ಹೊನ್ನಾಳಿ ಪ್ರಿಯಕರನಿಗಾಗಿ ರೇಪ್ ಕತೆ ಕಟ್ಟಿದ ಅಪ್ರಾಪ್ತ ಹುಡುಗಿ! ಪೊಲೀಸ್ ವಿಚಾರಣೆ ಆರಂಭಿಸ್ತಿದ್ದಂತೆ ಎಲ್ಲವೂ ಉಲ್ಟಾ, ಆಗಿದ್ದೇನು?
ತನ್ನ ಫೋಷಕರು ಬಂದು ಪ್ರಶ್ನೆ ಮಾಡ್ತಿದ್ದಂತೆ ಮತ್ತೊಂದು ನಾಟಕ ಶುರು ಮಾಡಿದ ಯುವತಿ ನನ್ನನ್ನ ಆಟೋದಲ್ಲಿ ಅಪಹರಿಸಿ ಅತ್ಯಾಚಾರ ಮಾಡಿದ್ದಾರೆ ಅಂತಾ ಹೇಳಿದ್ಲು. ಇದು ಕಿಡ್ನ್ಯಾಪ್ ಅಂಡ್ ಅತ್ಯಾಚಾರ ಪ್ರಕರಣ ಆಗಿರೋದ್ರಿಂದ ಫುಲ್ ಅಲರ್ಟ್ ಆದ ಪೊಲೀಸರು ಹಗಲು ರಾತ್ರಿ ಎನ್ನದೇ ನಾಲ್ಕೈದು ಟೀಂ ಕಟ್ಟಿಕೊಂಡು ಆರೋಪಿಗಳಿಗಾಗಿ ಹುಡುಕಾಟ ಶುರು ಮಾಡಿದ್ರು.
ಅದು ಯುವತಿ ಮೇಲಿನ ಅತ್ಯಾಚಾರ ಪ್ರಕರಣ.. ಆ ಕೇಸನ್ನ ಗಂಭೀರವಾಗಿ ಪರಿಗಣಿಸಿದ ಪೊಲೀಸರು ನಾಲ್ಕೈದು ಟೀಂ ಮಾಡಿಕೊಂಡು ಕಾಮುಕರಿಗಾಗಿ ಬಲೆ ಬೀಸಿದ್ರು. ಇಷ್ಟೆಲ್ಲಾ ಸೀನ್ ಕ್ರಿಯೆಟ್ ಆಗ್ತಿದ್ದಂತೆ ಅಲ್ಲಿ ಎಲ್ಲವೂ ಉಲ್ಟಾ ಆಗಿತ್ತು. ಕಂಪ್ಲೇಂಟ್ ಕೊಟ್ಟವರೇ ಪೊಲೀಸರ ಅತಿಥಿಯಾಗಿದ್ರು. ಪೊಲೀಸರು ಅಲರ್ಟ್ ಆಗಿದ್ರು…ಅಧಿಕಾರಿಗಳ ಟೀಂ ಫೀಲ್ಡ್‌ಗೆ ಇಳಿದಿತ್ತು. ಇಡೀ ಜಿಲ್ಲಾಡಳಿತ ರಾತ್ರೋರಾತ್ರಿ ಎದ್ದು ಕೂತಿತ್ತು..ಅಷ್ಟಕ್ಕೂ ಇಡೀ ಖಾಕಿ ಟೀಂ ಕಾರ್ಯಾಚರಣೆ ಆರಂಭಿಸಿದ್ದು ಯುವತಿಗಾಗಿ.. ನೊಂದ ಯುವತಿಗೆ ನ್ಯಾಯ ಕೊಡಿಸೋ ಸಲುವಾಗಿ..ಆದ್ರೆ ವಿಚಾರಣೆ ಆರಂಭಿಸುತ್ತಿದ್ದಂತೆ ಎಲ್ಲವೂ ಉಲ್ಟಾ ಆಗಿತ್ತು.
ಪ್ರಿಯಕರನಿಗಾಗಿ ರೇಪ್ ಕತೆ ಕಟ್ಟಿದ ಯುವತಿ..! ಸುಳ್ಳು ಹೇಳಿ ಯಾಮಾರಿಸಿದ್ದಕ್ಕೆ ಪೊಲೀಸರ ಅತಿಥಿ..! ಆಕೆ ಶಿವಮೊಗ್ಗ ಮೂಲದ ಯುವತಿ . ಅದೇ ಯುವತಿ ದಾವಣಗೆರೆಯಲ್ಲಿ ಡಿಪ್ಲೋಮಾ ವ್ಯಾಸಂಗ ಮಾಡ್ತಿದ್ಲು.. ಈ ನಡುವೆ ದಾವಣಗೆರೆ ಜಿಲ್ಲೆ ಹೊನ್ನಾಳಿಯ ಅದೊಬ್ಬ ಯುವಕನ ಪ್ರೇಮ ಬಲೆಗೆ ಬಿದ್ದಿದ್ಲು… ಇಬ್ರು ಪ್ರೇಮಲೋಕದಲ್ಲೇ ಸುತ್ತಾಡ್ತಿದ್ರು. ಆದ್ರೆ ಅದೇನಾಯ್ತೋ ಇವರ ಲವ್ ಬ್ರೇಕ್ ಅಪ್ ಆಗಿತ್ತು.. ಯುವತಿ ಎಷ್ಟೇ ಫೋನ್ ಮಾಡಿದ್ರೂ ಯುವಕ ಮಾತ್ರ ರಿಸೀವ್ ಮಾಡಿರಲಿಲ್ಲ.
ಹೀಗಾಗಿ ಒಂದು ಪ್ಲ್ಯಾನ್ ಮಾಡಿದ ಯುವತಿ ಹೊನ್ನಾಳಿಯ ತುಂಗಭದ್ರಾ ನದಿ ತೀರಕ್ಕೆ ಬಂದಿದ್ಲು.. ಅಲ್ಲಿ ಮೀನುಗಾರನ ಫೋನ್ ಪಡೆದು ಅದ್ರಿಂದ ಪ್ರಿಯಕರನಿಗೆ ಮೇಸೇಜ್ ರವಾನಿಸಿದ್ಲು… ನಿನ್ನ ಹುಡುಗಿಯನ್ನ ಕಿಡ್ನ್ಯಾಪ್ ಮಾಡಿದ್ದೇವೆ. ಬಿಡಿಸಿಕೊಂಡು ಹೋಗು ಅಂತಾ ಸಂದೇಶ ರವಾನಿಸಿದ್ಲು. ಆದ್ರೆ ಇದಕ್ಕೆ ಕ್ಯಾರೇ ಎನ್ನದ ಪ್ರಿಯಕರ ಅದೇ ಸಂದೇಶವನ್ನ ಅವರ ಮನೆಯವರಿಗೆ ರವಾನಿಸಿದ್ದ. ಈ ಸುದ್ದಿ ಗೊತ್ತಾಗ್ತಿದ್ದಂತೆ ಮನೆಯವರೆಲ್ಲಾ ಹೊನ್ನಾಳಿಗೆ ಓಡಿ ಬಂದಿದ್ರು.
ಇನ್ನು ತನ್ನ ಫೋಷಕರು ಬಂದು ಪ್ರಶ್ನೆ ಮಾಡ್ತಿದ್ದಂತೆ ಮತ್ತೊಂದು ನಾಟಕ ಶುರು ಮಾಡಿದ ಯುವತಿ ನನ್ನನ್ನ ಆಟೋದಲ್ಲಿ ಅಪಹರಿಸಿ ಅತ್ಯಾಚಾರ ಮಾಡಿದ್ದಾರೆ ಅಂತಾ ಹೇಳಿದ್ಲು. ಇದ್ರಿಂದ ಆತಂಕಗೊಂಡ ಫೋಷಕರು ದಾವಣಗೆರೆಗೆ ಹೋಗಿ ಕಂಪ್ಲೇಂಟ್ ನೀಡಿದ್ರು. ಇದು ಕಿಡ್ನ್ಯಾಪ್ ಅಂಡ್ ಅತ್ಯಾಚಾರ ಪ್ರಕರಣ ಆಗಿರೋದ್ರಿಂದ ಫುಲ್ ಅಲರ್ಟ್ ಆದ ಪೊಲೀಸರು ಹಗಲು ರಾತ್ರಿ ಎನ್ನದೇ ನಾಲ್ಕೈದು ಟೀಂ ಕಟ್ಟಿಕೊಂಡು ಆರೋಪಿಗಳಿಗಾಗಿ ಹುಡುಕಾಟ ಶುರು ಮಾಡಿದ್ರು.
ಇತ್ತ ಯುವತಿಯ ವೈದ್ಯಕೀಯ ಪರೀಕ್ಷೆ ನಡೆದಿತ್ತು.. ವಿಷ್ಯ ಅಂದ್ರೆ ಯುವತಿ ಮೇಲೆ ಅತ್ಯಾಚಾರ ಆಗಿಲ್ಲ ಅಂತಾ ಮೆಡಿಕಲ್ ವರದಿ ಬಂದಿತ್ತು. ಈ ವೇಳೆ ಯುವತಿಯನ್ನೇ ತೀವ್ರವಾಗಿ ವಿಚಾರಿಸುತ್ತಿದ್ದಂತೆ ಇದೆಲ್ಲಾ ಸುಳ್ಳು ಅನ್ನೋದನ್ನ ಒಪ್ಪಿಕೊಂಡಿದ್ಲು.
ಒಟ್ನಲ್ಲಿ ಪ್ರಿಯಕರನಿಗಾಗಿ ರೇಪ್ ಕತೆ ಕಟ್ಟಿದ ಯುವತಿ, ಇಡೀ ದಾವಣಗೆರೆ ಜಿಲ್ಲೆಯ ಪೊಲೀಸರೇ ಸುತ್ತಾಡುವಂತೆ ಮಾಡಿದ್ಲು. ಆದ್ರೆ ಮಾಡಿದ ತಪ್ಪಿಗೆ ಈಗ ತಾನೇ ಪೊಲೀಸರ ಅತಿಥಿಯಾಗಿದ್ದಾಳೆ. -ಬಸವರಾಜ್ ದೊಡ್ಮನಿ ಟಿವಿ9 ದಾವಣಗೆರೆ