ಹಿಮೋಫಿಲಿಯಾ ಪೀಡಿತರ ಆಶಾಕಿರಣ ದಾವಣಗೆರೆ ವೈದ್ಯ ಡಾ. ಸುರೇಶ್ ಹನಗವಾಡಿಗೆ ರಾಷ್ಟ್ರಪತಿ ಔತಣಕೂಟಕ್ಕೆ ಆಹ್ವಾನ

ಅವರೊಬ್ಬ ಸ್ವತಃ ವಿಚಿತ್ರ ಕಾಯಿಲೆಯಿಂದ ಬಳಲಿದವರು. ಸ್ನೇಹಿತರು ಮೈದಾನದಲ್ಲಿ ಆಟವಾಡುತ್ತಿದ್ದರೆ ಕಿಟಿಕಿಯಲ್ಲಿ ನಿಂತು ನೋಡಿ ಕಣ್ಣೀರು ಹಾಕುವುದನ್ನು ಬಿಟ್ಟರೆ ಮತ್ತೇನು ಮಾಡದ ಸ್ಥಿತಿ. ಇಂತಹ ಯುವಕ ನಂತರ ದಿಟ್ಟತನದಿಂದ ಓದಿ ವೈದ್ಯನಾದರು. ಅವರೀಗ ದಾವಣಗೆರೆಯಲ್ಲಿ ನಾಲ್ಕು ದಶಕಗಳಿಂದ ಹಿಮೋಫಿಲಿಯಾ ಪೀಡಿತ ಮಕ್ಕಳ ಭವಿಷ್ಯವನ್ನು ರೂಪಿಸುತ್ತಿದ್ದಾರೆ. ಇದೀಗ ರಾಷ್ಟ್ರಪತಿಗಳೇ ಅವರನ್ನು ಔತಣಕೂಟಕ್ಕೆ ಆಹ್ವಾನಿಸಿದ್ದಾರೆ.

ಹಿಮೋಫಿಲಿಯಾ ಪೀಡಿತರ ಆಶಾಕಿರಣ ದಾವಣಗೆರೆ ವೈದ್ಯ ಡಾ. ಸುರೇಶ್ ಹನಗವಾಡಿಗೆ ರಾಷ್ಟ್ರಪತಿ ಔತಣಕೂಟಕ್ಕೆ  ಆಹ್ವಾನ
ಡಾ. ಸುರೇಶ್ ಹನಗವಾಡಿ
Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: Ganapathi Sharma

Updated on: Jan 24, 2025 | 9:54 AM

ದಾವಣಗೆರೆ, ಜನವರಿ 24: ದಾವಣಗೆರೆಯ ವೈದ್ಯ ಡಾ. ಸುರೇಶ್ ಹನಗವಾಡಿಗೆ ರಾಷ್ಟ್ರಪತಿಗಳ ಔತಣಕೂಟಕ್ಕೆ ಆಹ್ವಾನ ಬಂದಿದೆ. ಅಂಚೆ ಕಚೇರಿಯ ಮುಖ್ಯಾಧಿಕಾರಿಗಳೇ ಆಹ್ವಾನ ಪತ್ರಿಕೆಯನ್ನು ತಲುಪಿಸಿದ್ದಾರೆ. ಇದೀಗ ಕ್ರಿಕೆಟ್ ದೇವರು ಎಂದೇ ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಅವರಂಥ ದಿಗ್ಗಜರ ಜತೆ ಡಾ. ಸುರೇಶ್ ಹನಗವಾಡಿ ರಾಷ್ಟ್ರಪತಿಗಳ ಔತಣಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಒಟ್ಟಾರೆಯಾಗಿ ದೇಶದ 528 ಗಣ್ಯರಿಗೆ ಔತಣಕೂಟದ ಆಹ್ವಾನ ಬಂದಿದೆ. ಇದೇ ಜನವರಿ 26ರ ಗಣರಾಜ್ಯೋತ್ಸವ ಸಮಾರಂಭ ದಿನ ಔತಣಕೂಟ ನಡೆಯಲಿದೆ.

ಡಾ. ಸುರೇಶ್ ಹನಗವಾಡಿ ಹಿಮೋಫಿಲಿಯಾ ಪೀಡಿತರ ಬಾಳಿನ ಆಶಾಕಿರಣ. ಇತ್ತೀಚಿಗೆ ರಾಷ್ಟ್ರಪತಿಗಳಿಂದ ಡಾ.ಸುರೇಶ ಹನಗವಾಡಿಗೆ ಶ್ರೇಷ್ಠ ದಿವಾಂಜನ್ ರಾಷ್ಟ್ರೀಯ ಪ್ರಶಸ್ತಿ ಕೂಡಾ ದೊರೆತಿದೆ. ದಾವಣಗೆರೆಯ ಹಿಮೋಫಿಲಿಯಾ ಸಂಸ್ಥೆಯ ಅಧ್ಯಕ್ಷರಾದ ಡಾ.‌ಸುರೇಶ ಹನಗವಾಡಿ ಸ್ವತಹ ಹಿಮೋಫಿಲಿಯಾ ಎಂಬ ವಿಚಿತ್ರ ಕಾಯಿಲೆಯಿಂದ ಬಳಲಿದವರು. ದಾವಣಗೆರೆ ಜೆಜೆಎಂ ಮೆಡಿಕಲ್ ಕಾಲೇಜ್ ಪೇಥಾಲಜಿ ವಿಭಾಗದ ಪ್ರಾಧ್ಯಾಪಕರೂ ಹೌದು. ಇತ್ತೀಚಿಗೆ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

Dr Suresh Hanagavadi With Award

ಪ್ರಶಸ್ತಿ, ಪದಕದ ಜತೆ ಡಾ. ಸುರೇಶ್ ಹನಗವಾಡಿ

ಸ್ವತಹ ಹಿಮೋಫಿಲಿಯಾ ಪೀಡತರಾದ ಡಾ. ಸುರೇಶ್ ಹನಗವಾಡಿ ಕಳೆದ ನಾಲ್ಕು ದಶಲಗಳಿಂದ ಹಿಮೋಫಿಲಿಯಾ ಪೀಡಿತರಿಗಾಗಿ ಮಾಡಿದ ಸೇವೆ ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ. ಇದೇ ಕಾರಣಕ್ಕೆ ಇದೀಗ ರಾಷ್ಟ್ರಪತಿಗಳ ಔತಣಕೂಟಕ್ಕೆ ಡಾ. ಸುರೇಶ್ ಹನಗವಾಡಿಗೆ ಆಹ್ವಾನ ಬಂದಿದೆ.

ಹಿಮೋಫಿಲಿಯಾ ಎಂದರೇನು?

ಹಿಮೋಫಿಲಿಯಾ ಎಂಬುದೊಂದು ವಿಚಿತ್ರ ಕಾಯಿಲೆ. ಇದರಿಂದ ಬಳಲುತ್ತಿರುವವರ ರಕ್ತದಲ್ಲಿ ಹೆಪ್ಪುಗಟ್ಟುವ ಅಂಶ ಇರುವುದಿಲ್ಲ. ಎನಾದರೂ ಸಣ್ಣ ಪುಟ್ಟ ಗಾಯವಾದರೆ ದೇಹದ ಒಳಭಾಗದಲ್ಲಿ ರಕ್ತಸ್ರಾವ ಆಗಿ ಗಂಟುಗಳಾಗುತ್ತವೆ. ಇದಕ್ಕೆ ರಕ್ತ ಹೆಪ್ಪು ಗಟ್ಟುಲು ಫ್ಯಾಕ್ಟರ್ ಎನ್ನುವ ಔಷಧಿ ನೀಡಬೇಕು. ಈ ಸಮಸ್ಯೆ ಹತ್ತು ಸಾವಿರ ಜನರಲ್ಲಿ ಒಬ್ಬರಿಗೆ ಆನುವಂಶಿಕವಾಗಿ ಹೆಚ್ಚಾಗಿ ಬರುತ್ತದೆ. ಇದರಿಂದ ಬಳಲುವ ಡಾ. ಸುರೇಶ್ ತನ್ನಂತೆ ಇನ್ನುಳಿದವರೂ ಸಹ ಅಂಗವಿಕಲಾಗಬಾರದು ಎಂದು ಸಂಸ್ಥೆ ಆರಂಭಿಸಿ, ಸರ್ಕಾರ, ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ನೆರವಿನಿಂದ ಅದನ್ನು ಮುನ್ನಡೆಸುತ್ತಿದ್ದಾರೆ.

ರಾಜ್ಯದ ಬಹುತೇಕ ಭಾಗಗಳ ನೂರಾರು ಜನ ಹಿಮೋಫಿಲಿಯಾ ರೋಗಿಗಳು ಡಾ. ಸುರೇಶ್ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಷ್ಟ್ರಪತಿಗಳ ಔತಣಕೂಟದ ಆಹ್ವಾನ ಪತ್ರಿಕೆಯೂ ವಿಶಿಷ್ಟ

ಡಾ. ಸುರೇಶ್ ಅವರಿಗೆ ಬಂದ ಆಹ್ವಾನ ಪತ್ರಿಕೆ ಕೂಡ ಬಲು ವಿಶೇಷವಾಗಿದೆ. ದೇಶದ ಸಂಸ್ಕೃತಿ ಹಾಗೂ ಸಂಪ್ರದಾಯ ಬಿಂಬಿಸುವ ರೀತಿಯಲ್ಲಿ ಆಹ್ವಾನ ಪತ್ರಿಕೆ ವಿನ್ಯಾಸಗೊಳಿಸಲಾಗಿದೆ. ಬಿದಿರಿನಿಂದ ಸಿದ್ಧಪಡಿಸಿದ ಬಾಕ್ಸ್ , ಚನ್ನಪಟ್ಟಣದ ಗೋಂಬೆ ಹೊಲುವ ತೆಲಂಗಾಣದ ಗೊಂಬೆಗಳು, ಕರ್ನಾಟಕದ ವಿಶಿಷ್ಟ ಸಂಪ್ರದಾಯ ಹೇಳುವ ಪಗಡೆ ಚಿತ್ರದಂತಿರುವ ವಸ್ತು, ಪ್ರವೇಶ ಪತ್ರ, ಬ್ಯಾಡ್ಜ್ ಹೀಗೆ ಆಹ್ವಾನ ಪತ್ರಿಕೆಯಲ್ಲಿ ಹತ್ತಾರು ವಿಶೇಷಗಳಿವೆ.

ಇದೇ 24 ರಂದು ಸಂಜೆ ದೆಹಲಿಗೆ ಸುರೇಶ ಹನಗವಾಡಿ ತೆರಳಲಿದ್ದಾರೆ. ಗಣರಾಜ್ಯೋತ್ಸವ ದಿನ ರಾಷ್ಟ್ರಪತಿಗಳ ಔತಣಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
ಬಿಗ್ ಬಾಸ್ ಫಿನಾಲೆ ಸಮಯದಲ್ಲಿ ಬದಲಾವಣೆ; ಮಾಹಿತಿ ನೀಡಿದ ವಾಹಿನಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಕ್ಲಾಸ್​ ನಡೆಯುವಾಗಲೇ 3ನೇ ಮಹಡಿಯಿಂದ ಹಾರಿದ ಕಾಲೇಜು ವಿದ್ಯಾರ್ಥಿ
ಕ್ಲಾಸ್​ ನಡೆಯುವಾಗಲೇ 3ನೇ ಮಹಡಿಯಿಂದ ಹಾರಿದ ಕಾಲೇಜು ವಿದ್ಯಾರ್ಥಿ
ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ರಾಜಕೀಯ ಗುಟ್ಟು ಬಿಚ್ಚಿಟ್ಟ ಹಳೇ ಕುಚಿಕು
ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ರಾಜಕೀಯ ಗುಟ್ಟು ಬಿಚ್ಚಿಟ್ಟ ಹಳೇ ಕುಚಿಕು
ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ಶ್ರೀರಾಮುಲು ಕಾಂಗ್ರೆಸ್​ಗೆ ಕಳುಹಿಸಲು ಅವರೇ ಪ್ರಯತ್ನಿಸ್ತಿರಬಹುದು: ಡಿಕೆಶಿ
ಶ್ರೀರಾಮುಲು ಕಾಂಗ್ರೆಸ್​ಗೆ ಕಳುಹಿಸಲು ಅವರೇ ಪ್ರಯತ್ನಿಸ್ತಿರಬಹುದು: ಡಿಕೆಶಿ