ಹಾಸನ ಜಿಲ್ಲೆಯಲ್ಲಿ ದಂಪತಿ ಮೇಲೆ ಮಾಜಿ ಯೋಧನಿಂದ ಮಾರಣಾಂತಿಕ ಹಲ್ಲೆ

ವಿನೋದಮ್ಮ ಮತ್ತು ರವಿ ಮಾಜಿ ಯೋಧನ ಮನೆಗೆ ಹೋಗುವ ದಾರಿಯಲ್ಲಿ ದಾರಿಯಲ್ಲಿ ಜಾನುವಾರು ಕಟ್ಟುತ್ತಿದ್ದರು. ಇದಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಗಲಾಟೆಯಾಗಿ ಪೊಲೀಸ್ ಕೇಸ್ ಕೂಡ ಆಗಿತ್ತು.

  • TV9 Web Team
  • Published On - 22:07 PM, 11 Jan 2021
ಹಾಸನ ಜಿಲ್ಲೆಯಲ್ಲಿ ದಂಪತಿ ಮೇಲೆ ಮಾಜಿ ಯೋಧನಿಂದ ಮಾರಣಾಂತಿಕ ಹಲ್ಲೆ
ಪ್ರಾತಿನಿಧಿಕ ಚಿತ್ರ

ಹಾಸನ: ಚನ್ನರಾಯಪಟ್ಟಣ ತಾಲ್ಲೂಕಿನ ಹಿರಿಸಾವೆ ಗ್ರಾಮದ ನಿವೃತ್ತ ಯೋಧ ಚಂದ್ರಮೂರ್ತಿ ಎಂಬಾತ ರಸ್ತೆಯಲ್ಲಿ ಜಾನುವಾರು ಕಟ್ಟುವ ವಿಚಾರದಲ್ಲಿ ತನ್ನ ಓಣಿಯಲ್ಲೇ ವಾಸಿಸುವ ವಿನೋದಮ್ಮ ಹಾಗೂ ರವಿ ದಂಪತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

ವಿನೋದಮ್ಮ ಮತ್ತು ರವಿ ಮಾಜಿ ಯೋಧನ ಮನೆಗೆ ಹೋಗುವ ದಾರಿಯಲ್ಲಿ ದಾರಿಯಲ್ಲಿ ಜಾನುವಾರು ಕಟ್ಟುತ್ತಿದ್ದರು. ಇದಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಗಲಾಟೆಯಾಗಿ ಪೊಲೀಸ್ ಕೇಸ್ ಕೂಡ ಆಗಿತ್ತು. ಅಷ್ಟಾಗಿಯೂ ದಂಪತಿಗಳು ದನಕರುಗಳ್ನು ಕಟ್ಟುವುದು ಮುಂದುವರಿಸಿದಾಗ ರೊಚ್ಚಿಗೆದ್ದ ಚಂದ್ರಮೂರ್ತಿ ಇಂದು ಅವರ ಮೇಲೆ ಆಯುಧವೊಂದರಿಂದ ಹಲ್ಲೆ ನಡೆಸಿದ್ದಾನೆ. ಹಿರಿಸಾವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಚಂದ್ರಮೂರ್ತಿ ಹಾಗು ಆತನ ಪತ್ನಿ ಲತಾದೇವಿಯನ್ನು ಬಂಧಿಸಿದ್ದಾರೆ.

ತೀವ್ರವಾಗಿ ಗಾಯಗೊಂಡಿರುವ ವಿನೋದಮ್ಮ ಮತ್ತು ರವಿಯನ್ನು ಚನ್ನರಾಯಪಟ್ಟಣದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.