Haveri News: ಹಾವೇರಿ ಸಾಹಿತ್ಯ ಸಮ್ಮೇಳನ; ಪಾರ್ಕಿಂಗ್, ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಜಿಲ್ಲಾ ಟ್ರಾಫಿಕ್ ಪೋಲಿಸರಿಂದ ವಿನೂತನ ಪ್ರಯೋಗ
ಜನವರಿ 6, 7 ಹಾಗೂ 8 ರಂದು ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.
ಹಾವೇರಿ: ಜನವರಿ 6, 7 ಹಾಗೂ 8 ರಂದು ದಾಸಶ್ರೇಷ್ಠ ಕನಕದಾಸರ ನಾಡು ಹಾವೇರಿಯಲ್ಲಿ ಸಾಮರಸ್ಯದ ಭಾವ ಕನ್ನಡದ ಜೀವ ಎಂಬ ಧ್ಯೆಯದೊಂದಿಗೆ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ (Akhila Bharata sahitya sammelana) ನಡೆಯಲಿದೆ. ಈ ಸಮ್ಮೇಳನಕ್ಕೆ ಬರುವ ವಾಹನ ನಿಲುಗಡೆಗಾಗಿ ಜಿಲ್ಲಾ ಸಂಚಾರಿ ಪೋಲಿಸ್ ವಿನೂತನ ಪ್ರಯೋಗ ಮಾಡಿದೆ. ಹೌದು ಹಾವೇರಿ (Haveri) ಜಿಲ್ಲಾ ಸಂಚಾರಿ ಪೋಲಿಸರು ವಾಹನ ನಿಲುಗಡೆ ಮತ್ತು ಸಂಚಾರ ನಿಯಂತ್ರಣಕ್ಕೆ ಕ್ಯು ಆರ್ ಕೋಡ್ ಜೊತೆಗೆ ಸಂಚಾರದ ನೀಲಿನಕ್ಷೆ ಬಿಡುಗಡೆ ಮಾಡಿದ್ದಾರೆ.
ಸಮ್ಮೇಳನಕ್ಕೆ ಬರುವವರಿಗಾಗಿ ಸುಲಲಿತ ಸಂಚಾರ ವ್ಯವಸ್ಥೆಗಾಗಿ ಜಿಲ್ಲಾ ಸಂಚಾರ ಪೋಲಿಸರು ಕ್ಯು ಆರ್ ಕೋಡ್ ಜೊತೆಗೆ ಸಂಚಾರದ ನೀಲಿನಕ್ಷೆ ಬಿಡುಗಡೆ ಮಾಡಿದ್ದು, ಸಂಚಾರ ಮಾರ್ಗಸೂಚಿಯನ್ನು ಗುಗಲ್ ಮ್ಯಾಪ್ನಲ್ಲಿ ಅತಿ ಸರಳವಾಗಿ ತಿಳಿಯಬಹುದಾಗಿದೆ. ಇದರಿಂದ ಜನರು ಟ್ರಾಫಿಕ್ ಜ್ಯಾಮ್ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ.
ಇದನ್ನೂ ಓದಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 1 ದಿನದ ವೇತನ ನೀಡುವಂತೆ ಜಿಲ್ಲಾ ಪೊಲೀಸ್ ಇಲಾಖೆಗೆ ಮಹೇಶ್ ಜೋಶಿ ಪತ್ರ
ಸಂಚಾರ ಮಾರ್ಗಸೂಚಿ
- ಹಾವೇರಿ ನಗರದ ಬಸ್ ನಿಲ್ದಾಣದಿಂದ ಜಿಲ್ಲಾಡಳಿತ ಭವನ, ಸಮ್ಮೇಳನದ ಸ್ಥಳಕ್ಕೆ ಬಸ್ ವ್ಯವಸ್ಥೆ
- ಹುಬ್ಬಳ್ಳಿ ಮಾರ್ಗದಿಂದ ಬರುವ ವಿವಿಐಪಿಗಳ ಕಾರ್ ಹುಬ್ಬಳ್ಳಿ ಬೈಪಾಸ್ನಲ್ಲಿಯೆ ಪಾರ್ಕಿಂಗ್ ವ್ಯವಸ್ಥೆ
- ಕೆ.ಎಲ್.ಇ ಶಾಲೆಯ ಆವರಣದಲ್ಲಿ ಗಣ್ಯರಿಗಾಗಿ ಹೆಲಿಪ್ಯಾಡ್
- ಹಾನಗಲ್ ರಸ್ಥೆಯ ಮಾರ್ಗದಿಂದ ದೈನಂದಿನ ಲಘು ವಾಹನ ಮತ್ತು ಮೋಟಾರಗಳ ಸಂಚಾರ.
- ಸಮ್ಮೇಳನದ ಸ್ಥಳದ ಸುತ್ತಲು ಕೆ.ಎಸ್.ಆರ್.ಟಿ.ಸಿ ಬಸ್ಗಳ ಸಂಚಾರ ಹಾಗೂ ನಿಲುಗಡೆ.
- ಹುಬ್ಬಳ್ಳಿ ಮಾರ್ಗದಿಂದ ಬರುವ ವಾಹನಗಳನ್ನು ಹಾನಗಲ್ ಬೈಪಾಸ್ನಿಂದ ಹಾವೇರಿ ನಗರಕ್ಕೆ ಬರಲು ಪರ್ಯಾಯ ಮಾರ್ಗ ಸೂಚಿಸಲಾಗಿದೆ.
- ದಾವಣಗೆರೆಯಿಂದ ಬರುವ ವಾಹನ ಹಾಗೂ ಬಸ್ಗಳಿಗೆ ಹಾನಗಲ್ ಬೈ ಪಾಸ್ನಿಂದ ತೆರಳಲು ಮಾರ್ಗ ಸೂಚಿಸಲಾಗಿದೆ. ಇವೆಲ್ಲವು ಮೊಬೈಲ್ನಲ್ಲಿ ಗೂಗಲ್ ಮ್ಯಾಪ್ನಲ್ಲಿಯೇ ಲಭ್ಯವಾಗುವಂತೆ ಹಾವೇರಿ ಸಂಚಾಇ ಪೋಲಿಸರು ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:32 pm, Wed, 28 December 22