AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಪ್ಪತ್ತಗುಡ್ಡದಲ್ಲಿ ಮತ್ತೊಂದು ಸಂಪತ್ತಿನ ಗುಹೆ ರಹಸ್ಯ ಬಯಲು: ಸಂಜೀವಿನಿ ಗುಡ್ಡದೊಳಗೊಂದು ವಿಸ್ಮಯ ಲೋಕ

ಲಕ್ಕುಂಡಿ ಮತ್ತು ಕಪ್ಪತ್ತಗುಡ್ಡದಲ್ಲಿ ಚಿನ್ನದ ನಿಧಿ ಸಿಕ್ಕ ನಂತರ ಇದೀಗ ಗದಗ ಜಿಲ್ಲೆಯ ಸಂಜೀವಿನಿ ಗುಡ್ಡವು ಮತ್ತಷ್ಟು ಅಚ್ಚರಿಯ ಸಂಪತ್ತಿನ ರಹಸ್ಯಗಳನ್ನು ಬಚ್ಚಿಟ್ಟಿದೆ. ಕುಬೇರನ ಸಂಪತ್ತನ್ನೂ ಮೀರಿಸುವ ಬಂಗಾರದ ರಥ, ವಜ್ರಖಚಿತ ಆಭರಣಗಳು ಮತ್ತು ಶಿವಲಿಂಗವಿರುವ ರಹಸ್ಯ ಗವಿಯಿದೆ. ಈ ಬಗ್ಗೆ ಅತ್ತಿಕಟ್ಟಿ ಗ್ರಾಮಸ್ಥರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಕಪ್ಪತ್ತಗುಡ್ಡದಲ್ಲಿ ಮತ್ತೊಂದು ಸಂಪತ್ತಿನ ಗುಹೆ ರಹಸ್ಯ ಬಯಲು: ಸಂಜೀವಿನಿ ಗುಡ್ಡದೊಳಗೊಂದು ವಿಸ್ಮಯ ಲೋಕ
ಸಂಜೀವಿನಿ ಗುಡ್ಡImage Credit source: tv9 kannada
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: |

Updated on: Feb 13, 2026 | 3:24 PM

Share

ಗದಗ, ಫೆಬ್ರವರಿ 13: ಐತಿಹಾಸಿ ಲಕ್ಕುಂಡಿಯಲ್ಲಿ (Lakkundi) ಚಿನ್ನದ ನಿಧಿ ಸಿಕ್ಕ ಬಳಿಕ ಸಂಪತ್ತಿನ ಖಜಾನೆಗಳ ಒಂದೊಂದು ರಹಸ್ಯಗಳು ಬಯಲಾಗುತ್ತಿವೆ. ಲಕ್ಕುಂಡಿ ಸಂಪತ್ತನ್ನೂ ಮೀರಿಸುವ ಸಂಪತ್ತಿನ ಖಜಾನೆಗಳು ಗದಗ ಜಿಲ್ಲೆಯಲ್ಲಿವೆ. ಲಕ್ಕುಂಡಿ ಚಿನ್ನದ ಸಂಪತ್ತು ಆಯ್ತು, ಕಪ್ಪತ್ತಗುಡ್ಡದ ಚಿನ್ನದ ಗುಹೆಗಳ ಬಗ್ಗೆಯೂ ಟಿವಿ9 ಇಂಚಿಂಚು ವರದಿ ಮಾಡಿದೆ. ಆದರೆ ಇದೀಗ ರಹಸ್ಯ ಗವಿಯೊಳಗೆ ಸಂಪತ್ತು ಸುದ್ದಿ ಕೇಳಿದರೆ ನೀವು ಬೆಚ್ಚಿಬೀಳ್ತೀರಾ. ಈ ಸಂಜೀವಿನಿ ಗುಡ್ಡದ (Sanjeevini Hill) ಗವಿಯೊಳಗೆ ಅನಂತಪದ್ಮನಾಭ, ಕುಬೇರನ ಸಂಪತ್ತಿಗೂ ಅಪಾರವಿದೆಯಂತೆ.

ಲಕ್ಕುಂಡಿ ಕಲ್ಯಾಣ ಚಾಲುಕ್ಯರು, ವಿಜಯನಗರ ಅರಸರು, ರಾಷ್ಟ್ರಕೂಟರು ಆಳಿದ ನಾಡು. ಇದೇ ಲಕ್ಕುಂಡಿಯಲ್ಲಿ ಸಂಪತ್ತಿನ ಖಜಾನೆಯೇ ಇದೆ. ಚಿನ್ನದ ನಾಣ್ಯ ಟಂಕಿಸುತ್ತಿದ್ದ ಲಕ್ಕುಂಡಿ. ಇದೇ ಲಕ್ಕುಂಡಿಯಲ್ಲಿ ಜನೇವರಿ 10 ಪ್ರಜ್ವಲ್ ರಿತ್ತಿ ಕುಟುಂಬಕ್ಕೆ 466 ಗ್ರಾಮ ಚಿನ್ನದ ನಿಧಿ ಸಿಕ್ಕಿದೆ. ಈ ಸಿಕ್ಕಿದ್ದೇ ತಡ ಐತಿಹಾಸಿಕ ಲಕ್ಕುಂಡಿಯ ಗತವೈಭ ರಹಸ್ಯಗಳು ನಿತ್ಯವೂ ಹೊರಬರ್ತಾಯಿವೆ. ಲಕ್ಕುಂಡಿ ಸಂಪತ್ತು ಆಯ್ತು, ಕಪ್ಪತ್ತಗುಡ್ಡದ ಚಿನ್ನದ ಗುಹೆಗಳ ಸಂಪತ್ತು ಆಯ್ತು. ಈಗ ಕಪ್ಪತ್ತಗುಡ್ಡದಲ್ಲಿ ಮತ್ತೊಂದು ಸಂಪತ್ತಿನ ಗುಹೆ ರಹಸ್ಯ ಬಯಲಾಗಿದೆ.

ಇದನ್ನೂ ಓದಿ: ಬಗೆದಷ್ಟು ಬಯಲಾಗುತ್ತಿದೆ ಲಕ್ಕುಂಡಿ ರಹಸ್ಯ: ಸಿದ್ಧರ ಗುಹೆಯೊಳಗಿದೆ ಅಪಾರ ಸಂಪತ್ತು?

ಕರಿಯಮ್ಮನ ಗುಡ್ಡದ ಈ ಗುಹೆಯೊಳಗಿನ ಸಂಪತ್ತಿನ ವಿಷಯ ಕೇಳಿದರೆ ನೀವು ದಂಗಾಗಿ ಹೋಗ್ತೀರಾ. ಐತಿಹಾಸಿಕ ಲಕ್ಕುಂಡಿ, ಕಪತ್ತಗುಡ್ಡದ ಚಿನ್ನದ ಗುಹೆಗಳಿಗೂ ಮೀರಿಸುವಂತಿದೆ ಈ ನಿಗೂಢ ಗವಿಯ ಸಂಪತ್ತು. ಅನಂತಪದ್ಮನಾಭ, ಕುಬೇರನ ಸಂಪತ್ತಿಗೂ ಅಪಾರ ಸಂಪತ್ತು ಈ ಗವಿಯೊಳಗಿದೆಯಂತೆ. ಅತ್ತಿಕಟ್ಟಿ ಗ್ರಾಮದ ರವಿ ಚವ್ಹಾಣ, ವಿಷ್ಣು ಚವ್ಹಾಣ ರೋಚಕ, ವಿಸ್ಮಯ, ಕೌತಕವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಆದರೆ ಈ ರಹಸ್ಯ ಸಂಪತ್ತಿನ ಗವಿ ಇರುವ ಜಾಗಕ್ಕೆ ತಲುಪೋದು ರೋಚಕ, ಭಯಾನಕ.

ಕಪ್ಪತ್ತಗುಡ್ಡ ಗದಗ, ಶಿರಹಟ್ಟಿ, ಮುಂಡರಗಿ ತಾಲೂಕಿನಲ್ಲಿ ಒಟ್ಟು 34 ಹೇಕ್ಟರ್ ಪ್ರದೇಶ ವಿಸ್ತಾರ ಹೊಂದಿದೆ. ಕಪ್ಪತ್ತಗುಡ್ಡ ತನ್ನೊಡಲ್ಲಿ ಚಿನ್ನ, ಅದಿರು, ಬೆಳ್ಳಿ, ತಾಮ್ರ, ಹಿತ್ತಾಳೆ ಸೇರಿ ಪಂಚ ಖನಿಜಗಳ ಸಂಪತ್ತೆ ತುಂಬಿಕೊಂಡಿದೆ. ಅಷ್ಟೇ ಅಲ್ಲ ಕಪ್ಪತ್ತಗುಡ್ಡ ಔಷಧಿಯ ಸಸ್ಯಗಳ ಕಾಶಿ. ಅಮೂಲ್ಯವಾದ ಆಯುರ್ವೇದಿಕ ಸಸ್ಯ ಸಂಪತ್ತು ಇದೆ. ಹೀಗಾಗಿ ಕಪ್ಪತ್ತಗುಡ್ಡ ಸಾಮಾನ್ಯ ಗುಡ್ಡವಲ್ಲ. ಆದರೆ ಈ ಗುಡ್ಡದೊಳಗೊಂದು ಸಂಜೀವಿನಿ ಗುಡ್ಡ ಇದೆ. ಹನುಮಂತ ಸಂಜೀವೀನಿ ಪರ್ವತ ತೆಗೆದುಕೊಂಡು ಹೋಗುವಾಗ ಪರ್ವತದ ತುಣುಕು ಬಿದ್ದ ಜಾಗವೇ ಈ ಸಂಜೀವಿನಿ ಪರ್ವತ.

ನೂರಾರು ವರ್ಷಗಳಿಂದ ಋಷಿಮುನಿ ತಪಸ್ಸು 

ಈ ಸಂಜೀವಿನಿ ಪರ್ವತದ ಗುಹೆಯೊಳಗೆ ನೂರಾರು ವರ್ಷಗಳಿಂದ ಋಷಿಮುನಿಯೊಬ್ಬರು ತಪಸ್ಸು ಮಾಡ್ತಾಯಿದ್ದಾರಂತೆ. ಬಂಗಾರದ ಶಿವಲಿಂಗಕ್ಕೆ ನಿತ್ಯ ಈ ಋಷಿಮುನಿಗಳು ಪೂಜೆ, ಪುನಸ್ಕಾರ ಮಾಡ್ತಾಯಿದ್ದಾರಂತೆ. ಸಂಜೀವಿನಿ ಪರ್ವದಲ್ಲಿರುವ ಗವಿಯೊಳಗೆ ಅಪಾರ ಶಕ್ತಿಯಿಂದೆಯಂತೆ. ನಿತ್ಯ ಪೂಜೆ ಮಾಡುವ ಋಷಿಮುನಿಗಳು ಲಿಂಗದಲ್ಲಿ ಬರುವ ಒಂಚೂರು ಸೂಸು ಮಣ್ಣು ತಿಂದರೆ ನೂರು ವರ್ಷ ಆಯಸ್ಸು ಹೆಚ್ಚಾಗುತ್ತಂತೆ. ಆ ಮಣ್ಣು ತಿಂದೇ ನೂರಾರು ವರ್ಷ ಋಷಿಮುನಿಗಳು ತಪ, ಜಪ ಮಾಡ್ತಾಯಿದ್ದಾರಂತೆ.

ಈ ಗುಹೆಯೊಳಗಿನ ಚಿನ್ನ, ವಜ್ರ ವೈಢೂರ್ಯಗಳ ಸಂಪತ್ತಿನ ಬಗ್ಗೆ ಕೇಳಿದರೆ ನೀವು ದಂಗಾಗಿ ಹೋಗ್ತೀರಾ.  ಚಿನ್ನದ ಬೃಹತ ರಥ, ಚಿನ್ನದ ಎತ್ತುಗಳು, ಚಿನ್ನ, ವಜ್ರಖಚಿತ ದೇವಿಮೂರ್ತಿ ಸೇರಿ ಅಪಾರ ಸಂಪತ್ತು ಇದೆ. ಈ ಸಂಪತ್ತಿನ ಬಗ್ಗೆ ಲೇಖನಿ ಇದೆ ಅಂತ ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದರಂತೆ. ಈಗ ಆ ಅಧಿಕಾರಿ ಮೃತಪಟ್ಟಿದ್ದಾರೆ‌‌. ಈ ಗುಹೆಯ ಸಂಪತ್ತಿನ ಬಗ್ಗೆ ಆ ಅಧಿಕಾರಿ ಬಳಿ ಪುಸ್ತಕವೇ ಇದೆ ಅಂತ ಅತ್ತಿಕಟ್ಟಿ ಗ್ರಾಮಸ್ಥರು ಹೇಳಿದ್ದಾರೆ.

ಇನ್ನು 10 ವರ್ಷಗಳ ಹಿಂದೆ ಓರ್ವ ಸ್ವಾಮಿಜಿ ಬಂದು ಈ ಗವಿಯಲ್ಲಿ ತಪಸ್ಸು ಮಾಡಿದ್ದರು. ಈ ಗವಿಯ ಒಳಗೆ ನೂರಾರು ವರ್ಷಗಳಿಂದ ಋಷಿಮುನಿಯೊಬ್ಬರು ವಾಸವಾಗಿದ್ದಾರಂತೆ. ನನ್ನ ತಪಸ್ಸಿನ ಶಕ್ತಿಯಿಂದ ಅವರನ್ನ ಹೊರ ಕರೆದುಕೊಂಡು ಬರ್ತೀನಿ ಅಂತ ಸ್ವಾಮೀಜಿ ತಪಸ್ಸು ಕುಳಿತಿದ್ದರಂತೆ. ಹಣ್ಣು, ಹಾಲು ಇಟ್ಟು ಸ್ವಾಮೀಜಿ ರಾತ್ರಿಯೀಡಿ ತಪಸ್ಸು ಮಾಡ್ತಿದ್ರಂತೆ. ರಾತ್ರಿ ಕಾಡುಪ್ರಾಣಿಗಳು ಬಂದು ಹಣ್ಣುಗಳು ತಿದ್ದರೆ, ಬೃಹತ್ ಸರ್ಪ ಹಾಲು ಕುಡಿದು ಹೋಗ್ತಾಯಿತ್ತಂತೆ.

ಇಲ್ಲೊಂದು ಕರಿಯಮ್ಮನ ದೇವಸ್ಥಾನ ನಿರ್ಮಾಣ ಮಾಡಿ ಅಭಿವೃದ್ಧಿ ಮಾಡುವುದಾಗಿ ಸ್ವಾಮೀಜಿ ಹೇಳಿದ್ದರಂತೆ. ಅದಕ್ಕೆ ಅತ್ತಿಕಟ್ಟಿ ಗ್ರಾಮಸ್ಥರೆಲ್ಲಾ ಒಪ್ಪಿದ್ದರು. ಆದರೆ ಆಗ ಅರಣ್ಯ ಇಲಾಖೆ ಅಧಿಕಾರಿಗಳು ಪೊಲೀಸರನ್ನು ಕರೆತಂದು ಸ್ಮಾಮೀಜಿಗೆ ತಪಸ್ಸು ಮಾಡಲು ಬಿಡಲಿಲ್ಲ. ಗವಿಯಿಂದ ಸ್ವಾಮೀಜಿಯನ್ನು ಎಬ್ಬಿಸಿ ಕಳುಹಿಸಿದ್ದರು. ಆಗ ಅಂದಿನ ಅರಣ್ಯ ಇಲಾಖೆ ಅಧಿಕಾರಿ ಗ್ರಾಮಸ್ಥರಿಗೆ ಈ ಗವಿಯ ರಹಸ್ಯ ಹೇಳಿದರು. ಆ ಸ್ವಾಮೀಜಿ ಗುಹೆಯೊಳಗಿನ ಋಷಿಮುನಿಗೆ ಹೊರಕರೆತರಲು ಬಂದಿಲ್ಲ. ಬದಲಾಗಿ ಈ ಗುಹೆಯೊಳಗೆ ಅಪಾರ ಸಂಪತ್ತು ಇದೆ. ಅದನ್ನ ತೆಗೆದುಕೊಂಡು ಹೋಗಲು ಬಂದಿದ್ದಾನಂತೆ ಅಂತ ಹೇಳಿದ್ರು. ಆದ್ರೆ, ಇದನ್ನು ನಂಬದ ಗ್ರಾಮಸ್ಥರು ಪ್ರಶ್ನೆ ಮಾಡಿದ್ರು. ಇಲ್ಲಿ ಸಂಪತ್ತು ಎಲ್ಲಿಂದ ಬಂತು. ಯಾರ ಸಂಪತ್ತು ಅಂತ ಹತ್ತಾರು ಪ್ರಶ್ನೆ ಮಾಡಿದ್ದಾರೆ. ಆಗ ಅರಣ್ಯ ಅಧಿಕಾರಿ ಈ ಗುಹೆಯೊಳಗೆ ಚಿನ್ನದ ರಥ, ಎತ್ತುಗಳು, ದೇವಿಮೂರ್ತಿ ವಜ್ರ ವೈಢೂರ್ಯ ತುಂಬಿದೆ. ಅದಕ್ಕೆ ಲೇಖನಿ ಇದೆ ಅಂತ ನಮಗೂ ಹೇಳಿದ್ದಾರೆ. ನಮ್ಮ ಹಿರಿಯರೂ ಹೇಳುತ್ತಿದ್ದರು.

ರೊಚಕ ಸತ್ಯ ಬಿಚ್ಚಿಟ್ಟ ಅತ್ತಿಕಟ್ಟಿ ಗ್ರಾಮಸ್ಥರು

ಹತ್ತು ವರ್ಷಗಳ‌ ಹಿಂದೆ‌ ನಡೆದ ಘಟನೆಯ ರೊಚಕ ಸತ್ಯವನ್ನು ಅತ್ತಿಕಟ್ಟಿ ಗ್ರಾಮಸ್ಥರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ನಮ್ಮ ಕಣ್ಮುಂದೆಯೇ ಗವಿಯೊಳಗೆ ತಪಸ್ಸು‌ ಮಾಡ್ತಾಯಿದ್ದ ಸ್ವಾಮೀಜಿಯನ್ನು ಹೊತ್ತೊಯ್ಯೊದ್ರು. ಆ ಸ್ವಾಮೀಜಿ ಕೂಡ ಸಾಕಷ್ಟು ಪವಾಡ ಮಾಡಿ ತೋರಿಸಿದ್ರು. ಆ ಸ್ವಾಮೀಜಿಯನ್ನು ಚುಟ್ಟಾ (ಬೀಡಿ) ಸ್ವಾಮೀಜಿ ಅಂತಾನೆ ಕರೆಯುತ್ತಿದ್ದರು. ಏನೇ ಪವಾಡ ಮಾಡಬೇಕದರೂ ಮೊದಲು ಚುಟ್ಟಾ ಸೇದಿ ಆ ಮೇಲೆ‌ ಪವಾಡ ಮಾಡ್ತಾಯಿದ್ರು. ಹತ್ತು ವರ್ಷದ ಹಿಂದೆ ನಮ್ಮೂರಿಗೆ ಬರಗಾಲ ಬಿದ್ದಿತ್ತು. ಆಗ ಸ್ವಾಮೀಜಿಗೆ ಗ್ರಾಮಸ್ಥರು ಹೇಳಿದ್ರು. ಆಗ ಒಂದು ಚುಟ್ಟಾ ಹಚ್ಚಿ ಟೆಂಗಿನ ಕಾಯಿ ತಗೊಂಡು ಮೋಡ ಇರುವ ಕಡೆ ಮೂರು ಬಾರಿ ಇಳಿಸಿ ಅತ್ತಿಕಟ್ಟಿ ಗ್ರಾಮದ ಕಡೆ ಎಸೆದ್ರಂತೆ ಒಂದು ಗಂಟೆಯಲ್ಲಿ ಮಳೆ ಸುರಿಯಿತು ಅಂತ ಗ್ರಾಮಸ್ಥರು ಹೇಳಿದ್ದಾರೆ.

ಇದನ್ನೂ ಓದಿ: ಲಕ್ಕುಂಡಿಯಲ್ಲಿ ನಿಧಿ ರಹಸ್ಯ: ಬಸವಣ್ಣ ದೇವಸ್ಥಾನದಲ್ಲಿ ಸರ್ಪದ ಪೊರೆ ಪತ್ತೆ

ಸಂಜೀವಿನಿ ಗುಡ್ಡ ರಹಸ್ಯವೇ ರೋಚಕ, ವಿಸ್ಮಯ, ಕೌತುಕ. ಸಂಜೀವಿನಿ ಗವಿಯೊಳಗೊಂದು ಅದ್ಭುತ ಸಂಪತ್ತಿನ ಜಗತ್ತೇ ಇದೆಯಂತೆ. ಗವಿಯೊಳಗೆ ಹೋದರೆ ವಿಶಾಲವಾದ ಜಗತ್ತು ಇದೆಯಂತೆ. ಋಷಿಮುನಿ ತಪಸ್ಸು, ಸಂಪತ್ತಿನ ಪಕ್ಕ ನೀರು ಹರಿಯುತ್ತಿದೆಯಂತೆ. ಆ ಸಂಪತ್ತಿನ ಸ್ಥಳಕ್ಕೆ ಯಾರಿಗೂ ಹೋಗಲು ಆಗಲ್ವಂತೆ. ಇಲ್ಲೂ ಸರ್ಪಕಾವಲು ಇದೆ.

ಸಂಜೀವಿನಿ ಬೆಟ್ಟದ ಗುಹೆಯ ಬಗ್ಗೆ ಅತ್ತಿಕಟ್ಟಿ ಗ್ರಾಮಸ್ಥರು ಹೇಳೂ ಅದ್ಭುತ, ರೋಚಕ ಸಂಗತಿಗಳು ಮೈಜುಮ್ ಎನಿಸುತ್ತೆ. ಈ ರೀತಿಯ ಸಂಪತ್ತಿನ ಜಗತ್ತು ಇರೋಕೆ ಸಾಧ್ಯನಾ? ಗ್ರಾಮಸ್ಥರು ಹೇಳೋದು ಸತ್ಯವಾ ಅನ್ನೋ ಹತ್ತಾರು ಪ್ರಶ್ನೆಗಳು ಕಾಡುತ್ತವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.