Karnataka Dam Water Level: ಕೆಆರ್‌ಎಸ್, ಆಲಮಟ್ಟಿ, ಲಿಂಗನಮಕ್ಕಿ ಜಲಾಶಯಗಳಲ್ಲಿ ಹೆಚ್ಚಿದ ನೀರು
ಆಗಸ್ಟ್ 23ರ ವರದಿಯಂತೆ ಕರ್ನಾಟಕದ ಪ್ರಮುಖ ಜಲಾಶಯಗಳಾದ ಕೆಆರ್‌ಎಸ್, ಆಲಮಟ್ಟಿ, ಭದ್ರಾ ಹಾಗೂ ಲಿಂಗನಮಕ್ಕಿ ಡ್ಯಾಂಗಳ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ. ಕೃಷ್ಣಾ ಮತ್ತು ಕಾವೇರಿ ನದಿ ಪಾತ್ರಗಳಲ್ಲಿ ಮಳೆ ಮುಂದುವರಿದಿದ್ದು, ಆಲಮಟ್ಟಿಗೆ 30,000 ಕ್ಯೂಸೆಕ್‌ಗೂ ಅಧಿಕ ಒಳಹರಿವು ದಾಖಲಾಗಿದೆ. ಪ್ರಮುಖ ಅಣೆಕಟ್ಟುಗಳ ಇಂದಿನ ನೀರು ಸಂಗ್ರಹದ ಸಂಪೂರ್ಣ ವಿವರ ಇಲ್ಲಿದೆ.

ಮುಖ್ಯಾಂಶಗಳು
- ರಾಜ್ಯದ ಕೆಆರ್‌ಎಸ್, ಆಲಮಟ್ಟಿ, ಭದ್ರಾ ಜಲಾಶಯಗಳಲ್ಲಿ ಹೆಚ್ಚಿದ ನೀರಿನ ಸಂಗ್ರಹ.
- ಆಲಮಟ್ಟಿ ಡ್ಯಾಂಗೆ ಬರೋಬ್ಬರಿ 30,026 ಕ್ಯೂಸೆಕ್ ತಲುಪಿದ ಭಾರಿ ಒಳಹರಿವು.
- ಲಿಂಗನಮಕ್ಕಿ ಮತ್ತು ಭದ್ರಾ ಜಲಾಶಯಗಳ ಜಲಮಟ್ಟದಲ್ಲಿಯೂ ಸಹ ಗಣನೀಯ ಏರಿಕೆ.
ಬೆಂಗಳೂರು, ಆಗಸ್ಟ್ 23: ರಾಜ್ಯಾದ್ಯಂತ ಮುಂಗಾರು ಮಳೆ ಮುಂದುವರಿದಿದ್ದು, ಪ್ರಮುಖ ಜಲಾಶಯಗಳಿಗೆ ನೀರಿನ ಹರಿವು ಸ್ಥಿರವಾಗಿ ಸಾಗಿದೆ. ಕಾವೇರಿ, ಕೃಷ್ಣಾ, ಶರಾವತಿ ಹಾಗೂ ಭದ್ರಾ ನದಿ ಪಾತ್ರಗಳಲ್ಲಿ ಮಳೆಯಾಗುತ್ತಿರುವುದರಿಂದ ಪ್ರಮುಖ ಅಣೆಕಟ್ಟುಗಳಲ್ಲಿ ಜಲಮಟ್ಟ ಏರಿಕೆಯಾಗುತ್ತಿದೆ. ಆಲಮಟ್ಟಿ ಮತ್ತು ಭದ್ರಾ ಜಲಾಶಯಗಳು ಭರ್ತಿಯಾಗುವ ಹಂತಕ್ಕೆ ತಲುಪಿದ್ದರೆ, ಕೆಆರ್‌ಎಸ್ ಮತ್ತು ಲಿಂಗನಮಕ್ಕಿ ಜಲಾಶಯಗಳಿಗೆ ನಿರಂತರವಾಗಿ ಒಳಹರಿವು ಹರಿದುಬರುತ್ತಿದೆ. ಕೃಷಿ ಚಟುವಟಿಕೆಗಳಿಗೆ ಹಾಗೂ ಕುಡಿಯುವ ನೀರಿಗೆ ಅನುಕೂಲವಾಗುವಂತೆ ಅಗತ್ಯ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ. ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ಒಳಹರಿವು ಹಾಗೂ ಹೊರಹರಿವಿನ ಸಂಪೂರ್ಣ ವಿವರ ಇಲ್ಲಿದೆ.
ಕೆಆರ್‌ಎಸ್ ಜಲಾಶಯ (ಮಂಡ್ಯ)
ಗರಿಷ್ಠ ಮಟ್ಟ: 124.80 ಅಡಿ ಇಂದಿನ ಮಟ್ಟ: 108.48 ಅಡಿ ಒಳಹರಿವು: 1,367 ಕ್ಯೂಸೆಕ್ ಹೊರಹರಿವು: 4,824 ಕ್ಯೂಸೆಕ್ ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ ಇಂದಿನ ಸಂಗ್ರಹ: 30.222 ಟಿಎಂಸಿ
ಆಲಮಟ್ಟಿ ಜಲಾಶಯ
ಗರಿಷ್ಠ ಮಟ್ಟ: 519.60 ಮೀಟರ್ ಇಂದಿನ ಮಟ್ಟ: 519.47 ಮೀಟರ್ ಒಳಹರಿವು: 30,026 ಕ್ಯೂಸೆಕ್ ಹೊರಹರಿವು: 24,158 ಕ್ಯೂಸೆಕ್
ಭದ್ರಾ ಜಲಾಶಯ
ಗರಿಷ್ಠ ಮಟ್ಟ: 186 ಅಡಿ 0 ಇಂಚು ಇಂದಿನ ಮಟ್ಟ: 175 ಅಡಿ 2 ಇಂಚು (2147.16 ಅಡಿ) ಒಳಹರಿವು: 3,504 ಕ್ಯೂಸೆಕ್ ಹೊರಹರಿವು: 205 ಕ್ಯೂಸೆಕ್ ಗರಿಷ್ಠ ಸಾಮರ್ಥ್ಯ: 71.535 ಟಿಎಂಸಿ ಇಂದಿನ ಸಂಗ್ರಹ: 58.569 ಟಿಎಂಸಿ
ಲಿಂಗನಮಕ್ಕಿ ಜಲಾಶಯ
ಗರಿಷ್ಠ ಮಟ್ಟ: 1819 ಅಡಿ ಇಂದಿನ ಮಟ್ಟ: 1796.20 ಅಡಿ ಒಳಹರಿವು: 10,173 ಕ್ಯೂಸೆಕ್ ಸಂಗ್ರಹ ಶೇಕಡಾವಾರು: ಶೇ 57.23 ಇಂದಿನ ಮಟ್ಟದ ಏರಿಕೆ: 0.20 ಅಡಿ
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




