ಕೇವಲ ರೈತರಿಗೆ ಮಾತ್ರವಲ್ಲ. ಕಾಡುಗಳ ನಡುರಸ್ತೆಯಲ್ಲಿ ಓಡಾಡುವುದಕ್ಕೂ ಜನರು ಭಯಬೀಳುತ್ತಾರೆ. ಯಾವ ಸಂದರ್ಭದಲ್ಲಿ ಆನೆಗಳು ದಾಳಿ ನಡೆಸುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಇಂತಹದೊಂದು ಭಯ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಜನರಿಗೆ ಎದುರಾಗಿದೆ. ಕಾಡಾನೆ ದಾಳಿಯಿಂದ ಇಬ್ಬರು ಕಾರ್ಮಿಕರು ಪಾರಾಗಿದ್ದಾರೆ. ನಿನ್ನೆ ರಾತ್ರಿ ಮೂಡಿಗೆರೆ ಪಟ್ಟಣದಲ್ಲಿ ಕಾಡಾನೆ ಸಂಚಾರ ಮಾಡಿದ್ದು, ಸಂಚಾರ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. . ಇಬ್ಬರು ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಲು ಮುಂದಾಗಿದೆ. ಒಂಟಿ ಸಲಗ ಸಂಚಾರದಿಂದ ಜನರು ಕಂಗಾಲಾಗಿದ್ದಾರೆ. ಸದ್ಯ ಹಳಸೆ-ಕುನ್ನಳ್ಳಿ ಸಮೀಪ ಒಂಟಿ ಸಲಗ ಬೀಡುಬಿಟ್ಟಿದೆ.
ಮೈಸೂರಿನಲ್ಲಿ ಹೆಜ್ಜೇನು ದಾಳಿ
ಮೈಸೂರಿನಲ್ಲಿ ಇಂದು ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ವೇಳೆ ಮೈಸೂರಿನಲ್ಲಿ ಟೌನ್ಹಾಲ್ ಬಳಿ ಹೆಜ್ಜೇನು ದಾಳಿ ನಡೆಸಿದೆ. ಹೆಜ್ಜೇನು ದಾಳಿಯಿಂದ ಪಾರಾಗಲು ಸ್ಥಳದಿಂದ ಜನರು ಓಡಿ ಹೋದ ಘಟನೆ ನಡೆದಿದೆ.
ಅರ್ಜುನ್ ಜನ್ಯ ಆರೋಗ್ಯದಲ್ಲಿ ಚೇತರಿಕೆ; ಶೀಘ್ರವೇ ಸಿನಿಮಾ ಕೆಲಸಗಳಲ್ಲಿ ಭಾಗಿ
ಕೆಜಿಎಫ್ ರಾಕಿ ಭಾಯ್ ಅಮ್ಮ ಅರ್ಚನಾ ಜೋಯಿಸ್ಗೆ ಬಂತು ಬಿಗ್ ಆಫರ್
(elephant walking scene is captured on CCTV and people of Mudigere Chikkamagaluru are scared)