Moral policing: ಪುತ್ತೂರಿನಲ್ಲಿ ಮತ್ತೆ ಹಿಂದೂ ಕಾರ್ಯಕರ್ತರಿಂದ ನೈತಿಕ ಪೊಲೀಸ್ ಗಿರಿ ಯತ್ನ!
ಸ್ಥಳಕ್ಕಾಗಮಿಸಿದ ಪುತ್ತೂರು ನಗರ ಠಾಣೆ ಎಸ್ಸೈ ಶ್ರೀಕಾಂತ್ ರಾಥೋಡ್ ಗೊಂದಲದ ಪರಿಸ್ಥಿತಿ ಹಿನ್ನೆಲೆ ಭಿನ್ನ ಕೋಮಿನ ಜೋಡಿಯನ್ನು ವಿಚಾರಣೆ ಮಾಡಿದ್ದಾರೆ. ಬಳಿಕ, ಪುತ್ತೂರು ಪೊಲೀಸರು ಮನೆಯವರಿಗೆ ಮಾಹಿತಿ ನೀಡಿದ್ದಾರೆ.
ಮಂಗಳೂರು: ಪುತ್ತೂರಿನಲ್ಲಿ ಮತ್ತೆ ಹಿಂದೂ ಕಾರ್ಯಕರ್ತರಿಂದ ನೈತಿಕ ಪೊಲೀಸ್ ಗಿರಿ (moral policing) ಯತ್ನ ನಡೆದಿದೆ. ಭಿನ್ನ ಕೋಮಿನ ಯುವಕ-ಯುವತಿ ಕೆಫೆಗೆ ಬಂದಿದ್ದಕ್ಕೆ ಹಿಂದೂ ಸಂಘಟನೆ ಆಕ್ಷೇಪ ವ್ಯಕ್ತಪಡಿಡಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರದ (puttur) ಬಸ್ ನಿಲ್ದಾಣದ ಬಳಿ ಘಟನೆ ನಡೆದಿದೆ. ಓರ್ವ ಹಿಂದೂ ಯುವತಿ, ಇಬ್ಬರು ಮುಸ್ಲಿಂ ಯುವಕರು ಹಾಗೂ ಕ್ರಿಶ್ಚಿಯನ್ ಯುವತಿಯರು ಜ್ಯೂಸ್ ಕುಡಿಯಲು ಬಂದಿದ್ದ ವೇಳೆ, ಕೆಫೆ ಮುಂಭಾಗ ಹಿಂದೂ ಕಾರ್ಯಕರ್ತರು (Hindu activists) ಸೇರಿದ್ದಾರೆ. ನಂತರ, ಹಿಂದೂ ಕಾರ್ಯಕರ್ತರು ಈ ಬಗ್ಗೆ ಪುತ್ತೂರು ನಗರ ಠಾಣೆಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕಾಗಮಿಸಿದ ಪುತ್ತೂರು ನಗರ ಠಾಣೆ ಎಸ್ಸೈ ಶ್ರೀಕಾಂತ್ ರಾಥೋಡ್ ಗೊಂದಲದ ಪರಿಸ್ಥಿತಿ ಹಿನ್ನೆಲೆ ಭಿನ್ನ ಕೋಮಿನ ಜೋಡಿಯನ್ನು ವಿಚಾರಣೆ ಮಾಡಿದ್ದಾರೆ. ಬಳಿಕ, ಪುತ್ತೂರು ಪೊಲೀಸರು ಮನೆಯವರಿಗೆ ಮಾಹಿತಿ ನೀಡಿದ್ದಾರೆ.