AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಚಮಸಾಲಿ ಪೀಠದ ‘ಲೆಕ್ಕಾ’ಚಾರ: 18 ವರ್ಷದ ಲೆಕ್ಕ ಕೊಟ್ಟ ಟ್ರಸ್ಟ್‌; ಕಳ್ಳಲೆಕ್ಕ ಎಂದ ಸ್ವಾಮೀಜಿ ಟೀಂ

ಹರಿಹರದ ಪಂಚಮಸಾಲಿ ಮಠದಲ್ಲಿ ನಡೆದ ಲೆಕ್ಕ ಲಡಾಯಿ ಜ್ವಾಲೆಯಾಗಿ ಧಗ ಧಗಿಸಿದೆ. ವಚನಾನಂದ ಶ್ರೀ ಮತ್ತು ಟ್ರಸ್ಟಿಗಳ ಮಧ್ಯೆ ಕದನವೇ ಏರ್ಪಟ್ಟಿತ್ತು. ಇಂದು ನಡೆದ ಹೈಡ್ರಾಮಾ ಮಧ್ಯೆಯೇ ಟ್ರಸ್ಟ್ ಸದಸ್ಯರು 18 ವರ್ಷಗಳ ಲೆಕ್ಕ ನೀಡಿದ್ದಾರೆ. ಶ್ರೀಗಳು ಮಾತ್ರ ಇದು ಕಳ್ಳ ಲೆಕ್ಕ, ಇದನ್ನ ಒಪ್ಪುವುದಿಲ್ಲ ಎಂದಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಪಂಚಮಸಾಲಿ ಪೀಠದ ‘ಲೆಕ್ಕಾ’ಚಾರ: 18 ವರ್ಷದ ಲೆಕ್ಕ ಕೊಟ್ಟ ಟ್ರಸ್ಟ್‌; ಕಳ್ಳಲೆಕ್ಕ ಎಂದ ಸ್ವಾಮೀಜಿ ಟೀಂ
ಟ್ರಸ್ಟಿ ಬಿ.ಸಿ ಉಮಾಪತಿ, ವಚನಾನಂದ ಶ್ರೀImage Credit source: tv9 kannada
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on: Apr 27, 2026 | 7:56 PM

Share

ದಾವಣಗೆರೆ, ಏಪ್ರಿಲ್​ 27: ಮಠದಲ್ಲಿ ಅನುದಾನ ಮತ್ತು ಭಕ್ತರ ದೇಣಿಗೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪ ಹರಿಹರದ ಪಂಚಮಸಾಲಿ ಮಠದ (Harihara Panchamasali Peetha) ಆಡಳಿತ ಮಂಡಳಿ ಹಾಗೂ ವಚನಾನಂದ ಶ್ರೀ ಮಧ್ಯೆ ಬಹಿರಂಗ ಸಂಘರ್ಷಕ್ಕೆ ಕಾರಣವಾಗಿತ್ತು. ಈ ಬಗ್ಗೆ ಲೆಕ್ಕ ಕೊಡುವಂತೆ ವಚನಾನಂದ ಶ್ರೀ ಪಟ್ಟು ಹಿಡಿದಿದ್ದರು. ಈ ಬೆನ್ನಲ್ಲೇ ಇಂದು ಟ್ರಸ್ಟ್‌ ಸದಸ್ಯರು 2008 ರಿಂದ 2026ವರೆಗಿನ ಲೆಕ್ಕದ ಸಂಪೂರ್ಣ ವಿವರವನ್ನು ನೀಡಿದ್ದಾರೆ. ಈ ಲೆಕ್ಕವನ್ನ ನಾವು ಒಪ್ಪುವುದಿಲ್ಲ, ಇದು ಕಳ್ಳ ಲೆಕ್ಕ ಎಂದು ಸ್ವಾಮೀಜಿ ಹಾಗೂ ತಂಡ ಕಿಡಿಕಾರಿದ್ದಾರೆ. ಇನ್ನು ಇದೇ ವೇಳೆ ಮಠದ ಆವರಣ ಅಕ್ಷರಶಃ ರಣಾಂಗಣವಾಗಿತ್ತು. ವಚನಪಠಣ ಆಗಬೇಕಿದ್ದ ಜಾಗದಲ್ಲಿ ಬೈಗುಳ ಕೇಳಿಬಂದವು.

ಪಂಚಮಸಾಲಿ ಸಮುದಾಯ ನಾಡಿನ ದೊಡ್ಡ ಸಮುದಾಯಗಳಲ್ಲೊಂದು. ಇದೇ ಸಮುದಾಯದ ಬೆಳವಣಿಗೆಗೆ ಅಂತಾನೇ ಹರಿಹರದಲ್ಲಿ ಮಠ ಸ್ಥಾಪಿಸಲಾಗಿದೆ. ಆದರೆ ಇದೇ ಮಠದಲ್ಲಿ ಇಂದು ನಡೆದಿದ್ದು ಮಾತ್ರ ಬಿಗ್‌ ಹೈಡ್ರಾಮಾ.

ಇದನ್ನೂ ಓದಿ: ಕಳೆದ 18 ವರ್ಷದಲ್ಲಿ ಹರಿಹರ ಪಂಚಮಸಾಲಿ ಪೀಠದಲ್ಲಿ ಸಂಗ್ರಹವಾದ ದೇಣಿಗೆ ಎಷ್ಟು ಗೊತ್ತಾ?

ಹರಿಹರ ಪಂಚಮಸಾಲಿ ಪೀಠದ ಪೀಠಾಧಿಪತಿಯಾಗಿದ್ದ ವಚನಾನಂದ ಶ್ರೀಗಳನ್ನ ಹತ್ತಾರು ಕಾರಣ ನೀಡಿ ಮಠದಿಂದ ಉಚ್ಚಾಟನೆ ಮಾಡಲಾಗಿತ್ತು. ಪಂಚಮಸಾಲಿ ಟ್ರಸ್ಟ್‌ ತೆಗೆದುಕೊಂಡ ಇದೇ ನಿರ್ಧಾರ ಶ್ರೀಗಳ ಪರ ಇರುವ ಭಕ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಇನ್ನು ಉಚ್ಚಾಟನೆ ಮಾಡಿದ್ರೂ ಮಠ ತೊರೆಯದ ಶ್ರೀಗಳು, ಲೆಕ್ಕ ಕೊಡಿ ಅಂತಾ ಅಭಿಯಾನ ಆರಂಭಿಸಿದ್ದರು. ಇದೇ ಅಭಿಯಾನಕ್ಕೆ ಉತ್ತರ ಎಂಬಂತೆ ಮಠದ ಆವರಣದಲ್ಲೇ ಬಹಿರಂಗ ಸಭೆ ನಡೆಸಿದ ಟ್ರಸ್ಟ್‌ ಸದಸ್ಯರು 2008 ರಿಂದ 2026 ರವರೆಗಿನ ಲೆಕ್ಕ ಕೊಟ್ಟಿದ್ದಾರೆ.

18 ವರ್ಷಗಳಲ್ಲಿ 27,61,57,017 ರೂ. ದೇಣಿಗೆ ಸಂಗ್ರಹ

ಕಳೆದ 18 ವರ್ಷಗಳಲ್ಲಿ ಮಠದ ಭಕ್ತರಿಂದ 27 ಕೋಟಿ 61 ಲಕ್ಷದ57 ಸಾವಿರದ17 ರೂಪಾಯಿ ದೇಣಿಗೆ ಸಂಗ್ರಹ ಆಗಿದೆ. ರಾಜ್ಯ ಸರ್ಕಾರ ವಿವಿಧ ಅಭಿವೃದ್ಧಿ ಕಾರ್ಯಕ್ಕೆ ಅಂತಾ 12 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಇನ್ನು ಮರಳು ಮಾರಾಟದಿಂದ 10 ಲಕ್ಷ ರೂಪಾಯಿ ಸಂಗ್ರಹವಾದರೆ, ತುಲಾಭಾರದಿಂದ4.5 ಕೋಟಿ ರೂ ಮೌಲ್ಯದ 174 ಕೆಜಿ ಬೆಳ್ಳಿ ಸಂಗ್ರಹವಾಗಿದೆ. 174 ಕೆಜಿ ಬೆಳ್ಳಿಯನ್ನು ಬ್ಯಾಂಕ್ ಲಾಕರ್‌ ಸುರಕ್ಷಿತವಾಗಿ ಇಡಲಾಗಿದೆ ಅಂತಾ ಟ್ರಸ್ಟ್‌ನವರು ಲೆಕ್ಕ ಒಪ್ಪಿಸಿದ್ದಾರೆ.

ಈ ಲೆಕ್ಕವನ್ನ ನಾವು ಒಪುವುದಿಲ್ಲ: ವಚನಾನಂದ ಶ್ರೀಗಳು

ಇನ್ನು ಲೆಕ್ಕ ಕೊಡುತ್ತಿರುವ ವೇಳೆ ಅತ್ತ ಮಠಕ್ಕೆ ಮಾಜಿ ಶಾಸಕರಾದ ಹೆಚ್‌ಎಸ್ ಶಿವಶಂಕರ್‌, ಅರುಣ್ ಪೂಜಾರ್ ಎಂಟ್ರಿ ಆಗಿದ್ರು. ಇಬ್ಬರನ್ನ ಸ್ವಾಗತಿಸಿದ ಸ್ವಾಮೀಜಿ ಪರ ಭಕ್ತರು, ಇದು ಕಳ್ಳ ಲೆಕ್ಕ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದು, ವೇದಿಕೆಗೆ ನುಗ್ಗಲು ಯತ್ನಿಸಿದರು. ಈ ವೇಳೆ ತಳ್ಳಾಟ ನೂಕಾಟ ಉಂಟಾಯಿತು. ಈ ಲೆಕ್ಕವನ್ನ ನಾವು ಒಪುವುದಿಲ್ಲ ಎಂದು ವಚನಾನಂದ ಶ್ರೀಗಳು ಹೇಳಿದ್ದಾರೆ.

ಗೌರವದಿಂದ ಮಠ ಬಿಟ್ಟು ಹೋಗಿ ಎಂದ ಟ್ರಸ್ಟ್‌: ನೀವೆ ಮಠ ಖಾಲಿ ಮಾಡಿ ಎಂದ ವಚನಾನಂದ ಶ್ರೀ

ಲೆಕ್ಕದ ಗಲಾಟೆ ಒಂದುಕಡೆಯಾದರೆ, ಟ್ರಸ್ಟ್‌ನವರು ಇಂದು ಮನಗೂಳಿ ಶ್ರೀಗಳನ್ನ ಕರೆಸಿ ಲೆಕ್ಕಪತ್ರದ ಕಾರ್ಯಕ್ರಮ ನಡೆಸಿದರು. ಹೀಗಾಗಿ ವಚನಾನಂದ ಶ್ರೀಗಳ ಬದಲಾಗಿ ಬೇರೆಯವರನ್ನ ಪಟ್ಟ ಕಟ್ಟುತ್ತಾರಾ ಅನ್ನೋ ಪ್ರಶ್ನೆ ಮೂಡಿದೆ. ಈ ಬಗ್ಗೆಯೂ ಮಾತನಾಡಿರುವ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಬಿ.ಸಿ ಉಮಾಪತಿ, ಶ್ರೀಗಳಿಗೆ ಗೌರವದಿಂದ ಹೋಗು ಅಂತಾ ಹೇಳಿದ್ದೇವೆ. ಇಲ್ಲದಿದ್ದರೆ ಮುಂದೆ ನೋಡಿಕೊಳ್ತೇವೆ ಎಂದಿದ್ದಾರೆ. ಆದರೆ ವಚನಾನಂದ ಶ್ರೀಗಳು ಮಾತ್ರ ನೀವೆ ಮಠ ಖಾಲಿ ಮಾಡಿ ಅಂತಾ ತಿರುಗೇಟು ಕೊಟ್ಟಿದ್ದಾರೆ.

ಮನಗೂಳಿ ಶ್ರೀಗಳ ಎಂಟ್ರಿ ವೇಳೆ ಬಿಗ್ ಹೈಡ್ರಾಮಾ!

ಸಭೆ ಬಳಿಕ ಮಹಾಂತ ಶ್ರೀಗಳ ಗದ್ದುಗೆ ದರ್ಶನಕ್ಕೆ ಮನಗೂಳಿ ಶ್ರೀಗಳು ಬಂದಿದ್ದರು. ಆಗ ಶ್ರೀಗಳ ಮೇಲೆಯೇ ಭಕ್ತರು ಬಾಟಲ್‌ ಎಸಿದಿದ್ದಾರೆ. ಆಗ ಮತ್ತೊಂದು ಸುತ್ತಿನ ಗಲಾಟೆ ಆಯ್ತು. ಹೀಗೆ ಪಂಚಮಸಾಲಿ ಒಳಜಗಳ ಈಗ ಬೀದಿಗೆ ಬಂದಿದ್ದು, ಇದು ಮತ್ತೆಲ್ಲಿಗೆ ಹೋಗಿ ನಿಲ್ಲುತ್ತೋ ಕಾದು ನೋಡ್ಬೇಕು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಕಳೆದ 18 ವರ್ಷದಲ್ಲಿ ಹರಿಹರ ಪಂಚಮಸಾಲಿ ಪೀಠದಲ್ಲಿ ಸಂಗ್ರಹವಾದ ದೇಣಿಗೆ ಎಷ್ಟು?
ಕಳೆದ 18 ವರ್ಷದಲ್ಲಿ ಹರಿಹರ ಪಂಚಮಸಾಲಿ ಪೀಠದಲ್ಲಿ ಸಂಗ್ರಹವಾದ ದೇಣಿಗೆ ಎಷ್ಟು?
100 ರೂ ಕೇಳಿದ ವೈಭವ್, 200 ರೂ ನೀಡಿದ ಫ್ಯಾನ್
100 ರೂ ಕೇಳಿದ ವೈಭವ್, 200 ರೂ ನೀಡಿದ ಫ್ಯಾನ್
‘ಕೆಡಿ’ ಸಿನಿಮಾದಲ್ಲಿ ಸುದೀಪ್ ಪಾತ್ರವೇನು? ಕಿಚ್ಚನ ಸುದ್ದಿಗೋಷ್ಠಿ ವಿಡಿಯೋ
‘ಕೆಡಿ’ ಸಿನಿಮಾದಲ್ಲಿ ಸುದೀಪ್ ಪಾತ್ರವೇನು? ಕಿಚ್ಚನ ಸುದ್ದಿಗೋಷ್ಠಿ ವಿಡಿಯೋ
ಚನ್ನಪಟ್ಟಣ ನಗರಕ್ಕೇ ನುಗ್ಗಿದ ಒಂಟಿ ಸಲಗ: ಎದುರಿಗೆ ಸಿಕ್ಕಿದ್ದೆಲ್ಲ ಉಡೀಸ್​​
ಚನ್ನಪಟ್ಟಣ ನಗರಕ್ಕೇ ನುಗ್ಗಿದ ಒಂಟಿ ಸಲಗ: ಎದುರಿಗೆ ಸಿಕ್ಕಿದ್ದೆಲ್ಲ ಉಡೀಸ್​​
ಮೇ 4ಕ್ಕೆ ಪ್ರಮಾಣವಚನಕ್ಕೆ ಬರುವೆ, ಬಂಗಾಳದಲ್ಲಿ ಮೋದಿ ವಿಜಯಘೋಷ
ಮೇ 4ಕ್ಕೆ ಪ್ರಮಾಣವಚನಕ್ಕೆ ಬರುವೆ, ಬಂಗಾಳದಲ್ಲಿ ಮೋದಿ ವಿಜಯಘೋಷ
ರಕ್ಷಿತಾ-ಧ್ರುವಂತ್ ಮಧ್ಯೆ ಎಷ್ಟು ಒಳ್ಳೆಯ ಬಾಂಧವ್ಯ ಇದೆ ನೋಡಿ
ರಕ್ಷಿತಾ-ಧ್ರುವಂತ್ ಮಧ್ಯೆ ಎಷ್ಟು ಒಳ್ಳೆಯ ಬಾಂಧವ್ಯ ಇದೆ ನೋಡಿ
ರಾಜಕುಮಾರ್ ಸ್ಮಾರಕದ ಬಳಿ ಫ್ಲೆಕ್ಸ್ ಗೋಡೌನ್‌ನಲ್ಲಿ ಭೀಕರ ಅಗ್ನಿ ಅವಘಡ
ರಾಜಕುಮಾರ್ ಸ್ಮಾರಕದ ಬಳಿ ಫ್ಲೆಕ್ಸ್ ಗೋಡೌನ್‌ನಲ್ಲಿ ಭೀಕರ ಅಗ್ನಿ ಅವಘಡ
ಅಕ್ರಮದ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದ ಮಹಿಳೆಗೇ ಬಿಗ್ ಶಾಕ್!
ಅಕ್ರಮದ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದ ಮಹಿಳೆಗೇ ಬಿಗ್ ಶಾಕ್!
ಜರ್ಮನ್ ಒಪೆರಾ ಹಾಡಿದ ಸರೆಗಮಪ ಸ್ಪರ್ಧಿ; ಜಡ್ಜ್​​ಗಳೇ ಶಾಕ್ 
ಜರ್ಮನ್ ಒಪೆರಾ ಹಾಡಿದ ಸರೆಗಮಪ ಸ್ಪರ್ಧಿ; ಜಡ್ಜ್​​ಗಳೇ ಶಾಕ್ 
SSLC ಫಲಿತಾಂಶದ ವೇಳೆ ಯಡವಟ್ಟು: 92ರ ಬದಲು ವಿದ್ಯಾರ್ಥಿಗೆ ಬಂದಿದ್ದು 48 ಅಂಕ
SSLC ಫಲಿತಾಂಶದ ವೇಳೆ ಯಡವಟ್ಟು: 92ರ ಬದಲು ವಿದ್ಯಾರ್ಥಿಗೆ ಬಂದಿದ್ದು 48 ಅಂಕ