ಬೆಳೆ ಪರಿಹಾರ ವಿತರಣೆಯಲ್ಲಿ ಭಾರಿ ಗೋಲ್​ಮಾಲ್​: ಇಬ್ಬರು ವಂಚಕರು ಜೈಲುಪಾಲು

ಗದಗ: ನಂಬಿದ್ದ ಬೆಳೆ ಕೈಕೊಡ್ತು.. ಕನಸುಗಳೂ ನುಚ್ಚು ನೂರಾಯ್ತು.. ಮಾಡಿದ್ದ ಸಾಲವೂ ಹಾಗೆ ಉಳಿದುಬಿಡ್ತು. ಇಂತಹ ಟೈಮ್​ನಲ್ಲಿ ಸರ್ಕಾರ ಸಹಾಯ ಮಾಡುತ್ತೆ ಅಂತಾ ಇವರೆಲ್ಲಾ ಅಂದುಕೊಂಡಿದ್ರು. ಇವರ ಊಹೆಯಂತೆ ಸರ್ಕಾರವೂ ಸಹಾಯದನ ರಿಲೀಸ್ ಮಾಡಿತ್ತು. ಆದ್ರೆ, ಆ ಹಣ ಸೇರಿದ್ದು ಮಾತ್ರ ಬೇರೆಯವರಿಗೆ. ಪರಿಹಾರ ವಿತರಣೆಯಲ್ಲಿ ಭಾರಿ ಗೋಲ್​ಮಾಲ್! ಮುಂಡರಗಿ ತಾಲೂಕಿನಲ್ಲಿ ಬೆಳೆ ಪರಿಹಾರ ವಿತರಣೆಯಲ್ಲೂ ಭಾರಿ ಗೋಲ್​ಮಾಲ್ ಆಗಿದೆ. ಕಂದಾಯ ಇಲಾಖೆ ಸಿಬ್ಬಂದಿ ರೈತರ ಹೆಸರಿಗೆ ಬಂದ ಪರಿಹಾರ ಹಣವನ್ನ ಬೇರೆಯವರ ಹೆಸರಿಗೆ ಹಾಕಿ‌ ಲೂಟಿ […]

ಬೆಳೆ ಪರಿಹಾರ ವಿತರಣೆಯಲ್ಲಿ ಭಾರಿ ಗೋಲ್​ಮಾಲ್​: ಇಬ್ಬರು ವಂಚಕರು ಜೈಲುಪಾಲು
Follow us
ಸಾಧು ಶ್ರೀನಾಥ್​
|

Updated on: Jan 18, 2020 | 12:28 PM

ಗದಗ: ನಂಬಿದ್ದ ಬೆಳೆ ಕೈಕೊಡ್ತು.. ಕನಸುಗಳೂ ನುಚ್ಚು ನೂರಾಯ್ತು.. ಮಾಡಿದ್ದ ಸಾಲವೂ ಹಾಗೆ ಉಳಿದುಬಿಡ್ತು. ಇಂತಹ ಟೈಮ್​ನಲ್ಲಿ ಸರ್ಕಾರ ಸಹಾಯ ಮಾಡುತ್ತೆ ಅಂತಾ ಇವರೆಲ್ಲಾ ಅಂದುಕೊಂಡಿದ್ರು. ಇವರ ಊಹೆಯಂತೆ ಸರ್ಕಾರವೂ ಸಹಾಯದನ ರಿಲೀಸ್ ಮಾಡಿತ್ತು. ಆದ್ರೆ, ಆ ಹಣ ಸೇರಿದ್ದು ಮಾತ್ರ ಬೇರೆಯವರಿಗೆ.

ಪರಿಹಾರ ವಿತರಣೆಯಲ್ಲಿ ಭಾರಿ ಗೋಲ್​ಮಾಲ್! ಮುಂಡರಗಿ ತಾಲೂಕಿನಲ್ಲಿ ಬೆಳೆ ಪರಿಹಾರ ವಿತರಣೆಯಲ್ಲೂ ಭಾರಿ ಗೋಲ್​ಮಾಲ್ ಆಗಿದೆ. ಕಂದಾಯ ಇಲಾಖೆ ಸಿಬ್ಬಂದಿ ರೈತರ ಹೆಸರಿಗೆ ಬಂದ ಪರಿಹಾರ ಹಣವನ್ನ ಬೇರೆಯವರ ಹೆಸರಿಗೆ ಹಾಕಿ‌ ಲೂಟಿ ಮಾಡಿದ್ದಾರೆ. ಮಲ್ಲಿಕಾರ್ಜುನಪುರ ಗ್ರಾಮದ ಮಂಜುನಾಥ ಮಾಲಿಪಾಟೀಲ‌ ಅನ್ನೋನು ಮುಂಡರಗಿ ತಹಶೀಲ್ದಾರ್ ಕಾರ್ಯಾಲಯದಲ್ಲಿ‌ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡ್ತಿದ್ದಾನೆ. ಜೊತೆಗೆ ವೆಂಕಟಾಪುರ ಗ್ರಾಮದ ಗ್ರಾಮ‌ ಲೆಕ್ಕಾಧಿಕಾರಿ ಶಿವಕುಮಾರ ಹಲಗೇರಿ‌ ಜೊತೆಗೂಡಿ ಡಾಟಾ ಎಂಟ್ರಿ ಕೆಲಸವನ್ನೂ ಸಹ ಮಾಡ್ತಿದ್ದ.

ಹಿಂಗಾರು ಬೆಳೆ ಪರಿಹಾರದಲ್ಲಿ ವಂಚನೆ: ಡಾಟಾ ಎಂಟ್ರಿ ಕೆಲಸ ಮಾಡ್ತಿರುವಾಗ್ಲೇ, ಹೇಗೋ ಗ್ರಾಮ ಲೆಕ್ಕಾಧಿಕಾರಿಯ ಲಾಗಿನ್ ಮತ್ತು‌ ಪಾಸ್ ವರ್ಡ್ ಕದ್ದಿದ್ದಾನೆ. ಬಳಿಕ ಅದೇ ಗ್ರಾಮದ ತನ್ನ ಸ್ನೇಹಿತ ಮಲ್ಲಿಕಾರ್ಜುನ ಸಂಶಿ ಎಂಬಾತನ ಜೊತೆಗೂಡಿ ಮಾಡಬಾರದ ಕೆಲಸ ಮಾಡಿದ್ದಾನೆ. ಅಂದ್ರೆ, ಇಬ್ಬರು ಸೇರಿಕೊಂಡು 2018-19 ನೇ ಸಾಲಿನಲ್ಲಿ ವೆಂಕಟಾಪುರ ಗ್ರಾಮದ ಜಮೀನಿಗೆ ಸಂಬಂಧಿಸಿದ ಹಿಂಗಾರು ಬೆಳೆ ಪರಿಹಾರವನ್ನು ನುಂಗಿ ನೀರು ಕುಡಿದಿದ್ದಾರೆ. ಹಣವನ್ನ ಅರ್ಹ ಫಲಾನುಭವಿಗಳಿಗೆ ಹಾಕದೆ, ಜಮೀನೇ ಇಲ್ಲದಿರೋ ಖಾತೆಗಳಿಗೆ ಹಣ ಹಾಕಿದ್ದಾರಂತೆ.

ಇನ್ನು, ರೈತರಲ್ಲದ ಒಟ್ಟು 25 ಜನರ ಬ್ಯಾಂಕ್ ಖಾತೆಗಳಿಗೆ 5,95,330 ರೂಪಾಯಿ ಪರಿಹಾರದ‌ ಹಣವನ್ನು ಸಂದಾಯ ಮಾಡಿದ್ದಾರೆ. ಹೀಗಾಗಿ ರೈತರು ತಹಶೀಲ್ದಾರ್ ಬಳಿ ನಮ್ಮ ಹಣ ನಮಗೆ ಪೂರ್ತಿ ಸಿಗುವಂತೆ ಮಾಡಿ ಮನವಿ ಮಾಡ್ಕೊಂಡಿದ್ದಾರೆ. ಸದ್ಯ, ವಂಚನೆ ಆರೋಪದಡಿ ಮಲ್ಲಿಕಾರ್ಜುನ ಸಂಶಿ ಹಾಗೂ ಮಂಜುನಾಥ್ ವಿರುದ್ಧ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡ್ಲಾಗಿತ್ತು. ಹೀಗಾಗಿ ಪೊಲೀಸರು ವಂಚಕರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್