ಹಿಂದೂ ಯುವತಿಯ ಮತಾಂತರ ಆರೋಪ: ಮಂಗಳೂರಿನ ಪ್ರಸಿದ್ಧ ವೈದ್ಯೆ ಮತ್ತು ಕೆಲವರ ಮೇಲೆ ಎಫ್ಐಆರ್
ಹಿಂದೂ ಯುವತಿಯನ್ನು ಇಸ್ಲಾಂಗೆ ಮತಾಂತರ ಮಾಡಿ ಆಕೆಗೆ ಆಯೇಷಾ ಎಂದು ಹೆಸರು ಬದಲಿಸಲಾಗಿದೆ ಎಂದು ಆರೋಪಿ ದೂರು ದಾಖಲಾಗಿದೆ.
ಮಂಗಳೂರು: ಮಂಗಳೂರಿನ ಹಿಂದೂ ಯುವತಿಯನ್ನು ಇಸ್ಲಾಂಗೆ ಮತಾಂತರಿಸಿದ ಆರೋಪ ಕೇಳಿ ಬಂದಿದ್ದು ಮಂಗಳೂರಿನ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಸಿದ್ದ ವೈದ್ಯೆ ಹಾಗೂ ಮುಸ್ಲಿಂ ಯುವಕರ ವಿರುದ್ದ ಪ್ರಕರಣ ದಾಖಲಾಗಿದೆ.
ಹಿಂದೂ ಯುವತಿಯನ್ನು ಇಸ್ಲಾಂಗೆ ಮತಾಂತರ ಮಾಡಿ ಆಕೆಗೆ ಆಯೇಷಾ ಎಂದು ಹೆಸರು ಬದಲಿಸಲಾಗಿದೆ ಎಂದು ಆರೋಪಿ ದೂರು ದಾಖಲಾಗಿದೆ. ಇಸ್ಲಾಂಗೆ ಮತಾಂತರ ಮಾಡಿ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಸಂತ್ರಸ್ತೆ ಯುವತಿ ದೂರು ನೀಡಿದ್ದಾರೆ. ಕುಲಶೇಖರದ ಮೊಬೈಲ್ ಅಂಗಡಿಯ ಖಲೀಲ್ ಹಾಗೂ ಭದ್ರಾವತಿಯ ಇಮಾಮ್ ವಿರುದ್ಧ ಯುವತಿ ಆರೋಪ ಮಾಡಿದ್ದಾಳೆ. ಮಂಗಳೂರಿನ ಪ್ರಸಿದ್ದ ಹೆರಿಗೆ ವೈದ್ಯೆ ಡಾ.ಜಮೀಲಾ ವಿರುದ್ಧವೂ ಮತಾಂತರ ಆರೋಪ ಕೇಳಿ ಬಂದಿದೆ. ಕುರಾನ್ ಓದಲು ಹೇಳಿ ನಮಾಜ್ ಮಾಡಿಸಿ ಮತಾಂತರ ಮಾಡಿದ್ದಾರೆ ಎನ್ನಲಾಗುತ್ತಿದೆ.
ಮೊಬೈಲ್ ಅಂಗಡಿಯ ಖಲೀಲ್ ಪರಿಚಯವಾಗಿ ಆತನ ಸಂಬಂಧಿಕರ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಯುವತಿಗೆ ಅಲ್ಲಿ ಇಸ್ಲಾಂಗೆ ಮತಾಂತರ ಮಾಡಿ ಕುರಾನ್ ಓದಿಸಿ ನಮಾಜ್ ಮಾಡಲು ಒತ್ತಡ ಹಾಕಿದ್ದಾರೆ ಎಂದು ಯುವತಿ ಆರೋಪ ಮಾಡಿದ್ದಾರೆ. ಆ ಬಳಿಕ ಡಾ.ಜಮೀಲಾರ ಮನೆಯಲ್ಲಿ ಖಲೀಲ್ ಕೆಲಸಕ್ಕೆ ಸೇರಿಸಿದ್ದು, ಅಲ್ಲೂ ದೌರ್ಜನ್ಯ ಎಸಗಲಾಗಿದೆಯಂತೆ. ಸದ್ಯ ವಿಶ್ವಹಿಂದೂ ಪರಿಷತ್ ಮೂಲಕ ಸಂತ್ರಸ್ತೆ ಪೊಲೀಸ್ ದೂರು ನೀಡಿದ್ದಾರೆ. ಡಾ.ಜಮೀಲಾ, ಖಲೀಲ್ ಮತ್ತು ಇಮಾಮ್ ವಿರುದ್ದ ಐಪಿಸಿ 354, 354(ಎ), 506 ಹಾಗೂ ಮತಾಂತರ ನಿಷೇಧ ಕಾಯ್ದೆಯಡಿ ಎಫ್ಐಆರ್ ದಾಖಲಾಗಿದೆ. ಹಣ ಮತ್ತು ಕೆಲಸದ ಆಮಿಷ ಒಡ್ಡಿ ಮತಾಂತರ ಮಾಡಿದ ಬಗ್ಗೆ ಯುವತಿ ದೂರು ನೀಡಿದ್ದಾಳೆ.
ಇದನ್ನೂ ಓದಿ: ಜೀವರಾಜ್ ಚಿತಾವಣೆ ಆರೋಪ: ಶೃಂಗೇರಿ ಶಾಸಕ ಟಿಡಿ ರಾಜೇಗೌಡ ವಿರುದ್ಧ ನೀಡಿದ್ದ ದೂರು ಹಿಂಪಡೆದ ವಿಜಯಾನಂದ
ಅಪರಿಚಿತ ವಾಹನ ಡಿಕ್ಕಿ, ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ಸಾವು
ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಕಲ್ಲೇದೇವಪುರ ಬಳಿ ಅಪರಿಚಿತ ವಾಹನ ಡಿಕ್ಕಿಯಾಗಿ ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ವಾಸುದೇವನ್(59) ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮೂವರಿಗೆ ಗಾಯಗಳಾಗಿದ್ದು ದಾವಣಗೆರೆಯ ಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ವೇಳೆ ವಾಸುದೇವ್ ಅವರು ಪುತ್ರ, ಇಬ್ಬರು ವಿದ್ಯಾರ್ಥಿನಿಯರ ಜತೆ ತೆರಳುತ್ತಿದ್ದರು. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.