕೆಮ್ಮು, ಉಸಿರಾಡಲು ತೊಂದರೆ, ಧಮ್ ಕಟ್ಟಿದ ಅನುಭವ, ವೀಝಿಂಗ್, ನೀಲಿಗಟ್ಟಿದ ಚರ್ಮ COPDಯ ಗುಣಲಕ್ಷಣ. ಇದು ಏಕಕಾಲಕ್ಕೆ ಅಲ್ಲದಿದ್ರೂ ಧೀರ್ಘ ಕಾಲದಲ್ಲಿ ಶ್ವಾಸಕೋಶವನ್ನು ಡ್ಯಾಮೇಜ್ ಮಾಡಿ, ಸಾವಿನ ಸಮೀಪಕ್ಕೆ ಕೊಂಡೊಯುತ್ತದೆ. ಸೈಲೆಂಟ್ ಕಿಲ್ಲರ್ ಆಗಿರುವ ಕ್ರೋನಿಕ್ ಆಬ್ಸ್ಟ್ರೆಕ್ಟಿವ್ ಪಲುಮನರಿ ಡಿಸೀಸ್ ಬಗ್ಗೆ ಅಧ್ಯಯನ ನಡೆಸಲು ವೈದ್ಯಕೀಯ ಶಿಕ್ಷಣ ಮುಂದಾಗಿದ್ದು, ವರದಿ ಪಡೆದು ಸರ್ಕಾರದ ನೇತೃತ್ವದಲ್ಲಿ ಪರ್ಯಾಯ ಕಾರ್ಯಕ್ರಮಗಳ ರೂಪರೇಶ ಸಿದ್ಧಪಡಿಸಲು ಸಿದ್ಧಗೊಂಡಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:58 am, Fri, 4 October 24

ಆರೋಪ ಮಾಡಲು ವಿಷಯಗಳಿಲ್ಲ, ಹಾಗಾಗೇ ಕೊಲೆಗಡುಕ ಅಂತಾರೆ: ಪಲ್ಲವಿ
ಆರೋಪ ಮಾಡಲು ವಿಷಯಗಳಿಲ್ಲ, ಹಾಗಾಗೇ ಕೊಲೆಗಡುಕ ಅಂತಾರೆ: ಪಲ್ಲವಿ
ಫಾರಂ ಹೌಸ್​ನಲ್ಲಿ ದರ್ಶನ್, ಹಲವು ಎಚ್ಚರಿಕಾ ಕ್ರಮ
ಫಾರಂ ಹೌಸ್​ನಲ್ಲಿ ದರ್ಶನ್, ಹಲವು ಎಚ್ಚರಿಕಾ ಕ್ರಮ
ಧ್ಯಾನವೆಂಬುದು ಮಾನಸಿಕ ನೈರ್ಮಲ್ಯ, ಏಕಾಗ್ರತೆಯ ಮೆಟ್ಟಿಲು: ರವಿಶಂಕರ್ ಗುರೂಜಿ
ಧ್ಯಾನವೆಂಬುದು ಮಾನಸಿಕ ನೈರ್ಮಲ್ಯ, ಏಕಾಗ್ರತೆಯ ಮೆಟ್ಟಿಲು: ರವಿಶಂಕರ್ ಗುರೂಜಿ
ಚೈತ್ರಾಗೆ ಕಿಚ್ಚ ಸುದೀಪ್ ಮಂಗಳಾರತಿ; ಮತ್ತೆ ಕಣ್ಣೀರು ಫಿಕ್ಸ್​
ಚೈತ್ರಾಗೆ ಕಿಚ್ಚ ಸುದೀಪ್ ಮಂಗಳಾರತಿ; ಮತ್ತೆ ಕಣ್ಣೀರು ಫಿಕ್ಸ್​
ಮಾರ್ಷಲ್​ಗಳ ರಕ್ಷಣೆಯಲ್ಲಿ ಸಭಾಪತಿಯವರ ಕೋಣೆಗೆ ಹೋದೆ: ಸಿಟಿ ರವಿ
ಮಾರ್ಷಲ್​ಗಳ ರಕ್ಷಣೆಯಲ್ಲಿ ಸಭಾಪತಿಯವರ ಕೋಣೆಗೆ ಹೋದೆ: ಸಿಟಿ ರವಿ
CT ರವಿಯನ್ನು ಸುತ್ತಾಡಿಸಿದ ಬೆಳಗಾವಿ ಪೊಲೀಸರಿಗೆ ಫೋನ್​​ಗಳು: ವಿಡಿಯೋ ವೈರಲ್
CT ರವಿಯನ್ನು ಸುತ್ತಾಡಿಸಿದ ಬೆಳಗಾವಿ ಪೊಲೀಸರಿಗೆ ಫೋನ್​​ಗಳು: ವಿಡಿಯೋ ವೈರಲ್
ರವಿ ಆರೋಪಿಯಾಗಿದ್ದರು, ಆದರೆ ಉಳಿದ ಬಿಜೆಪಿ ಶಾಸಕರು ಠಾಣೆಯಲ್ಲಿ ಯಾಕೆ? ಖರ್ಗೆ
ರವಿ ಆರೋಪಿಯಾಗಿದ್ದರು, ಆದರೆ ಉಳಿದ ಬಿಜೆಪಿ ಶಾಸಕರು ಠಾಣೆಯಲ್ಲಿ ಯಾಕೆ? ಖರ್ಗೆ
ಆತ್ಮಸಾಕ್ಷಿಯೇ ಎಲ್ಲದಕ್ಕೂ ನ್ಯಾಯ ಒದಗಿಸುತ್ತದೆ: ಶಿವಕುಮಾರ್
ಆತ್ಮಸಾಕ್ಷಿಯೇ ಎಲ್ಲದಕ್ಕೂ ನ್ಯಾಯ ಒದಗಿಸುತ್ತದೆ: ಶಿವಕುಮಾರ್
ಬಿಜೆಪಿ ಕಚೇರಿಯಲ್ಲಿ ಸಿಟಿ ರವಿ ಸುದ್ದಿಗೋಷ್ಠಿಯ ನೇರಪ್ರಸಾರ
ಬಿಜೆಪಿ ಕಚೇರಿಯಲ್ಲಿ ಸಿಟಿ ರವಿ ಸುದ್ದಿಗೋಷ್ಠಿಯ ನೇರಪ್ರಸಾರ
ನಿಂದನೆ ನಡೆದಿದ್ದು ಸದನದ ಒಳಗೋ, ಹೊರಗೋ ಅನ್ನೋದು ಖಚಿತವಾಗಿಲ್ಲ: ಪರಮೇಶ್ವರ್
ನಿಂದನೆ ನಡೆದಿದ್ದು ಸದನದ ಒಳಗೋ, ಹೊರಗೋ ಅನ್ನೋದು ಖಚಿತವಾಗಿಲ್ಲ: ಪರಮೇಶ್ವರ್