ಭೂತಾನ್ನಿಂದ 17 ಸಾವಿರ ಟನ್ ಅಡಿಕೆ ಆಮದು: ಒಂದೇ ದಿನದಲ್ಲಿ 2 ಸಾವಿರ ರೂ ದರ ಕುಸಿತ, ಅಡಿಕೆ ಬೆಳೆಗಾರರಿಗೆ ಆತಂಕ
ಕೇಂದ್ರ ಸರ್ಕಾರ ಭೂತಾನ್ನಿಂದ 17 ಸಾವಿರ ಟನ್ ಅಡಿಕೆ ಆಮದು ಮಾಡಿಕೊಂಡ ಹಿನ್ನೆಲೆ ಒಂದೇ ದಿನದಲ್ಲಿ ಪ್ರತಿ ಕ್ವಿಂಟಾಲ್ ಅಡಿಕೆ ದರ ಎರಡು ಸಾವಿರ ರೂಪಾಯಿ ಕುಸಿತ ಕಂಡಿದೆ. ಹಾಗಾಗಿ ಅಡಿಕೆ ನಾಡು ಎಂದೇ ಪ್ರಸಿದ್ಧಿ ಪಡೆದ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಇದೀಗ ಆತಂಕ ಮನೆ ಮಾಡಿದೆ.
ದಾವಣಗೆರೆ, ಸೆಪ್ಟೆಂಬರ್ 1: ಎಲ್ಲಿಯೋ ಮಳೆಯಾದರೆ ಮತ್ತೇಲ್ಲಿಯೋ ತೊಂದರೆ. ಮಳೆ ಆಗುವ ಸ್ಥಳವೇ ಬೇರೆ ಪರಿಣಾಮ ಬಿರುವ ಸ್ಥಳವೇ ಬೇರೆ ಆಗಿದೆ. ಇದಕ್ಕೆ ತಾಜಾ ನಿದರ್ಶನ ಕೇಂದ್ರ ಸರ್ಕಾರ ಬುತಾತ್ನಿಂದ ಅಡಿಕೆ ಆಮದು ಮಾಡಿಕೊಂಡಿದ್ದು. ಇದರಿಂದ ಅಡಿಕೆ (arecanut) ತೋಟಗಳಲ್ಲಿ ಮೌನ ಅವರಿಸುತ್ತಿದೆ. ಕಾರಣ ಅಡಿಕೆ ದರ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ. ಅಡಿಕೆ ನಾಡು ಎಂದೇ ಪ್ರಸಿದ್ಧಿ ಪಡೆದ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಇದೀಗ ಆತಂಕ ಮನೆ ಮಾಡಿದೆ.
ರಾಜ್ಯದಲ್ಲಿಯೇ ಅತಿ ಹೆಚ್ಚು ಅಡಿಕೆ ಬೆಳೆಯುವ ತಾಲೂಕು ಚನ್ನಗಿರಿ. ಒಂದು ತಿಂಗಳಿಂದ ಸರಾಸರಿ ಪ್ರತಿ ಕ್ವಿಂಟಾಲ್ ಅಡಿಕೆ 50 ರಿಂದ 55 ಸಾವಿರ ರೂ. ದರ. ಕೇಂದ್ರ ಸರ್ಕಾರ ಭೂತಾನ್ನಿಂದ 17 ಸಾವಿರ ಟನ್ ಅಡಿಕೆ ಆಮದು ಮಾಡಿಕೊಂಡಿದೆ. ಭೂತಾನ್ನಿಂದ ಅಡಿಕೆ ಬರುತ್ತಿದ್ದಂತೆ ಒಂದೇ ದಿನದಲ್ಲಿ ಪ್ರತಿ ಕ್ವಿಂಟಾಲ್ ಅಡಿಕೆ ದರ ಎರಡು ಸಾವಿರ ರೂಪಾಯಿ ಕುಸಿತ ಕಂಡಿದೆ.
ಇದನ್ನೂ ಓದಿ: ದಾವಣಗೆರೆ: ಗದ್ದೆಗೆ ಸೇರಿದ ಕೆಮಿಕಲ್ ನೀರು; ಸಾಲಸೋಲ ಮಾಡಿ ಬೆಳೆದಿದ್ದ ಬೆಳೆ ಸಂಪೂರ್ಣ ನಾಶ
ಪ್ರತಿ ಕ್ವಿಂಟಾಲ್ ರಾಶಿ ಅಡಿಕೆ ದರ ಸರಾಸರಿ 50 ರಿಂದ 55 ಸಾವಿರ ಬದಲು ಅಡಿಕೆ ಕನಿಷ್ಟ 42,810 ರಿಂದ ಗರುಷ್ಠ 52,012ಕ್ಕೆ ಸರಾಸರಿ 49,627ಕ್ಕೆ ಕುಸಿತವಾಗಿದೆ. ಭೂತಾನ್ ಅಡಿಕೆ ಆಮದು ಹಿನ್ನೆಲೆ ಅಡಿಕೆ ದರ ಕುಸಿಯುತ್ತಿದ್ದು, ಇನ್ನಷ್ಟು ದರ ಕುಸಿಯುವ ಭೀತಿ ಎದುರಾಗಿದ್ದರಿಂದ ತುರ್ತಾಗಿ ಅಡಿಕೆ ಕೊಯ್ಲು ಆರಂಭಿಸಲಾಗಿದೆ.
ಸರ್ಕಾರಿ ದಾಖಲೆಗಳ ಪ್ರಕಾರ ದಾವಣಗೆರೆ ಜಿಲ್ಲೆಯಲ್ಲಿ ಕಳೆದ ನಾಲ್ಕು ತಿಂಗಳಲ್ಲಿ ನಾಲ್ಕು ಸಾವಿರದ ಮೂರು ನೂರಾ ಎಂಬತ್ತೈದು ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಮರಗಳನ್ನ ರೈತರು ನೀರು ಇಲ್ಲದ ಕಾರಣಕ್ಕೆ ಕಡಿದು ಹಾಕಿದ್ದಾರೆ. ಇದರಿಂದ ಸುಮಾರು 14,562 ಟನ್ ನಷ್ಟು ಅಡಿಕೆ ಇಳುವರಿ ಕಡಿಮೆಯಾಗಿದೆ. ಜಿಲ್ಲೆಯಲ್ಲಿ 38,989 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಇತ್ತು. ಪ್ರತಿ ವರ್ಷ 62,568 ಟನ್ ಅಡಿಕೆ ಇಳುವರಿ ಬರುತ್ತಿತ್ತು.
ನೀರಿನ ಕೊರೆತೆ ನಾನಾ ರೋಗಗಳ ಭೀತಿ ಕೂಡ ಎದುರಾಗಿದೆ. ಅಡಿಕೆ ಮರ ನಿರ್ವಹಣೆ ರೈತರಿಗೆ ಕಷ್ಟವಾಗಿತ್ತು. ವಿದೇಶಗಳಲ್ಲಿ ಅಡಿಕೆ ತರಿಸುವುದರಿಂದ ಯಾವುದೇ ತೊಂದರೆ ಸದ್ಯಕ್ಕಂತು ಇಲ್ಲವೇ ಇಲ್ಲಾ. ಕಾರಣ ಬೇಡಿಕೆ ಹಾಗೂ ಉತ್ಪಾದನೆಗೆ ತಕ್ಕಂತೆ ಇದೆ. ಜೊತೆಗೆ ವಿದೇಶದಿಂದ ಅಡಿಕೆ ತರಲು ಶುಲ್ಕ ಸಹ ಹೆಚ್ಚು ವಿಧಿಸಲಾಗಿದೆ. ಸದ್ಯಕ್ಕೆ ಇದರ ಸಮಸ್ಯೆ ಆಗುತ್ತಿಲ್ಲ ಎಂದು ಅಡಿಕೆ ಬೆಳೆಗಾರರ ಪ್ರಸಿದ್ಧ ತುಮ್ಕೋಸ್ ಸಂಸ್ಥೆ ಅಧ್ಯಕ್ಷ ಅಜ್ಜಿಹಳ್ಳಿ ರವಿ ಹೇಳುತ್ತಾರೆ.
ಇದನ್ನೂ ಓದಿ: ದಾವಣಗೆರೆ: ಏಷ್ಯಾದ ಎರಡನೇ ಅತಿ ದೊಡ್ಡ ಕೆರೆ ನೀರು ಕುಡಿಯಲು ಯೋಗ್ಯವಲ್ಲ: ಪ್ರಯೋಗಾಲಯದ ವರದಿಯಲ್ಲಿ ಬಹಿರಂಗ
ಬುತಾನ್ದಿಂದ ಅಡಿಕೆ ಭಾರತಕ್ಕೆ ಬರುತ್ತಿದ್ದಂತೆ ಅಡಿಕೆ ದರದಲ್ಲಿ ಸ್ವಲ್ಪ ಮಟ್ಟಿನ ಏರುಪೇರು ಶುರುವಾಗಿದೆ. ಒಂದು ಸಾವಿರ, ಎರಡು ಸಾವಿರ ಹೀಗೆ ಪ್ರತಿ ಕ್ವಿಂಟಾಲ್ ಅಡಿಕೆ ಬೆಲೆ ಕುಸಿಯುತ್ತಿದೆ. ಮೇಲಾಗಿ ಹತ್ತಾರು ರೋಗಗಳು ಬರುತ್ತಿವೆ. ಪ್ರತಿ ಎಕರೆ ಅಡಿಕೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ ವೆಚ್ಚ ಮಾಡಬೇಕು. ಆದರೆ ಇದರಿಂದ ತೊಂದರೆ ಇಲ್ಲಾ ಎಂಬ ಮಾತು ಕೇಳಿ ಬಂದರು ಸಹ ಬರುವ ದಿನಗಳಲ್ಲಿ ವಿದೇಶ ಅಡಿಕೆ ಮಾತ್ರ ದೇಶದ ಅಡಿಕೆ ಬೆಳಗಾರರ ಭಾರೀ ಪೆಟ್ಟು ಕೊಡಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.