AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಬ್ಬದ ಸೀಸನ್‌ನಲ್ಲಿ ಗ್ರಾಹಕರಿಗೆ ಬಿಗ್ ರಿಲೀಫ್: ಕೆಜಿಗೆ ಕೇವಲ 35 ರೂ.ಗೆ ಈರುಳ್ಳಿ ಮಾರಾಟ ಆರಂಭಿಸಿದ ಕೇಂದ್ರ

ಹಬ್ಬದ ಸೀಸನ್‌ನಲ್ಲಿ ಈರುಳ್ಳಿ ಬೆಲೆ ನಿಯಂತ್ರಿಸಲು ಕೇಂದ್ರ ಸರ್ಕಾರವು ಗ್ರಾಹಕರಿಗೆ 35 ರೂ. ಪ್ರತಿ ಕೆ.ಜಿ. ದರದಲ್ಲಿ ಈರುಳ್ಳಿ ಮಾರಾಟ ಆರಂಭಿಸಿದೆ. ಎನ್‌ಸಿಸಿಎಫ್, ನಾಫೆಡ್, ಸಫಲ್ ಮತ್ತು ಕೇಂದ್ರೀಯ ಭಂಡಾರ್ ಮಳಿಗೆಗಳು ಹಾಗೂ ಸಂಚಾರಿ ವಾಹನಗಳ ಮೂಲಕ ಈರುಳ್ಳಿ ಲಭ್ಯ. ಬಫರ್ ಸ್ಟಾಕ್ ಬಿಡುಗಡೆ ಮಾಡಲಾಗಿದ್ದು, ದೇಶದಲ್ಲಿ ಈರುಳ್ಳಿ ಕೊರತೆಯಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಹಬ್ಬದ ಸೀಸನ್‌ನಲ್ಲಿ ಗ್ರಾಹಕರಿಗೆ ಬಿಗ್ ರಿಲೀಫ್: ಕೆಜಿಗೆ ಕೇವಲ 35 ರೂ.ಗೆ ಈರುಳ್ಳಿ ಮಾರಾಟ ಆರಂಭಿಸಿದ ಕೇಂದ್ರ
ಸಾಂದರ್ಭಿಕ ಚಿತ್ರ Image Credit source: Tv9 kannada
ಅಕ್ಷಯ್​ ಪಲ್ಲಮಜಲು​​
|

Updated on: Aug 27, 2026 | 10:25 AM

Share

ದೆಹಲಿ, ಆ,27: ಮುಂಬರುವ ಹಬ್ಬದ ಋತುವಿನಲ್ಲಿ ಈರುಳ್ಳಿ ಬೆಲೆ ಏರಿಕೆಯನ್ನು ನಿಯಂತ್ರಿಸಲು ಮತ್ತು ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಈರುಳ್ಳಿ ಲಭ್ಯವಾಗುವಂತೆ ಮಾಡಲು ಕೇಂದ್ರ ಸರ್ಕಾರ ಭಾರಿ ಪ್ರಮಾಣದ ‘ಬಫರ್ ಸ್ಟಾಕ್’ (Buffer Stock) ಬಿಡುಗಡೆ ಮಾಡಲು ನಿರ್ಧರಿಸಿದೆ. ದೇಶಾದ್ಯಂತ ಮಾರುಕಟ್ಟೆಯ ಸ್ಥಿತಿಗತಿ ಹಾಗೂ ಬೆಲೆ ಏರಿಕೆಯ ಆಧಾರದ ಮೇಲೆ ರೈಲು ಹಾಗೂ ರಸ್ತೆ ಸಾರಿಗೆಯ ಮೂಲಕ ಈರುಳ್ಳಿಯನ್ನು ಪ್ರಮುಖ ನಗರಗಳಿಗೆ ಪೂರೈಸಲಾಗುತ್ತಿದೆ.

ಸಾಮಾನ್ಯ ಗ್ರಾಹಕರಿಗೆ ಹೆಚ್ಚಿನ ಹೊರೆಯಾಗದಂತೆ ತಡೆಯಲು ಕೇಂದ್ರ ಸರ್ಕಾರವು ಪ್ರತಿ ಕೆಜಿ ಈರುಳ್ಳಿಯನ್ನು 35 ರೂ. ರಂತೆ ಮಾರಾಟ ಮಾಡಲು ಚಾಲನೆ ನೀಡಿದೆ. ಎನ್‌ಸಿಸಿಎಫ್ , ನಾಫೆಡ್ , ಸಫಲ್ ಮತ್ತು ಕೇಂದ್ರೀಯ ಭಂಡಾರ್ ಚಿಲ್ಲರೆ ಮಳಿಗೆಗಳು ಹಾಗೂ ಸಂಚಾರಿ ವಾಹನಗಳ ಮೂಲಕ ಈರುಳ್ಳಿ ಮಾರಾಟ ನಡೆಯಲಿದೆ.

ಎನ್‌ಸಿಸಿಎಫ್‌ನ 9 ಮಳಿಗೆಗಳು ಮತ್ತು 40 ಮೊಬೈಲ್ ವ್ಯಾನ್‌ಗಳು, ನಾಫೆಡ್‌ನ 13 ಮಳಿಗೆಗಳು ಮತ್ತು 50 ಮೊಬೈಲ್ ವ್ಯಾನ್‌ಗಳು ಹಾಗೂ ಕೇಂದ್ರೀಯ ಭಂಡಾರದ ಸುಮಾರು 100 ಮಳಿಗೆಗಳಲ್ಲಿ ಈ ರಿಯಾಯಿತಿ ದರದ ಈರುಳ್ಳಿ ಸಿಗಲಿದೆ. ಈರುಳ್ಳಿ ಅಭಾವದ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, ದೇಶದಲ್ಲಿ ಗ್ರಾಹಕರ ಅಗತ್ಯಕ್ಕೆ ತಕ್ಕಷ್ಟು ಈರುಳ್ಳಿ ಲಭ್ಯವಿದೆ ಎಂದು ತಿಳಿಸಿದೆ.

2025-26ರ ಸಾಲಿನಲ್ಲಿ ಸುಮಾರು 307.37 ಲಕ್ಷ ಮೆಟ್ರಿಕ್ ಟನ್ (LMT) ಈರುಳ್ಳಿ ಉತ್ಪಾದನೆಯಾಗುವ ಅಂದಾಜಿದ್ದು, ಕಳೆದ ಬಾರಿಯ (307.67 LMT) ಉತ್ಪಾದನೆಗೆ ಸಮನಾಗಿದೆ. ಮೇ 15, 2026 ರಿಂದ ಆರಂಭಿಸಿ ಈಗಾಗಲೇ 1.21 ಲಕ್ಷ ಮೆಟ್ರಿಕ್ ಟನ್ ಈರುಳ್ಳಿಯನ್ನು ಬಫರ್ ಸ್ಟಾಕ್‌ಗಾಗಿ ಸಂಗ್ರಹಿಸಲಾಗಿದೆ. ಇದೇ ಮೊದಲ ಬಾರಿಗೆ ಸೆಂಟ್ರಲ್ ವೇರ್‌ಹೌಸಿಂಗ್ ಕಾರ್ಪೊರೇಷನ್ (CWC) ಅನ್ನು ಶೇಖರಣಾ ಸಂಸ್ಥೆಯಾಗಿ ಬಳಸಿಕೊಳ್ಳಲಾಗಿದೆ.

ಇದನ್ನೂ ಓದಿ: ಗಗನಕ್ಕೇರಿದ ಈರುಳ್ಳಿ ದರ: ಬೆಲೆ ಏರಿಕೆಯ ನಡುವೆಯೂ ಸಿಗದ ರೈತರಿಗೆ ಲಾಭ

ಪಿಐಬಿ (PIB) ವರದಿಯ ಪ್ರಕಾರ, ಈರುಳ್ಳಿಯನ್ನು ಹೊರತುಪಡಿಸಿ ತೊಗರಿ ಬೇಳೆ, ಕಡಲೆ, ಮಸೂರ್, ಉದ್ದು ಮತ್ತು ಹೆಸರು ಬೇಳೆ ಸೇರಿದಂತೆ ಪ್ರಮುಖ ಬೇಳೆಕಾಳುಗಳು ಹಾಗೂ ಟೊಮೆಟೊ, ಆಲೂಗಡ್ಡೆಯಂತಹ ಅಗತ್ಯ ತರಕಾರಿಗಳ ಬೆಲೆಗಳು ಪ್ರಸ್ತುತ ಮಾರುಕಟ್ಟೆಯಲ್ಲಿ ನಿಯಂತ್ರಣದಲ್ಲಿದ್ದು, ಸ್ಥಿರವಾಗಿವೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಅಕ್ಷಯ್​ ಪಲ್ಲಮಜಲು​​
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More