ರಾತ್ರೋರಾತ್ರಿ ಆಸ್ಪತ್ರೆಗೆ ನುಗ್ಗಿ ಮೊಬೈಲ್, ಹಣ ಕಳ್ಳತನ: ಕೇಳೋರಿಲ್ಲ ಗದಗ ಜಿಮ್ಸ್ ಆಸ್ಪತ್ರೆ ರೋಗಿಗಳ ಗೋಳಾಟ!
ರಾತ್ರೋರಾತ್ರಿ ಆಸ್ಪತ್ರೆಗೆ ಕಳ್ಳರು ನುಗ್ಗಿ ಮೊಬೈಲ್, ಹಣ ದೋಚುತ್ತಿದ್ದಾರೆ. ಇದು ಗದಗ ಜಿಮ್ಸ್ ಆಸ್ಪತ್ರೆಯ ರೋಗಿಗಳ ಗೋಳಾಟವಾಗಿದ್ದು, ಜಿಮ್ಸ್ ಆಸ್ಪತ್ರೆಯಲ್ಲಿ ಹೇಳೋರೋ ಕೇಳೋರಿಲ್ಲದಂತಾಗಿದೆ.
ಗದಗ: ಅದು ಆ ಭಾಗದ ಬಡವರ ಪಾಲಿನ ಸಂಜೀವಿನಿ. ಹೆಚ್ಚಾಗಿ ಬಡ ರೋಗಿಗಳು ಚಿಕಿತ್ಸೆಗೆಂದು ಬರುತ್ತಾರೆ. ಆದರೆ ಈವಾಗ ರೋಗಿಗಳಿಗೆ ಹಾಗೂ ರೋಗಿಗಳ ಸಂಬಂಧಿಕರಿಗೆ ಹೊಸದೊಂದು ಟೆನ್ಶನ್ ಶುರುವಾಗಿದೆ. ಮೊಬೈಲ್ ಕಳ್ಳರ ಹಾವಳಿಯಿಂದ ಬೆಚ್ಚಿಬಿಳ್ಳುವಂತಾಗಿದೆ. ಅದರಲ್ಲೂ ಈವಾಗ ಮಕ್ಕಳ ಕಳ್ಳರ ಹಾವಳಿ ಹೆಚ್ಚಾಗಿದ್ದು, ಎಲ್ಲಿ ತಮ್ಮ ಮಕ್ಕಳು ಕಳ್ಳತನವಾಗುತ್ತವೆ ಎನ್ನುವ ಆತಂಕ ಎದುರಾಗಿದೆ. ಆದರೆ ಜಿಮ್ಸ್ ಆಡಳಿತ ಮಾತ್ರ ಇನ್ನೂ ಕುಂಭಕರ್ಣ ನಿದ್ದೆಯಲ್ಲಿದೆ. ಜಿಮ್ಸ್ (Jims hospital) ಆಡಳಿತ ವಿರುದ್ಧ ರೋಗಿಗಳ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ರಾತ್ರೋರಾತ್ರಿ ಆಸ್ಪತ್ರೆಗೆ ಕಳ್ಳರು ನುಗ್ಗಿ ಮೊಬೈಲ್, ಹಣ ದೋಚುತ್ತಿದ್ದಾರೆ ಅಂತ ಗೋಳಾಡುತ್ತಿದ್ದಾರೆ. ಇದು ಗದಗ (Gadag) ಜಿಮ್ಸ್ ಆಸ್ಪತ್ರೆಯ ರೋಗಿಗಳ ಗೋಳಾಟವಾಗಿದೆ. ಸದ್ಯ ಜಿಮ್ಸ್ ಆಸ್ಪತ್ರೆಯಲ್ಲಿ ಮೊಬೈಲ್, ಹಣ ಕಳ್ಳರ ಹಾವಳಿ ಹೆಚ್ಚಾಗಿದೆ. ಈ ಆಸ್ಪತ್ರೆಗೆ ಗದಗ, ಪಕ್ಕದ ಹಾವೇರಿ, ಬಾಗಲಕೋಟೆ, ಸೇರಿದಂತೆ ನಾನಾ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ನಿತ್ಯ ರೋಗಿಗಳು ಬರುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡು ಕಳ್ಳರು ಜಿಮ್ಸ್ ಆಸ್ಪತ್ರೆಗೆ ಲಗ್ಗೆ ಇಟ್ಟಿದ್ದಾರೆ ಎನ್ನುವ ಸಂಶಯ ವ್ಯಕ್ತವಾಗಿದೆ.
ಆಸ್ಪತ್ರೆಯ ಬಾಣಂತಿಯರ ವಾರ್ಡ್ ಹಾಗೂ ಜನರಲ್ ವಾರ್ಡ್ ಸೇರಿದಂತೆ ಆಸ್ಪತ್ರೆ ಆವರಣದಲ್ಲಿ ಮೊಬೈಲ್, ಹಣ ಕಳ್ಳತನವಾಗಿವೆ. ಅವು ಒಂದೆರೆಡು ಅಲ್ಲಾ ದಿನಕ್ಕೆ 10-15 ಕ್ಕೂ ಹೆಚ್ಚು ಮೊಬೈಲ್ ಕಳ್ಳತನ ಆಗುತ್ತಿವೆ ಅಂತ ರೋಗಿಗಳು ಆರೋಪಿಸಿದ್ದಾರೆ. ಹೀಗಾಗಿ ತಮ್ಮ ಸಂಬಂಧಿಕರ ಜೊತೆಗೆ ಮಾತನಾಡಲು ಆಗದೆ ಬಡ ರೋಗಿಗಳು ಹಾಗೂ ರೋಗಿಗಳ ಸಂಬಂಧಿಕರು ಪರದಾಟ ನಡೆಸುವಂತ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಈವಾಗ ಉತ್ತರ ಕರ್ನಾಟಕದಲ್ಲಿ ಮಕ್ಕಳ ಕಳ್ಳರ ಹಾವಳಿ ಕೂಡಾ ಹೆಚ್ಚಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಮಕ್ಕಳನ್ನು ಎಲ್ಲಿ ಕಳ್ಳತನ ಮಾಡಿಕೊಂಡು ಹೋಗುತ್ತಾರೆ ಎನ್ನುವ ಭಯ ಶುರುವಾಗಿದೆ. ಸಿಸಿ ಕ್ಯಾಮರಾಗಳ ಕಣ್ಗಾವಲು ಇದ್ದರು ಕೂಡಾ ಮೊಬೈಲ್ ಕಳ್ಳತನವಾದರು ಜಿಮ್ಸ್ ಆಸ್ಪತ್ರೆಯ ಅಧಿಕಾರಿಗಳು ಕ್ಯಾರೆ ಮಾಡುತ್ತಿಲ್ಲ ಎಂದು ರೋಗಿಗಳ ಸಂಬಂಧಿಕರಾದ ರೇಣುಕಾ, ಸ್ಥಳೀಯರಾದ ಎಚ್ ಎಸ್ ಸೋಂಪೂರ ಆಕ್ರೋಶ ಹೊರಹಾಕಿದ್ದಾರೆ.
ಇನ್ನೂ ಜಿಮ್ಸ್ ಆಸ್ಪತ್ರೆಯಲ್ಲಿ 130 ಕ್ಕೂ ಹೆಚ್ಚು ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಸಿಸಿ ಕ್ಯಾಮರಾ ಕಣ್ಗಾವಲು ಇದ್ದರು ಕೂಡಾ ಮೊಬೈಲ್ ಕಳ್ಳರು ತಮ್ಮ ಕರಾಮತ್ತು ತೋರಿಸಿ ಮೊಬೈಲ್ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಮೊಬೈಲ್, ಹಣ ಕಳ್ಳದುಕೊಂಡು ರೋಗಿಗಳು ಹಾಗೂ ರೊಗಿಗಳ ಸಂಬಂಧಿಕರು ಪರದಾಟ ನಡೆಸುವಂತಾ ಸ್ಥಿತಿ ನಿರ್ಮಾಣವಾಗಿದೆ. ಇಷ್ಟೊಂದು ಸಿಸಿ ಕ್ಯಾಮರಾಗಳ ಇದ್ದರು ಕೂಡಾ ಕಳ್ಳತನವಾದ ಮೊಬೈಲ್ ದೃಶ್ಯಗಳು ರೋಗಿಗಳಿಗೆ ಹಾಗೂ ಅವರ ಸಂಬಂಧಿಕರಿಗೆ ತೋರಿಸಲು ಜಿಮ್ಸ್ ಆಡಳಿತ ಹಿಂದೇಟು ಹಾಕುತ್ತಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಸಿಸಿ ಕ್ಯಾಮರಾ ದುರಸ್ತಿಯಲ್ಲಿವೆ ಅಥವಾ ಚನ್ನಾಗಿವೆ ಎನ್ನುವ ಪ್ರಶ್ನೇ ಕಾಡುತ್ತಿವೆ. ಜಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಹೀಗಾಗಿ ಯಾವಾಗ ಯಾರೂ ಬರುತ್ತಾರೆ ಏನಾಗುತ್ತೋ ಅನ್ನೋ ಆತಂಕ ರೋಗಿಗಳನ್ನು ಕಾಡುತ್ತಿದೆ.
ಬಾಣಂತಿಯರ ವಾರ್ಡ್ಗಳಲ್ಲಿ ತಾಯಿಂದಿರರರು ಸರಿಯಾಗಿ ನಿದ್ದೆ ಮಾಡದಂತೆ ಸ್ಥಿತಿ ನಿರ್ಮಾಣವಾಗಿದೆ. ಎಲ್ಲಿ ನಾವು ಮಲಗಿದಾಗಿ ಮಕ್ಕಳನ್ನು ಕಳ್ಳತನ ಮಾಡುತ್ತಾರೊ ಅನ್ನೋ ಆತಂಕ ಎದುರಾಗಿದೆ. ಪರಿಸ್ಥಿತಿ ಇಷ್ಟೊಂದು ಗಂಭೀರವಾಗಿದ್ದರು ಜಿಮ್ಸ್ ಆಡಳಿತ ಮಾತ್ರ ಡೋಂಟ್ ಕೇರ್ ಅಂತಿದೆ. ಇನ್ನೂ ಈ ಕುರಿತು ಜಿಮ್ಸ್ ಆಸ್ಪತ್ರೆಯ ಆಧಿಕ್ಷಕರಾದ ಡಾ: ರಾಜಶೇಖರ ಮ್ಯಾಗೇರಿ ಅವರನ್ನು ಹೇಳಿದರು, ಹೌದು ಆಸ್ಪತ್ರೆಯಲ್ಲಿ ಮೊಬೈಲ್ ಕಳ್ಳತನವಾಗಿವೆ. ಈಗಾಲೇ ಗದಗ ಗ್ರಾಮೀಣ ಪೊಲೀಸರ ಗಮನಕ್ಕೆ ತರಲಾಗಿದೆ. ಪೊಲೀಸರು ಎಲ್ಲವೂ ನೋಡಿಕೊಳ್ತಾರೆ ಅಂತ ಜಿಮ್ಸ್ ಆಸ್ಪತ್ರೆ ಮೆಡಿಕಲ್ ಸೂಪರಿಟೆಂಡೆಂಟ್ ಡಾ: ರಾಜಶೇಖರ ಮ್ಯಾಗೇರಿ ಹೇಳಿದ್ದಾರೆ.
ಜಿಮ್ಸ್ ಆಸ್ಪತ್ರೆಯಲ್ಲಿ ಹೇಳೋರೋ ಕೇಳೋರಿಲ್ಲದಂತಾಗಿದೆ. ಆಸ್ಪತ್ರೆಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಜಿಮ್ಸ್ ಆಡಳಿತ ಗಂಭೀರವಾಗಿಲ್ಲ. ಒಂದು ಕಡೇ ಮೊಬೈಲ್ ಕಳ್ಳರ ಹಾವಳಿ, ಮತ್ತೊಂದೆಡೆ ಮಕ್ಕಳ ಕಳ್ಳರ ವದಂತಿಯಿಂದ ಇಡೀ ಆಸ್ಪತ್ರೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಮೊಬೈಲ್ ಕಳೆದುಕೊಂಡು ರೋಗಿಗಳು ಹಾಗೂ ರೋಗಿಗಳ. ಸಂಬಂಧಿಕರು ಹೈರಾಣಾಗಿದ್ದಾರೆ. ಇನಾದರು ಜಿಮ್ಸ್ ಆಡಳಿತ ಮಂಡಳಿ ಇದನ್ನು ಗಂಭೀರವಾಗಿ ತೆಗೆದುಕೊಂಡು, ಮೊಬೈಲ್ ಕಳ್ಳರ ಹಾವಳಿಯನ್ನು ನಿಯಂತ್ರಣ ಮಾಡಬೇಕಾಗಿದೆ. ಆಗ ಮಾತ್ರ ಆಸ್ಪತ್ರೆಯಲ್ಲಿ ನೆಮ್ಮದಿಯಿಂದ ಟ್ರೇಟ್ ಮೆಂಟ್ ತೆಗೆದುಕೊಳ್ಳಲು ಅನುವು ಆಗುತ್ತೇ.
ವರದಿ: ಸಂಜೀವ ಪಾಂಡ್ರೆ ಟಿರ್ವಿ ಗದಗ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:43 am, Sat, 8 October 22