ಕಾಲೇಜು ಆರಂಭದ ಬಗ್ಗೆ ಸುಳಿವು ನೀಡಿದ ಡಾ.ಅಶ್ವತ್ಥ ನಾರಾಯಣ; ಲಸಿಕೆ ವಿತರಣೆ ಸಂಪೂರ್ಣ ಆಗುತ್ತಿದ್ದಂತೆಯೇ ತರಗತಿ ಶುರು?
ವಿದ್ಯಾರ್ಥಿಗಳಿಗೆ ಕೂಡಾ ಕೊರೊನಾ ಲಸಿಕೆ ನೀಡಲಾಗುತ್ತಿದೆ. ನಮಗೆ ಸಿಕ್ಕಿರುವ ಲಸಿಕೆಯನ್ನು ಉತ್ತಮವಾಗಿ ನಿರ್ವಹಣೆ ಮಾಡಲಾಗುತ್ತಿದ್ದು, ಲಸಿಕೆ ವಿತರಣೆ ಮುಗಿದ ಮೇಲೆ ಕಾಲೇಜು ಆರಂಭವಾಗಲಿದೆ ಎಂದು ಡಾ.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಬೆಂಗಳೂರು: ಕೊರೊನಾ ಲಸಿಕೆ ವಿತರಣೆ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಕರ್ನಾಟಕ ರಾಜ್ಯ ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ್, ಲಸಿಕೆ ವಿತರಣೆ ಮುಗಿದ ಮೇಲೆಯೇ ಕಾಲೇಜು ಆರಂಭ ಎಂದು ಹೇಳಿದ್ದಾರೆ. ಈಗಿನ ಅಲೆ ಹಾಗೂ ಮುಂದಿನ ಕೊರೊನಾ ಅಲೆ ತಡೆಯಲು ಲಸಿಕೆ ಅವಶ್ಯಕವಾಗಿ ಬೇಕಿದೆ. ವಿದ್ಯಾರ್ಥಿಗಳಿಗೆ ಕೂಡಾ ಕೊರೊನಾ ಲಸಿಕೆ ನೀಡಲಾಗುತ್ತಿದೆ. ನಮಗೆ ಸಿಕ್ಕಿರುವ ಲಸಿಕೆಯನ್ನು ಉತ್ತಮವಾಗಿ ನಿರ್ವಹಣೆ ಮಾಡಲಾಗುತ್ತಿದ್ದು, ಲಸಿಕೆ ವಿತರಣೆ ಮುಗಿದ ಮೇಲೆ ಕಾಲೇಜು ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಇಂದು ಸರ್ಕಾರದಿಂದ ಆದ್ಯತೆ ಗುಂಪಿಗೆ ಇಂದು ಲಸಿಕೆ ನೀಡಲಾಗುತ್ತಿದೆ. ಶೇ.75ರಷ್ಟು ಲಸಿಕೆಯನ್ನು ಸರ್ಕಾರದ ವತಿಯಿಂದ ನೀಡಲಾಗುತ್ತಿದೆ. ಇನ್ನು ಶೇ.25ರಷ್ಟು ಲಸಿಕೆಯನ್ನು ಖಾಸಗಿ ವಲಯದಿಂದ ನೀಡಲಾಗುತ್ತಿದೆ. ಇಂದು 60 ಸಾವಿರಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡಲಾಗುತ್ತದೆ. ಈಗಿರುವ ಅಲೆ ಹಾಗೂ ಮೂರನೇ ಅಲೆಯನ್ನು ಯಶಸ್ವಿಯಾಗಿ ತಡೆಯಬೇಕೆಂದರೆ ಎಲ್ಲರೂ ಲಸಿಕೆ ಪಡೆಯಬೇಕು. ನಾವು ಲಸಿಕೆ ವಿಚಾರದಲ್ಲಿ ಯಾವುದೇ ಸಮಸ್ಯೆ ಆಗದಂತೆ ನಿರ್ವಹಣೆ ಮಾಡುತ್ತಿದ್ದೇವೆ. ಜನರು ಕೂಡಾ ಸಹಕರಿಸಬೇಕು ಎಂದು ಉಪಮುಖ್ಯಮಂತ್ರಿ ವಿನಂತಿಸಿಕೊಂಡಿದ್ದಾರೆ.
ಕೊವಿಡ್ ತಡೆಗಟ್ಟಲು ಸರ್ಕಾರ ನಿರಂತರ ಪ್ರಯತ್ನಿಸುತ್ತಿದೆ. ನಿಯಂತ್ರಣಕ್ಕೆ ಸಮಸ್ಯೆಯಾಗದಂತೆ ಜನರೂ ನೋಡಿಕೊಳ್ಳಬೇಕು. ಯಾರೂ ಕೂಡ ಮೈ ಮರೆಯೋದು ಬೇಡ. ಇದನ್ನು ಮುಖ್ಯಮಂತ್ರಿಗಳು ಸಹ ಈಗಾಗಲೇ ಜನರಿಗೆ ತಿಳಿಸಿದ್ದಾರೆ. ಮಲ್ಲೇಶ್ವರದಲ್ಲಿ ವರ್ತಕರಿಗೆ ಡಾ.ಅಶ್ವತ್ಥ ನಾರಾಯಣ್ ಫೌಂಡೇಶನ್‌ನಿಂದ ಲಸಿಕಾ ಅಭಿಯಾನ ಏರ್ಪಡಿಸಲಾಗಿದ್ದು, ಮಲ್ಲೇಶ್ವರದ ವಾಸವಿ ಹಾಲ್‌ನಲ್ಲಿ ಲಸಿಕೆ ಕಾರ್ಯಕ್ರಮ ಅಭಿಯಾನಕ್ಕೆ ಉಪಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ್ ಚಾಲನೆ ನೀಡಿದ್ದಾರೆ.
ಎಲ್ಲಾ ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಲಸಿಕೆ ವಿತರಿಸಲಾಗುವುದು ಕಳೆದ ವಾರವಷ್ಟೇ ಉನ್ನತ ಶಿಕ್ಷಣ ವಿಭಾಗದ ವಿದ್ಯಾರ್ಥಿಗಳಿಕೆ ಲಸಿಕೆ ನೀಡುವ ಬಗ್ಗೆ ವಿಕಾಸಸೌಧದಲ್ಲಿ ಮಾತನಾಡಿದ್ದ ಡಾ.ಅಶ್ವತ್ಥ ನಾರಾಯಣ, 10 ದಿನದೊಳಗೆ ರಾಜ್ಯದ ಎಲ್ಲಾ ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ಲಸಿಕೆ ವಿತರಿಸಲಾಗುವುದು. ಪಾಲಿಟೆಕ್ನಿಕ್, ಪದವಿ, ಇಂಜಿನಿಯರಿಂಗ್, ಡಿಪ್ಲೊಮಾ ಸೇರಿ ಎಲ್ಲಾ ನೋಂದಾಯಿತ ವಿದ್ಯಾರ್ಥಿಗಳಿಗೆ ತ್ವರಿತವಾಗಿ ಲಸಿಕೆ ನೀಡುತ್ತೇವೆ. ಜೂನ್ ತಿಂಗಳಲ್ಲಿ ಒಟ್ಟಾರೆ 60 ಲಕ್ಷದಷ್ಟು ಲಸಿಕೆ ನೀಡಲಾಗಿದೆ. ಲಸಿಕೆ ಕೋಟಾ ಹೆಚ್ಚಿಸಿಕೊಂಡು ತ್ವರಿತವಾಗಿ ಆದ್ಯತೆ ಮೇರೆಗೆ ನೀಡುತ್ತೇವೆ. ಲಸಿಕೆ ನೀಡುವುದರಲ್ಲಿ ವಿಶ್ವದಲ್ಲೇ ಭಾರತ 3ನೇ ಸ್ಥಾನದಲ್ಲಿದೆ ಎಂದು ಹೇಳಿದ್ದರು.
ಆರೋಗ್ಯ ಇಲಾಖೆಯಿಂದ 250 ಮೆಟ್ರಿಕ್ ಟನ್, ವೈದ್ಯಕೀಯ ಶಿಕ್ಷಣ ಇಲಾಖೆಯಿಂದ 400 ಮೆಟ್ರಿಕ್ ಟನ್ ಸೇರಿ ಒಟ್ಟಾರೆ 650 ಮೆಟ್ರಿಕ್ ಟನ್ ಆಕ್ಸಿಜನ್ ಉತ್ಪಾದನೆಯಾಗುತ್ತಿದೆ. ಅಗಸ್ಟ್ ಒಳಗೆ 187 ಆಕ್ಸಿಜನ್ ಜನರೇಟರ್ ಸಿದ್ಧವಾಗಲಿದೆ. ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ 2-3 ಕೋಟಿ ನೆರವು ನೀಡಲಾಗುತ್ತೇವೆ. ಈ ಎಲ್ಲವನ್ನೂ ಅಗಸ್ಟ್ ತಿಂಗಳೊಳಗೆ ಕಾರ್ಯರೂಪಕ್ಕೆ ತರುತ್ತೇವೆ ಎಂದು ತಿಳಿಸಿದ್ದರು.
ಇದನ್ನೂ ಓದಿ: Covid 19: ಕೊರೊನಾ ಮೂರನೇ ಅಲೆಯಲ್ಲಿ ದಿನಕ್ಕೆ 1.5 ಲಕ್ಷ ಪ್ರಕರಣ ದಾಖಲಾಗುವ ಸಾಧ್ಯತೆ; ನಿಯಮಾವಳಿ ಪಾಲಿಸಿದರೆ ಕಡಿಮೆ ಅಪಾಯ