ಸರ್ಕಾರದ ಹೊಸ ಕಾಯ್ದೆಗಳು ಕೆಲವೊಮ್ಮೆ ಜನರನ್ನ ಪರದಾಡುವಂತೆ ಮಾಡಿಬಿಡುತ್ತದೆ, ಇಲ್ಲಿದೆ ನಿದರ್ಶನ!
ಹೌದು ಸರ್ಕಾರ ಒಮ್ಮೊಮ್ಮೆ ತರುವ ಹೊಸ ಕಾಯ್ದೆಗಳು ಸಾಮಾನ್ಯ ಜನರನ್ನ ಪರದಾಡುವಂತೆ ಮಾಡುವುದು ಮಾತ್ರ ಸುಳ್ಳಲ್ಲಾ ನೋಡಿ. ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದಲ್ಲಿ ಜನರು ತಮ್ಮ ಸೊತ್ತನ್ನು ತಾವು ಮಾರಲು ಪರದಾಡುವಂತಾ ಸ್ಥಿತಿ ನಿರ್ಮಾಣವಾಗಿದೆ. ಜೊತೆಗೆ ಸರ್ಕಾರದ ಯಾವುದೇ ಸವಲತ್ತುಗಳು ಸಿಗದೆ ಪರದಾಡುತ್ತಿದ್ದಾರೆ.
ಆ ಗ್ರಾಮದಲ್ಲಿ ಇರುವವರು ಬಹುತೇಕರು ರೈತಾಪಿ ವರ್ಗದ ಜನರು. ಗ್ರಾಮಕ್ಕೆ ತಕ್ಕಮಟ್ಟಿಗೆ ಸರ್ಕಾರದ ಮೂಲಭೂತ ಸೌಕರ್ಯಗಳು ಸಿಕ್ಕಿವೆ. ಆದರೆ ಯಾವುದೇ ಬ್ಯಾಂಕ್ ನಲ್ಲಿ ಅವರಿಗೆ ಸಾಲ ಸಿಗುತ್ತಿಲ್ಲಾ. ಜೊತೆಗೆ ಯಾರೂ ತಮ್ಮ ತಮ್ಮ ನಿವೇಶನ ಅಥವಾ ಮನೆಗಳನ್ನ ಸಂಕಷ್ಟ ಅಂತಾ ಮಾರಲು ಹೋದರೆ ತೆಗೆದು ಕೊಳ್ಳುತ್ತಿಲ್ಲ. ಅರೇ… ಯಾಕೆ? ಅಂತೀರಾ ಈ ಸ್ಟೋರಿ ನೊಡಿ.
ಹೌದು ಸರ್ಕಾರ ಒಮ್ಮೊಮ್ಮೆ ತರುವ ಹೊಸ ಕಾಯ್ದೆಗಳು ಸಾಮಾನ್ಯ ಜನರನ್ನ ಪರದಾಡುವಂತೆ ಮಾಡುವುದು ಮಾತ್ರ ಸುಳ್ಳಲ್ಲಾ ನೋಡಿ. ಇದಕ್ಕೆ ನಿದರ್ಶನ ಅನ್ನುವಂತಿದೆ 2013 ರಲ್ಲಿ ಗ್ರಾಮೀಣ ಭಾಗದ ಮನೆ, ಖಾಲಿ ಜಾಗಕ್ಕೆ ಅನ್ವಯವಾಗುವಂತಹ ಇ ಸೊತ್ತು ಉತಾರದ (ಪಾಣಿ) ಸ್ಥಿತಿ. ಈ ಉತಾರ ನೀಡಲು ಭೂ ನ್ಯಾಯ ಮಂಡಳಿಯಲ್ಲಿ ಭೂಮಿ ಪರಿವರ್ತನೆ ಯಾಗಿರಬೇಕು.
Also Read: ಚಾಮರಾಜನಗರ – ಕುದೇರು ಪೊಲೀಸ್ ಠಾಣೆಗೆ ರಾಜ್ಯದಲ್ಲೇ ನಂಬರ್ ಓನ್ ಸ್ಥಾನ
ಆದರೆ ಗ್ರಾಮೀಣ ಭಾಗದಲ್ಲಿ ಗ್ರಾಮ ಬೆಳದಂತೆ ಜನ ತಮ್ಮ ಜಾಗದಲ್ಲಿ ಮನೆ ನಿರ್ಮಿಸುತ್ತಾ ಹೋಗುತ್ತಾರೆ. ಅದೇ ರೀತಿ ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದಲ್ಲಿ ನೂರಾರು ಕುಟುಂಬಗಳು 1972 ರಿಂದ ಆ ಗ್ರಾಮದಲ್ಲಿ ವಾಸವಾಗಿದ್ದಾರೆ. ಆದರೆ ಇ ಸೊತ್ತು ಉತಾರ ನೀಡಲು ಪಿಡಿಓ ಕಾನೂನು ನೆಪ ಹೇಳಿ ಜಾರಿಕೊಳ್ಳುತ್ತಿದ್ದಾರೆ ಇದು ಆ ಗ್ರಾಮದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಇದೇ ವಿಚಾರವಾಗಿ ಹತ್ತರು ಬಾರಿ ಪ್ರತಿಭಟನೆ ಮಾಡಿದ್ದಾರೆ. ಗ್ರಾಮ ಪಂಚಾಯತಿಗೆ ಬೀಗ ಹಾಕಿದ್ದಾರೆ. ಆದರು ಸಹ ಪಿಡಿಓ ನಾನು ಕೊಡಲು ಬರುವುದಿಲ್ಲಾ ಎಂದು ಹೇಳಿದ್ದಾರೆ. ಇದರಿಂದ ಆ ಗ್ರಾಮದ ಜನರು ಮೇಲಧಿಕಾರಿಗಳ ಗಮನಕ್ಕೆ ತಂದು ತಮಗೆ ಆಗುತ್ತಿರುವ ಸಮಸ್ಯೆಯ ಬಗ್ಗೆ ಹೇಳಿಕೊಂಡಿದ್ದಾರೆ. ಇದಕ್ಕೆ ಸ್ಪಂದಿಸಿರುವ ಎಇಓ ಭರತ್ ಹೆಗಡೆ ಕನಕಾಪುರ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಬಗೆ ಹರಿಸಲು ಮುಂದಾಗಿದ್ದಾರೆ.
ವರದಿ: ಅಣ್ಣಪ್ಪ ಬಾರ್ಕಿ, ಟಿವಿ 9, ಹಾವೇರಿ