AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲವ್​​ ಜಿವಾದ್​​: ವಿವಾದಾತ್ಮಕ ಹೇಳಿಕೆ ನೀಡಿದ ವಿಹೆಚ್​​ಪಿ ರಾಷ್ಟ್ರೀಯ ಕಾರ್ಯದರ್ಶಿ ಗೋಪಾಲ್ ನಾಗರಕಟ್ಟೆ

ಹುಬ್ಬಳ್ಳಿಯ ಈದ್ಗಾ ಮೈದಾನದ ಗಣೇಶ ವಿಸರ್ಜನಾ ಕಾರ್ಯಕ್ರಮದಲ್ಲಿ ಲವ್ ಜಿಹಾದ್ ಕುರಿತು ವಿಎಚ್‌ಪಿ ರಾಷ್ಟ್ರೀಯ ಕಾರ್ಯದರ್ಶಿ ಗೋಪಾಲ್ ನಾಗರಕಟ್ಟೆ ನೀಡಿದ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದೆ. ದೇಶದಲ್ಲಿ ಕೋಟ್ಯಾಂತರ ಮಸೀದಿ, ಚರ್ಚ್​​ಗಳಿವೆ. ಅವುಗಳ ಆದಾಯದ ಮೇಲೆ ಬೀಳದ ಸರ್ಕಾರದ ಕಣ್ಣು ಹಿಂದೂ ದೇವಾಲಯಗಳ ಮೇಲೆ ಬಿದ್ದಿದೆ ಎಂದೂ ಅವರು ಇದೇ ವೇಳೆ ಹೇಳಿದ್ದಾರೆ.

ಲವ್​​ ಜಿವಾದ್​​: ವಿವಾದಾತ್ಮಕ ಹೇಳಿಕೆ ನೀಡಿದ ವಿಹೆಚ್​​ಪಿ ರಾಷ್ಟ್ರೀಯ ಕಾರ್ಯದರ್ಶಿ ಗೋಪಾಲ್ ನಾಗರಕಟ್ಟೆ
ವಿಹೆಚ್​​ಪಿ ರಾಷ್ಟ್ರೀಯ ಕಾರ್ಯದರ್ಶಿ ಗೋಪಾಲ್ ನಾಗರಕಟ್ಟೆ Image Credit source: Tv9 Kannada
ಸಂಜಯ್ಯಾ ಚಿಕ್ಕಮಠ
| Edited By: |

Updated on:Sep 16, 2026 | 6:22 PM

Share

ಹುಬ್ಬಳ್ಳಿ, ಸೆಪ್ಟೆಂಬರ್​​ 16: ಲವ್ ಜಿಹಾದ್ ಹೆಚ್ಚಾಗಿದ್ದು, ಮುಸ್ಲಿಮರು ತಮ್ಮ ಮಕ್ಕಳಿಗೆ ಬುದ್ಧಿ ಹೇಳಬೇಕು. ನಮಗೆ ರಾಮನಂತೆ ಏಕಪತ್ನಿ ವೃತಸ್ಥ ಆಗೋದೂ ಗೊತ್ತಿದೆ, ಕೃಷ್ಣನಂತೆ ಹದಿನಾರು ಸಾವಿರ ಹೆಂಡತಿಯರನ್ನು ಹೊಂದೋದು ಗೊತ್ತಿದೆ. ಹಿಂದೂ ಹುಡುಗರು ಮುಸ್ಲಿಂ ಹುಡುಗಿಯರನ್ನು ಲವ್ ಮಾಡಲು ಆರಂಭ ಮಾಡಿದ್ರೆ ಅವರಿಗೆ ಒಂದು ಹುಡುಗಿ ಕೂಡ ಸಿಗಲ್ಲ ಎಂದು ವಿಹೆಚ್​​ಪಿ ರಾಷ್ಟ್ರೀಯ ಕಾರ್ಯದರ್ಶಿ ಗೋಪಾಲ್ ನಾಗರಕಟ್ಟೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

‘ಗಣೇಶನ ತಂಟೆಗೆ ಬಂದ್ರೆ ಸುಮ್ಮನಿರಲ್ಲ’

ಹುಬ್ಬಳ್ಳಿಯ ಈದ್ಗಾ ಮೈದಾನ ಗಣೇಶ ಮೂರ್ತಿ ವಿಸರ್ಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಲ್ಲಿನ ಮುಸ್ಲಿಮರು ಅರಬ್​​ನಿಂದ ಬಂದವರಲ್ಲ. ಅವರು ನಮ್ಮದೇ ದೇಶದವರು, ಈ ಹಿಂದೆ ಮತಾಂತರಕ್ಕೊಳಗಾದವರು. ಅವರು ಹಿಂದೂ ಧರ್ಮೀಯರನ್ನು ಇಫ್ತಾರ್ ಕೂಟಕ್ಕೆ ಕರೆಯುತ್ತಾರೆ. ನಮ್ಮ ಅನೇಕ ನಾಯಕರು ಹೋಗುತ್ತಾರೆ. ಹಾಗೆಯೇ ನೀವೂ ಗಣೇಶ ಹಬ್ಬಕ್ಕೆ ಬನ್ನಿ. ಮುಸ್ಲಿಮರು ನಮಾಜ್​​ ಮಾಡಲು ನಮ್ಮ ಅಂಭ್ಯಂತರವಿಲ್ಲ. ಆದ್ರೆ ಗಣೇಶನ ತಂಟೆಗೆ ಬಂದ್ರೆ ಸುಮ್ಮನಿರಲ್ಲ ಎಂದವರು ಎಚ್ಚರಿಸಿದ್ದಾರೆ.

ಇದನ್ನೂ ಓದಿ:  ಹುಬ್ಬಳ್ಳಿ ಪುಷ್ಕರಣಿ ವಿವಾದ: ಹು-ಧಾ ಪಾಲಿಕೆ ಆಯುಕ್ತರ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ ಶ್ರೀರಾಮ ಸೇನೆ!

‘ಹಿಂದೂ ಧರ್ಮೀಯರಿಗೆ ದೇವಾಲಯ ಬಿಟ್ಟು ಕೊಡಿ’

ಕರ್ನಾಟಕದ ಗೃಹ ಮಂತ್ರಿಗಳಿಗೆ ಆರ್​​ಎಸ್​ಎಸ್​​ ಕಂಡರೆ ಚೇಳು ಕಡಿದಂತೆ ಆಗುತ್ತೆ. ಅವರಿಗೆ ‌ ವಂದೇ ಮಾತರಂ ಹಾಡಿದ್ರೆ ‘ಕೈ’ ಹೋಗಿ ‘ಕಮಲ’ ಆಗುತ್ತದೆ ಎಂಬ ಭಯವಿದೆ. ಆದರೆ ವಂದೇ ಮಾತರಂ ಹಾಡಲು ಯಾರ ಅಪ್ಪನ ಪರವಾನಗೆ ಬೇಕಿಲ್ಲ. ಬಹಳ ಅಂದ್ರೆ ಸರ್ಕಾರಿ ಶಾಲೆಗಳಿಗೆ, ಕಚೇರಿಗಳಿಗೆ ನೋಟಿಸ್ ಕೊಡಬಹುದು ಎಂದವರು ಹೇಳಿದ್ದಾರೆ. ರಾಜ್ಯದಲ್ಲಿ ಬರಗಾಲಕ್ಕೆ ಗೋಹತ್ಯೆ ಕೂಡ ಕಾರಣವಾಗಿದೆ. ಗೋ ಮಾತೆಯನ್ನು ರಕ್ಷಣೆ ಮಾಡಬೇಕು. ದೇಶದಲ್ಲಿ ಕೋಟ್ಯಾಂತರ ಮಸೀದಿ, ಚರ್ಚ್​​ಗಳಿವೆ. ಅವುಗಳ ಆದಾಯದ ಮೇಲೆ ಬೀಳದ ಸರ್ಕಾರದ ಕಣ್ಣು ಹಿಂದೂ ದೇವಾಲಯಗಳ ಮೇಲೆ ಬಿದ್ದಿದೆ. ಮಸೀದಿಗೆ ಆಡಳಿತಾಧಿಕಾರಿ ನೇಮಕ ಮಾಡುವ ಧೈರ್ಯ ಸರ್ಕಾರಕ್ಕೆ ಇಲ್ಲ. ಹೀಗಿರುವಾಗ ದೇವಾಲಯ ನಿರ್ವಹಣೆ ನಿಮಗೆ ಯಾಕೆ ಬೇಕು? ದೇಶದ ಎಲ್ಲ ದೇವಾಲಯಗಳನ್ನು ಹಿಂದೂ ಧರ್ಮೀಯರಿಗೆ ಬಿಟ್ಟು ಕೊಡಬೇಕು ಎಂದವರು ಆಗ್ರಹಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:21 pm, Wed, 16 September 26

Follow Us
ಪಿಎಂ ಕಿಸಾನ್ ಸಮ್ಮಾನ್ ನಿಧಿ: ಇ-ಕೆವೈಸಿ ಮಾಡಿಸೋದೇಗೆ?; ಇಲ್ಲಿದೆ ಮಾಹಿತಿ
ಪಿಎಂ ಕಿಸಾನ್ ಸಮ್ಮಾನ್ ನಿಧಿ: ಇ-ಕೆವೈಸಿ ಮಾಡಿಸೋದೇಗೆ?; ಇಲ್ಲಿದೆ ಮಾಹಿತಿ
ಗಣೇಶ ಹಬ್ಬಕ್ಕೆ ಡಿಪೋ, ಬಸ್ ನಿಲ್ದಾಣದಲ್ಲಿ ಪ್ರಸಾದ ಸಿದ್ದಗೊಳಿಸದಂತೆ ಆದೇಶ
ಗಣೇಶ ಹಬ್ಬಕ್ಕೆ ಡಿಪೋ, ಬಸ್ ನಿಲ್ದಾಣದಲ್ಲಿ ಪ್ರಸಾದ ಸಿದ್ದಗೊಳಿಸದಂತೆ ಆದೇಶ
ತಾವರೆಕೆರೆ ಮೆಟ್ರೋ ಸ್ಟೇಷನ್ ಹೆಸರು ಬದಲಿಸದಂತೆ ಸ್ಥಳೀಯರು ಬಿಗಿಪಟ್ಟು
ತಾವರೆಕೆರೆ ಮೆಟ್ರೋ ಸ್ಟೇಷನ್ ಹೆಸರು ಬದಲಿಸದಂತೆ ಸ್ಥಳೀಯರು ಬಿಗಿಪಟ್ಟು
ಚಿತ್ರದುರ್ಗದಲ್ಲಿ ಪ್ರಯಾಣಿಕರೊಂದಿಗೆ ಸರ್ಕಾರಿ ಬಸ್ ಚಾಲಕನ ಕಿರಿಕ್
ಚಿತ್ರದುರ್ಗದಲ್ಲಿ ಪ್ರಯಾಣಿಕರೊಂದಿಗೆ ಸರ್ಕಾರಿ ಬಸ್ ಚಾಲಕನ ಕಿರಿಕ್
ಜಿಬಿಎ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡರಿಂದ ಕ್ಲಾಸ್​​
ಜಿಬಿಎ ಅಧಿಕಾರಿಗಳಿಗೆ ಸಚಿವ ಕೃಷ್ಣ ಬೈರೇಗೌಡರಿಂದ ಕ್ಲಾಸ್​​
ತುರಹಳ್ಳಿ ಅರಣ್ಯ ಕ್ಲೀನ್ ಮಾಡಿ ಸಿಟಿ ಜನರಿಗೆ ಜಾಗೃತಿ ಮೂಡಿಸಿದ ತಬಾಹಿ
ತುರಹಳ್ಳಿ ಅರಣ್ಯ ಕ್ಲೀನ್ ಮಾಡಿ ಸಿಟಿ ಜನರಿಗೆ ಜಾಗೃತಿ ಮೂಡಿಸಿದ ತಬಾಹಿ
ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಿಗೂ ಎಸ್ಐಟಿ ತನಿಖೆ ಬಿಸಿ ಸಾಧ್ಯತೆ
ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಿಗೂ ಎಸ್ಐಟಿ ತನಿಖೆ ಬಿಸಿ ಸಾಧ್ಯತೆ
ಬಸ್‌ಗಾಗಿ ಬೇಡಿಕೆಯಿಟ್ಟ 140 ವಿದ್ಯಾರ್ಥಿಗಳು
ಬಸ್‌ಗಾಗಿ ಬೇಡಿಕೆಯಿಟ್ಟ 140 ವಿದ್ಯಾರ್ಥಿಗಳು
ಹೊಳೆಯಂತಾದ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್, ಟ್ರಾಫಿಕ್ ಜಾಮ್
ಹೊಳೆಯಂತಾದ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್, ಟ್ರಾಫಿಕ್ ಜಾಮ್
ಹುಳ ಇರುವ ಕುಡಿಯುವ ನೀರನ್ನು ಗ್ರಾಮಸಭೆಗೇ ತಂದ ರಾರಾವಿ ಗ್ರಾಮಸ್ಥರು!
ಹುಳ ಇರುವ ಕುಡಿಯುವ ನೀರನ್ನು ಗ್ರಾಮಸಭೆಗೇ ತಂದ ರಾರಾವಿ ಗ್ರಾಮಸ್ಥರು!