ಕಾಲಭೈರವೇಶ್ವರ ಜಾತ್ರೆಯಲ್ಲಿ ಜಗಜಟ್ಟಿಗಳ ಕಾದಾಟ: ಅಖಾಡಕ್ಕಿಳಿದು ತೊಡೆತಟ್ಟಿದ ಫೈಲ್ವಾನ್​ಗಳು

ಕಾಲಭೈರವೇಶ್ವರ ಜಾತ್ರೆಯಲ್ಲಿ ಜಗಜಟ್ಟಿಗಳ ಕಾದಾಟ: ಅಖಾಡಕ್ಕಿಳಿದು ತೊಡೆತಟ್ಟಿದ ಫೈಲ್ವಾನ್​ಗಳು

ಹಾವೇರಿ: ದೇಶಿ ಕ್ರೀಡೆಗಳ ಮುಂದೆ ಯಾವ ಗೇಮ್​ಗಳೂ ಖದರ್ ಕೊಡಲ್ಲ. ಅದ್ರಲ್ಲೂ ಕಟ್ಟುಮಸ್ತಾದ ಕಲಿಗಳು ತೊಡೆ ತಟ್ಟಿ ಅಖಾಡಕ್ಕಿಳಿದ್ರಂತೂ ಹೈವೋಲ್ಟೇಜ್ ಸ್ಪರ್ಧೆ ನಡೆಯುತ್ತೆ. ಸದ್ಯ ಹಾವೇರಿಯಲ್ಲಿ ನಡೆದ ಕುಸ್ತಿ ಕೂಡ ಹಾಗೇ ಕಿಕ್ ಕೊಟ್ಟಿತ್ತು. ರಟ್ಟೀಹಳ್ಳಿ ತಾಲೂಕಿನ ಅಂಗರಗಟ್ಟಿ ಗ್ರಾಮದಲ್ಲಿ ಕಾಲಭೈರವೇಶ್ವರ ಜಾತ್ರೆ ಪ್ರಯುಕ್ತ ಮೂರು ದಿನಗಳ ಕುಸ್ತಿ ಪಂದ್ಯ ಆಯೋಜಿಸಲಾಗಿತ್ತು. ಮೊದಲೆರಡು ದಿನ ಪುಟ್ಟ ಪುಟ್ಟ ಮಕ್ಕಳು ಖದರ್ ತೋರಿಸಿದ್ರೆ ಮೂರನೇ ದಿನ ಈ ಘಟಾನುಘಟಿಗಳು ಅಖಾಡಕ್ಕಿಳಿದು ಸೆಣಸಾಡಿದ್ರು. ನಾನಾ ನೀನಾ ನೋಡೇಬಿಡೋಣ ಅನ್ನೋ ರೇಂಜ್​ಗೆ […]

sadhu srinath

|

Jan 14, 2020 | 11:04 AM

ಹಾವೇರಿ: ದೇಶಿ ಕ್ರೀಡೆಗಳ ಮುಂದೆ ಯಾವ ಗೇಮ್​ಗಳೂ ಖದರ್ ಕೊಡಲ್ಲ. ಅದ್ರಲ್ಲೂ ಕಟ್ಟುಮಸ್ತಾದ ಕಲಿಗಳು ತೊಡೆ ತಟ್ಟಿ ಅಖಾಡಕ್ಕಿಳಿದ್ರಂತೂ ಹೈವೋಲ್ಟೇಜ್ ಸ್ಪರ್ಧೆ ನಡೆಯುತ್ತೆ. ಸದ್ಯ ಹಾವೇರಿಯಲ್ಲಿ ನಡೆದ ಕುಸ್ತಿ ಕೂಡ ಹಾಗೇ ಕಿಕ್ ಕೊಟ್ಟಿತ್ತು.

ರಟ್ಟೀಹಳ್ಳಿ ತಾಲೂಕಿನ ಅಂಗರಗಟ್ಟಿ ಗ್ರಾಮದಲ್ಲಿ ಕಾಲಭೈರವೇಶ್ವರ ಜಾತ್ರೆ ಪ್ರಯುಕ್ತ ಮೂರು ದಿನಗಳ ಕುಸ್ತಿ ಪಂದ್ಯ ಆಯೋಜಿಸಲಾಗಿತ್ತು. ಮೊದಲೆರಡು ದಿನ ಪುಟ್ಟ ಪುಟ್ಟ ಮಕ್ಕಳು ಖದರ್ ತೋರಿಸಿದ್ರೆ ಮೂರನೇ ದಿನ ಈ ಘಟಾನುಘಟಿಗಳು ಅಖಾಡಕ್ಕಿಳಿದು ಸೆಣಸಾಡಿದ್ರು. ನಾನಾ ನೀನಾ ನೋಡೇಬಿಡೋಣ ಅನ್ನೋ ರೇಂಜ್​ಗೆ ಪರಾಕ್ರಮ ತೋರಿದ್ರು.

ಮದಗಜಗಳಂತೆ ರಣರಂಗದಲ್ಲಿ ಕಾದಾಟ: ಕುಸ್ತಿ ಅಂದ್ರೆ ಮೊದ್ಲೇ ತಾಕತ್ತಿನ ಸ್ಪರ್ಧೆ. ಹೀಗಾಗೇ ಗೆದ್ದವ್ರಿಗಾಗಿ ಬೆಳ್ಳಿ ಗದ್ದೆ, ಬೆಳ್ಳಿ ಕಡಗ, ಬಂಗಾರದ ಆಭರಣ, ನಗದು ಬಹುಮಾನ ಇಡ್ಲಾಗಿತ್ತು. ಇಂಥಾ ಚಾನ್ಸ್​ಗಾಗೇ ಕಾಯ್ತಿದ್ದ ಸಮರವೀರರು ಬೆಳಗಾವಿ, ಧಾರವಾಡ, ವಿಜಯಪುರ, ಕಲಬುರಗಿ, ಗದಗ, ಬಾಗಲಕೋಟೆ, ಶಿವಮೊಗ್ಗ ಸೇರಿದಂತೆ ರಾಜ್ಯದ ನಾನಾಕಡೆಗಳಿಂದ ಎಂಟ್ರಿ ಕೊಟ್ಟಿದ್ರು. ಮದಗಜಗಳಂತೆ ರಣರಂಗದಲ್ಲಿ ಕಾದಾಟ ನಡೆಸಿದ್ರು. ಇತ್ತ ಗೆದ್ದವ್ರನ್ನ ಮೈದಾನದಲ್ಲಿ ಮೆರವಣಿಗೆ ಮಾಡ್ತಿದ್ರೆ ಉಳಿದ ಸ್ಪರ್ಧಿಗಳೂ ಹುಮ್ಮಸ್ಸಿನಿಂದ ಫೀಲ್ಡಿಗಿಳೀತಿದ್ರು. ಶಿಳ್ಳೆ, ಕೇಕೆಗಳ ನಡುವೆ ಗೆಲುವಿಗಾಗಿ ಪಟ್ಟು ಹಾಕ್ತಿದ್ರು.

ಕುಸ್ತಿಯಲ್ಲಿರೋ ಖದರೇ ಹಾಗೇ. ಅಲ್ಲೇನಿದ್ರೂ ತಾಕತ್ತಿದ್ದವ್ನಿಗಷ್ಟೇ ಗೆಲುವಿನ ಪಟ್ಟ. ಈ ಪಟ್ಟಕ್ಕಾಗಿ ಪೈಲ್ವಾನರು ಕೂಡ ಅಷ್ಟೇ ಖಡಕ್ಕಾಗಿ ದೇಹ ದಂಡಿಸಿರ್ತಾರೆ. ಆ ದಂಡನೇಯೇ ಇವ್ರಿಗೆ ಸೆಣೆಸಾಡೋ ಶಕ್ತಿಯನ್ನೂ ನೀಡಿದೆ.

Follow us on

Related Stories

Most Read Stories

Click on your DTH Provider to Add TV9 Kannada