AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವಿಜ್ಞಾನ ಆಧಾರಿತ ಕೋರ್ಸ್‌ ಬೋಧನೆ; ಜುಲೈ ಒಳಗೆ ವರದಿ ನೀಡಲು ಡಿಸಿಎಂ ಡಾ.ಅಶ್ವತ್ಥ್ ನಾರಾಯಣ ಸೂಚನೆ

ರಾಜ್ಯದಲ್ಲಿ ಒಟ್ಟು 220 ಎಂಜಿನಿಯರಿಂಗ್ ಕಾಲೇಜುಗಳಿದ್ದು, ಈ ಪೈಕಿ 100 ಕಾಲೇಜುಗಳಲ್ಲಿ ಅತ್ಯುತ್ತಮ ದರ್ಜೆಯ ಮೂಲಸೌಕರ್ಯಗಳಿವೆ. ಬಿ.ಎಸ್ ಸಿ ಮಾದರಿಯ 4 ವರ್ಷಗಳ ವಿಜ್ಞಾನ ಆಧಾರಿತ ಕೋರ್ಸುಗಳನ್ನು ಈ ಕಾಲೇಜುಗಳಲ್ಲಿ ಬೋಧಿಸುವ ಸಾಧ್ಯತೆ ಬಗ್ಗೆ ಜುಲೈ ಅಂತ್ಯದೊಳಗೆ ಒಂದು ನಿರ್ದಿಷ್ಟ ಕಾರ್ಯ ಚೌಕಟ್ಟು (ಕಾರ್ಯಸೂಚಿ) ರೂಪಿಸುವಂತೆ ಪ್ರೊ.ತಿಮ್ಮೇಗೌಡ ಅವರಿಗೆ ಡಿಸಿಎಂ ಸೂಚನೆ ನೀಡಿದರು.

ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವಿಜ್ಞಾನ ಆಧಾರಿತ ಕೋರ್ಸ್‌ ಬೋಧನೆ; ಜುಲೈ ಒಳಗೆ ವರದಿ ನೀಡಲು ಡಿಸಿಎಂ ಡಾ.ಅಶ್ವತ್ಥ್ ನಾರಾಯಣ ಸೂಚನೆ
ಡಿಸಿಎಂ ಅಶ್ವತ್ಥನಾರಾಯಣ
Follow us
TV9 Web
| Updated By: guruganesh bhat

Updated on: Jun 10, 2021 | 9:46 PM

ಬೆಂಗಳೂರು: ರಾಜ್ಯದ ಎಂಜಿನಿಯರಿಂಗ್ ಕಾಲೇಜುಗಳಲ್ಲಿ ವಿಜ್ಞಾನ ಆಧಾರಿತ ಕೋರ್ಸ್‌ ಬೋಧನೆ ವಿಚಾರವಾಗಿ ಜುಲೈ ಒಳಗೆ ವರದಿ ನೀಡುವಂತೆ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ವರದಿ ನೀಡಲು ಸೂಚಿಸಿದರು. ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಬಹುಶಿಸ್ತೀಯ ಬೋಧನಾ ಕ್ರಮದಂತೆ  ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ವಿಜ್ಞಾನ ಆಧಾರಿತ ಕೋರ್ಸುಗಳನ್ನು ಬೋಧಿಸುವ ಬಗ್ಗೆ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು  ಇಲಾಖೆಯ ಉನ್ನತ ಅಧಿಕಾರಿಗಳು ಮತ್ತು ತಜ್ಞರ ಜತೆ ಗುರುವಾರ ಸಮಾಲೋಚನೆ ನಡೆಸಿದರು.

ರಾಜ್ಯದಲ್ಲಿ ಒಟ್ಟು 220 ಎಂಜಿನಿಯರಿಂಗ್ ಕಾಲೇಜುಗಳಿದ್ದು, ಈ ಪೈಕಿ 100 ಕಾಲೇಜುಗಳಲ್ಲಿ ಅತ್ಯುತ್ತಮ ದರ್ಜೆಯ ಮೂಲಸೌಕರ್ಯಗಳಿವೆ. ಬಿ.ಎಸ್ ಸಿ ಮಾದರಿಯ 4 ವರ್ಷಗಳ ವಿಜ್ಞಾನ ಆಧಾರಿತ ಕೋರ್ಸುಗಳನ್ನು ಈ ಕಾಲೇಜುಗಳಲ್ಲಿ ಬೋಧಿಸುವ ಸಾಧ್ಯತೆ ಬಗ್ಗೆ ಜುಲೈ ಅಂತ್ಯದೊಳಗೆ ಒಂದು ನಿರ್ದಿಷ್ಟ ಕಾರ್ಯ ಚೌಕಟ್ಟು (ಕಾರ್ಯಸೂಚಿ) ರೂಪಿಸುವಂತೆ ಪ್ರೊ.ತಿಮ್ಮೇಗೌಡ ಅವರಿಗೆ ಡಿಸಿಎಂ ಸೂಚನೆ ನೀಡಿದರು.

ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ ನಾಯಕ್‌, ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕ ಗೋಪಾಲ ಜೋಷಿ, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್‌ ಪ್ರಭಾಕರ್‌, ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕರಿಸಿದ್ದಪ್ಪ ಅವರೊಂದಿಗೆ ಡಿಸಿಎಂ ಮಹತ್ವದ ಚರ್ಚೆ ನಡೆಸಿದರು.

ಸಾಧ್ಯವಾದರೆ, ಒಂದು ವಾರದಲ್ಲೇ ಕಾರ್ಯ ಚೌಕಟ್ಟಿನ ತಾತ್ಕಾಲಿಕ ವರದಿ ನೀಡಿ ಎಂದು ತಿಮ್ಮೇಗೌಡರಿಗೆ ಹೇಳಿದ ಡಿಸಿಎಂ, ಈಗಾಗಲೇ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಸಂಪುಟ ಒಪ್ಪಿಗೆ ನೀಡಿದೆ. ಹೀಗಾಗಿ ಈ ವರ್ಷದಿಂದಲೇ ಈ ಕೋರ್ಸುಗಳನ್ನು ಬೋಧಿಸಲು ಸಾಧ್ಯವೇ? ಅದಕ್ಕೇನಾದರೂ ಕಾನೂನು ತೊಡಕುಗಳು ಇವೆಯೇ? ಎಂಬ ಅಂಶಗಳ ಬಗ್ಗೆ ಪರೀಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಒಂದು ವೇಳೆ ಎಂಜಿನೀಯರಿಂಗ್‌ ಕಾಲೇಜುಗಳಲ್ಲಿ ಮೂಲ ವಿಜ್ಞಾನ ಬೋಧಿಸಲು ಕಾನೂನು ತೊಡಕಿದ್ದರೆ ಸುಗ್ರೀವಾಜ್ಞೆ ಜಾರಿಗೆ ತರಬೇಕಾಗುತ್ತದೆ. ಗುಣಮಟ್ಟದ ವಿಜ್ಞಾನ ಬೋಧನೆಗೆ ಈ ಉಪ ಕ್ರಮ ಅತ್ಯಗತ್ಯ. ಗಣಿತ, ಅನ್ವಯಿಕ ವಿಜ್ಞಾನ ಸೇರಿ ಯಾವ ಕೋರ್ಸುಗಳನ್ನು ಅಳವಡಿಸಬೇಕು ಎಂಬುದರ ಬಗ್ಗೆಯೂ ಡಿಸಿಎಂ ಮಾತುಕತೆ ನಡೆಸಿದರು.

ಅಲ್ಲದೆ, ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ವಿಜ್ಞಾನವನ್ನು ಯಾವ ರೀತಿ ಬೋಧಿಸಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಪಡೆಯಿರಿ. ಅದೇ ರೀತಿಯಲ್ಲಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ವಿಜ್ಞಾನ ಕಲಿಕೆ ಆಗಬೇಕು ಹಾಗೂ ಹಾಲಿ ಇರುವ ಮೂಲ ಸೌಕರ್ಯದಿಂದಲೇ ಈ ಸುಧಾರಣೆಯನ್ನು ಜಾರಿಗೆ ತರಲು ಸಾಧ್ಯವೇ ಎಂಬುದರ ಬಗ್ಗೆ ವರದಿಯಲ್ಲಿ ಉಲ್ಲೇಖ ಮಾಡುವಂತೆ ಡಾ.ಅಶ್ವತ್ಥನಾರಾಯಣ ಸೂಚಿಸಿದರು.

ಡಿಸಿಎಂ ಅವರ ಕಚೇರಿಯಲ್ಲಿ ನಡೆದ ಈ ಸಭೆಯಲ್ಲಿ ಪ್ರೊ.ಕರಿಸಿದ್ದಪ್ಪ ಹಾಗೂ ಗೋಪಾಲ ಜೋಷಿ ಆನ್‌ಲೈನ್‌ ಮೂಲಕ ಭಾಗಿಯಾಗಿದ್ದರು.

ಇದನ್ನೂ ಓದಿ: Karnataka Unlock: 11 ಜಿಲ್ಲೆಗಳಲ್ಲಿ ಮಾತ್ರ ಲಾಕ್​ಡೌನ್ ವಿಸ್ತರಣೆ; ಇನ್ನುಳಿದ ಜಿಲ್ಲೆಗಳು 14ರಿಂದ ಅನ್​ಲಾಕ್: ಸಿಎಂ ಯಡಿಯೂರಪ್ಪ ಘೋಷಣೆ 

Work From Home: ತನ್ನ ಉದ್ಯೋಗಿಗಳಿಗೆ ಶಾಶ್ವತವಾಗಿ ವರ್ಕ್ ಫ್ರಂ ಹೋಂ ಅವಕಾಶ ನೀಡಿದ ಫೇಸ್​ಬುಕ್

(DCM Dr Ashwath Narayana instructed to give report Science based course teaching in BE college within July )

ಬಾಯಿಗೆ ಹುಲ್ಲು ತುರುಕಿ ಪ್ರಾಣಿಯಂತೆ ನಡೆಸಿ ವಿಕೃತಿ ತೋರಿದ ಜನ
ಬಾಯಿಗೆ ಹುಲ್ಲು ತುರುಕಿ ಪ್ರಾಣಿಯಂತೆ ನಡೆಸಿ ವಿಕೃತಿ ತೋರಿದ ಜನ
ಮ್ಯೂಸಿಕ್​ ಫೆಸ್ಟಿವಲ್​ನಲ್ಲಿ 140ಕ್ಕೂ ಅಧಿಕ ಜನರ ಮೇಲೆ ಸಿರಿಂಜ್ ದಾಳಿ
ಮ್ಯೂಸಿಕ್​ ಫೆಸ್ಟಿವಲ್​ನಲ್ಲಿ 140ಕ್ಕೂ ಅಧಿಕ ಜನರ ಮೇಲೆ ಸಿರಿಂಜ್ ದಾಳಿ
ರೈಲಿನಡಿ ಬೀಳುತ್ತಿದ್ದವನ ದೇವರಂತೆ ರಕ್ಷಿಸಿದ ಸಿಬ್ಬಂದಿ, ಇಲ್ಲಿದೆ ವಿಡಿಯೋ
ರೈಲಿನಡಿ ಬೀಳುತ್ತಿದ್ದವನ ದೇವರಂತೆ ರಕ್ಷಿಸಿದ ಸಿಬ್ಬಂದಿ, ಇಲ್ಲಿದೆ ವಿಡಿಯೋ
ಹಂಸಲೇಖ ಮತ್ತು ನಾನು ದೂರ ಆಗಲು ಕಾರಣ ಏನೆಂದರೆ.. ವಿವರಿಸಿದ ರವಿಚಂದ್ರನ್
ಹಂಸಲೇಖ ಮತ್ತು ನಾನು ದೂರ ಆಗಲು ಕಾರಣ ಏನೆಂದರೆ.. ವಿವರಿಸಿದ ರವಿಚಂದ್ರನ್
ನಮ್ಮತ್ರ ದುಡ್ಡಿಲ್ಲ, ಸಿದ್ರಾಮಣ್ಣನತ್ರ ದುಡ್ಡಿಲ್ಲ: ಪರಮೇಶ್ವರ್ ಹೇಳಿಕೆ
ನಮ್ಮತ್ರ ದುಡ್ಡಿಲ್ಲ, ಸಿದ್ರಾಮಣ್ಣನತ್ರ ದುಡ್ಡಿಲ್ಲ: ಪರಮೇಶ್ವರ್ ಹೇಳಿಕೆ
ಪ್ಲೀಸ್ ನನ್ನ ಶಾಲೆಗೆ ಸೇರಿಸ್ತೀರಾ, ಬಾಲಕಿಯ ಮನವಿಗೆ ಸ್ಪಂದಿಸಿದ ಯೋಗಿ
ಪ್ಲೀಸ್ ನನ್ನ ಶಾಲೆಗೆ ಸೇರಿಸ್ತೀರಾ, ಬಾಲಕಿಯ ಮನವಿಗೆ ಸ್ಪಂದಿಸಿದ ಯೋಗಿ
6,6,6,6,6,6,6... IPLನಲ್ಲಿ ಠುಸ್... MLCಯಲ್ಲಿ ಬುಸ್..!
6,6,6,6,6,6,6... IPLನಲ್ಲಿ ಠುಸ್... MLCಯಲ್ಲಿ ಬುಸ್..!
ಅನಂತ್ ಕುಮಾರ್ ಹೆಗಡೆ ಗಲಾಟೆ ಪ್ರಕರಣ: ಸುರೇಶ್ ಗೌಡ ಹೇಳಿದ್ದೇನು?
ಅನಂತ್ ಕುಮಾರ್ ಹೆಗಡೆ ಗಲಾಟೆ ಪ್ರಕರಣ: ಸುರೇಶ್ ಗೌಡ ಹೇಳಿದ್ದೇನು?
ವೃಷಭ ರಾಶಿಯಲ್ಲಿ ಚಂದ್ರ ಸಂಚಾರ: ಈ ದಿನದ ರಾಶಿ ಭವಿಷ್ಯ ಇಲ್ಲಿ ತಿಳಿಯಿರಿ
ವೃಷಭ ರಾಶಿಯಲ್ಲಿ ಚಂದ್ರ ಸಂಚಾರ: ಈ ದಿನದ ರಾಶಿ ಭವಿಷ್ಯ ಇಲ್ಲಿ ತಿಳಿಯಿರಿ
ಆಧ್ಯಾತ್ಮಿಕ ವಿವರಣೆ: ಸ್ಟೀಲ್​ನಿಂದ ತಯಾರಿಸಿದ ವಸ್ತುಗಳನ್ನು ಧರಿಸಬಹುದೇ?
ಆಧ್ಯಾತ್ಮಿಕ ವಿವರಣೆ: ಸ್ಟೀಲ್​ನಿಂದ ತಯಾರಿಸಿದ ವಸ್ತುಗಳನ್ನು ಧರಿಸಬಹುದೇ?