ಈರುಳ್ಳಿ ಆಯ್ತು, ಇದೀಗ ಮೆಣಸಿನಕಾಯಿಗೂ ಶುರುವಾಯ್ತು ಖದೀಮರ ಕಾಟ!
ಗದಗ: ಬ್ಯಾಂಕ್ಗೆ ಕಳ್ಳತನ, ಜ್ಯುವೆಲ್ಲರಿ ಶಾಪ್ಗೆ ಕನ್ನ, ಅಂಗಡಿಗೆ ನುಗ್ಗಿ ದರೋಡೆ ಮಾಡೋದನ್ನ ನೀವ್ ನೋಡಿರ್ತೀರಿ. ಆದ್ರೆ, ಈಗ ಕಳ್ಳರು ರೈತರನ್ನೂ ಬಿಡ್ತಿಲ್ಲ. ಯಾಕಂದ್ರೆ, ಕೆಲ ದಿನದಿಂದ ಈರುಳ್ಳಿ ಬೆಳೆಗಾರರಿಗೆ ಕದೀಮರು ಕಾಟ ಕೊಡ್ತಿದ್ರ. ಇದೀಗ, ಮೆಣಸಿನಕಾಯಿ ಮೇಲೂ ಕಳ್ಳರ ವಕ್ರದೃಷ್ಟಿ ಬಿದ್ದಿದೆ. ರೈತನ ಮೇಲೆ ಕಲ್ಲು ತೂರಿ ಕಳ್ಳರು ಪರಾರಿ! ಈರುಳ್ಳಿಗೆ ಬಂಪರ್ ರೇಟ್ ಬರ್ತಿದ್ದಂತೆ, ಖದೀಮರೆಲ್ಲ ಈರುಳ್ಳಿ ಕಳ್ಳತನಕ್ಕೆ ಮುಗಿಬಿದಿದ್ರು. ಈಗ ಕ್ವಿಂಟಾಲ್ ಮೆಣಸಿನಕಾಯಿ ಗೆ 34-34 ಸಾವಿರ ಬೆಲೆ ಇದೆ. ಹೀಗಾಗಿ ಕಳ್ಳರು […]
ಗದಗ: ಬ್ಯಾಂಕ್ಗೆ ಕಳ್ಳತನ, ಜ್ಯುವೆಲ್ಲರಿ ಶಾಪ್ಗೆ ಕನ್ನ, ಅಂಗಡಿಗೆ ನುಗ್ಗಿ ದರೋಡೆ ಮಾಡೋದನ್ನ ನೀವ್ ನೋಡಿರ್ತೀರಿ. ಆದ್ರೆ, ಈಗ ಕಳ್ಳರು ರೈತರನ್ನೂ ಬಿಡ್ತಿಲ್ಲ. ಯಾಕಂದ್ರೆ, ಕೆಲ ದಿನದಿಂದ ಈರುಳ್ಳಿ ಬೆಳೆಗಾರರಿಗೆ ಕದೀಮರು ಕಾಟ ಕೊಡ್ತಿದ್ರ. ಇದೀಗ, ಮೆಣಸಿನಕಾಯಿ ಮೇಲೂ ಕಳ್ಳರ ವಕ್ರದೃಷ್ಟಿ ಬಿದ್ದಿದೆ.
ರೈತನ ಮೇಲೆ ಕಲ್ಲು ತೂರಿ ಕಳ್ಳರು ಪರಾರಿ! ಈರುಳ್ಳಿಗೆ ಬಂಪರ್ ರೇಟ್ ಬರ್ತಿದ್ದಂತೆ, ಖದೀಮರೆಲ್ಲ ಈರುಳ್ಳಿ ಕಳ್ಳತನಕ್ಕೆ ಮುಗಿಬಿದಿದ್ರು. ಈಗ ಕ್ವಿಂಟಾಲ್ ಮೆಣಸಿನಕಾಯಿ ಗೆ 34-34 ಸಾವಿರ ಬೆಲೆ ಇದೆ. ಹೀಗಾಗಿ ಕಳ್ಳರು ಮೆಣಸಿನಕಾಯಿಯತ್ತ ಗಂಟು ಬಿದ್ದಿದ್ದಾರೆ. ಗದಗದ ಗಜೇಂದ್ರಗಡದ ತೋಟಗಂಟಿಯಲ್ಲಿ, ರೈತ ಕೃಷ್ಣ ಪಾಟೀಲ್ ಅನ್ನೋರ ಜಮೀನಿನಲ್ಲಿ ಸುಮಾರು 6 ರಿಂದ 7 ಕ್ವಿಂಟಾಲ್ ಮೆಣಸಿನಕಾಯಿ ಕದ್ದೊಯ್ದಿದ್ದಾರೆ. ಜಮೀನಿನಲ್ಲಿ ಹಾಕಿದ್ದ ಮೆಣಸಿನಕಾಯಿಯನ್ನ, ಟಾಟಾ ಎಸ್ ವಾಹನದಲ್ಲಿ ತುಂಬಿ ಸಾಗಿಸುತ್ತಿದ್ದಾಗ, ಕೃಷ್ಣಾ ಪಾಟೀಲ್ ಅವ್ರು ಬಂದಿದ್ದಾರೆ. ಈ ವೇಳೆ ಕಳ್ಳರನ್ನ ಹಿಡಿಯಲು ಮುಂದಾದಾಗ, ಅವ್ರ ಮೇಲೂ ಕಲ್ಲು ತೂರಿ ಎಸ್ಕೇಪ್ ಆಗಿದ್ದಾರೆ.
ಇನ್ನು, 7 ಕ್ವಿಂಟಾಲ್ ಮೆಣಸಿನಕಾಯಿ ಕಳ್ಳತನವಾಗಿದೆ ಅಂತ ದೂರು ಕೊಡಲು ಹೋದ್ರೆ, ನರೇಗಲ್ ಠಾಣೆ ಪೊಲೀಸ್ರು ಬರೀ ಕ್ವಿಂಟಾಲ್ ಅಂತ ಕಂಪ್ಲೆಂಟ್ ರಿಜಿಸ್ಟರ್ ಮಾಡ್ಕೊಂದ್ದಾರಂತೆ. ಹೀಗಾಗಿ ಪೊಲೀಸರ ನಡೆಯೂ ಅನುಮಾನ ಮೂಡಿಸ್ತಿದೆ ಅಂತಾರೆ ರೈತರು. ಇನ್ನು, ಕಳ್ಳರ ಹಾವಳಿಯಿಂದ ಮಾರ್ಕೆಟ್ಗೆ ಸಾಗಿಸಲು ಮೆಣಸಿನಕಾಯಿ ಇಟ್ಕೊಂಡಿರೋ ರೈತರಲ್ಲೂ ಆತಂಕ ಶುರುವಾಗಿದೆ. ಒಟ್ನಲ್ಲಿ, ರಾತ್ರೋರಾತ್ರಿ ಕೆಂಪು ಚಿನ್ನಕ್ಕೆ ಖದೀಮರು ಕನ್ನ ಹಾಕ್ತಿದ್ದಾರೆ. ಹೀಗಾಗಿ, ಮೆಣಸಿನಕಾಯಿ ಬೆಳೆದ ರೈತರು ಪರದಾಡ್ತಿದ್ದಾರೆ.