ಆಸ್ತಿ ವಿಚಾರಕ್ಕೆ ನಿವೃತ್ತ ಯೋಧನ ಮೇಲೆ ಸಂಬಂಧಿಕರಿಂದಲೇ ಹಲ್ಲೆ.. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ನಿರಾಕರಣೆ

ಆಸ್ತಿ ವಿಚಾರಕ್ಕೆ ನಿವೃತ್ತ ಯೋಧನ ಮೇಲೆ ಸಂಬಂಧಿಕರಿಂದಲೇ ಹಲ್ಲೆ.. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ನಿರಾಕರಣೆ
ನಿವೃತ್ತ ಯೋಧ ಬಿ.ಎಲ್‌.ರಾಮಚಂದ್ರ

ಆಸ್ತಿ ವಿಚಾರಕ್ಕೆ ನಿವೃತ್ತ ಯೋಧ ರಾಮಚಂದ್ರನ ಮೇಲೆ ಆತನ ಸಂಬಂಧಿಕರು ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ರಾಮಚಂದ್ರ ಸೋದರ ನಾರಾಯಣ, ಪತ್ನಿ, ಮಗನಿಂದ ಹಲ್ಲೆ ನಡೆದಿರುರುವುದಾಗಿ ತಿಳಿದು ಬಂದಿದೆ. ಇನ್ನು B.L.ರಾಮಚಂದ್ರನನ್ನ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದಾರೆ.

TV9kannada Web Team

| Edited By: Ayesha Banu

Jun 02, 2021 | 7:33 AM

ಕೊಡಗು: ಆಸ್ತಿ ವಿಚಾರಕ್ಕೆ ನಿವೃತ್ತ ಯೋಧನ ಮೇಲೆ ಸಂಬಂಧಿಕರೇ ಹಲ್ಲೆ ನಡೆಸಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕಡಂಗಮರೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಬಿ.ಎಲ್‌.ರಾಮಚಂದ್ರ ಹಲ್ಲೆಗೆ ಒಳಗಾದ ನಿವೃತ್ತ ಯೋಧ.

ಆಸ್ತಿ ವಿಚಾರಕ್ಕೆ ನಿವೃತ್ತ ಯೋಧ ರಾಮಚಂದ್ರನ ಮೇಲೆ ಆತನ ಸಂಬಂಧಿಕರು ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ರಾಮಚಂದ್ರ ಸೋದರ ನಾರಾಯಣ, ಪತ್ನಿ, ಮಗನಿಂದ ಹಲ್ಲೆ ನಡೆದಿರುರುವುದಾಗಿ ತಿಳಿದು ಬಂದಿದೆ. ಇನ್ನು B.L.ರಾಮಚಂದ್ರನನ್ನ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದಾರೆ. ತಾಲೂಕು ಆಸ್ಪತ್ರೆ ವಿರುದ್ಧ ರಾಮಚಂದ್ರ ಕುಟುಂಬಸ್ಥರು ಆರೋಪ ಹೊರ ಹಾಕಿದ್ದಾರೆ. ನಿವೃತ್ತ ಯೋಧ ರಾಮಚಂದ್ರ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ ಇನ್ನು ಲಾಕ್ಡೌನ್ ಸಮಯದಲ್ಲಿ ಕಳ್ಳರ ತನ್ನ ಕೈಚಳಕ ತೋರಿಸಿದ್ದಾರೆ. ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನ ಮಾಡಿದ್ದಾರೆ. ದಾವಣಗೆರೆಯ ಎಂಸಿಸಿ ಬಿ ಬ್ಲಾಕ್‌ನ ಚರ್ಚ್ ರಸ್ತೆ ಬಳಿ ಘಟನೆ ನಡೆದಿದೆ. ನಡುರಾತ್ರಿ ಬೈಕ್ ಕಳ್ಳತನ ಮಾಡುತ್ತಿರುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೃಷ್ಟ ಎಂಬುವವರಿಗೆ ಸೇರಿದ್ದ ಒಂದು ಲಕ್ಷ ರೂಪಾಯಿ ಬೆಲೆ ಬಾಳುವ ಬೈಕ್ ಕಳ್ಳತನವಾಗಿದೆ. ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ದಾವಣಗೆರೆಯ ಎರಡು ಕುಟುಂಬಗಳ ನಡುವೆ ಆಸ್ತಿಗಾಗಿ ಹೊಡೆದಾಟ; ಸಾಮಾಜಿಕ ಜಾಲತಾಣದಲ್ಲಿ ಗಲಾಟೆ ವಿಡಿಯೋ ವೈರಲ್

Follow us on

Related Stories

Most Read Stories

Click on your DTH Provider to Add TV9 Kannada