ಹುಬ್ಬಳ್ಳಿ: ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಅಧಿಕಾರಿಗಳಲ್ಲಿ ಸಮನ್ವಯದ ಕೊರತೆ! ಜೀವವೈವಿಧ್ಯಗಳಿಗೆ ವಿಷವಾದ ಕೆರೆ ನೀರು
ಸುತ್ತಮುತ್ತಲಿನ ಕೆರೆಗೆ ಬರುತ್ತಿರುವ ಕೋಳಚೆ ನೀರನ್ನು ಫಿಲ್ಟರ್ ಮಾಡಲಾಗುತ್ತಿಲ್ಲ. ಈಡಿ ಕೆರೆಯಲ್ಲಿ ಆಕ್ಸಿಜನ್ ನೀಡುವ ಏರಿಟರ್ ಸ್ಥಾಪಿಸಲಾಗಿಲ್ಲ. ಕೊಳಚೆ ನೀರು ಸೇರ್ಪಡೆಯಿಂದ ಜಲಚರ ಜೀವಿಗಳೇಲ್ಲ ಜೀವ ಕಳೆದುಕೊಳ್ಳುತ್ತಿವೆ.
ಧಾರವಾಡ:ಅವಳಿನಗರದ ಹೃದಯ ಭಾಗದಲ್ಲಿರುವ ಕೆರೆ ವಿಶಾಲವಾದ ವಿಸ್ತೀರ್ಣ ಹೊಂದಿದ್ದು, ಈ ಕೆರೆಗೆ ತನ್ನದೇ ಆದ ಇತಿಹಾಸವಿದೆ. ಒಂದು ಕಾಲದಲ್ಲಿ ಅದೇಷ್ಟೋ ಜೀವ ವೈವಿಧ್ಯತೆಗೆ ಜೀವದಾನ ನೀಡಿದ್ದ ಈ ಕೆರೆ ಸದ್ಯ ಜೀವಿಗಳಿಗೆ ಹಾನಿ ಮಾಡುವ ಸ್ಥಿತಿಗೆ ತಲುಪಿದೆ. ಸರ್ಕಾರ ಕೊಟ್ಯಾಂತರ ರೂಪಾಯಿ ಸುರಿದು ಈ ಕೆರೆಯನ್ನು ಸ್ಮಾರ್ಟ್ ಮಾಡುವುದಕ್ಕೆ ಮುಂದಾಗಿದೆ. ಆದರೆ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಅಧಿಕಾರಿಗಳ ಸಮನ್ವಯದ ಕೊರತೆಯಿಂದ ಉಪಯೋಗಕ್ಕೆ ಬಾರದೆ ಹಾಗೆಯೇ ಉಳಿದಿದೆ.
ಒಂದು ಕೆರೆಯಿಂದ ಅದೆಷ್ಟೋ ಜಲಚರ ಜೀವಿಗಳು ಜೀವದಾನ ಪಡೆಯುತ್ತವೆ. ಅದೇಷ್ಟೋ ಸಸ್ಯರಾಶಿ ಸ್ವಚ್ಚಂದವಾಗಿ ಉಸಿರಾಡುತ್ತದೆ. ಬೋರ್‌ವೆಲ್‌ಗಳ ಅಂತರ್ಜಲ ವೃದ್ಧಿಯಾಗುತ್ತದೆ. ಆದರೆ ಹುಬ್ಬಳ್ಳಿಯ ತೋಳನಕೆರೆ ಇದ್ಯಾವುದಕ್ಕೂ ಉಪಯೋಗ ಇಲ್ಲದ ಕೆರೆ ಎನ್ನುವ ಹಣೆ ಪಟ್ಟಿ ಕಟ್ಟಿಕೊಳ್ಳುವಂತಾಗಿದೆ. ಎಕ್ಸೈಜ್ ಕಾಲೋನಿ, ರೇಣುಕಾ ನಗರ, ರಾಮಲಿಂಗೇಶ್ವರ ನಗರ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಗಳ ಚರಂಡಿ ನೀರು ಈ ಕೆರೆಗೆ ಫಿಲ್ಟರ್ ಆಗದೆ ಸೇರಿಕೊಳ್ಳುತ್ತಿದೆ. ಇದರ ಪರಿಣಾಮ ಕೆರೆಯ ನೀರೆಲ್ಲಾ ಪಾಚಿ ಕಟ್ಟಿಕೊಂಡು ನೈಟ್ರೋಜನ್ ಪ್ರಮಾಣ ಹೆಚ್ಚಾಗುವಂತೆ ಮಾಡಿದೆ.
ಸರ್ಕಾರ ಈ ಕೆರೆಯನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಮತ್ತೊಮ್ಮೆ ಅಭಿವೃದ್ಧಿ ಮಾಡಲು ಮುಂದಾಗಿದೆ. ಈ ಹಿಂದೆ ಇದೇ ಕೆರೆಯನ್ನು ಸ್ಮಾರ್ಟ್ ಮಾಡಲು ಪಾಲಿಕೆ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿತ್ತು. 15 ಕೊಟಿ ರೂಪಾಯಿ ಅನುದಾನದಲ್ಲಿ ತೋಳನಕೆರೆಯಲ್ಲಿ ಎಸ್‌ಟಿಪಿ ಪ್ಲಾಂಟ್, ಬರ್ಡ್ ವಾಚ್ ಟವರ್ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿ ಕಳೆದ 2018 ಸೆಪ್ಟೆಂಬರ್‌ನಲ್ಲೇ ಶುರು ಮಾಡಲಾಗಿದೆ.
ಒಟ್ಟು 39.5 ಎಕರೆ ಇರುವ ಈ ಕೆರೆಯನ್ನು ಸ್ಮಾರ್ಟ್ ಮಾಡುತ್ತಿದ್ದಾರೆ. ಆದರೆ ಸರ್ಕಾರ ಅಭಿವೃದ್ದಿಯ ಭರದಲ್ಲಿ ಕೆರೆಯ ಮುಖ್ಯ ಆಶಯವನ್ನೆ ಮರೆತಂತಿದೆ. ಸುತ್ತಮುತ್ತಲಿನ ಕೆರೆಗೆ ಬರುತ್ತಿರುವ ಕೊಳಚೆ ನೀರನ್ನು ಫಿಲ್ಟರ್ ಮಾಡಲಾಗುತ್ತಿಲ್ಲ. ಈಡಿ ಕೆರೆಯಲ್ಲಿ ಆಕ್ಸಿಜನ್ ನೀಡುವ ಏರೇಟರ್ ಸ್ಥಾಪಿಸಲಾಗಿಲ್ಲ. ಕೊಳಚೆ ನೀರು ಸೇರ್ಪಡೆಯಿಂದ ಜಲಚರ ಜೀವಿಗಳೆಲ್ಲ ಜೀವ ಕಳೆದುಕೊಳ್ಳುತ್ತಿವೆ. 500 ಸಂಖ್ಯೆಯಲ್ಲಿದ್ದ ಬಾತು ಕೊಳಿಗಳು ಈಗ ಕೇವಲ 2 ಮಾತ್ರ ಉಳಿದಿವೆ. ಅಷ್ಟರಮಟ್ಟಿಗೆ ಈ ಕೆರೆಯ ನೀರು ಮಾರಕವಾಗಿದೆ.
ಈ ಸ್ಥಳಕ್ಕೆ ಮೋದಲು ವಿದೇಶದ ಹಕ್ಕಿಗಳು ಸಂತಾನೋತ್ಪತ್ತಿಗಾಗಿ ವಲಸೆ ಬರುತ್ತಿದ್ದವು. ಅವುಗಳ ವೀಕ್ಷಣೆಗಾಗಿ ಇಲ್ಲಿ ವಾಚ್ ಟವರ್ ಅನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿನ ಕೆರೆಯಲ್ಲಿ ಕೋಳಚೆನೇ ಹೆಚ್ಚಾಗಿದ್ದರಿಂದ ಹಳ್ಳಿಗಳು ಶಾಶ್ವತವಾಗಿ ತೋಳನಕೆರೆಗೆ ಗುಡ್ ಬೈ ಹೇಳಿವೆ. ಇನ್ನು ಕೆರೆಗೆ ಹರಿದು ಬರುತ್ತಿರುವ ಚರಂಡಿ ನೀರನ್ನು ಟ್ರೀಟ್ ಮಾಡಿ ಮತ್ತೆ ಕೆರೆಗೆ ಹರಿಸುವ ಬಗ್ಗೆ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಅದಧಿಕಾರಿಗಳ ನಡುವೆ ಸಮನ್ವಯ ಕೊರತೆ ಏರ್ಪಟ್ಟಿದೆ.
ಸ್ಮಾರ್ಟ್ ಸಿಟಿಯ ಅಧಿಕಾರಿಗಳು ಅದು ನಮಗೆ ಸಂಬಂಧ ಪಡುವುದಿಲ್ಲ ಎಂದರೆ ಪಾಲಿಕೆ ಅಧಿಕಾರಿಗಳು ಅದೇ ಡೈಲಾಗ್ ರೀಪೀಟ್ ಮಾಡುತ್ತಿದ್ದಾರೆ. ಹೀಗಾಗಿ ಸರ್ಕಾರ ತೋಳನ ಕೆರೆಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಕೆರೆ ಸ್ಮಾರ್ಟ್ ಮಾಡುತ್ತಿದ್ದರೂ ಏನೂ ಪ್ರಯೋಜನವಾದಂತೆ ಕಾಣುತ್ತಿಲ್ಲ. ಸದ್ಯ ಕೆರೆಯ ವಿಷದ ನೀರು ಸುತ್ತಮುತ್ತಲಿನ ಬೋರ್‌ಗಳಲ್ಲಿ ಸೇರುತ್ತಿರುವುದರಿಂದ ಕುಡಿಯುವ ನೀರು ವಿಷವಾಗುತ್ತಿದೆ ಎಂದು ಜನರು ಆತಂಕಕ್ಕೊಳಗಾಗಿದ್ದಾರೆ.
ಇದನ್ನೂ ಓದಿ: ಚಾಮರಾಜನಗರದ 23 ಕೆರೆಗೆ ನೀರು ತುಂಬಿಸಿ: ರಾಜ್ಯ ಸರ್ಕಾರಕ್ಕೆ ಸ್ಥಳೀಯರ ಆಗ್ರಹ