AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದಲ್ಲಿ ಆರ್​ಎಸ್​ಎಸ್​ ಪಥಸಂಚಲನಕ್ಕೆ ಅನುಮತಿ ಕಡ್ಡಾಯ: ಗೃಹ ಸಚಿವ ಪ್ರಿಯಾಂಕ್​​ ಖರ್ಗೆ

Priyank Kharge: ನಾನು ಗೃಹಸಚಿವನಾಗಿ ಇರುವವರೆಗೂ ರಾಜ್ಯದಲ್ಲಿ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಅನುಮತಿ ಕಡ್ಡಾಯ ಎಂದು ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದು, ಸಂಘಟನೆಯ ನೋಂದಣಿ ಹಾಗೂ ದೇಣಿಗೆ ಕುರಿತು ಮತ್ತೆ ವಾಗ್ದಾಳಿ ನಡೆಸಿದ್ದಾರೆ. ನಾಳೆ ನೀವೂ ಒಂದು ಧ್ವಜದ ಮೇಲೆ ಸಂಘಟನೆ ಮಾಡಿ, ಚಂದಾ ಕಲೆಕ್ಟ್‌ ಮಾಡಿ. ಅವಾಗ ಐಟಿ,ಇಡಿಯವರು ಸುಮ್ನೆ ಕೂರುತ್ತಾರಾ? ಎಂದೂ ಅವರು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಆರ್​ಎಸ್​ಎಸ್​ ಪಥಸಂಚಲನಕ್ಕೆ ಅನುಮತಿ ಕಡ್ಡಾಯ: ಗೃಹ ಸಚಿವ ಪ್ರಿಯಾಂಕ್​​ ಖರ್ಗೆ
ಗೃಹ ಸಚಿವ ಪ್ರಿಯಾಂಕ್​​ ಖರ್ಗೆ Image Credit source: PTI
ದತ್ತಾತ್ರೇಯ ಪಾಟೀಲ, ಕಲಬುರಗಿ
| Edited By: |

Updated on:Jul 06, 2026 | 11:55 AM

Share

ಮುಖ್ಯಾಂಶಗಳು

  • ರಾಜ್ಯದಲ್ಲಿ RSS ಪಥಸಂಚಲನಕ್ಕೆ ಇನ್ನು ಅನುಮತಿ ಬೇಕು
  • ಮಹತ್ವದ ಹೇಳಿಕೆ ಕೊಟ್ಟ ಗೃಹ ಸಚಿವ ಪ್ರಿಯಾಂಕ್​​ ಖರ್ಗೆ
  • ಇದಕ್ಕೆಲ್ಲ ನಾನು ಹೆದರುವ ವ್ಯಕ್ತಿಯಲ್ಲ ಎಂದ ಸಚಿವರು

ಕಲಬುರಗಿ, ಜುಲೈ 06: ನಾನು ಗೃಹಸಚಿವನಾಗಿ ಇರುವವರೆಗೂ ರಾಜ್ಯದಲ್ಲಿ ಆರ್​ಎಸ್​ಎಸ್​ ಪಥಸಂಚಲನಕ್ಕೆ ಅನುಮತಿ ಕಡ್ಡಾಯ ಎಂದು ಪ್ರಿಯಾಂಕ್​​ ಖರ್ಗೆ ಹೇಳಿದ್ದು, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಕರ್ನಾಟಕ ಸರ್ಕಾರದ ನಡುವೆ ಮತ್ತೊಂದು ಹೊಸ ಸಮರ ಆರಂಭವಾಗುವ ಎಲ್ಲ ಲಕ್ಷಣಗಳೂ ಗೋಚರಿಸಿವೆ. ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಕ್ಷಣದಿಂದಲೂ ಆರ್​​ಎಸ್​​ಎಸ್​​ ನೋಂದಣಿ ಬಗ್ಗೆ ಮಾತಾಡುತ್ತಲೇ ಬಂದಿರುವ ಸಚಿವರು, ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರೋದು ರಾಜಕೀಯ ಜಟಾಪಟಿಗೆ ನಾಂದಿ ಹಾಡಿದೆ.

ಗೃಹ ಸಚಿವ ಪ್ರಿಯಾಂಕ್​​ ಖರ್ಗೆ ಹೇಳಿದ್ದೇನು?

ಆರ್​​ಎಸ್​​ಎಸ್​​ನವರು ಪಥಸಂಚಲನಕ್ಕೆ ಅನುಮತಿ ತೆಗೆದುಕೊಳ್ಳಬೇಕು. ಜಸ್ಟ್ ಈಗ ಮೋಹನ್​ ಭಾಗವತ್​​ ಅವರಿಗೆ ಪತ್ರ ಬರೆದಿದ್ದೇನೆ. 100 ವರ್ಷದ ಸಂಘಟನೆ ಕಾಗದಗಳು ಎಲ್ಲೋ ಇರಬಹುದು. ಹುಡುಕುತ್ತಿದ್ದಾರೆ ಹುಡುಕಿಕೊಂಡು ಬರಲಿ. ಇಷ್ಟು ಕೇಳಿದ್ದಕ್ಕೆ ನನ್ನ ವೈಯಕ್ತಿಕ ಮಾಹಿತಿ ಕೆದಕುತ್ತಿದ್ದಾರೆ. ಪ್ರಿಯಾಂಕ್ ಯಾರನ್ನು ಮದುವೆಯಾಗಿದ್ದು, ಮಕ್ಕಳು ಯಾರು? ಪ್ರಿಯಾಂಕ್ ಕಪ್ಪಗಿದ್ದಾನಾ, ಬೆಳ್ಳಗಿದ್ದಾನಾ ಎಲ್ಲಾ ಕೆದಕುತ್ತಿದ್ದಾರೆ. ಇದಕ್ಕೆಲ್ಲ ನಾನು ಹೆದರುವ ವ್ಯಕ್ತಿಯಲ್ಲ ಎಂದು ಕಲಬುರಗಿಯಲ್ಲಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಈ ಹಿಂದೆ ಕಲಬುರಗಿಯ ಚಿತ್ತಾಪುರ ಮತ್ತು ಯಾದಗಿರಿಯ ಕೆಂಭಾವಿಯಲ್ಲಿ RSS ಪಥಸಂಚಲ ವಿಚಾರವಾಗಿ ತೀವ್ರ ಜಟಾಪಟಿ ನಡೆದಿತ್ತು. ವಿಚಾರ ಕೋರ್ಟ್​​ ಮೆಟ್ಟಿಲು ಕೂಡ ಏರಿತ್ತು ಎಂಬುದಿಲ್ಲಿ ಗಮನಾರ್ಹ ವಿಷಯವಾಗಿದೆ.

ಇದನ್ನೂ ಓದಿ: ಆರ್​​ಎಸ್​​ಎಸ್​ ನೋಂದಣಿ, ಸದಸ್ಯತ್ವದ ಬಗ್ಗೆ ಕೋರ್ಟ್‌ನಲ್ಲೂ ಪ್ರಿಯಾಂಕ್​​ ತಕರಾರು; ಸಚಿವರಿಗೆ ಉತ್ತರಿಸಿಯೇ ನ್ಯಾಯಾಲಯದಿಂದ ಸಮನ್ಸ್​​

RSS ವಿರುದ್ಧ ಪ್ರಿಯಾಂಕ್​​ ಖರ್ಗೆ ವಾಗ್ದಾಳಿ

ಆರ್​​ಎಸ್​​ಎಸ್​​ನವರು ಧ್ವಜದ ಮೇಲೆ ದೇಣಿಗೆ ತೆಗೆದುಕೊಳ್ತಾರೆ. ದೇಣಿಗೆ ಪಡೆದುಕೊಳ್ಳೋಕೆ ಇವರ ಗುರು ಯಾರು?ಹಾಗಿದ್ರೆ ಇವರಗೆ ಲೆಕ್ಕ ಕೇಳಬಾರದಾ? ಎಂದು ಗೃಹ ಸಚಿವರು ಪ್ರಶ್ನಿಸಿದ್ದಾರೆ. ನಾಳೆ ನೀವೂ ಒಂದು ಧ್ವಜದ ಮೇಲೆ ಸಂಘಟನೆ ಮಾಡಿ, ಚಂದಾ ಕಲೆಕ್ಟ್‌ ಮಾಡಿ. ಅವಾಗ ಐಟಿ,ಇಡಿಯವರು ಸುಮ್ನೆ ಕೂರುತ್ತಾರಾ? ಎಲ್ಲರೂ ಹೀಗೇ ಮಾಡಲಿ ಅವಾಗ ನೋಡೋಣ ಎಂದವರು ಕಿಡಿ ಕಾರಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 11:47 am, Mon, 6 July 26

Follow Us
ಪ್ರವಾಸಿಗರೇ ಗಮನಿಸಿ: ಭಾರೀ ಮಳೆಯ ಕಾರಣ ಈ 9 ಜಲಪಾತಗಳಿಗೆ ನಿರ್ಬಂಧ
ಪ್ರವಾಸಿಗರೇ ಗಮನಿಸಿ: ಭಾರೀ ಮಳೆಯ ಕಾರಣ ಈ 9 ಜಲಪಾತಗಳಿಗೆ ನಿರ್ಬಂಧ
ಮಳೆ ಅಬ್ಬರ: ಬೆಳಗಾವಿ ಜಿಲ್ಲೆಯಲ್ಲಿ ಮೈದುಂಬಿ ಹರಿಯುತ್ತಿರುವ ನದಿಗಳು
ಮಳೆ ಅಬ್ಬರ: ಬೆಳಗಾವಿ ಜಿಲ್ಲೆಯಲ್ಲಿ ಮೈದುಂಬಿ ಹರಿಯುತ್ತಿರುವ ನದಿಗಳು
ಇಂದು ಈ ರಾಶಿಯವರು ತಮ್ಮ ಕುಟುಂಬದ ಕಡೆ ಹೆಚ್ಚಿನ ಗಮನ ಕೊಡಬೇಕು
ಇಂದು ಈ ರಾಶಿಯವರು ತಮ್ಮ ಕುಟುಂಬದ ಕಡೆ ಹೆಚ್ಚಿನ ಗಮನ ಕೊಡಬೇಕು
ಬಿಜೆಪಿ ಸಭೆ: ಶಾಸಕರ ಮೇಲೆ ವಿಶ್ವಾಸ ಇಟ್ಟಿದ್ದೇ ತಪ್ಪಾಯ್ತು ಎಂದ ಅಶೋಕ್
ಬಿಜೆಪಿ ಸಭೆ: ಶಾಸಕರ ಮೇಲೆ ವಿಶ್ವಾಸ ಇಟ್ಟಿದ್ದೇ ತಪ್ಪಾಯ್ತು ಎಂದ ಅಶೋಕ್
ಸಿಪಿ ಯೋಗೇಶ್ವರ್ ಪುತ್ರನಿಗೆ ಶುಭ ಹಾರೈಸಿದ ಸಿಎಂ ಹೇಳಿದ್ದೇನು? ವಿಡಿಯೋ ನೋಡಿ
ಸಿಪಿ ಯೋಗೇಶ್ವರ್ ಪುತ್ರನಿಗೆ ಶುಭ ಹಾರೈಸಿದ ಸಿಎಂ ಹೇಳಿದ್ದೇನು? ವಿಡಿಯೋ ನೋಡಿ
ರಾಮ ಮಂದಿರದ ದೇಣಿಗೆ ಲೂಟಿ: ಕದ್ದ ಹಣದಲ್ಲಿ ಪ್ರೇಮ ಪುರಾಣ, ಲವರ್​ಗೆ ಗಿಫ್ಟ್!
ರಾಮ ಮಂದಿರದ ದೇಣಿಗೆ ಲೂಟಿ: ಕದ್ದ ಹಣದಲ್ಲಿ ಪ್ರೇಮ ಪುರಾಣ, ಲವರ್​ಗೆ ಗಿಫ್ಟ್!
ಕೆ ಸುಧಾಕರ್‌ ಜೊತೆಗಿನ ವೈಮನಸಿನ ಬಗ್ಗೆ ಬಿಜೆಪಿ ಸಭೆಯಲ್ಲಿ ಚರ್ಚೆ ಆಯ್ತಾ?
ಕೆ ಸುಧಾಕರ್‌ ಜೊತೆಗಿನ ವೈಮನಸಿನ ಬಗ್ಗೆ ಬಿಜೆಪಿ ಸಭೆಯಲ್ಲಿ ಚರ್ಚೆ ಆಯ್ತಾ?
ವಿಶ್ವ ವಿಖ್ಯಾತ ಜೋಗ್ ಫಾಲ್ಸ್ ಗೆ ರಾಜಕಳೆ
ವಿಶ್ವ ವಿಖ್ಯಾತ ಜೋಗ್ ಫಾಲ್ಸ್ ಗೆ ರಾಜಕಳೆ
ಸಿಪಿ ಯೋಗೇಶ್ವರ್ ಪುತ್ರನ ಸಿನಿಮಾಕ್ಕೆ ಕ್ಲ್ಯಾಪ್ ಮಾಡಿದ ಸಿಎಂ ಡಿಕೆಶಿ
ಸಿಪಿ ಯೋಗೇಶ್ವರ್ ಪುತ್ರನ ಸಿನಿಮಾಕ್ಕೆ ಕ್ಲ್ಯಾಪ್ ಮಾಡಿದ ಸಿಎಂ ಡಿಕೆಶಿ
SIR ವೇಳೆ ಕುಸಿದುಬಿದ್ದ BLO, ಬೇಡಿಕೊಂಡ್ರೂ ಕೇಳಿಲ್ಲ ಎಂದು ಶಿಕ್ಷಕಿ ಅಳಲು
SIR ವೇಳೆ ಕುಸಿದುಬಿದ್ದ BLO, ಬೇಡಿಕೊಂಡ್ರೂ ಕೇಳಿಲ್ಲ ಎಂದು ಶಿಕ್ಷಕಿ ಅಳಲು