AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಗನಕ್ಕೇರಿದ ಈರುಳ್ಳಿ ದರ: ಬೆಲೆ ಏರಿಕೆಯ ನಡುವೆಯೂ ಸಿಗದ ರೈತರಿಗೆ ಲಾಭ

ರಾಜ್ಯದಲ್ಲಿ ಈರುಳ್ಳಿ ಬೆಲೆ ₹70-80ಕ್ಕೆ ಏರಿಕೆಯಾಗಿದ್ದು, ಶೀಘ್ರವೇ ₹100 ತಲುಪುವ ಸಾಧ್ಯತೆಯಿದೆ. ಯಾದಗಿರಿಯಲ್ಲಿ ಮುಂಗಾರು ಮಳೆ ವೈಫಲ್ಯದಿಂದ ಈರುಳ್ಳಿ ಬೆಳೆ ಸಂಪೂರ್ಣ ಕುಸಿದಿದೆ. ಗ್ರಾಹಕರು ಬೆಲೆ ಏರಿಕೆಯಿಂದ ಕಂಗಾಲಾಗಿದ್ದರೆ, ರೈತರಿಗೆ ಬೆಳೆ ಇಲ್ಲದ ಕಾರಣ ಲಾಭ ಸಿಗದೆ ಸಂಕಷ್ಟದಲ್ಲಿದ್ದಾರೆ. ದಲ್ಲಾಳಿಗಳು ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

ಗಗನಕ್ಕೇರಿದ ಈರುಳ್ಳಿ ದರ: ಬೆಲೆ ಏರಿಕೆಯ ನಡುವೆಯೂ ಸಿಗದ ರೈತರಿಗೆ ಲಾಭ
ಸಾಂದರ್ಭಕಿ ಚಿತ್ರ
ಅಮೀನ್​ ಸಾಬ್​
| Edited By: |

Updated on:Aug 27, 2026 | 6:13 AM

Share

ಯಾದಗಿರಿ, ಆ.27: ರಾಜ್ಯಾದ್ಯಂತ ಈರುಳ್ಳಿ ದರ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು, ಶೀಘ್ರವೇ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿ ಈರುಳ್ಳಿ ದರ 100 ರೂಪಾಯಿ ಗಡಿ ದಾಟುವ ಸಾಧ್ಯತೆಯಿದೆ. ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಬಿಸಿಗೆ ಗ್ರಾಹಕರು ಕಂಗಾಲಾಗಿದ್ದರೆ, ಇನ್ನೊಂದೆಡೆ ದರ ಏರಿಕೆಯಾಗಿದ್ದರೂ ಅದರ ನೇರ ಲಾಭ ಸಿಗದೆ ಅನ್ನದಾತರು ಕಣ್ಣೀರಿಡುತ್ತಿದ್ದಾರೆ.

ಯಾದಗಿರಿ ತಾಲೂಕಿನ ಗುಲಗುಂಜಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈ ಬಾರಿಯ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಈರುಳ್ಳಿ ಬೆಳೆ ಸಂಪೂರ್ಣ ಕುಸಿತ ಕಂಡಿದೆ. ಮಳೆ ಕೊರತೆಯಿಂದಾಗಿ ಹೊಲಗಳಲ್ಲಿ ಬೆಳೆಯೇ ಇಲ್ಲದಿರುವಾಗ ದರ ಹೆಚ್ಚಾಗಿರುವುದು ರೈತರ ದುರದೃಷ್ಟಕ್ಕೆ ಹಿಡಿದ ಕನ್ನಡಿಯಾಗಿದೆ.

ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಈರುಳ್ಳಿ 70 ರಿಂದ 80 ರೂಪಾಯಿಗೆ ಮಾರಾಟವಾಗುತ್ತಿದೆ. ಬೆಲೆ ಏರಿಕೆಯಿಂದಾಗಿ ಮಾರುಕಟ್ಟೆಗೆ 1 ಕೆಜಿ ಈರುಳ್ಳಿ ಖರೀದಿಸಲು ಬರುವ ಗ್ರಾಹಕರು ಅರ್ಧ ಕೆಜಿ ಖರೀದಿಸಿ ಮನೆಗೆ ಮರಳುವಂತಾಗಿದೆ. ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ಕೆಲವೇ ಕೆಲವು ರೈತರು ಬೋರ್‌ವೆಲ್ ನೀರನ್ನು ಬಳಸಿಕೊಂಡು ಅಲ್ಪಸ್ವಲ್ಪ ಪ್ರಮಾಣದಲ್ಲಿ ಈರುಳ್ಳಿ ಬೆಳೆಯಲು ಯತ್ನಿಸುತ್ತಿದ್ದಾರೆ.

ಕಳೆದ ಮಾರ್ಚ್ ತಿಂಗಳಲ್ಲಿ ಯಾದಗಿರಿ ಭಾಗದ ರೈತರು ಎಕರೆಗೆ ಸುಮಾರು 100 ಕ್ವಿಂಟಲ್‌ವರೆಗೆ ಭರ್ಜರಿ ಈರುಳ್ಳಿ ಇಳುವರಿ ತೆಗೆದಿದ್ದರು. ಆದರೆ ಗಲ್ಫ್ ರಾಷ್ಟ್ರಗಳ ಯುದ್ಧದ ಪರಿಣಾಮ ಮಾರುಕಟ್ಟೆ ಕುಸಿದು, ಕ್ವಿಂಟಲ್‌ಗೆ ಕೇವಲ 500 ರೂ. ರಿಂದ 600 ರೂ. ಸಿಕ್ಕಿತ್ತು. ಶೇಖರಣಾ ಗೋದಾಮುಗಳ ವ್ಯವಸ್ಥೆ ಇಲ್ಲದ ಕಾರಣ ರೈತರು ಸಿಕ್ಕ ಸಣ್ಣ ಮೊತ್ತಕ್ಕೇ ಈರುಳ್ಳಿ ಮಾರಾಟ ಮಾಡಿ ನಷ್ಟ ಅನುಭವಿಸಿದ್ದರು.

ಇದನ್ನೂ ಓದಿ: ಮಳೆ ಕೊರತೆಯಿಂದ ತರಕಾರಿ ದರ ಏರಿಕೆ: ಗ್ರಾಹಕರು, ವ್ಯಾಪಾರಿಗಳು ಇಬ್ಬರು ಕಂಗಾಲು

ಈಗ ರೈತರ ಕೈಯಲ್ಲಿ ಬೆಳೆಯೇ ಇಲ್ಲದಿದ್ದಾಗ ದರ ಭಾರಿ ಏರಿಕೆಯಾಗಿದೆ. ವ್ಯಾಪಾರಿಗಳು ಹಾಗೂ ದಲ್ಲಾಳಿಗಳು ರೈತರಿಂದ ಕನಿಷ್ಠ ದರಕ್ಕೆ ಖರೀದಿಸಿದ್ದ ಈರುಳ್ಳಿಯನ್ನು ದಾಸ್ತಾನು ಮಾಡಿ, ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂದು ರೈತರು ತೀವ್ರ ಆರೋಪ ಮಾಡಿದ್ದಾರೆ. ಬೆಳೆ ಕೈಯಲ್ಲಿದ್ದಾಗ ದರ ಇರುವುದಿಲ್ಲ, ದರ ಏರಿಕೆಯಾದಾಗ ಹೊಲದಲ್ಲಿ ಬೆಳೆಯೇ ಇರುವುದಿಲ್ಲ ಎಂಬುದು ರೈತರ ನಿರಂತರ ಅಳಲಾಗಿದೆ. ಈಗ ರೈತರ ಬಳಿ ಬೆಳೆಯಿದ್ದಿದ್ದರೆ ಕ್ವಿಂಟಲ್‌ಗೆ 5,000 ರೂ. ದಿಂದ 6,000 ರೂ. ದರ ಸಿಗುತ್ತಿತ್ತು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:13 am, Thu, 27 August 26

Follow Us
ಅಂಬಾನಿ ಮನೆಯಲ್ಲಿ ಅದ್ದೂರಿ ಗಣೇಶೋತ್ಸವ; ರಾಧಿಕಾ ಮರ್ಚೆಂಟ್​ ನೃತ್ಯ
ಅಂಬಾನಿ ಮನೆಯಲ್ಲಿ ಅದ್ದೂರಿ ಗಣೇಶೋತ್ಸವ; ರಾಧಿಕಾ ಮರ್ಚೆಂಟ್​ ನೃತ್ಯ
ಕೊಪ್ಪಳ ಹಾಸ್ಟೆಲ್​​ಗೆ ಬಂದು ತಿಗಣಿಗೆ ಮದ್ದು ನೀಡಿದ ಚೆನ್ನೈ ತಜ್ಞರು
ಕೊಪ್ಪಳ ಹಾಸ್ಟೆಲ್​​ಗೆ ಬಂದು ತಿಗಣಿಗೆ ಮದ್ದು ನೀಡಿದ ಚೆನ್ನೈ ತಜ್ಞರು
ಬಿಗ್​​ಬಾಸ್​​ ಮನೆಯಿಂದ ಹೊರಬಂದಿದ್ದಕ್ಕೆ ಕಾರಣ ತಿಳಿಸಿದ ಓಂ ಪ್ರಕಾಶ್ ರಾವ್
ಬಿಗ್​​ಬಾಸ್​​ ಮನೆಯಿಂದ ಹೊರಬಂದಿದ್ದಕ್ಕೆ ಕಾರಣ ತಿಳಿಸಿದ ಓಂ ಪ್ರಕಾಶ್ ರಾವ್
ಅರಿಶಿನದ ಕೊಂಬುಗಳಿಂದಲೇ ಸಿದ್ಧವಾದ ಪರಿಸರಸ್ನೇಹಿ ಗಣೇಶನ ಮೂರ್ತಿ!
ಅರಿಶಿನದ ಕೊಂಬುಗಳಿಂದಲೇ ಸಿದ್ಧವಾದ ಪರಿಸರಸ್ನೇಹಿ ಗಣೇಶನ ಮೂರ್ತಿ!
ಕೆಡಿಪಿ ಸಭೆಗೆ ಪೊಲೀಸ್ ಆಯುಕ್ತ ಗೈರಾಗಿದ್ದಕ್ಕೆ ಸಚಿವ ಯು.ಟಿ.ಖಾದರ್ ಗರಂ
ಕೆಡಿಪಿ ಸಭೆಗೆ ಪೊಲೀಸ್ ಆಯುಕ್ತ ಗೈರಾಗಿದ್ದಕ್ಕೆ ಸಚಿವ ಯು.ಟಿ.ಖಾದರ್ ಗರಂ
ಗಂಭೀರ ಪಡೆದುಕೊಂಡ ಜಾರಕಿಹೊಳಿ ಕೇಸ್: ಇಡಿ ಸಭೆಯಲ್ಲಿ ಮಹತ್ವದ ಚರ್ಚೆ
ಗಂಭೀರ ಪಡೆದುಕೊಂಡ ಜಾರಕಿಹೊಳಿ ಕೇಸ್: ಇಡಿ ಸಭೆಯಲ್ಲಿ ಮಹತ್ವದ ಚರ್ಚೆ
LIVE: ಕೇಂದ್ರ ಸಚಿವ ಜೆ.ಪಿ‌.ನಡ್ಡಾ ಮಹತ್ವದ ಸುದ್ದಿಗೋಷ್ಠಿ
LIVE: ಕೇಂದ್ರ ಸಚಿವ ಜೆ.ಪಿ‌.ನಡ್ಡಾ ಮಹತ್ವದ ಸುದ್ದಿಗೋಷ್ಠಿ
ಕ್ಯಾರೆಕ್ಟರ್ ಲೆಸ್ ಎಂದ ಮಂಜ, ಗಂಡಸೇ ಅಲ್ಲ ಎಂದ ಕಾವ್ಯಾ: ವಿಡಿಯೋ
ಕ್ಯಾರೆಕ್ಟರ್ ಲೆಸ್ ಎಂದ ಮಂಜ, ಗಂಡಸೇ ಅಲ್ಲ ಎಂದ ಕಾವ್ಯಾ: ವಿಡಿಯೋ
ಟಿ.ನರಸೀಪುರ ಇನ್ಸ್​​​ಪೆಕ್ಟರ್ ಪರ ಡಿಕೆ ಶಿವಕುಮಾರ್ ಬ್ಯಾಟಿಂಗ್
ಟಿ.ನರಸೀಪುರ ಇನ್ಸ್​​​ಪೆಕ್ಟರ್ ಪರ ಡಿಕೆ ಶಿವಕುಮಾರ್ ಬ್ಯಾಟಿಂಗ್
ವೈಷ್ಣವಿ ಬಟ್ಟೆ ಬಗ್ಗೆ ಅವಿನಾಶ್ ಕಮೆಂಟ್; ಉತ್ತರಿಸಿದ ಪ್ರಥಮಾ
ವೈಷ್ಣವಿ ಬಟ್ಟೆ ಬಗ್ಗೆ ಅವಿನಾಶ್ ಕಮೆಂಟ್; ಉತ್ತರಿಸಿದ ಪ್ರಥಮಾ