Karnataka Dam Water Level: ಇಂದಿನಿಂದ ಮತ್ತೆ ಮಳೆ ಹೆಚ್ಚಳ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

Karnataka Reservoir Water Level: ಮಲಪ್ರಭಾ ಶೇ. 96, ಘಟಪ್ರಭಾ ಶೇ. 97, ಲಿಂಗನಮಕ್ಕಿ ಶೇ. 91, ಹಾರಂಗಿ ಶೇ. 96, ಕಬಿನಿ ಶೇ. 99, ಆಲಮಟ್ಟಿ ಶೇ. 95ರಷ್ಟು ಭರ್ತಿಯಾಗಿದೆ. ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ  ಬಗ್ಗೆ ಮಾಹಿತಿ ಇಲ್ಲಿದೆ.

Karnataka Dam Water Level: ಇಂದಿನಿಂದ ಮತ್ತೆ ಮಳೆ ಹೆಚ್ಚಳ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ
ಪ್ರಾತಿನಿಧಿಕ ಚಿತ್ರ
Follow us
| Updated By: preethi shettigar

Updated on:Oct 31, 2021 | 7:37 AM

Karnataka Rain: ತಮಿಳುನಾಡು, ಕರ್ನಾಟಕ, ಕೇರಳ ಮತ್ತು ಮಾಹೆಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ನವೆಂಬರ್ 1 ರಂದು ಕೇರಳ ಮತ್ತು ಮಾಹೆಯಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ. ನವೆಂಬರ್ 1ರಿಂದ 3ರವರೆಗೆ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್, ರಾಯಲಸೀಮೆ, ಮತ್ತು ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಹೆಚ್ಚಾಗಲಿದೆ.ರಾಜ್ಯದಲ್ಲಿ ಸುರಿದ ಮಳೆಯಿಂದ ಭದ್ರಾ, ಕೆಆರ್​ಎಸ್​, ತುಂಗಾಭದ್ರಾ ಡ್ಯಾಂಗಳು ಸಂಪೂರ್ಣ ಭರ್ತಿಯಾಗಿವೆ. ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಕೃಷ್ಣರಾಜ ಸಾಗರ (ಕೆಆರ್‌ಎಸ್) ಅಣೆಕಟ್ಟಿನ ನೀರಿನ ಮಟ್ಟ ಭರ್ತಿಯಾಗಿದ್ದು, ಗರಿಷ್ಠ 124.80 ಅಡಿಗಳನ್ನು ತಲುಪಿದೆ. 11 ವರ್ಷಗಳ ಬಳಿಕ ಅಕ್ಟೋಬರ್ ಕೊನೆಯ ವಾರದಲ್ಲಿ ಕೆಆರ್​ಎಸ್​ ಡ್ಯಾಂ ತನ್ನ ಸಂಪೂರ್ಣ ಜಲಾಶಯದ ಮಟ್ಟವನ್ನು ತಲುಪಿದೆ. ಮಲಪ್ರಭಾ ಶೇ. 96, ಘಟಪ್ರಭಾ ಶೇ. 97, ಲಿಂಗನಮಕ್ಕಿ ಶೇ. 91, ಹಾರಂಗಿ ಶೇ. 96, ಕಬಿನಿ ಶೇ. 99, ಆಲಮಟ್ಟಿ ಶೇ. 95ರಷ್ಟು ಭರ್ತಿಯಾಗಿದೆ. ಕರ್ನಾಟಕದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ (Karnataka Reservoir Water Level)ದ  ಬಗ್ಗೆ ಮಾಹಿತಿ ಇಲ್ಲಿದೆ.

ಕೆಆರ್​ಎಸ್​ ಜಲಾಶಯ (KRS Dam) ಗರಿಷ್ಠ ನೀರಿನ ಮಟ್ಟ- 124.80 ಅಡಿ ಇಂದಿನ ನೀರಿನ ಮಟ್ಟ- 124.80 ಅಡಿ ಗರಿಷ್ಠ ಸಾಮರ್ಥ್ಯ- 49.45 ಟಿಎಂಸಿ ಇಂದಿನ ಒಳಹರಿವು- 8,764 ಕ್ಯೂಸೆಕ್ಸ್​ ಇಂದಿನ ಹೊರಹರಿವು- 3617 ಕ್ಯೂಸೆಕ್ಸ್​​

ವರಾಹಿ ಜಲಾಶಯ (Varahi Dam) ಗರಿಷ್ಠ ಮಟ್ಟ- 594.36 ಮೀಟರ್ ಒಟ್ಟು ಸಾಮರ್ಥ್ಯ – 31.10 ಟಿಎಂಸಿ ಇಂದಿನ ನೀರಿನ ಮಟ್ಟ- 18.47 ಟಿಎಂಸಿ ಇಂದಿನ ಒಳಹರಿವು- 414 ಕ್ಯೂಸೆಕ್ಸ್​ ಇಂದಿನ ಹೊರಹರಿವು- 744 ಕ್ಯೂಸೆಕ್ಸ್​​

ಹಾರಂಗಿ ಜಲಾಶಯ (Harangi Dam) ಗರಿಷ್ಠ ಮಟ್ಟ-871.42 ಮೀಟರ್ ಒಟ್ಟು ಸಾಮರ್ಥ್ಯ – 8.50 ಟಿಎಂಸಿ ಇಂದಿನ ನೀರಿನ ಮಟ್ಟ- 8.17 ಟಿಎಂಸಿ ಇಂದಿನ ಒಳಹರಿವು- 705 ಕ್ಯೂಸೆಕ್ಸ್​ ಇಂದಿನ ಹೊರಹರಿವು- 1025 ಕ್ಯೂಸೆಕ್ಸ್​​

ಹೇಮಾವತಿ ಜಲಾಶಯ (Hemavathi Dam) ಗರಿಷ್ಠ ಮಟ್ಟ- 890.58 ಮೀಟರ್ ಒಟ್ಟು ಸಾಮರ್ಥ್ಯ – 37.10 ಟಿಎಂಸಿ ಇಂದಿನ ನೀರಿನ ಮಟ್ಟ- 26.67 ಟಿಎಂಸಿ ಇಂದಿನ ಒಳಹರಿವು- 1252 ಕ್ಯೂಸೆಕ್ಸ್​​ ಇಂದಿನ ಹೊರಹರಿವು- 3460 ಕ್ಯೂಸೆಕ್ಸ್​

ಕಬಿನಿ ಜಲಾಶಯ (Kabini Dam) ಗರಿಷ್ಠ ನೀರಿನ ಮಟ್ಟ- 696.13 ಮೀಟರ್ ಒಟ್ಟು ಸಾಮರ್ಥ್ಯ – 19.52 ಟಿಎಂಸಿ ಇಂದಿನ ನೀರಿನ ಮಟ್ಟ- 19.40 ಟಿಎಂಸಿ ಇಂದಿನ ಒಳಹರಿವು- 2572 ಕ್ಯೂಸೆಕ್ಸ್​ ಇಂದಿನ ಹೊರಹರಿವು- 700 ಕ್ಯೂಸೆಕ್ಸ್​​

ಲಿಂಗನಮಕ್ಕಿ ಜಲಾಶಯ (Linganamakki Dam) ಗರಿಷ್ಠ ಮಟ್ಟ- 554.4 ಮೀಟರ್ ಒಟ್ಟು ಸಾಮರ್ಥ್ಯ – 151.75 ಟಿಎಂಸಿ ಇಂದಿನ ನೀರಿನ ಮಟ್ಟ- 137.96 ಟಿಎಂಸಿ ಇಂದಿನ ಒಳಹರಿವು- 2671 ಕ್ಯೂಸೆಕ್ಸ್​ ಇಂದಿನ ಹೊರಹರಿವು- 5960 ಕ್ಯೂಸೆಕ್ಸ್

ಸೂಪಾ ಜಲಾಶಯ (Supa Dam) ಗರಿಷ್ಠ ನೀರಿನ ಮಟ್ಟ- 564.00 ಮೀಟರ್ ಒಟ್ಟು ಸಾಮರ್ಥ್ಯ: 145.33 ಟಿಎಂಸಿ ಇಂದಿನ ನೀರಿನ ಮಟ್ಟ- 113.81 ಟಿಎಂಸಿ ಇಂದಿನ ಒಳಹರಿವು- 1216 ಕ್ಯೂಸೆಕ್ಸ್​ ಇಂದಿನ ಹೊರಹರಿವು- 3862 ಕ್ಯೂಸೆಕ್ಸ್​​

ತುಂಗಾಭದ್ರಾ ಜಲಾಶಯ (Tungabhadra Dam) ಗರಿಷ್ಠ ನೀರಿನ ಮಟ್ಟ- 497.71 ಮೀಟರ್ ಒಟ್ಟು ಸಾಮರ್ಥ್ಯ- 100.86 ಟಿಎಂಸಿ ಇಂದಿನ ನೀರಿನ ಮಟ್ಟ- 100.74 ಟಿಎಂಸಿ ಇಂದಿನ ಒಳಹರಿವು- 10,326 ಕ್ಯೂಸೆಕ್ಸ್​ ಇಂದಿನ ಹೊರಹರಿವು- 11,662 ಕ್ಯೂಸೆಕ್ಸ್​

ಭದ್ರಾ ಜಲಾಶಯ (Bhadra Dam) ಗರಿಷ್ಠ ನೀರಿನ ಮಟ್ಟ- 657.73 ಮೀಟರ್ ಒಟ್ಟು ಸಾಮರ್ಥ್ಯ – 71.54 ಟಿಎಂಸಿ ಇಂದಿನ ನೀರಿನ ಮಟ್ಟ- 71.48 ಟಿಎಂಸಿ ಇಂದಿನ ಒಳಹರಿವು- 3486 ಕ್ಯೂಸೆಕ್ಸ್​ ಇಂದಿನ ಹೊರಹರಿವು- 3787 ಕ್ಯೂಸೆಕ್ಸ್​​

ಮಲಪ್ರಭಾ ಜಲಾಶಯ (Malaprabha Dam) ಗರಿಷ್ಠ ನೀರಿನ ಮಟ್ಟ- 633.80 ಮೀಟರ್​ ಒಟ್ಟು ಸಾಮರ್ಥ್ಯ – 37.73 ಟಿಎಂಸಿ ಇಂದಿನ ನೀರಿನ ಮಟ್ಟ- 36.34 ಟಿಎಂಸಿ ಇಂದಿನ ಒಳಹರಿವು- 0 ಕ್ಯೂಸೆಕ್ಸ್​ ಇಂದಿನ ಹೊರಹರಿವು- 1394 ಕ್ಯೂಸೆಕ್ಸ್​

ಘಟಪ್ರಭಾ ಜಲಾಶಯ (Ghataprabha Dam) ಗರಿಷ್ಠ ಮಟ್ಟ- 662.94 ಮೀಟರ್​ ಒಟ್ಟು ಸಾಮರ್ಥ್ಯ – 51.00 ಟಿಎಂಸಿ ಇಂದಿನ ನೀರಿನ ಮಟ್ಟ- 49.67 ಟಿಎಂಸಿ ಇಂದಿನ ಒಳಹರಿವು- 0 ಕ್ಯೂಸೆಕ್ಸ್​​ ಇಂದಿನ ಹೊರಹರಿವು- 2870 ಕ್ಯೂಸೆಕ್ಸ್

ಆಲಮಟ್ಟಿ ಜಲಾಶಯ (Alamatti Dam) ಗರಿಷ್ಠ ಮಟ್ಟ- 519.60 ಮೀಟರ್ ಒಟ್ಟು ಸಾಮರ್ಥ್ಯ – 123.08 ಟಿಎಂಸಿ ಇಂದಿನ ನೀರಿನ ಮಟ್ಟ- 116.53 ಟಿಎಂಸಿ ಇಂದಿನ ಒಳಹರಿವು- 0 ಕ್ಯೂಸೆಕ್ಸ್​ ಇಂದಿನ ಹೊರಹರಿವು- 11736 ಕ್ಯೂಸೆಕ್ಸ್

ಇದನ್ನೂ ಓದಿ: Karnataka Dams Water Level: ಕೆಆರ್​ಎಸ್​ ಡ್ಯಾಂ ಭರ್ತಿ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

Karnataka Dams Water Level: ಕೆಆರ್​ಎಸ್​ ಡ್ಯಾಂ ಭರ್ತಿಗೆ ಕ್ಷಣಗಣನೆ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

Published On - 7:33 am, Sun, 31 October 21