ಗದಗದಲ್ಲಿ ಚಿರತೆ ಭಯ, ಚಿಕ್ಕೋಡಿಯಲ್ಲಿ ಹೆಚ್ಚಾಯ್ತು ಮೊಸಳೆಗಳ ಕಾಟ

  • TV9 Web Team
  • Published On - 10:56 AM, 9 Jan 2020
ಗದಗದಲ್ಲಿ ಚಿರತೆ ಭಯ, ಚಿಕ್ಕೋಡಿಯಲ್ಲಿ ಹೆಚ್ಚಾಯ್ತು ಮೊಸಳೆಗಳ ಕಾಟ

ಗದಗ: ಆ ಗುಡ್ಡದ ಸರಹದ್ದಿನ ಜನ್ರು ತಾವಾಯಿತು ತಮ್ಮ ಬದುಕಾಯಿತು ಅಂತಾ ಇದ್ದೋರು. ಕೂಲಿ ಮಾಡ್ಕೊಂಡು ಜೀವನ ಸಾಗಿಸ್ತಿದ್ರು. ಆದ್ರೆ ಅದ್ಯಾವಾಗ ಚಿರತೆ ದರ್ಶನ ಕೊಡ್ತೋ, ಅಂದಿನಿಂದ ಅವರೆಲ್ಲರ ನೆಮ್ಮದಿಯ ಬದುಕಿಗೆ ಬೆಂಕಿಯೇ ಬಿದ್ದಿದೆ. ಒಂದು ಹೆಜ್ಜೆ ಇಡೋದಕ್ಕೂ ಜನ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೂಲಿಗೆ ಹೋಗಿ ಬರುತ್ತಿದ್ದವರ ಎದುರಿಗೆ ಬಂತು ಚಿರತೆ!
ಗದಗ‌ ಜಿಲ್ಲೆ ಕಪ್ಪತ್ತಗುಡ್ಡದ ಸೆರಗಿನಲ್ಲಿರೋ ಡೋಣಿ ತಾಂಡಾ ಗ್ರಾಮದ. ಕಪ್ಪತ್ತಗುಡ್ಡ ಉತ್ತರ ಕರ್ನಾಟಕದ ಸಹ್ಯಾದ್ರಿ. ಅಪಾರ ಔಷಧಿ ಗುಣವುಳ್ಳ ಸಸ್ಯ ಸಂಕುಲ ಇಲ್ಲಿದೆ. ಹೀಗಾಗಿ ಕಪ್ಪದಗುಡ್ಡ ರಕ್ಷಿಸಲು, ಬೆಂಕಿ ಕೆನ್ನಾಲೆಯಿಂದ ಕಾಪಾಡಲು ಹಲವು ಯೋಜನೆ ಹಾಕಿಕೊಳ್ಳಲಾಗಿದೆ. ಇದಕ್ಕಾಗಿ ಸುತ್ತಮುತ್ತಲಿರುವ ಗ್ರಾಮಸ್ಥರಿಗೆ ಕೂಲಿ ನೀಡಿ ಅರಣ್ಯ ಕಾಪಾಡಲಾಗುತ್ತಿದೆ. ಹೀಗೆ ಕೆಲಸಗಾರರು ಸಂಜೆ ವೇಳೆ ಗ್ರಾಮಕ್ಕೆ ಮರಳುವ ವೇಳೆ ಚಿರತೆ ಪ್ರತ್ಯಕ್ಷ್ಯವಾಗಿದೆ. ಇದನ್ನ ಕಂಡ ಜನ ಬೆಚ್ಚಿಬಿದ್ದಿದ್ದಾರೆ.‘ಹಿರಣ್ಯಕೇಶಿ’ ತಟದಲ್ಲಿ ಮೊಸಳೆ ಹಾವಳಿ!
ತಿಂಗಳ ಹಿಂದೆಯಷ್ಟೇ ಭಾರಿ ಪ್ರವಾಹಕ್ಕೆ ನಲುಗಿದ್ದ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಕುರಣಿ ಗ್ರಾಮ ಇದಾಗಿದೆ. ಹೀಗೆ ಭಾರಿ ಸಂಕಷ್ಟಗಳ ಮಧ್ಯೆ ಮತ್ತೆ ಬದುಕು ಕಟ್ಟಿಕೊಂಡಿರೋ ಕುರಣಿ ಗ್ರಾಮದ ಜನರಿಗೆ ಮತ್ತೊಂದು ಸಮಸ್ಯೆ ಎದುರಾಗಿದ್ದು, ಪ್ರವಾಹದ ಭಯ ತೊಲಗಿ ಮೊಸಳೆಗಳ ಬಗ್ಗೆ ಭಯ ಹುಟ್ಟಿದೆ. ಭೀಕರ ನೆರೆಯಿಂದ ಇಲ್ಲಿ ಹರಿಯುವ ಹಿರಣ್ಯಕೇಶಿ ನದಿಗೆ ಮೊಸಳೆಗಳು ನುಗ್ಗಿದ್ದು, ನೀರಿನ ಪ್ರಮಾಣ ಇಳಿಮುಖವಾಗುತ್ತಿದ್ದಂತೆ ಎಲ್ಲೆಂದರಲ್ಲಿ ಮೊಸಳೆಗಳು ಕಾಣುತ್ತಿವೆ. ಇದು ಜನರು ಹಾಗೂ ರೈತರನ್ನ ಭಯಭೀತರನ್ನಾಗಿಸಿದೆ.

ಒಟ್ನಲ್ಲಿ ತಮ್ಮದಲ್ಲದ ತಪ್ಪಿಗೆ, ಪ್ರಾಣಿಗಳು ಹಾಗೂ ಜಲಚರಗಳ ಕಾಟದಿಂದ ಜನ ತತ್ತರಿಸಿದ್ದಾರೆ. ಕೂಡಲೇ ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತು. ಅರಣ್ಯ ಇಲಾಖೆಯನ್ನ ಸಂಪರ್ಕಿಸಿ ಸಮಸ್ಯೆಗಳಿಗೆ ಮುಕ್ತಿ ಕೊಡಬೇಕಿದೆ. ಅಕಸ್ಮಾತ್ ಸಮಸ್ಯೆ ಬಗೆಹರಿಯದೇ ಇದ್ರೆ ಉಗ್ರ ಹೋರಾಟದ ಎಚ್ಚರಿಕೆ ನೀಡ್ತಿದ್ದಾರೆ ಜನ.