ಆ ಮೂರ್ನಾಲ್ಕು ಚಹಾ ಕಪ್​ಗಳು ನೀಡಿದ್ದವು ಕೊಲೆಗಾರರ ಬಗ್ಗೆ ಸುಳಿವು! ಆದರೆ ಮುಂದೇನಾಯ್ತು?

ಮನೆಯ ಬಾಡಿಗೆ ಹಣ ಕೇಳಿದ್ದಕ್ಕೆ ಮನೆ ಮಾಲಕಳನ್ನೇ ಕೊಂದ ಪಾಪಿಗಳು ಅಂದರ್ ಆಗಿದ್ದಾರೆ. ಬಾಡಿಗೆ ಹಣಕ್ಕಾಗಿ ಮನೆ ಜಪ್ತಿ ಮಾಡಿದ್ದ ಮಹಿಳೆಯನ್ನ ಕುತ್ತಿಗೆ ಸೀಳಿ ಕೊಂದಿದ್ದ ಪಾತಕಿಗಳಿಗೆ ಕೋಳ ಬಿದ್ದಿದೆ. ಆ ಟಿ ಗ್ಲಾಸ್ ನೀಡಿದ ಸುಳಿವು ಬೆನ್ನತ್ತಿ ಆರೋಪಿಗಳನ್ನ ಬಂಧಿಸಲಾಗಿದೆ.

ಆ ಮೂರ್ನಾಲ್ಕು ಚಹಾ ಕಪ್​ಗಳು ನೀಡಿದ್ದವು ಕೊಲೆಗಾರರ ಬಗ್ಗೆ ಸುಳಿವು! ಆದರೆ ಮುಂದೇನಾಯ್ತು?
ಆ ಮೂರ್ನಾಲ್ಕು ಚಹಾ ಕಪ್​ಗಳು ನೀಡಿದ್ದವು ಕೊಲೆಗಾರರ ಬಗ್ಗೆ ಸುಳಿವು!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Dec 31, 2022 | 1:01 PM

ಹಾಸನ ಜಿಲ್ಲೆಯನ್ನೆ (Hassan) ಬೆಚ್ಚಿಬೀಳಿಸಿದ್ದ ಹಾಡಹಗಲಿನಲ್ಲೇ ನಡೆದಿದ್ದ ಒಂಟಿ ಮಹಿಳೆಯ ಬರ್ಬರ ಹತ್ಯೆಯ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಮನೆ ಬಾಡಿಗೆಗೆ ಪಡೆದ ಮನೆ ಮಾಲೀಕರಿಂದ ಒಂದು ಲಕ್ಷ ರೂ ಸಾಲವನ್ನೂ ಪಡೆದು… ಬಾಡಿಗೆಯೂ ಇಲ್ಲಾ, ಬಡ್ಡಿ ಹಣವೂ ಇಲ್ಲಾ, ಅಸಲೂ ಇಲ್ಲಾ ಎಂದು ಆಟವಾಡಿಸುತ್ತಿದ್ದ ವಂಚಕರಿಗೆ ಬುದ್ದಿ ಕಲಿಸೋಕೆ ಅಂತಾ ಮನೆ ಮಾಲಕಿ ಬಾಡಿಗೆದಾರನ ಮನೆಯ ಪೀಠೋಪಕರಣ ಜಪ್ತಿ ಮಾಡಿದ್ದನ್ನೆ ನೆಪ ಮಾಡಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನ ಸ್ನೇಹಿತನ ಜೊತೆಗೆ ಬಂದು ಮಹಿಳೆಯ (Woman) ಕುತ್ತಿಗೆ ಸೀಳಿ ಬರ್ಬರವಾಗಿ ಕೊಂದು (murder) ಎಸ್ಕೇಪ್ ಆಗಿದ್ದ. ಪಾತಕಿಗಳನ್ನ ಪೊಲೀಸರು ಹೆಡೆಮುರಿ ಕಟ್ಟಿ ತಂದು ಕಂಬಿ ಹಿಂದೆ ಕಳಿಸಿದ್ದಾರೆ. ಮನೆಯೊಳಗಿದ್ದ ಮೂರು ಟಿ ಗ್ಲಾಸ್ ಕೊಟ್ಟ ಸುಳಿವಿನ ಬೆನ್ನು ಹತ್ತಿದ ಪೊಲೀಸರಿಗೆ ಆರೋಪಿಗಳು ತಗ್ಲಾಕಿಕೊಂಡಿದ್ದು ಒಂಟಿ ಮಹಿಳೆ ಹತ್ಯೆ ಮಾಡಿದ್ದ ಕಿರಾತಕರು ಅಂದರ್ (arrest) ಆಗಿದ್ದಾರೆ.

ಮನೆಯ ಬಾಡಿಗೆ ಹಣ ಕೇಳಿದ್ದಕ್ಕೆ ಮನೆ ಮಾಲಕಳನ್ನೇ ಕೊಂದ ಪಾಪಿಗಳು ಅಂದರ್ ಆಗಿದ್ದಾರೆ. ಬಾಡಿಗೆ ಹಣಕ್ಕಾಗಿ ಮನೆ ಜಪ್ತಿ ಮಾಡಿದ್ದ ಮಹಿಳೆಯನ್ನ ಕುತ್ತಿಗೆ ಸೀಳಿ ಕೊಂದಿದ್ದ ಪಾತಕಿಗಳಿಗೆ ಕೋಳ ಬಿದ್ದಿದೆ. ಜಿಲ್ಲೆಯನ್ನು ಬೆಚ್ಚಿಬೀಳಿಸಿದ್ದ ಒಂಟಿ ಮಹಿಳೆ ಹತ್ಯೆ ಕೇಸ್ ಅನ್ನು ಪೊಲೀಸರು ಬೇಧಿಸಿದ್ದಾರೆ. ಆ ಟಿ ಗ್ಲಾಸ್ ನೀಡಿದ ಸುಳಿವು ಬೆನ್ನತ್ತಿ ಆರೋಪಿಗಳನ್ನ ಬಂಧಿಸಲಾಗಿದೆ.

ಹೌದು ಡಿಸೆಂಬರ್ 24 ಬೆಳ್ಳಂಬೆಳಿಗ್ಗೆಯೇ ಇಡೀ ಜಿಲ್ಲೆಯೇ ಬೆಚ್ಚಿಬೀಳೋ ಘಟನೆಯೊಂದು ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಗಂಗೂರು ಗ್ರಾಮದಲ್ಲಿ ನಡೆದಿತ್ತು. ಪತಿ ಬೆಂಗಳೂರಿಗೆ ಹೋಗಿದ್ದರಿಂದ ಮನೆಯಲ್ಲಿ ಒಬ್ಬರೇ ಇದ್ದ ಗ್ರಾಮದ ಪಾರ್ವತಮ್ಮ(55) ಅವರನ್ನ ಮನೆಯೊಳಗೆ ಕುತ್ತಿಗೆ ಸೀಳಿ ಕೊಲೆ ಮಾಡಿದ್ದ ಹಂತಕರು ಎಸ್ಕೇಪ್ ಆಗಿದ್ದರು. ಘಟನೆಯ ವಿಚಾರ ತಿಳಿಯುತ್ತಲೇ ಸ್ಥಳಕ್ಕೆ ದೌಡಾಯಿಸಿ ಬಂದಿದ್ದ ಹೊಳೆನರಸೀಪುರ ಇನ್ಸಪೆಕ್ಟರ್ ಪ್ರದೀಪ್ ಕುಮಾರ್ ಮತ್ತು ತಂಡ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ರು.

ಶ್ವಾನದಳ, ಬೆರಳಚ್ಚು ತಜ್ಞರು, ಎಫ್.ಎಸ್.ಎಲ್ ತಜ್ಞರನ್ನ ಕರೆಸಿ ಪರಿಶೀಲನೆ ನಡೆಸಿದ್ದ ಎಸ್ಪಿ ಹರಿರಾಮ್ ಶಂಕರ್ ಒಂಟಿ ಮಹಿಳೆಯನ್ನ ಕೊಂದು ಮೈಮೇಲಿನ ಒಡವೆ ದೋಚಿದ್ದ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಆರೋಪಿಗಳ ಬಂಧನಕ್ಕೆ ಮೂರು ತಂಡ ರಚನೆ ಮಾಡಿದರು. ಮನೆಯೊಳಗೆ ರಕ್ತದ ಮಡುವಿನಲ್ಲಿ ಬರ್ಬರವಾಗಿ ಕೊಲೆಯಾಗಿದ್ದ ಮಹಿಳೆ ಪಾರ್ವತಮ್ಮ ಮೃತದೇಹದ ಪಕ್ಕವೇ ಇದ್ದ ಮೂರು ಖಾಲಿ ಗ್ಲಾಸ್ ಅದರ ಪಕ್ಕದಲ್ಲಿದ್ದ ಟಿ ತುಂಬಿದ್ದ ಮತ್ತೊಂದು ಗ್ಲಾಸ್ ಕೊಲೆಯ ಸುಳಿವು ನೀಡಿತ್ತು.

ಯಾವುದೇ ಬಲವಂತ ಇಲ್ಲದೆ ಹಂತಕರು ಮನೆಯೊಳಗೆ ಬಂದಿದ್ದಾರೆ. ಹಾಗೆ ಬಂದವರಿಗೆ ಮಹಿಳೆ ಚಹಾ ಮಾಡಿಕೊಡಲು ತಯಾರಿ ನಡೆಸುವ ವೇಳೆ ಹತ್ಯೆ ಆಗಿದೆ. ಅಲ್ಲಿಗೆ ಕೊಲೆಗಾರರು ಪರಿಚಿತರೇ ಅನ್ನೋದು ಖಾತ್ರಿಯಾಗುತ್ತಲೆ ಆರೋಪಿಗಳ ಬಂಧನಕ್ಕೆ ಪೊಲೀಸರು ತಂತ್ರ ಹೆಣೆದಿದ್ದರು. ಇದೀಗ ಅರಕಲಗೂಡು ಮೂಲದ ಹಂತಕ ಆರೋಪಿ ಶಫೀರ್, ಕೋಲಾರ ಜಿಲ್ಲೆ ಮಾಲೂರು ಮೂಲದ ಸೈಯ್ಯದ್ ನಯಾಝ್ ನನ್ನ ಬಂಧಿಸಿದ್ದಾರೆ.

ಹೊಳೆನರಸೀಪುರದಲ್ಲಿ ಪುಟ್ಟ ಮನೆಯೊಂದನ್ನ ಹೊಂದಿದ್ದ ಪಾರ್ವತಮ್ಮ ಅದನ್ನ ಶಫೀರ್ ಗೆ ಬಾಡಿಗೆಗೆ ನೀಡಿದ್ದರು. ಜೊತೆಗೆ ಕಷ್ಟ ಅಂತಾ ಹೇಳಿ ಇದೇ ಶಫೀರ್ ಬಡ್ಡಿಗೆಂದು ಒಂದು ಲಕ್ಷ ಹಣವನ್ನ ಪಾರ್ವತಮ್ಮನಿಂದ ಸಾಲ ಪಡೆದಿದ್ದ. ಆದ್ರೆ ಒಂದೂವರೆ ವರ್ಷದಿಂದ ಬಾಡಿಗೆಯನ್ನೂ ಕೊಡದ ಈ ಪಾಪಿ ಸಾಲ ಪಡೆದಿದ್ದ ಹಣವನ್ನಾಗಲಿ ಬಡ್ಡಿಯನ್ನಾಗಲಿ ಕೊಡದೆ ಸತಾಯಿಸುತ್ತಿದ್ದ.

ಡಿಸೆಂಬರ್ 23ಕ್ಕೆ ಅವನಿದ್ದ ಬಾಡಿಗೆ ಮನೆ ಬಳಿ ಹೋಗಿದ್ದ ಪಾರ್ವತಮ್ಮ ಆ ಮನೆಯಲ್ಲಿದ್ದ ಸೋಫಾ, ಚೇರ್, ಅಲ್ಮೆರಾ, ಟೇಬಲ್ ಎಲ್ಲವನ್ನೂ ಜಪ್ತಿ ಮಾಡಿ ತಂದು ತಮ್ಮ ಮನೆಯಲ್ಲಿಟ್ಟುಕೊಂಡಿದ್ದರು. ಇದರಿಂದ ಸಿಟ್ಟಾಗಿದ್ದ ಶಫೀರ್ ಆಕೆಯನ್ನ ಮುಗಿಸೋಕೆ ಪ್ಲಾನ್ ಮಾಡಿದ್ದ. ನಾಳೆ ನಿಮ್ಮ ಹಣದ ವಿಚಾರ ಮಾತಾಡೋಕೆ ಮನೆಗೆ ಬರ್ತೀನಿ ಎಂದು ಹೇಳಿ ಮನೆಗೆ ಬಂದು ಆಕೆ ಮನೆಗೆ ಬಂದವರಿಗೆ ಟೀ ರೆಡಿ ಮಾಡುವ ವೇಳೆ ಅವರದೇ ಮನೆಯ ಚಾಕು ಎತ್ತಿಕೊಂಡು ಕುತ್ತಿಗೆ ಕುಯ್ದು ಎಸ್ಕೇಪ್ ಆಗಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನ ಹೆಡೆಮುರಿ ಕಟ್ಟಿದ್ದಾರೆ.

ಹಳ್ಳಿಯಲ್ಲಿದ್ದರೂ ಸುಸಜ್ಜಿತ ಮನೆ ಕಟ್ಟಿಕೊಂಡು, ಜಮೀನು, ಹೈನುಗಾರಿಕೆ ಅಂತಾ ಅನುಕೂಲವಾಗಿರೋ ಪಾರ್ವತಮ್ಮ ಮತ್ತು ಕುಟುಂಬ ಆರ್ಥಿವಾಗಿ ಚೆನ್ನಾಗಿದೆ. ಇರೋ ಮೂರು ಮಕ್ಕಳು ಕೂಡ ಬೆಂಗಳೂರಿನಲ್ಲಿ ದೊಡ್ದ ಬೇಕರಿ ಮಾಡಿಕೊಂಡು ವ್ಯವಹಾರ ಮಾಡುತ್ತಾರೆ. ಊರಿನಲ್ಲಿ ಪಾರ್ವತಮ್ಮ ಹಾಗೂ ಆಕೆಯ ಪತಿ ಇರ್ತಾರೆ. ಪತಿ ರಾಜೇಗೌಡ ಡಿಸೆಂಬರ್ 23ರಂದು ಶಫೀರ್ ಮನೆ ಬಳಿ ಹೋಗಿ ಮನೆಯಲ್ಲಿದ್ದ ಪೀಠೋಪಕರಣಗಳನ್ನು ಜಪ್ತಿ ಮಾಡಿ ತಂದು ಮನೆಯಲ್ಲಿಟ್ಟು ನಂತರ ಬೆಂಗಳೂರಿನಲ್ಲಿರೋ ಮಕ್ಕಳಿಗೆ ದಿನಸಿ ವಸ್ತುಗಳನ್ನ ಕೊಡೋಕೆ ಬೆಂಗಳೂರಿಗೆ ಹೋಗಿದ್ದಾರೆ.

ಇತ್ತ… ಮನೆ ಜಪ್ತಿ ಮಾಡಿಕೊಂಡು ಹೋಗಿದ್ದ ವಿಚಾರ ತಿಳಿದ ಶಫೀರ್ ಪಾರ್ವತಮ್ಮನನ್ನ ಮುಗಿಸೋ ಸ್ಕೆಚ್ ಹಾಕಿದ್ದ. ನಾಳೆ ಮನೆಯ ಹತ್ರಾ ಬರಬೇಕು. ನಿಮ್ಮ ಹಣದ ವಿಚಾರವಾಗಿ ಮಾತನಾಡಬೇಕು ಎಂದಿದ್ದಾನೆ. ಪತಿ ರಾಜೇಗೌಡ ಊರಲ್ಲಿಇಲ್ಲಾ, ಅವರು ಬೆಂಗಳೂರಿಗೆ ಹೋಗಿದಾರೆ ಎಂದರೂ ಕೇಳದೆ ನಾಳೆಯೇ ಬಂದು ಮಾತನಾಡ್ತೀನಿ ಎಂದು ಮರು ದಿನ ಬೆಳಿಗ್ಗೆ 7 ಗಂಟೆಗೆ ಗಂಗೂರಿಗೆ ತನ್ನ ಸ್ನೇಹಿತ ಸೈಯ್ಯದ್ ನಯಾಜ್ ಜೊತೆಗೆ ಬೈಕ್ ನಲ್ಲಿ ಬಂದಿದ್ದಾನೆ.

Hassan woman landlord murder case solved 2 arrested

ಅಷ್ಟೊತ್ತಿಗೆ ಡೈರಿಗೆ ಹೋಗಿ ಹಾಲು ಹಾಕಿ ಬಂದಿದ್ದ ಪಾರ್ವತಮ್ಮ ಬಂದವರನ್ನ ಒಳಗೆ ಕರೆದು ಕೂಡಿಸಿ ಚಹಾ ಮಾಡಿ ಕೊಡ್ತೀನಿ ಎಂದು ಅಡುಗೆ ಮನೆಗೆ ಹೋಗಿದ್ದಾರೆ. ಕೊಲೆ ಮಾಡೋಕೆ ಅಂತಲೆ ಮೊದಲೇ ಪ್ಲಾನ್ ಮಾಡಿಕೊಂಡು ಬಂದಿದ್ದ ಹಂತಕರು, ಆಕೆ ಅತ್ತ ಹೋಗುತ್ತಲೆ ಹಿಂಬಾಲಿಸಿ ಹೋಗಿ ಅಲ್ಲೇ ಇದ್ದ ಚಾಕುವಿನಿಂದ ಕುತ್ತಿಗೆ ಕುಯ್ದಿದ್ದಾರೆ.

ನಂತರ ಆಕೆ ಮೃತಪಡುತ್ತಲೆ ಮೈಮೇಲಿದ್ದ 48 ಗ್ರಾಂ ಚಿನ್ನದ ಸರ, ಕಿವಿ ಓಲೆಯನ್ನ ಕಿತ್ತುಕೊಂಡು ಎಸ್ಕೇಪ್ ಆಗಿದ್ದರು. ಕೊಲೆ ಮಾಡಿ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನ ಬಂಧಿಸಿದ ಪೊಲೀಸರು ಹಂತಕರಿಂದ ಸತ್ಯ ಕಕ್ಕಿಸೋ ಜೊತೆಗೆ ಮಹಿಳೆಯಿಂದ ದರೋಡೆ ಮಾಡಿದ್ದ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ಕೊಲೆ ಕೇಸ್ ದಾಖಲಿಸಿಕೊಂಡು ಹೊಳೆನರಸೀಪುರ ಗ್ರಾಮಾಂತರ ಪೊಲೀಸರು ತನಿಖೆಗಿಳಿದಿದ್ದರು.

ಬಾಡಿಗೆ ಹಣ ಮತ್ತು ಮಾಡಿದ್ದ ಸಾಲದ ಹಣ ವಾಪಸ್ ಕೇಳಿ, ಅದನ್ನ ಕೊಡದಿದ್ದಾಗ ಮನೆ ಜಪ್ತಿ ಮಾಡಿದ್ರು ಎನ್ನೋ ಒಂದೇ ಒಂದು ಕಾರಣಕ್ಕೆ ಆಕೆಯನ್ನ ಕೊಲೆ ಮಾಡೋಕೆ ಪೂರ್ವನಿಯೋಜಿತರಾಗಿ ಬಂದಿದ್ದ ಹಂತಕರು ಕೊಲೆ ಮಾಡಿ ಎಸ್ಕೇಪ್ ಆಗಿದ್ದರು. ಆದ್ರೆ ಪೊಲೀಸರ ಮಿಂಚಿನ ಕಾರ್ಯಾಚರಣೆಯಿಂದ ಆರೋಪಿಗಳು ಅಂದರ್ ಆಗುವಂತೆ ಆಗಿದೆ ಎಂದು ಹಾಸನ ಎಸ್ಪಿ ಹರಿರಾಮ್ ಶಂಕರ್ ಹೇಳಿದ್ದಾರೆ.

ಒಟ್ನಲ್ಲಿ ತಮ್ಮ ಮನೆಯನ್ನ ಬಾಡಿಗೆ ಕೊಟ್ಟು, ಕಷ್ಟ ಎಂದವರಿಗೆ ಕರಗಿ ಲಕ್ಷ ಲಕ್ಷ ಹಣವನ್ನ ಸಾಲವಾಗಿಯೂ ಕೊಟ್ಟು ನೆರವಾಗಿದ್ದ ಮಹಿಳೆಮೇಲೆಯೇ ಜಿದ್ದು ಸಾಧಿಸಿದ್ದ ಕ್ರೂರಿಗಳು, ನೀನಿದ್ದರಲ್ಲವೇ ಹಣ ಕೇಳ್ತೀಯಾ ಅಂತಾ ಆಕೆಯನ್ನೇ ಬರ್ಬರವಾಗಿ ಕೊಂದು ಇದೀಗ ತಾವೂ ಜೈಲು ಸೇರಿದ್ದಾರೆ, ಹಾಡ ಹಗಲಿನಲ್ಲಿ ನಡೆದಿದ್ದ ಒಂಟಿ ಮಹಿಳೆಯ ಹತ್ಯೆ ಕೇಸ್ ಬೇಧಿಸಿದ ಪೊಲೀಸರು ಹತ್ಯೆ ಹಿಂದಿನ ಸತ್ಯಾಂಶವನ್ನು ಬಯಲು ಮಾಡಿದ್ದಾರೆ.

ವರದಿ: ಮಂಜುನಾಥ್ ಕೆ.ಬಿ, ಟಿವಿ 9, ಹಾಸನ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ