ಮದುವೆಗೆ ಮುಂಚೆ ಚಿನ್ನ ರನ್ನ ಅಂತಿದ್ದ, ಮದುವೆಯಾದ ಮೇಲೆ ವರಸೆ ಬದಲಿಸಿ ಕಪ್ಪಗಿದ್ದೀಯಾ ಎಂದು ಪತ್ನಿಯ ಮೂದಲಿಸಿ, ಕೊನೆಗೆ ಹತ್ಯೆಗೈದ
ಪೊಲೀಸರು ಮೃತ ಫರ್ಜಾನಾ ಪತಿ ಖಾಜಾ ಪಟೇಲ್ ನನ್ನು ವಶಕ್ಕೆ ಪಡೆದಿದ್ದಾರೆ. ಮರಣೋತ್ತರ ವರದಿ ನಂತರವೇ ಕೊಲೆಯಾಗಿದ್ದಾ, ಅಥವಾ ಆತ್ಮಹತ್ಯೆಯಾ ಅನ್ನೋದು ಗೊತ್ತಾಗಲಿದೆ. ಆದ್ರೆ ಬಾಳಿ ಬದುಕಬೇಕಿದ್ದ ಮಹಿಳೆ ಮಾತ್ರ ಬಾರದ ಲೋಕಕ್ಕೆ ಹೋಗಿದ್ದು ಮಾತ್ರ ದುರಂತವೇ ಸರಿ.
ಮದುವೆ ಮುಂಚೆ, ಚಿನ್ನ ರನ್ನ ಅಂತಿದ್ದ ಪತಿ (Husband), ಮದುವೆಯಾದ ಮೇಲೆ ಪತ್ನಿಗೆ ನೀನು ಕಪ್ಪಗಿದ್ದೀಯಾ ಅಂತ ತನ್ನ ವರಸೆ ಬದಲಿಸಿದ್ದನಂತೆ. ಅಷ್ಟೇ ಅಲ್ಲಾ, ತವರು ಮನೆಯಿಂದ ಚಿನ್ನಾಭರಣ ತಗೊಂಡು ಬಾ, ಹಣ ತಗೆದುಕೊಂಡು ಬಾ ಅಂತ ಪೀಡಿಸುತ್ತಿದ್ದನಂತೆ. ಆದ್ರು ಕೂಡಾ ಪತ್ನಿ ಪತಿಯ ಅವಮಾನ ತಾಳಿಕೊಂಡು ಸಂಸಾರ ನಡೆಸುತ್ತಿದ್ದಳಂತೆ. ಆದ್ರೆ ಇದೀಗ ಮಹಿಳೆ ಅನುಮಾನಸ್ಪದ ರೀತಿಯಲ್ಲಿ (Allegation) ಮೃತಪಟ್ಟಿದ್ದು, ಹೆತ್ತವರು ಕೊಲೆ (Murder) ಅಂತಿದ್ದಾರೆ. ಬಾರದ ಲೋಕಕ್ಕೆ ಹೋಗಿರುವ ಮಹಿಳೆ. ಮತ್ತೊಂದಡೆ ಮಗಳನ್ನು ಕಳೆದುಕೊಂಡು ಕಂಗಾಲಾಗಿರುವ ತಂದೆ ಮತ್ತು ಸಂಬಂಧಿಗಳು. ಹೌದು ಕುಟುಂಬಕ್ಕೆ ಇದೀಗ ಶಾಕ್ ಹೊಡೆದಂತಾಗಿದೆ. ಬಾಳಿ ಬದುಕಬೇಕಿದ್ದ ಮಗಳು, ಬಾರದ ಲೋಕಕ್ಕೆ ಹೋಗಿದ್ದು ಕುಟುಂಬವನ್ನು ಕಂಗಾಲು ಮಾಡಿದೆ. ಕಲಬುರಗಿ (Kalaburagi) ಜಿಲ್ಲೆಯ ಜೇವರ್ಗಿ (Jewargi) ತಾಲೂಕಿನ ಕೆಲ್ಲೂರು ಗ್ರಾಮದಲ್ಲಿ ಬುಧವಾರ ರಾತ್ರಿ ಮಹಿಳೆಯೋರ್ವಳು ತನ್ನ ಮನೆಯಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಮೃತ ಮಹಿಳೆಯ ಹೆಸರು ಪರ್ಜಾನಾ ಬೇಗಂ ಅಂತ. 30 ವರ್ಷದ ಫರ್ಜಾನಾ ಬೇಗಂ, ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ್ರು ಕೂಡಾ ಹೆತ್ತವರಿಗೆ, ಆಕೆಯ ಪತಿ ಮತ್ತು ಕುಟುಂಬದವರು ಮಾಹಿತಿ ನೀಡಿರಲಿಲ್ಲವಂತೆ. ಅಕ್ಕಪಕ್ಕದ ನಿವಾಸಿಗಳು ಮಾಹಿತಿ ನೀಡಿದಾಗ, ಫರ್ಜಾನಾ ಬೇಗಂ ಹೆತ್ತವರು ಇಂದು ಗ್ರಾಮಕ್ಕೆ ಆಗಮಿಸಿ ವಿಚಾರಣೆ ನಡೆಸಿದ್ದಾರೆ. ಮನೆಗೆ ಹೋಗಿ ಶವವನ್ನು ನೋಡಿ ತಮ್ಮ ಮಗಳದ್ದು ಆತ್ಮಹತ್ಯೆಯಲ್ಲ, ಬದಲಾಗಿ ಕೊಲೆ ಅಂತಿದ್ದಾರೆ. ಹೌದು ಫರ್ಜಾನಾ ಬೇಗಂ ಪತಿ, ಖಾಜಾ ಪಟೇಲ್ ಮತ್ತು ಅವರ ಕುಟುಂಬದವರು ಕತ್ತು ಹಿಸುಕಿ ಕೊಲೆ ಮಾಡಿ, ನಂತರ ತಾವೇ ನೇಣು ಹಾಕಿದ್ದಾರೆ ಅಂತ ಆರೋಪಿಸುತ್ತಿದ್ದಾರೆ.
ಮೂಲತ ಯಾದಗಿರಿ ಜಿಲ್ಲೆಯ ಶಹಪೂರ್ ಮೂಲದ ಫರ್ಜಾನಾ ಬೇಗಂ ವಿವಾಹ, ಕೆಲ್ಲೂರು ಗ್ರಾಮದ ಖಾಜಾ ಪಟೇಲ್ ಜೊತೆ ಏಳು ವರ್ಷಗಳ ಹಿಂದೆ ಆಗಿತ್ತಂತೆ. ಮದುವೆ ಸಮಯದಲ್ಲಿ 50 ಗ್ರಾಂ ಚಿನ್ನಾಭರಣ, 50 ಸಾವಿರ ವರದಕ್ಷಿಣೆ ನೀಡಿ, ತಮ್ಮ ಮನೆ ಮುಂದೆಯೇ ಮಗಳ ಮದುವೆಯನ್ನು ಹೆತ್ತವರು ಮಾಡಿಕೊಟ್ಟಿದ್ದರಂತೆ. ಗ್ರಾಮದಲ್ಲಿ ಕೃಷಿ ಕೆಲಸ ಮಾಡುವ ಖಾಜಾ ಪಟೇಲ್ ಮದುವೆ ಮುಂಚೆ, ಪತ್ನಿಗೆ ನೀನೆ ನನ್ನ ಚಿನ್ನ, ರನ್ನ ಅಂತಿದ್ದನಂತೆ. ಆದ್ರೆ ಮದುವೆಯಾದ ಮೇಲೆ, ನೀನು ಕಪ್ಪಗಿದ್ದಿಯಾ ಅಂತ ಪತ್ನಿಯನ್ನು ಹೀಯಾಳಿಸಲು ಆರಂಭಿಸಿದ್ದನಂತೆ.
ಆದ್ರು ಕೂಡಾ ಫರ್ಜಾನಾ ಬೇಗಂ, ಸುಮ್ಮನೆ ಇದ್ದಳಂತೆ. ದಂಪತಿಗೆ ಎರಡು ಮಕ್ಕಳು ಕೂಡಾ ಇವೆ. ಕೆಲ ತಿಂಗಳ ಹಿಂದೆ, ಇಬ್ಬರ ಮುಂಜವಿ ಮಾಡಲು, ತವರು ಮನೆಗೆ ಹೋಗಿ ಚಿನ್ನಾಭರಣ ತರುವಂತೆ ಪತಿ ಖಾಜಾ ಪಟೇಲ್, ಪತ್ನಿಗೆ ಪೀಡಿಸಿದ್ದನಂತೆ. ಆದ್ರೆ ಇದಕ್ಕೆ ಪತ್ನಿ ಒಪ್ಪದೇ ಇದ್ದಾಗ, ಪ್ರತಿನಿತ್ಯ ಹಲ್ಲೆ ಮಾಡುವುದು, ಮಾನಸಿಕ ಕಿರುಕುಳ ನೀಡುವುದನ್ನು ಆರಂಭಿಸಿದ್ದನಂತೆ.
ಆದ್ರೆ ಕಳೆದ ರಾತ್ರಿ ಫರ್ಜಾನಾ ಬೇಗಂ, ತನ್ನ ಮನೆಯಲ್ಲಿಯೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಇದು ಆತ್ಮಹತ್ಯೆ ಮಾಡಿಕೊಳ್ಳುವ ಜಾಗವು ಅಲ್ಲಾ, ಅಷ್ಟೊಂದು ಎತ್ತರವು ಇಲ್ಲ. ಹೀಗಾಗಿ ಪತಿ ಮತ್ತು ಆತನ ಕುಟುಂಬದವರೇ ಕೊಲೆ ಮಾಡಿದ್ದಾರೆ ಅಂತ ಫರ್ಜಾನಾ ಬೇಗಂ ಕುಟುಂಬದವರು ಆರೋಪಿಸುತ್ತಿದ್ದಾರೆ.
ಸದ್ಯ ಫರ್ಜಾನಾ ಬೇಗಂ ಸಾವಿನ ಬಗ್ಗೆ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಫರ್ಜಾನಾ ಪತಿ ಖಾಜಾ ಪಟೇಲ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮರಣೋತ್ತರ ವರದಿ ನಂತರವೇ, ಫರ್ಜಾನಾ ಬೇಗಂ ಕೊಲೆಯಾಗಿದ್ದಾ, ಅಥವಾ ಆತ್ಮಹತ್ಯೆಯಾ ಅನ್ನೋದು ಗೊತ್ತಾಗಲಿದೆ. ಆದ್ರೆ ಬಾಳಿ ಬದುಕಬೇಕಿದ್ದ ಮಹಿಳೆ ಮಾತ್ರ ಬಾರದ ಲೋಕಕ್ಕೆ ಹೋಗಿದ್ದು ಮಾತ್ರ ದುರಂತವೇ ಸರಿ.
ವರದಿ: ಸಂಜಯ್, ಟಿವಿ9, ಕಲಬುರಗಿ