AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ನಿರಂತರ ಮಳೆಗೆ ಅಪಾರ ಬೆಳೆ ನಾಶ! ಪರಿಹಾರಕ್ಕೆ ರೈತರು ಆಗ್ರಹ

ಚಿಕ್ಕಬಳ್ಳಾಪುರದಲ್ಲಿ ಮಳೆಯಿಂದ 500ಕ್ಕೂ ಹೆಚ್ಚು ಪ್ರದೇಶದಲ್ಲಿದ್ದ ಬೆಳೆ ನಾಶವಾಗಿದೆ. ರೈತರು ಬೀದಿಗಿಳಿದು ಹೋರಾಟ ಮಾಡಿದ್ದರೂ, ರೈತರಿಗೆ ಧೈರ್ಯ ತುಂಬಲು ಆಗಮಿಸಿಲ್ಲ.

ಕರ್ನಾಟಕದಲ್ಲಿ ನಿರಂತರ ಮಳೆಗೆ ಅಪಾರ ಬೆಳೆ ನಾಶ! ಪರಿಹಾರಕ್ಕೆ ರೈತರು ಆಗ್ರಹ
ಬೆಳೆ ನಾಶಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದರು
TV9 Web
| Edited By: |

Updated on:May 21, 2022 | 8:22 AM

Share

ಚಿಕ್ಕಬಳ್ಳಾಪುರ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ (Rain) ಹಲವೆಡೆ ಬೆಳೆ ಸಂಪೂರ್ಣ ನಾಶವಾಗಿದ್ದು, ಪರಿಹಾರ ನೀಡುವಂತೆ ರೈತರು (Farmers) ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಇನ್ನು ಧಾರಾಕಾರ ಮಳೆ ಸುರಿದು ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ತಿರುಗಿ ನೋಡಲಿಲ್ಲ ಅಂತ ಚಿಕ್ಕಬಳ್ಳಾಪುರದಲ್ಲಿ ರೈತರು ಆಕ್ರೋಶ ಹೊರಹಾಕಿದ್ದಾರೆ. ಜಿಲ್ಲೆಯಲ್ಲಿ ಮಳೆಯಿಂದ 500ಕ್ಕೂ ಹೆಚ್ಚು ಪ್ರದೇಶದಲ್ಲಿದ್ದ ಬೆಳೆ ನಾಶವಾಗಿದೆ. ರೈತರು ಬೀದಿಗಿಳಿದು ಹೋರಾಟ ಮಾಡಿದ್ದರೂ, ರೈತರಿಗೆ ಧೈರ್ಯ ತುಂಬಲು ಆಗಮಿಸಿಲ್ಲ. ಜಿಲ್ಲೆಯಲ್ಲಿ ಉಸ್ತುವಾರಿ ಸಚಿವರು ಇದ್ದು ಇಲ್ಲದಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಹಾನಿಯಾದ ಪ್ರದೇಶಗಳಿಗೆ ಸಚಿವರ ಭೇಟಿ: ದಾವಣಗೆರೆ: 4 ದಿನಗಳಿಂದ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ. ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಉಸ್ತುವಾರಿ ಸಚಿವ ಭೈರತಿ ಬಸವರಾಜ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. 4 ದಿನಗಳ ಕಾಲ ಸುರಿದ ಮಳೆಗೆ 197 ಮನೆಗಳಿಗೆ ಹಾನಿಯಾಗಿದೆ. 30 ಮನೆಗಳು ಸಂಪೂರ್ಣ ಕುಸಿದಿವೆ. ಮೂರು ಜಾನುವಾರುಗಳು ಸಾವನ್ನಪ್ಪಿದ್ದರೆ, ಒಂದು ಶಾಲೆ ಕುಸಿದು ಹೋಗಿದೆ. ಮಳೆಯಿಂದಾಗಿ 41 ವಿದ್ಯುತ್ ಕಂಬಗಳು ಧರೆಗುರುಳಿವೆ. ಜಿಲ್ಲೆಯಲ್ಲಿ ಒಟ್ಟು 2632.98 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ ಎಂದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾಹಿತಿ ನೀಡಿದರು.

ಇದನ್ನೂ ಓದಿ: Bladder Cancer: ಮೂತ್ರಕೋಶ ಕ್ಯಾನ್ಸರ್​ನ ಲಕ್ಷಣಗಳೇನು? ಪತ್ತೆ ಹೇಗೆ?

ಇದನ್ನೂ ಓದಿ
Image
RCB: ಆರ್​ಸಿಬಿ ಪ್ಲೇ ಆಫ್ ಭವಿಷ್ಯ ಇಂದು ನಿರ್ಧಾರ: ಮುಂಬೈ-ಡೆಲ್ಲಿ ಪಂದ್ಯಕ್ಕೆ ಕಾದು ಕುಳಿತ ಆರ್​ಸಿಬಿ ಫ್ಯಾನ್ಸ್
Image
Bladder Cancer: ಮೂತ್ರಕೋಶ ಕ್ಯಾನ್ಸರ್​ನ ಲಕ್ಷಣಗಳೇನು? ಪತ್ತೆ ಹೇಗೆ?
Image
ನಿಶ್ಚಿತಾರ್ಥ ಮುಗಿಸಿ ಬರುತ್ತಿದ್ದಾಗ ಧಾರವಾಡದಲ್ಲಿ ಭೀಕರ ಅಪಘಾತ; 9 ಜನರು ಸಾವು, 4 ಜನರ ಸ್ಥಿತಿ ಗಂಭೀರ
Image
Srinidhi Shetty: ಗ್ಲಾಮರಸ್ ಲುಕ್​ನಲ್ಲಿ ‘ಕೆಜಿಎಫ್’ ಬೆಡಗಿ ಶ್ರೀನಿಧಿ ಶೆಟ್ಟಿ; ಫೋಟೋಗಳು ಇಲ್ಲಿವೆ

ಇನ್ನು ಕೊಪ್ಪಳದಲ್ಲೂ ಮಳೆಯಿಂದ ಬೆಳೆ ಹಾನಿಯಾಗಿದೆ. ಹಿರೇಹಳ್ಳ ಜಲಾಶಯದಿಂದ ನೀರು ಬಿಡುಗಡೆಯಾದ ಹಿನ್ನೆಲೆ ನೀರು ಹರಿದಿದೆ. ನಮ್ಮ ಕ್ಷೇತ್ರದಲ್ಲಿ ಹೆಚ್ಚು ಅನಾಹುತ ಆಗಿದೆ. ನಾವು ಅಧಿಕಾರಿಗಳಿಗೆ ಬ್ರಿಡ್ಜ್ ಕಂ ಬ್ಯಾರೇಜ್ ನ ಗೇಟ್ ತೆರೆಯಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೆವು. ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿ ಕಳಪೆ ಆಗಿಲ್ಲ. ಆದರೆ ಕೆಲ ಕಡೆ ರೈತರು ಗೇಟ್ ತೆರೆಯಲು ಬಿಡಲ್ಲ. ನೀರು ಹೋಗತ್ತದೆ ಅಂತ ರೈತರು ಗೇಟ್ ತೆರೆಯಲು ಬಿಡಲ್ಲಎಂದು ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ್ ತಿಳಿಸಿದರು.

ಬಾಗಲಕೋಟೆಯಲ್ಲಿ 114 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಒಂದು ಮನೆ ಸಂಪೂರ್ಣ ಕುಸಿದಿದೆ. ಮನೆಗಳು ಕುಸಿದು ಬಿದ್ದ ಕಾರಣ ಕುಟುಂಬಗಳು ಪರದಾಡುತ್ತಿವೆ. ಭಾರಿ ಮಳೆಯಿಂದಾಗಿ ಮುಧೋಳ ತಾಲೂಕಿನ ಮಿರ್ಜಿ ಸೇತುವೆ ಜಲಾವೃತವಾಗಿದೆ. ಸೇತುವೆ ಮೇಲೆ ನೀರು ಹರಿಯುತ್ತಿರುವ ಹಿನ್ನೆಲೆ ಸಂಪರ್ಕ ಕಟ್ ಆಗಿದೆ.

ಇದನ್ನೂ ಓದಿ: ತೃಪ್ತಿ ಆಗುವಂತೆ ಬೆವರು ಹರಿಸಿ ವರ್ಕೌಟ್​ ಮಾಡಿದ ಬಳಿಕ ಫೋಟೋ ಹಂಚಿಕೊಂಡ ರಶ್ಮಿಕಾ ಮಂದಣ್ಣ

ಮನೆ ಗೋಡೆ ಕುಸಿದು ಅವಘಡ:ಮಂಡ್ಯ: ಮಳೆಯಿಂದಾಗಿ ಮನೆಯ ಗೋಡೆ ಕುಸಿದು ಅವಘಡ ನಡೆದಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣದ ಗಂಜಾಮ್​ನಲ್ಲಿ ನಡೆದಿದೆ. ಜನರು ಮನೆಯಲ್ಲಿ ಸಿಲುಕಿದ್ದ ತಾಯಿ, ಮಗನನ್ನು ರಕ್ಷಿಸಿದ್ದಾರೆ.

 ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:06 am, Sat, 21 May 22

ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್ ಯಾವತ್ತೋ ಸಿಎಂ ಆಗಬೇಕಿತ್ತು: ಹೆಚ್​ಡಿಕೆ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಮಗನಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ ಹಾರ್ದಿಕ್ ಪಾಂಡ್ಯ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
ಹನುಮನ ಆಶೀರ್ವಾದದಿಂದಲೇ ರಿಷಬ್​​ಗೆ ಪಾತ್ರ ಸಿಕ್ಕಿದೆ ಎಂದ ಪತ್ನಿ: ವಿಡಿಯೋ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
40 ಭಾರತೀಯ ಮೂಲದ ಆಟಗಾರರನ್ನು ಶ್ಲಾಘಿಸಿದ ಮೋದಿ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಭಾರೀ ಅಗ್ನಿ ಅವಘಡ:20 ಕೋಟಿ ರೂ.ಹೆಚ್ಚು ಮೌಲ್ಯದ ವಸ್ತುಗಳು ಭಸ್ಮ
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?ಸ್ವಾಮೀಜಿ ಆಡಿಯೋ ವೈರಲ್
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಶಾರ್ಟ್​ ಸರ್ಕ್ಯೂಟ್​ನಿಂದ ಸುಗಂಧ ದ್ರವ್ಯ ಗೋದಾಮು ಧಗಧಗ!
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಬಿಜೆಪಿ ಶಾಸಕನ ಪರ ರಾಜಣ್ಣ ಬ್ಯಾಟಿಂಗ್
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
ಆ್ಯಂಬುಲೆನ್ಸ್ ಅಡ್ಡಗಟ್ಟಿ ಕಾರು ಚಾಲಕನ ರಸ್ತೆ ರಂಪಾಟ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ
‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ