AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗದಗ – ಶಕ್ತಿ ಯೋಜನೆಯಿಂದ ಆಟೋ ಚಾಲಕರಿಗೆ ಬಾಡಿಗೆ ಸಿಗದೆ ವಿಲವಿಲ, ಈ ಮಧ್ಯೆ ಆಟೋ ಚಾಲಕರಿಗೆ ಜಾತಿ ಕಾಟ ಶುರು, ಏನಿದರ ಒಳಸುಳಿ?

ಗದಗ-ಬೆಟಗೇರಿ ಅವಳಿ ನಗರದ ಆಟೋ ಚಾಲಕರು ಶಕ್ತಿ ಯೋಜನೆ ಜಾರಿ ಮಾಡಿ ನಮ್ಮ ಶಕ್ತಿ ಕುಂದಿದೆ. ಈ ನಡುವೆ ಬಲಾಢ್ಯ ಆಟೋ ಚಾಲಕರು ಕೆಲ ಜಾತಿಯ ಆಟೋ ಚಾಲಕರ ಮೇಲೆ ಗೂಂಡಾಗಿರಿ ನಡೆಸುತ್ತಿದ್ದಾರೆ ಎಂದಿದ್ದಾರೆ. ಹೀಗಾಗಿ ರೊಚ್ಚಿಗೆದ್ದ ನೂರಾರು ಆಟೋ ಚಾಲಕರು ನ್ಯಾಯಕ್ಕಾಗಿ ಎಸ್ಪಿ ಮೊರೆ ಹೋಗಿದ್ದಾರೆ.

ಗದಗ - ಶಕ್ತಿ ಯೋಜನೆಯಿಂದ ಆಟೋ ಚಾಲಕರಿಗೆ ಬಾಡಿಗೆ ಸಿಗದೆ ವಿಲವಿಲ, ಈ ಮಧ್ಯೆ ಆಟೋ ಚಾಲಕರಿಗೆ ಜಾತಿ ಕಾಟ ಶುರು, ಏನಿದರ ಒಳಸುಳಿ?
ಗದಗ - ಶಕ್ತಿ ಯೋಜನೆಯಿಂದ ಆಟೋ ಚಾಲಕರಿಗೆ ಬಾಡಿಗೆ ಸಿಗದೆ ವಿಲವಿಲ
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಸಾಧು ಶ್ರೀನಾಥ್​|

Updated on: Dec 23, 2023 | 1:35 PM

Share

ಶಕ್ತಿ ಯೋಜನೆಯಿಂದ (Karnataka Shakti scheme) ಆಟೋ ಚಾಲಕರಿಗೆ (Auto drivers) ಬಾಡಿಗೆ (Rent) ಸಿಗದೆ ವಿಲವಿಲ ಅಂತಿದ್ದಾರೆ. ಇದರ ನಡುವೆ ಆಟೋ ಚಾಲಕರಿಂದಲೇ ನೂರಾರು ಚಾಲಕರಿಗೆ ಮತ್ತೊಂದು ಕಾಟ ಶುರುವಾಗಿದೆ. ಹೌದು ಆಟೋ ಚಾಲಕರಿಗೆ ಜಾತಿ ಕಾಟ ಆರಂಭವಾಗಿದೆಯಂತೆ. ಆಟೋ ನಿಲ್ದಾಣದಲ್ಲಿ ಆಟೋ ತಂದ್ರೆ ಗೂಂಡಾಗಿರಿ ನಡೆಸಿದ್ದಾರೆ. ಹೀಗಾಗಿ ನೂರಾರು ಆಟೋ ಚಾಲಕರು ಬಾಡಿಗೆ ಸಿಗದೆ ಸಂಕಷ್ಟ ಎದುರಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ನಮಗೆ ನ್ಯಾಯ ನೀಡ್ಬೇಕು ಎಂದು ಗದಗ ಬೆಟಗೇರಿ ಅವಳಿ ನಗರದ (Gadag) ಆಟೋ ಚಾಲಕರು ಒತ್ತಾಯ ಮಾಡಿದ್ದಾರೆ.

ಶಕ್ತಿ ಯೋಜನೆಯಿಂದ ಕಂಗೆಟ್ಟಿರುವ ಆಟೋ ಚಾಲಕರಿಗೆ ಜಾತಿ ಕಾಟ..! ಆಟೋ ಸ್ಟ್ಯಾಂಡ್ ನಲ್ಲಿ ಜಾತಿ ಹೆಸರಿನಲ್ಲಿ ತಾರತಮ್ಯ ಆರೋಪ..! ಗದಗ ಬೆಟಗೇರಿ ಅವಳಿ ನಗರದಲ್ಲಿ ಚಾಲಕರ ಮದ್ಯ ನಡೆದಿದೆ ಜಾತೀಯತೆ ಕಿತ್ತಾಟ..! ಆಟೋ ಸ್ಟ್ಯಾಂಡ್ ನಲ್ಲಿ ಪಾಳಿ ಹಚ್ಚಲು ಬಿಡ್ತಾಯಿಲ್ಲಾ ಅಂತ ಕೆಲವು ಆಟೋ ಚಾಲಕರ ಆಕ್ರೋಶ..! ಗದಗ ಎಸ್ಪಿ ಬಿ ಎಸ್ ನೇಮಗೌಡ ಅವರಿಗೆ ಮನವಿ ಸಲ್ಲಿಸಿ ನ್ಯಾಯಕ್ಕಾಗಿ ಒತ್ತಾಯ..!

ಹೀಗೆ ಗೋಳು ತೋಡಿಕೊಳ್ತಾಯಿರೋ ಇವ್ರು ಗದಗ-ಬೆಟಗೇರಿ ಅವಳಿ ನಗರದ ಆಟೋ ಚಾಲಕರು. ಶಕ್ತಿ ಯೋಜನೆ ಜಾರಿ ಮಾಡಿ ನಮ್ಮ ಶಕ್ತಿ ಕುಂದಿದೆ. ಈ ನಡುವೆ ಬಲಾಢ್ಯ ಆಟೋ ಚಾಲಕರು ಕೆಲ ಜಾತಿಯ ಆಟೋ ಚಾಲಕರ ಮೇಲೆ ಗೂಂಡಾಗಿರಿ ನಡೆಸಿದ್ದಾರಂತೆ. ಹೀಗಾಗಿ ರೊಚ್ಚಿಗೆದ್ದ ನೂರಾರು ಆಟೋ ಚಾಲಕರು ನ್ಯಾಯಕ್ಕಾಗಿ ಎಸ್ಪಿ ಮೊರೆ ಹೋಗಿದ್ದಾರೆ. ಎಸ್.. ಮೊದಲೇ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಶಕ್ತಿ ಯೋಜನೆ ಚಾಲಕರ ಕೆಲಸವನ್ನು ಹಾಳು ಮಾಡಿದೆ. ಕಲೆಕ್ಷನ್ ಇಲ್ಲದೇ ಒದ್ದಾಡುತ್ತಿದ್ದಾರೆ.

ಸಾಲದ ಕಂತು ಕಟ್ಟಿ ಸಂಸಾರ ನಡೆಸೋದೆ ಕಷ್ಟವಾಗಿದೆ. ಈವಾಗ ಗದಗ ಬೆಟಗೇರಿ ಅವಳಿ ನಗರದಲ್ಲಿ ಹೊಸದೊಂದು ಸಮಸ್ಯೆ ಎದುರಾಗಿದೆ. ಹೌದು ಗದಗ ಬೆಟಗೇರಿ ಅವಳಿ ನಗರದಲ್ಲಿ ಜಾತಿ ಕಾಟ ಆರಂಭವಾಗಿದೆ ಎಂದು ಆಟೋ ಚಾಲಕರು ಗಂಭೀರವಾದ ಆರೋಪ ಮಾಡಿದ್ದಾರೆ. ಹೌದು ಗದಗ ಬೆಟಗೇರಿ ಅವಳಿ ನಗರದ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಜಿಮ್ಸ್ ಆಸ್ಪತ್ರೆ ಆವರಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಕೆಲವು ಜಾತಿಯವರಿಗೆ ಪಾಳಿ ನಿಡ್ತಾಯಿಲ್ವಂತೆ. ಅದರಲ್ಲೂ ಪರಿಶಿಷ್ಟ ಜಾತಿಯ ಕೊರಮ, ಭಜಂತ್ರಿ, ವಾಲ್ಮೀಕಿ ಜಾತಿಗೆ ಸೇರಿದವರಿಗೆ ಪಾಳಿ ನೀಡ್ತಾಯಿಲ್ಲಾ ಎಂದು ಆರೋಪ ಮಾಡಿದ್ದಾರೆ. ಸಾಲ ಸೂಲ ಮಾಡಿ ಆಟೋ ಖರೀದಿ ಮಾಡಿದ್ದೇವೆ, ಈವಾಗ ಪ್ರಮುಖ ಸ್ಥಳದಲ್ಲಿ ಆಟೋ ಸ್ಟ್ಯಾಂಡ್ ನಲ್ಲಿ ಪಾಳಿ ನೀಡ್ತಾಯಿಲ್ಲಾ. ಹೀಗಾಗಿ ಆರ್ಥಿಕವಾಗಿ ಸಾಕಷ್ಟು ಸಮಸ್ಯೆಯಾಗಿದೆ. ಈ ಜಾತಿ ತಾರತಮ್ಯ ನೀತಿ ನಿವಾರಣೆ ಮಾಡಿ, ನಮಗೆ ಎಲ್ಲಾ ಕಡೇ ಪಾಳಿ ನೀಡಬೇಕು ಎಂದು ಒತ್ತಾಯ ಮಾಡಿದ್ದಾರೆ.

Also Read: ಚಿನ್ನದ ನಾಡಿನ ಕರಾಟೆ ಲೇಡಿ! ಕೋಲಾರದ ರುಮಾನಾ ಕೌಸರ್ ಕೊರಳಿಗೆ ಚಿನ್ನದ ಪದಕ, ತಂದೆ ಆಟೋ ಚಾಲಕ

ಇನ್ನು ಜಿಮ್ಸ್ ಆಸ್ಪತ್ರೆ ಆವರಣದಲ್ಲಿ ಪಾಳಿಗಾಗಿ 5 ಸಾವಿರ ಹಣ ನೀಡ್ಬೇಕಂತೆ, ಪ್ರಮುಖ ಸ್ಥಳದಲ್ಲಿ ಆಟೋ ಪಾಳಿಗೆ ಹಚ್ಚಲು ಹೋದ್ರೆ ಧಮ್ಮಿ ಹಾಕಲಾಗುತ್ತೇ. ಗೂಂಡಾಗಿರಿ ನಡೆಸಿದ್ದಾರೆ ಅಂತ ಚಾಲಕರು ಆರೋಪ ಮಾಡಿದ್ದಾರೆ. ಗೂಂಡಾಗಳಿಂದ ನಮ್ಮ ಮೇಲೆ ದಬ್ಬಾಳಿಕೆ ಮಾಡ್ತಾಯಿದ್ದಾರೆ. ಆಟೋ ಚಾಲಕರಿಗೆ ಯಾವುದೇ ಜಾತಿ ಇಲ್ಲಾ, ಅಟೋದಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಯಾವುದೇ ಜಾತಿ ಇಲ್ಲ.

ಆದ್ರೆ ಗದಗ ಬೆಟಗೇರಿ ಅವಳಿ ನಗರದಲ್ಲಿ ಜಾತಿ ಹೆಸರಿನಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ಹೀಗಾಗಿ ಅವಳಿ ನಗರದ ಕೆಲವು ಆಟೋ ಚಾಲಕರು ಗದಗ ಎಸ್ಪಿ ಬಿ ಎಸ್ ನೇಮಗೌಡ ಅವರಗೆ ಮನವಿ ಸಲ್ಲಿಸಿದ್ದಾರೆ. ನಮಗ ಕೂಡಾ ಅವಳಿ ನಗರದ ಪ್ರಮುಖವಾದ ಸ್ಥಳದಲ್ಲಿ ಆಟೋ ಸ್ಟ್ಯಾಂಡ್ ಪಾಳಿಯನ್ನು ನೀಡಬೇಕು, ಹಾಗೇ ಜಾತಿ ಹೆಸರಿನಲ್ಲಿ ತಾರತಮ್ಯ ನೀತಿಯನ್ನು ನಿರ್ಮೂಲನೆ ಮಾಡಬೇಕು ಎಂದ ಒತ್ತಾಯಿಸಿ ಮನವಿ ಸಲ್ಲಿಸಿದ್ದಾರೆ.

ಸಾಲ ಸೂಲ ಮಾಡಿ ಆಟೋ ಖರೀದಿ ಮಾಡಿದೆ ಆಟೋ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ‌. ಶಕ್ತಿ ಆಯೋಜನೆಯಿಂದ ಬಾಡಿಗೆ ಬರ್ತಾಯಿಲ್ಲಾ. ಇನ್ನೊಂದೆಡೆ ಜಾತಿ ದಂಗಲ್ ಆರಂಭವಾಗಿದೆ. ಹೀಗಾಗಿ ಕೆಲವು ಸಮುದಾಯದ ಆಟೋ ಚಾಲಕರಿಗೆ ಬಹಳಷ್ಟು ಸಮಸ್ಯೆಯಾಗಿದೆ. ಇನಾದ್ರು ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಮದ್ಯ ಪ್ರವೇಶ ಮಾಡಿ, ಸೂಕ್ತವಾದ ಕ್ರಮ ಕೈಗೊಳ್ಳಬೇಕಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ರಾಜಣ್ಣ ಹೈಕಮಾಂಡ್ ವಿರುದ್ಧ ಮಾತಾಡಿಲ್ಲ, ಅದು ಸುಳ್ಳು ವದಂತಿ: ಖರ್ಗೆ
ರಾಜಣ್ಣ ಹೈಕಮಾಂಡ್ ವಿರುದ್ಧ ಮಾತಾಡಿಲ್ಲ, ಅದು ಸುಳ್ಳು ವದಂತಿ: ಖರ್ಗೆ
ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ನೇರ ಮಾತುಗಾರಿಕೆ ಸಹಿಸದ ರಾಹುಲ್ ಗಾಂಧಿ ಪ್ರಜಾಪ್ರಭುತ್ವದ ರಕ್ಷಕರೇ? ಅಶೋಕ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ಸಿಎಂ ಸಿದ್ದರಾಮಯ್ಯ ಪರ ಇದ್ದ ರಾಜಣ್ಣ ರಾಜೀನಾಮೆ ಏಕೆ? ಅಶೋಕ್​ ಪ್ರಶ್ನೆ
ವಿಷ್ಣುವರ್ಧನ್ ಸಮಾಧಿ ನೆಲಸಮ: ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗಿದ ಫ್ಯಾನ್ಸ್
ವಿಷ್ಣುವರ್ಧನ್ ಸಮಾಧಿ ನೆಲಸಮ: ವಾಣಿಜ್ಯ ಮಂಡಳಿಗೆ ಧಿಕ್ಕಾರ ಕೂಗಿದ ಫ್ಯಾನ್ಸ್
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಬೆಳಗ್ಗೆಯಿಂದ ಬ್ಯೂಸಿ, ಮೊಗಸಾಲೆಗೆ ಬಂದಾಗಲೇ ವಿಷಯ ಗೊತ್ತಾಗಿದ್ದು: ಸಚಿವೆ
ಬೆಳಗ್ಗೆಯಿಂದ ಬ್ಯೂಸಿ, ಮೊಗಸಾಲೆಗೆ ಬಂದಾಗಲೇ ವಿಷಯ ಗೊತ್ತಾಗಿದ್ದು: ಸಚಿವೆ
ಮತಗಳ್ಳತನ, ಕಾಲ್ತುಳಿತ ಪ್ರಕರಣಗಳನ್ನೂ ಸದನದಲ್ಲಿ ಚರ್ಚಿಸುತ್ತೇವೆ: ಬಿವೈವಿ
ಮತಗಳ್ಳತನ, ಕಾಲ್ತುಳಿತ ಪ್ರಕರಣಗಳನ್ನೂ ಸದನದಲ್ಲಿ ಚರ್ಚಿಸುತ್ತೇವೆ: ಬಿವೈವಿ
ಇವತ್ತು ರಾಯರ ದರ್ಶನ ಮಾಡುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿ
ಇವತ್ತು ರಾಯರ ದರ್ಶನ ಮಾಡುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿ
ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು
ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು
ಬಿಜೆಪಿ ಸಂಸದರಿಗೆ ಖಾಲಿ ಡಬ್ಬಗಳಂತೆ ಸದ್ದು ಮಾಡೋದು ಮಾತ್ರ ಗೊತ್ತು: ಡಿಕೆಎಸ್
ಬಿಜೆಪಿ ಸಂಸದರಿಗೆ ಖಾಲಿ ಡಬ್ಬಗಳಂತೆ ಸದ್ದು ಮಾಡೋದು ಮಾತ್ರ ಗೊತ್ತು: ಡಿಕೆಎಸ್