AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದಲ್ಲಿ ಇನ್ನು ಎರಡು ತಿಂಗಳು ಭಾರೀ‌ ಮಳೆಯಾಗಲಿದೆ: ಹವಾಮಾನ ಇಲಾಖೆ ಮುನ್ಸುಚನೆ

ರಾಜ್ಯದಲ್ಲಿ ನಿರಂತರ ಮಳೆಯಿಂದ ಜನರು ರೋಸಿ ಹೋಗಿದ್ದು, ಇನ್ನು ಎರಡು ತಿಂಗಳು ಭಾರೀ‌ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸುಚನೆ ನೀಡಿದೆ.

ರಾಜ್ಯದಲ್ಲಿ ಇನ್ನು ಎರಡು ತಿಂಗಳು ಭಾರೀ‌ ಮಳೆಯಾಗಲಿದೆ: ಹವಾಮಾನ ಇಲಾಖೆ ಮುನ್ಸುಚನೆ
ಮಳೆ
TV9 Web
| Edited By: |

Updated on: Sep 13, 2022 | 7:30 AM

Share

ಬೆಂಗಳೂರು: ರಾಜ್ಯದಲ್ಲಿ ನಿರಂತರ ಮಳೆಯಿಂದ (Rain) ಜನರು ರೋಸಿ ಹೋಗಿದ್ದು, ಇನ್ನು ಎರಡು ತಿಂಗಳು ಭಾರೀ‌ ಮಳೆಯಾಗಲಿದೆ ಎಂದು ಹವಮಾನ ಇಲಾಖೆ (Meteorological Department) ಮುನ್ಸುಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಮೇಲ್ಮೈ ಸುಳಿಗಾಳಿ ಬೀಸುತ್ತಿದ್ದು, ಇದರ ತೀವ್ರತೆ ಹೆಚ್ಚಾಗಿದೆ. ಹೀಗಾಗಿ ಈ ವರ್ಷ ದಾಖಾಲೆಯ ಮಳೆಯಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ 221 ಮಿಮೀ ಮಳೆಯ ನಿರೀಕ್ಷೆ ಇತ್ತು, ಆದರೆ ಇಂದಿನವರೆಗೂ 271 ಮಿಮೀ ಮಳೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಮಳೆಯಾಗುವ ನಿರೀಕ್ಷೆ ಇದೆ.

ಹವಮಾನ ಇಲಾಖೆ ಪ್ರತಿವರ್ಷ ಜನವರಿಯಿಂದ ಡಿಸೆಂಬರ್ 31 ರವರೆಗೆ 98 ಸೆಂ ಮೀ ಮಳೆಯಾಗುವ ನಿರೀಕ್ಷೆ ಇಟ್ಟುಕೊಂಡಿರುತ್ತದೆ. ಆದರೆ ಈ ವರ್ಷ ಜೂನ್ ತಿಂಗಳಿಂದ ಸೆಪ್ಟೆಂಬರ್ ತಿಂಗಳವರೆಗೆ 100 ಸೆಂ ಮೀಗೂ ಹೆಚ್ಚು ಮಳೆಯಾಗಿದೆ. ಬರುವ ತಿಂಗಳಲ್ಲಿ ಅಕ್ಟೋಬರ್, ನೆವೆಂಬರ್, ಡೆಸೆಂಬರ್​ನಲ್ಲಿ ಅತಿಭಾರಿ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ತಜ್ಞ ಎ ಪ್ರಸಾದ್ ಮಾಹಿತಿ ನೀಡಿದ್ದಾರೆ.

ಈ ವರ್ಷ ಕರ್ನಾಟಕದಲ್ಲಿ ಭಾರೀ ಮಳೆಯಾಗಲು ಮುಖ್ಯಕಾರಣ ಹವಮಾನದಲ್ಲಿನ ಬದಲಾವಣೆ ಹಾಗೂ ಶಿಯರ್ ಜೋನ್. ಸಮುದ್ರಮಟ್ಟದಿಂದ ಶಿಯಾರ್ ಜೋನ್ ಎತ್ತರವಿದ್ದಾಗ ಈ ರೀತಿಯಾಗಿ ಮಳೆಯಾಗುತ್ತದೆ. ಶಿಯರ್ ಜೋನ್ ಅಂದರೆ ಸಮುದ್ರಮಟ್ಟದಿಂದ 11 ಡಿಗ್ರಿ ಅಕ್ಷಾಂಶದಿಂದ ಪೂರ್ವದಿಕ್ಕಿಗೆ ಹೆಚ್ಚಿನ ಗಾಳಿ ಬೀಸುತ್ತದೆ.‌ ಇದೇ ವೇಳೆ ಕಡಿಮೆ ಅಕ್ಷಾಂಶದಲ್ಲಿ 9 ಅಥವಾ 8 ರ ವೇಗದಲ್ಲಿ ಪಶ್ಚಿಮ ವಲಯದಲ್ಲಿ ಗಾಳಿಬೀಸಿದಾಗ ಗುಡುಗು ಮಿಂಚು ಸಹಿತ ಮಳೆಯಾಗುತ್ತದೆ.

ಈ ಮೇಲ್ಮೈ ಸುಳಿಗಾಳಿ ಬಂದರೆ ನಾಲ್ಕರಿಂದ ಐದು ದಿನ ಮಳೆಯಾಗುತ್ತದೆ. ಶಿಯಾ ಜೋನ್ ಬಂದರೆ ಮೂರರಿಂದ ನಾಲ್ಕುದಿನ ವಾತಾವರಣದಲ್ಲಿ‌ ಪರಿಣಾಮ ಬೀರಲಿದೆ. ಇದರ ಪರಿಣಾಮವೇ ಸಿಲಿಕಾನ್​ ಸಿಟಿಯಲ್ಲಿ ಹೆಚ್ಚು ಮಳೆಯಾಗುತ್ತಿದೆ.

2022 ರ ಈ ವರ್ಷದ ಮಳೆ ಕಳೆದ 10 ವರ್ಷಗಳ ದಾಖಾಲೆಯನ್ನು ಮುರಿದಿದೆ. ಈ ಹಿಂದೆ 2017 ರಲ್ಲಿ 247 ಮೀ ಮೀ ಮಳೆಯಾಗಿತ್ತು. ಆದರೆ ಈ ವರ್ಷ 500 ಮಿ ಮೀ ರಷ್ಟು ಅಧೀಕ ಮಳೆಯಾಗಿದ್ದು, ಇನ್ನು ಹೆಚ್ಚಿನ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮುಂದಿನ 5 ದಿನ ಭಾರೀ ಮಳೆಯಾಗಿಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.

ಕರವಾಳಿಯ ಉತ್ತಡ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಇಂದು ಆರೆಂಜ್ ಅಲರ್ಟ್ ನೀಡಿದ್ದು, ನಾಳೆಗೆ ಯಲ್ಲೋ ಅಲರ್ಟ್ ನೀಡಲಾಗಿದೆ. ಉತ್ತರ ಒಳನಾಡಿನ ಬೆಳಗಾವಿಗೆ ಯಲ್ಲೋ ಅಲರ್ಟ್ ನೀಡಡಲಾಗಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ನೀಡಲಾಗಿದ್ದು, ಬೆಂಗಳೂರಿಗೆ ಇಂದು ಯಾವುದೇ ಅಲರ್ಟ್ ಇರುವುದಿಲ್ಲ.

ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಗಾಳಿಯಲ್ಲಿ ಗುಂಡು ಹಾರಿಸಿ ಬಿಲ್ಡಪ್ ಕೊಟ್ಟ ಶಾಂತಲಿಂಗ ಸ್ವಾಮೀಜಿ!
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಅವಳಪ್ಪನೇ ಮುಸ್ಲಿಂ ಹುಡ್ಗಿ ಹಿಂದೆ ಬಿದ್ದಿದ್ದ, ಈಗ ತಪ್ಪಾಯ್ತಾ ಎಂದ ಯುವಕ
ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ
ಬಿಗ್ ಬಾಸ್ ಗೆಲ್ಲೋದು ಯಾರು? ಗಿಲ್ಲಿ ಹೆಸರು ಹೇಳಿಲ್ಲ ಚೈತ್ರಾ