AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರಿಶಿಷ್ಟ ಜಾತಿ, ಪಂಗಡಗಳ ಮೀಸಲಾತಿ ಪ್ರಮಾಣ ಹೆಚ್ಚಳ ರದ್ದುಗೊಳಿಸಿ ಹೈಕೋರ್ಟ್ ಆದೇಶ

ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಹೆಚ್ಚಿಸಿ ಅಂದಿನ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಆದೇಶಕ್ಕೆ ಕೋರ್ಟ್​ ಬ್ರೇಕ್ ಹಾಕಿದೆ. ಪರಿಶಿಷ್ಟ ಜಾತಿಯವರಿಗೆ ಶೇ.17 ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ಶೇ.7ಕ್ಕೆ ಹೆಚ್ಚಿಸಲಾಗಿತ್ತು. ಆದ್ರೆ, ಇದೀಗ ಇದನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿ ಹೊರಡಿಸಿದೆ.

ಪರಿಶಿಷ್ಟ ಜಾತಿ, ಪಂಗಡಗಳ ಮೀಸಲಾತಿ ಪ್ರಮಾಣ ಹೆಚ್ಚಳ ರದ್ದುಗೊಳಿಸಿ ಹೈಕೋರ್ಟ್ ಆದೇಶ
ಕರ್ನಾಟಕ ಹೈಕೋರ್ಟ್​
ರಮೇಶ್​ ಎಮ್​.
| Edited By: |

Updated on:Oct 12, 2026 | 6:57 PM

Share

ಬೆಂಗಳೂರು, (ಅಕ್ಟೋಬರ್ 12): ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಅಧಿನಿಯಮ–2022ರಡಿ ಪರಿಶಿಷ್ಟ ಜಾತಿಯವರಿಗೆ ಶೇ.17 ಹಾಗೂ ಪರಿಶಿಷ್ಟ ಪಂಗಡದವರಿಗೆ ಶೇ.7ರಷ್ಟು ಹೆಚ್ಚಿಸಲಾದ ಮೀಸಲಾತಿಯನ್ನು ಹೈಕೋರ್ಟ್ ರದ್ದುಗೊಳಿಸಿದೆ. ಶೈಕ್ಷಣಿಕ ಸಂಸ್ಥೆ, ರಾಜ್ಯಾಧೀನ ಸೇವೆಗಳಲ್ಲಿ ಮೀಸಲಾತಿ ಹೆಚ್ಚಳದ ಕಾಯ್ದೆ ಪ್ರಶ್ನಿಸಿ ಮಹೇಂದ್ರ ಕುಮಾರ್ ಮಿತ್ರಾ ಎಂಬುವರು ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ಸಿಜೆ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್.ಹೇಮಲೇಖಾ ಅವರಿದ್ದ ಹೈಕೋರ್ಟ್ ಪೀಠ, ಪರಿಶಿಷ್ಟ ಜಾತಿ, ಪಂಗಡಗಳ ಮೀಸಲಾತಿ ಪ್ರಮಾಣವನ್ನು ಶೇ.50ರಿಂದ ಶೇ.56ಕ್ಕೇರಿಸಿದ್ದ ಸರ್ಕಾರದ ಆದೇಶವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಪರಿಶಿಷ್ಟ ಜಾತಿಗೆ 15% ಮತ್ತು ಪರಿಶಿಷ್ಟ ಪಂಗಡಕ್ಕೆ 3% ಮೀಸಲಾತಿ ಇತ್ತು. ನ್ಯಾ.ನಾಗಮೋಹನ್ ದಾಸ್ ಸಮಿತಿ ಜನಸಂಖ್ಯೆ ಆಧಾರದಲ್ಲಿ ಎಸ್‌ಸಿ ಮೀಸಲಾತಿ 15% ನಿಂದ 17%ಗೆ ಹಾಗೂ ಎಸ್‌ಟಿ ಮೀಸಲಾತಿ 3% ನಿಂದ 7%ಗೆ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ನಂತರ ಸರ್ವ ಪಕ್ಷಗಳ ಸಭೆಯಲ್ಲಿ ವರದಿ ಜಾರಿಗೆ ಎಲ್ಲಾ ಪಕ್ಷಗಳು ಒಪ್ಪಿಗೆ ನೀಡಿದ್ದವು.

ಇದನ್ನೂ ಓದಿ: ಎಸ್​ಸಿ, ಎಸ್​ಟಿ ಮೀಸಲಾತಿ ಪ್ರಮಾಣ ಹೆಚ್ಚಳ ವಿಚಾರ: 9ನೇ ಶೆಡ್ಯೂಲ್​ಗೆ ಸೇರಿಸುವಂತೆ ಕೇಂದ್ರಕ್ಕೆ ಪತ್ರ ಬರೆದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ

ಸುಗ್ರೀವಾಜ್ಞೆ ಹೊರಡಿಸಿದ್ದ ಬೊಮ್ಮಯಿ ಸರ್ಕಾರ

ಪರಿಶಿಷ್ಟರ ಮೀಸಲು ಪ್ರಮಾಣವನ್ನು ಶೇ.18 ರಿಂದ ಶೇ.24ಕ್ಕೆ ಹೆಚ್ಚಿಸುವ ಸಂಬಂಧ ರೂಪಿಸಲಾಗಿರುವ ಕರಡು ವಿಧೇಯಕಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿತ್ತು. ಈ ಸಂಬಂಧ ಅಂದಿನ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. ಬಳಿಕ ರಾಜ್ಯಪಾಲರು ಸಹ ಸುಗ್ರೀವಾಜ್ಞೆಗೆ ಒಪ್ಪಿಗೆ ಸೂಚಿಸಿದ್ದರು. ನಂತರ ಪರಿಶಿಷ್ಟರ ಜಾತಿಯ ಮೀಸಲಾತಿ ಪ್ರಮಾಣ ಶೇ. 15 ರಿಂದ 17 ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಶೇ. 3 ರಿಂದ 7ಕ್ಕೆ ಹೆಚ್ಚಿಸಿ ಅಧಿಕೃತ ವಿಶೇಷ ರಾಜ್ಯಪತ್ರವನ್ನು ಸರ್ಕಾರ ಪ್ರಕಟಿಸಿತ್ತು.

103 ಉಪ ಜಾತಿ ಒಳಗೊಂಡ ಪರಿಶಿಷ್ಟರ ಜಾತಿಯ ಮೀಸಲು ಪ್ರಮಾಣವನ್ನು ಶೇ.15 ರಿಂದ ಶೇ.17ಕ್ಕೆ ಹಾಗೂ 56 ಉಪ ಪಂಗಡ ಒಳಗೊಂಡ ಪರಿಶಿಷ್ಟ ಪಂಗಡದ ಮೀಸಲನ್ನು ಶೇ.3 ರಿಂದ ಶೇ.7ಕ್ಕೆ ಹೆಚ್ಚಿಸಿ ಸರ್ಕಾರ ಆದೇಶಿಸುವ ಮೂಲಕ ಕರ್ನಾಟಕದಲ್ಲಿ ಒಟ್ಟು ಮೀಸಲಾತಿ 50ರಿಂದ 56ಕ್ಕೆ ಹೆಚ್ಚಳ ಮಾಡಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:01 pm, Mon, 12 October 26

Follow Us
ರಮೇಶ್​ ಎಮ್​.
ರಮೇಶ್​ ಎಮ್​.

ರಮೇಶ್​ ಎಂ ವಿಶೇಷ ವರದಿಗಾರರಾಗಿದ್ದಾರೆ, ಮೂಲತಃ ಕಾನೂನು ಪದವೀಧರನಾಗಿದ್ದು ಕಳೆದ 18 ವರ್ಷಗಳಿಂದ ಟಿವಿ9 ಸುದ್ದಿ ವಾಹಿನಿಯಲ್ಲಿ ಕಾನೂನು ಸಂಬಂಧಿತ ವರದಿ ನೀಡುತ್ತಿದ್ದಾರೆ. ಹೈಕೋರ್ಟ್, ಸುಪ್ರೀಂ ಕೋರ್ಟ್ ಹಾಗೂ ವಿಚಾರಣಾ ನ್ಯಾಯಾಲಯಗಳ ಪ್ರಮುಖ ಪ್ರಕರಣಗಳ ವರದಿಗಾರಿಕೆ ಮಾಡುತ್ತಿದ್ದು, ಬೆಂಗಳೂರಿನ ನಿವಾಸಿಯಾಗಿದ್ದಾರೆ.

Read More
ವಿಜಯಲಕ್ಷ್ಮಿ ದರ್ಶನ್ ಸುತ್ತ ಗರಗರನೆ ತಿರುಗಿದ ಕರಿಕಲ್ಲಮ್ಮ ದೇವರ ಮೂರ್ತಿ
ವಿಜಯಲಕ್ಷ್ಮಿ ದರ್ಶನ್ ಸುತ್ತ ಗರಗರನೆ ತಿರುಗಿದ ಕರಿಕಲ್ಲಮ್ಮ ದೇವರ ಮೂರ್ತಿ
ಕಾಂಗ್ರೆಸ್ ಪದಾಧಿಕಾರಿಗಳಿಗೆ ಸಚಿವ ಶಿವಲಿಂಗೇಗೌಡ ಭರ್ಜರಿ ಗಿಫ್ಟ್
ಕಾಂಗ್ರೆಸ್ ಪದಾಧಿಕಾರಿಗಳಿಗೆ ಸಚಿವ ಶಿವಲಿಂಗೇಗೌಡ ಭರ್ಜರಿ ಗಿಫ್ಟ್
ಕಾಂಗ್ರೆಸ್ ನಾಯಕರನ್ನ ಕತ್ತರಿಸಿ ಸಮುದ್ರಕ್ಕೆ ಎಸೆಯುತ್ತಾರೆ: ಛಲವಾದಿ ವಿವಾದ
ಕಾಂಗ್ರೆಸ್ ನಾಯಕರನ್ನ ಕತ್ತರಿಸಿ ಸಮುದ್ರಕ್ಕೆ ಎಸೆಯುತ್ತಾರೆ: ಛಲವಾದಿ ವಿವಾದ
ಹಾಸನಾಂಬೆ ದೇವಿಯ ದರ್ಶನ ಮಾಡಿದ ನಟಿ ಪ್ರೇಮಾ, ಕಾರುಣ್ಯಾ ರಾಮ್: ವಿಡಿಯೋ
ಹಾಸನಾಂಬೆ ದೇವಿಯ ದರ್ಶನ ಮಾಡಿದ ನಟಿ ಪ್ರೇಮಾ, ಕಾರುಣ್ಯಾ ರಾಮ್: ವಿಡಿಯೋ
ಬಿಗ್ ಬಾಸ್: ಶಾಸ್ತ್ರಿ ಕುತಂತ್ರದ ವಿರುದ್ಧ ತಿರುಗಿ ಬಿದ್ದ ತಾಂಡವ್, ಗಾನವಿ
ಬಿಗ್ ಬಾಸ್: ಶಾಸ್ತ್ರಿ ಕುತಂತ್ರದ ವಿರುದ್ಧ ತಿರುಗಿ ಬಿದ್ದ ತಾಂಡವ್, ಗಾನವಿ
ಮೈಸೂರಿನಲ್ಲೂ ಭುಗಿಲೆದ್ದ ಕಬ್ಬು ಕಿಚ್ಚು: ಡಿಸಿ ಕಚೇರಿ ರಸ್ತೆಯಲ್ಲೇ ಅಡುಗೆ
ಮೈಸೂರಿನಲ್ಲೂ ಭುಗಿಲೆದ್ದ ಕಬ್ಬು ಕಿಚ್ಚು: ಡಿಸಿ ಕಚೇರಿ ರಸ್ತೆಯಲ್ಲೇ ಅಡುಗೆ
ನದಿಗಳ ಜೋಡಣೆ ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ತಡೆ
ನದಿಗಳ ಜೋಡಣೆ ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ತಡೆ
ನನ್ನನ್ನೂ ಸೇರಿ 26 ಶಾಸಕರು ರಾಜೀನಾಮೆ ಕೊಡಬೇಕು ಎಂದ ರಾಜಣ್ಣ
ನನ್ನನ್ನೂ ಸೇರಿ 26 ಶಾಸಕರು ರಾಜೀನಾಮೆ ಕೊಡಬೇಕು ಎಂದ ರಾಜಣ್ಣ
ಚೆಂಡು ಹೂವಿನ ತೋಟದಲ್ಲಿ ರಾರಾಜಿಸುತ್ತಿದೆ ಪ್ರಧಾನಿ ಮೋದಿ ಹೆಸರು
ಚೆಂಡು ಹೂವಿನ ತೋಟದಲ್ಲಿ ರಾರಾಜಿಸುತ್ತಿದೆ ಪ್ರಧಾನಿ ಮೋದಿ ಹೆಸರು
ಸಿಸಿಬಿ ವಿಚಾರಣೆಗ ಹಾಜರಾದ ಹೆಚ್​​ಡಿಕೆ ಪಿಆರ್​​ಒ ಪ್ರಜ್ವಲ್ ಪ್ರಸಾದ್
ಸಿಸಿಬಿ ವಿಚಾರಣೆಗ ಹಾಜರಾದ ಹೆಚ್​​ಡಿಕೆ ಪಿಆರ್​​ಒ ಪ್ರಜ್ವಲ್ ಪ್ರಸಾದ್