ವೈದ್ಯರ ನಿರ್ಲಕ್ಷ್ಯ: ಎರಡನೆಯ ಬಾರಿ ಧ್ವನಿಪೆಟ್ಟಿಗೆ ಶಸ್ತ್ರಚಿಕಿತ್ಸೆ ವೇಳೆ ಬಾಲಕಿ ಸಾವು

ಸಾಯಿಕೀರ್ತನಾಗೆ ಮಾತು ಬಾರದಿದ್ದರಿಂದ ಕಳೆದ ವರ್ಷ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆದರೆ ಮತ್ತೆ, ಧ್ವನಿ ಹೋಗಿದ್ದರಿಂದ ಸಾಯಿಕೀರ್ತನಾಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆ ವೇಳೆ ಸಾಯಿಕೀರ್ತನಾ ಸಾವನ್ನಪ್ಪಿದ್ದಾಳೆ.

ವೈದ್ಯರ ನಿರ್ಲಕ್ಷ್ಯ: ಎರಡನೆಯ ಬಾರಿ ಧ್ವನಿಪೆಟ್ಟಿಗೆ ಶಸ್ತ್ರಚಿಕಿತ್ಸೆ ವೇಳೆ ಬಾಲಕಿ ಸಾವು
ವೈದ್ಯರ ನಿರ್ಲಕ್ಷ್ಯ: ಎರಡನೆಯ ಬಾರಿ ಧ್ವನಿಪೆಟ್ಟಿಗೆ ಶಸ್ತ್ರಚಿಕಿತ್ಸೆ ವೇಳೆ ಬಾಲಕಿ ಸಾವು
Follow us
TV9 Web
| Updated By: ಸಾಧು ಶ್ರೀನಾಥ್​

Updated on:Aug 26, 2022 | 7:27 PM

ರಾಯಚೂರಿನಲ್ಲಿ ಧ್ವನಿಪೆಟ್ಟಿಗೆ ಶಸ್ತ್ರಚಿಕಿತ್ಸೆ ವೇಳೆ ಬಾಲಕಿ ಮೃತಪಟ್ಟಿದ್ದಾಳೆ. ವೈದ್ಯರ ನಿರ್ಲಕ್ಷ್ಯದಿಂದ (doctor negligence) ಸಾಯಿಕೀರ್ತನಾ ಎಂಬ 6 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಲಾಗಿದೆ. ರಾಯಚೂರಿನ ಡಾ .ಪಠಾಣ್ ENT ನರ್ಸಿಂಗ್​ ಹೋಮ್​ನಲ್ಲಿ ಘಟನೆ ನಡೆದಿದೆ. ರಾಯಚೂರು ತಾಲೂಕಿನ ಕೊಸಗಿ ಗ್ರಾಮದ ಆಂಜಿ ಮತ್ತು ಜ್ಯೋತಿ ದಂಪತಿ ಪುತ್ರಿ ಸಾಯಿಕೀರ್ತನಾ. ಆಂಜಿ, ಜ್ಯೋತಿ ದಂಪತಿ ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಸಾಯಿಕೀರ್ತನಾಗೆ ಮಾತು ಬಾರದಿದ್ದರಿಂದ ಕಳೆದ ವರ್ಷ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆದರೆ ಮತ್ತೆ, ಧ್ವನಿ ಹೋಗಿದ್ದರಿಂದ ಸಾಯಿಕೀರ್ತನಾಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆ ವೇಳೆ ಸಾಯಿಕೀರ್ತನಾ ಸಾವನ್ನಪ್ಪಿದ್ದಾಳೆ. ಇದೀಗ ಡಾ. ಪಠಾಣ್ ENT ನರ್ಸಿಂಗ್​ ಹೋಮ್ ವಿರುದ್ಧ ಮೃತ ಸಾಯಿಕೀರ್ತನಾ ಸಂಬಂಧಿಕರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬನ್ನೇರುಘಟ್ಟ ಉದ್ಯಾನದಲ್ಲಿ ಕ್ಯಾನ್ಸರ್ ಇನ್ಫೆಕ್ಷನ್​ನಿಂದ ಹುಲಿ ಸಾವು

ಆನೇಕಲ್: ಬೆಂಗಳೂರು ನಗರ ಜಿಲ್ಲೆ ಆನೇಕಲ್​ ತಾಲೂಕಿನ ಬನ್ನೇರುಘಟ್ಟ ಉದ್ಯಾನದಲ್ಲಿ (ಬನ್ನೇರುಘಟ್ಟ ಬಯಲಾಜಿಕಲ್‌ ಪಾರ್ಕ್ -Bannerghatta zoological park) ಮೂರೂವರೆ ವರ್ಷದ ಹುಲಿ ಸಾವನ್ನಪ್ಪಿದೆ. ಕ್ಯಾನ್ಸರ್ ಮತ್ತು ಇನ್ಫೆಕ್ಷನ್​ನಿಂದ ಬಳಲುತ್ತಿದ್ದ ಕಿರಣ್ ಹೆಸರಿನ ಹುಲಿ ಚಿಕಿತ್ಸೆ ಫಲಿಸದೇ ಇಂದು ಬೆಳಿಗ್ಗೆ ಮೃತಪಟ್ಟಿದೆ. ಕಿರಣ್ ಗೆ ಕಳೆದ ಮೂರು ತಿಂಗಳಿನಿಂದ ಚಿಕಿತ್ಸೆ ನೀಡಲಾಗ್ತಿತ್ತು. ಇದರೊಂದಿಗೆ ಬನ್ನೇರುಘಟ್ಟ ಜೈವಿನ ಉದ್ಯಾನದಲ್ಲಿ ಹುಲಿಗಳ ಸಂಖ್ಯೆ 15ಕ್ಕೆ ಕುಸಿದಿದೆ. ಈ ಹಿಂದೆಯೂ ಇನ್ಫೆಕ್ಷನ್​ನಿಂದ ಮತ್ತೊಂದು ಹುಲಿ ಮೃತಪಟ್ಟಿತ್ತು.

ಮರಿ ಆನೆ‌ ಆಗಮನ, ಇಡೀ ಪಾರ್ಕ್ ನಲ್ಲಿ ‌ಸಂಭ್ರಮದ ವಾತಾವರಣ

ಬೆಂಗಳೂರು: ಆನೇಕಲ್​ ತಾಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ 15 ವರ್ಷದ ಆನೆ ವನಶ್ರೀ 3ನೇ ಮರಿಗೆ ಜನ್ಮನೀಡಿದೆ. ಈ ಹೆಣ್ಣಾನೆ ಜನನದೊಂದಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಆನೆಗಳ ಸಂಖ್ಯೆ 26ಕ್ಕೇ ಏರಿದೆ. ಮರಿ ಆನೆ ಆರೋಗ್ಯವಾಗಿದ್ದು, ಮರಿ ಆನೆ‌ ಆಗಮನದಿಂದ ಇಡೀ ಪಾರ್ಕ್ ನಲ್ಲಿ ‌ಸಂಭ್ರಮದ ವಾತಾವರಣ ಮನೆ ಮಾಡಿದೆ.

Published On - 6:30 pm, Fri, 26 August 22

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ