AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೌಜನ್ಯ ಕೇಸ್​​ ಮರುತನಿಖೆ: ಎಸ್​ಐಟಿ ಮುಖ್ಯಸ್ಥರ ಬದಲಾವಣೆ; ಶಶಿಕುಮಾರ್​​ ಜಾಗಕ್ಕೆ ಚೇತನ್ ಸಿಂಗ್ ರಾಥೋಡ್​​ ನೇಮಕ

ಸೌಜನ್ಯ ಕೊಲೆ ಪ್ರಕರಣದ ಎಸ್‌ಐಟಿ ಮರುತನಿಖೆಯ ನೇತೃತ್ವ ವಹಿಸಿದ್ದ ಐಜಿಪಿ ಎನ್. ಶಶಿಕುಮಾರ್ ಅವರನ್ನು ಬದಲಾಯಿಸಲಾಗಿದ್ದು, ನೂತನ ಮುಖ್ಯಸ್ಥರಾಗಿ ಚೇತನ್ ಸಿಂಗ್ ರಾಥೋಡ್ ಅವರನ್ನು ನೇಮಕ ಮಾಡಿ ಆದೇಶಿಸಲಾಗಿದೆ. ಮತ್ತೊಂದೆಡೆ ಕೇಸ್​​ ಸಂಬಂಧ ಹಿಂದಿನ ಅಧಿಕಾರಿಗಳಾಗಿದ್ದಅಂದಿನ ASI ಕಲೈಮಾರ್, ಹೆಡ್​ಕಾನ್ಸ್​ಟೇಬಲ್​ ಸುಂದರ್ ಶೆಟ್ಟಿ ಮತ್ತು ಹೆಚ್​ಸಿ ಸವಿತಾ ಶೆಟ್ಟಿ ಎಸ್​ಐಟಿ ವಿಚಾರಣೆಗೆ ಹಾಜರಾಗಿದ್ದಾರೆ.

ಸೌಜನ್ಯ ಕೇಸ್​​ ಮರುತನಿಖೆ: ಎಸ್​ಐಟಿ ಮುಖ್ಯಸ್ಥರ ಬದಲಾವಣೆ; ಶಶಿಕುಮಾರ್​​ ಜಾಗಕ್ಕೆ ಚೇತನ್ ಸಿಂಗ್ ರಾಥೋಡ್​​ ನೇಮಕ
ಸೌಜನ್ಯ ಕೇಸ್​​ ಮರುತನಿಖೆ: ಎಸ್​ಐಟಿ ಮುಖ್ಯಸ್ಥರ ಬದಲಾವಣೆ
ಪೃಥ್ವಿರಾಜ್​ ಬಿ.ಯು. ಮಂಗಳೂರು
| Edited By: |

Updated on: Oct 30, 2026 | 2:29 PM

Share

ಮಂಗಳೂರು, ಅಕ್ಟೋಬರ್​​ 30: ಪಾಂಗಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮರುತನಿಖೆ ಸಂಬಂಧ ಮಹತ್ವದ ಬೆಳವಣಿಗೆ ನಡೆದಿದ್ದು ಹಾಲಿ ಎಸ್​ಐಟಿ ಮುಖ್ಯಸ್ಥರಾಗಿದ್ದ ಐಜಿಪಿ ಎನ್. ಶಶಿಕುಮಾರ್ ಅವರನ್ನು ರಿಲೀವ್​​ ಮಾಡಲಾಗಿದ್ದು, ಹೊಸ ಮುಖ್ಯಸ್ಥರಾಗಿ ಚೇತನ್ ಸಿಂಗ್ ರಾಥೋಡ್​​ರನ್ನು ನೇಮಿಸಲಾಗಿದೆ. ASP ವಂಕಟೇಶ್ ಪ್ರಸನ್ನ ಬದಲಿಗೆ ACP ಶ್ರೀನಿಧಿ ಅವರ ನೇಮಕವೂ ಆಗಿದೆ. SIT ಮುಖ್ಯಸ್ಥರಾಗಿ ಇಂದಿನಿಂದಲೇ ಚೇತನ್ ಸಿಂಗ್ ರಾಥೋಡ್​​ ತನಿಖೆ ಮುಂದುವರೆಸಲಿದ್ದಾರೆ.

SITಯಿಂದ ಹಿಂದಿನ ಅಧಿಕಾರಿಗಳ ವಿಚಾರಣೆ

ಇನ್ನು ಕೇಸ್​​ ಸಂಬಂಧ ಹಿಂದಿನ ಅಧಿಕಾರಿಗಳಾಗಿದ್ದಅಂದಿನ ASI ಕಲೈಮಾರ್, ಹೆಡ್​ಕಾನ್ಸ್​ಟೇಬಲ್​ ಸುಂದರ್ ಶೆಟ್ಟಿ ಮತ್ತು ಹೆಚ್​ಸಿ ಸವಿತಾ ಶೆಟ್ಟಿ ಎಸ್​ಐಟಿ ವಿಚಾರಣೆಗೆ ಹಾಜರಾಗಿದ್ದಾರೆ. ಮಂಗಳೂರಿನ ಎಸ್ಐಟಿ ಕಚೇರಿಯಲ್ಲಿ ಇವರಿಂದ ಮಾಹಿತಿ ಸಂಗ್ರಹ ಕಾರ್ಯ ನಡೆದಿದೆ. ಎಸ್​ಐಟಿ ಅಧಿಕಾರಿಗಳು ಸಣ್ಣ ಕ್ಯಾಮೆರಾ ಹಾಗೂ ಕಾಲರ್ ಮೈಕ್ ತರಿಸಿಕೊಂಡಿದ್ದು, ನಿನ್ನೆ ರಾತ್ರಿ 9 ಗಂಟೆವರೆಗೂ ಅಂದಿನ ಬೆಳ್ತಂಗಡಿ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಭಾಸ್ಕರ್ ರೈ, ಸಿಐಡಿ ಡಿವೈಎಸ್‌ಪಿ ರುದ್ರಮುನಿ ಅವರನ್ನು ಎಸ್​ಐಟಿ ವಿಚಾರಣೆ ನಡೆಸಿತ್ತು. ಇಂದು ವಿಚಾರಣೆಗೆ ಹಾಜರಾಗಿರುವರಿಂದಲೂ ಸಹ ರಾತ್ರಿವರೆಗೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: ಸೌಜನ್ಯ-ಕುಸುಮಾವತಿ ನಡುವಿನ ಸಂಬಂಧದ ಬಗ್ಗೆಯೇ ಅನುಮಾನ!: ತನಿಖೆ ನಡೆಸುವಂತೆ ಎಸ್​​ಐಟಿಗೆ ದೂರು ಸಲ್ಲಿಕೆ

ಇನ್ನು ಬೆಳ್ತಂಗಡಿ ಪೊಲೀಸರು ಮಾಡಿದ್ದ ತನಿಖೆಯ ಆಧಾರದಲ್ಲೇ CID ತನಿಖೆ ಮಾಡಲಾಗಿತ್ತು. ಆಗ ಲಭ್ಯ ಇದ್ದ ದಾಖಲೆ, ಸಾಕ್ಷಿ ಅಡಿಯಲ್ಲಿ ಇನ್ವೆಸ್ಟಿಗೇಷನ್​​ ನಡೆದಿತ್ತು. ತನಿಖೆಯಲ್ಲಿ ಯಾವುದೇ ಲೋಪ ಎಸಗಿಲ್ಲ ಎಂದು ರುದ್ರಮುನಿ ಅವರು ವಿಚಾರಣೆ ವೇಳೆ ತಿಳಿಸಿದ್ದಾರಂತೆ. ತಾನು ಸೌಜನ್ಯ ಕೇಸ್ ತನಿಖಾಧಿಕಾರಿ ಆಗಿರಲಿಲ್ಲ.ಕ್ರೈಂ ಸೀನ್​​ಗೆ ಭೇಟಿ ಮಾಡಿದಾಗ ಎಲ್ಲ ಎವಿಡೆನ್ಸ್ ಕಲೆಕ್ಟ್ ಮಾಡಿದ್ದೆ. ಅದನ್ನೇ ನಂತರದ ತನಿಖೆಗೆ ಕೊಟ್ದಿದ್ದೆ. ನನಗೆ ಯಾರೂ ಯಾವ ಒತ್ತಡ ಹಾಕಿಲ್ಲ. ತನ್ನ ಕರ್ತವ್ಯ ಸರಿಯಾಗಿಯೇ ಮಾಡಿದ್ದೇನೆ ಎಂದು ಯೋಗೇಶ್ ಹೇಳಿದ್ದರೆ, ಭಾಸ್ಕರ್ ರೈ ಅವರು ಕೂಡ ಇದೇ ರೀತಿ ಎಸ್​ಐಟಿ ಎದುರು ಹೇಳಿಕೆ ನೀಡಿದ್ದಾರಂತೆ. ತಾನು ಸರಿಯಾಗಿ ಕರ್ತವ್ಯ ನಿರ್ವಹಿಸಿದ್ದು, ಅಂದಿನ ಆರೋಪಿ ಸಂತೋಷ್ ರಾವ್ ವಿಚಾರಣೆ ವೇಳೆ ಹೇಳಿದ್ದನ್ನೇ ದಾಖಲಿಸಿದ್ದೇನೆ ಎಂದು ಮಾಹಿತಿ ನೀಡಿರೋದಾಗಿ ತಿಳಿದುಬಂದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಪೃಥ್ವಿರಾಜ್​ ಬಿ.ಯು. ಮಂಗಳೂರು
ಪೃಥ್ವಿರಾಜ್​ ಬಿ.ಯು. ಮಂಗಳೂರು

ಬಿ.ಯು.ಪೃಥ್ವಿರಾಜ್. ಮೂಲತಹ ಹಾಸನ ಜಿಲ್ಲೆ ಸಕಲೇಶಪುರ ತಾಲೂಕು. ಪತ್ರಿಕೋದ್ಯಮದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಮಾಡಿದ್ದೇನೆ. ವಿದ್ಯಬ್ಯಾಸ ಆದ ತಕ್ಷಣ ಟಿವಿ9 ಕರ್ನಾಟಕದ ಬೆಂಗಳೂರು ಕಚೇರಿಯಲ್ಲಿ ಜಾಯಿನ್ ಆದೆ. ಕಳೆದ 13 ವರ್ಷಗಳಿಂದ ಟಿವಿ9 ನಲ್ಲಿ ಕಾರ್ಯನಿರ್ವಹಿಸುತ್ತಿದ್ದ, ಚಾಮರಾಜನಗರ ಜಿಲ್ಲೆ, ಬೆಂಗಳೂರು ಕೇಂದ್ರ ಕಚೇರಿಯ ಕ್ರೈಂ ಬೀಟ್ ನಲ್ಲಿ ಕಾರ್ಯನಿರ್ವಹಿಸಿ 2016 ರಿಂದ ಮಂಗಳೂರು ಬ್ಯೂರೋದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಹರಕೆ ಗೋವುಗಳು ಕಸಾಯಿಕಾನೆಗೆ ಹೋಗುತ್ತಿದ್ದ ಬಗ್ಗೆ ಸ್ಟಿಂಗ್ ಆಪರೇಷನ್ ಮಾಡಲು ತಮಿಳುನಾಡಿನಲ್ಲಿ ಕಾರ್ಯನಿರ್ವಹಿಸಿದ ಅನುಭವ. ಈ ಸ್ಟಿಂಗ್ ಆಪರೇಷನ್ ಸ್ಟೋರಿಗೆ ರಾಮನಾಥ ಗೋಯಾಂಕ ಪ್ರಶಸ್ತಿಗೆ ನಾಮಿನಿಯಾಗಿದ್ದೆ. ರಾಜಕೀಯ, ಪ್ರವಾಹ, ರಾಷ್ಟ್ರ ಮಟ್ಟದ ಅಪರಾಧ ಪ್ರಕರಣಗಳು, ಎನ್.ಐ.ಎ ತನಿಖೆಗಳು, ಭಯೋತ್ಪಾದಕ ಚಚುವಟಿಕೆಗಳು ಆದಾಗ ಅಲ್ಲಿ ವರದಿಗಾರಿಕೆ. ಮಂಗಳೂರು ಗೋಲಿಬಾರ್, ಬೆಂಗಳೂರು ಕರ್ಫ್ಯೂ, ಏರ್ಪೋರ್ಟ್ ನಲ್ಲಿ ಜೀವಂತ ಬಾಂಬ್ ಆಪರೇಷನ್ ಗಳಲ್ಲಿ ವರದಿ ಮಾಡಿದ ಅನುಭವ.

Read More