ಕೋವಿಡ್ ಇಲ್ಲದವರಿಗೆ ಚಿಕಿತ್ಸೆ ವಿಚಾರ: ಸರ್ಕಾರದ ಕಾರ್ಯವೈಖರಿಗೆ ಹೈಕೋರ್ಟ್ ಅಸಮಾಧಾನ

ಸರ್ಕಾರದ ಹೇಳಿಕೆಗಳು ಕೇವಲ ಕಾಗದಗಳ ಮೇಲಿವೆ. ವ್ಯವಸ್ಥೆ ಸರಿಪಡಿಸಲು ತಕ್ಷಣ ಕ್ರಮ ಕೈಗೊಳ್ಳಿ. ಎಲ್ಲಾ ಆಸ್ಪತ್ರೆಗಳ‌ ಮುಂದೆ ಹೆಲ್ಪ್ ಡೆಸ್ಕ್ ಸ್ಥಾಪಿಸಿ. ಬೆಡ್ ಎಲ್ಲಿ ಖಾಲಿ ಇದೆ ಎಂಬುದರ ಮಾಹಿತಿ ನೀಡಿ ಎಂದು ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಸೂಚನೆ ನೀಡಿತು.

ಕೋವಿಡ್ ಇಲ್ಲದವರಿಗೆ ಚಿಕಿತ್ಸೆ ವಿಚಾರ: ಸರ್ಕಾರದ ಕಾರ್ಯವೈಖರಿಗೆ ಹೈಕೋರ್ಟ್ ಅಸಮಾಧಾನ
ಕರ್ನಾಟಕ ಹೈಕೋರ್ಟ್
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Apr 22, 2021 | 7:01 PM

ಬೆಂಗಳೂರು: ರಾಜ್ಯದಲ್ಲಿ ಕೊರೊನಾ 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೊವಿಡ್ ಸೋಂಕು ಇಲ್ಲದವರು ಚಿಕಿತ್ಸೆಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿರುವ ಬಗ್ಗೆ ಹೈಕೋರ್ಟ್​ ವಿಭಾಗೀಯ ಪೀಠ ಶುಕ್ರವಾರ ಅಸಮಾಧಾನ ವ್ಯಕ್ತಪಡಿಸಿತು. ಕೊರೊನಾ ನೆಗೆಟಿವ್ ವರದಿ ಇಲ್ಲದಿದ್ದರೆ ಗರ್ಭಿಣಿಯರಿಗೂ ಆಸ್ಪತ್ರೆಯೊಳಗೆ ಪ್ರವೇಶ ಸಿಗುತ್ತಿಲ್ಲ. ಟೆಸ್ಟಿಂಗ್ ಸೆಂಟರ್​ಗಳ ಮುಂದೆ ವೃದ್ಧರು, ಗರ್ಭಿಣಿಯರು ಕ್ಯೂ ನಿಲ್ಲಬೇಕಾಗಿದೆ ಎಂದು ಸರ್ಕಾರವನ್ನು ಹೈಕೋರ್ಟ್​ ತರಾಟೆಗೆ ತೆಗೆದುಕೊಂಡಿತು.

ಟೆಸ್ಟಿಂಗ್ ಸೆಂಟರ್​ಗಳ ಎದುರು ಪ್ರತ್ಯೇಕ ಸರತಿ ಸಾಲಿಗೆ ಸರ್ಕಾರ ಸೂಚನೆ ನೀಡಬೇಕು. ಕೊರೊನಾ ಲಕ್ಷಣಗಳಿಲ್ಲದವರಿಗೆ ಪ್ರವೇಶ ನೀಡಬೇಕು. 24 ಗಂಟೆಗಳಲ್ಲಿ (ಒಂದು ದಿನದಲ್ಲಿ) ಕೊರೊನಾದ RTPCR ಟೆಸ್ಟ್ ರಿಪೋರ್ಟ್ ಸಿಕ್ತಿಲ್ಲ. ಸರ್ಕಾರದ ಹೇಳಿಕೆಗಳು ಕೇವಲ ಕಾಗದಗಳ ಮೇಲಿವೆ. ವ್ಯವಸ್ಥೆ ಸರಿಪಡಿಸಲು ತಕ್ಷಣ ಕ್ರಮ ಕೈಗೊಳ್ಳಿ. ಎಲ್ಲಾ ಆಸ್ಪತ್ರೆಗಳ‌ ಮುಂದೆ ಹೆಲ್ಪ್ ಡೆಸ್ಕ್ ಸ್ಥಾಪಿಸಿ. ಬೆಡ್ ಎಲ್ಲಿ ಖಾಲಿ ಇದೆ ಎಂಬುದರ ಮಾಹಿತಿ ನೀಡಿ ಎಂದು ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಸೂಚನೆ ನೀಡಿತು.

ರಾಜ್ಯದ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ವಿಚಾರ ಕುರಿತು ನ್ಯಾಯಾಲಯಕ್ಕೆ ಸರ್ಕಾರವು ಇದೇ ಸಂದರ್ಭ ಮಾಹಿತಿ ನೀಡಿತು. ರಾಜ್ಯ ಸರ್ಕಾರ ಪರವಾಗಿ ಹೈಕೋರ್ಟ್​ನಲ್ಲಿ ಉಪಸ್ಥಿತರಿದ್ದರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ, ರಾಜ್ಯದಲ್ಲಿ 812 ಟನ್ ಆಕ್ಸಿಜನ್ ಉತ್ಪಾದನೆಯಾಗ್ತಿದೆ. ಸದ್ಯ ಆಸ್ಪತ್ರೆಗಳಿಗೆ 215 ಟನ್ ಮಾತ್ರ ಅಗತ್ಯವಿದೆ. ಐಎಎಸ್ ಅಧಿಕಾರಿ ನೇತೃತ್ವದಲ್ಲಿ ವಾರ್ ರೂಮ್ ಸ್ಥಾಪಿಸಲಾಗಿದ್ದು, ಉಸ್ತುವಾರಿಗೆ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದರು. ವಾರ್ ರೂಮ್ ಕಾರ್ಯವೈಖರಿ ಬಗ್ಗೆ ಸ್ಪಷ್ಟನೆ ನೀಡಿ ಎಂದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಒಕಾ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ಪೀಠವು ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿತು.

ರೆಮ್​ಡಿಸಿವರ್ ಔಷಧಿಗಾಗಿ ಸೋಂಕಿತರ ಸಂಬಂಧಿಗಳು ಅಲೆದಾಡುತ್ತಿರುವುದನ್ನು ಪ್ರಸ್ತಾಪಿಸಿದ ಹೈಕೋರ್ಟ್​, ರೆಮ್​ಡಿಸಿವರ್ ಔಷಧದ ಬ್ಲಾಕ್ ಮಾರ್ಕೆಟಿಂಗ್ ತಪ್ಪಿಸಿ ಎಂದು ಸೂಚನೆ ನೀಡಿತು. ಔಷಧದ ಲಭ್ಯತೆ ಬಗ್ಗೆ ವೆಬ್​ಸೈಟ್​ನಲ್ಲಿ 12 ಗಂಟೆಗೊಮ್ಮೆ ವಿವರ ನೀಡಿ. ರೆಮ್​ಡಿಸಿವರ್ ಸ್ಟಾಕಿಸ್ಟ್​ಗಳ ವಿಳಾಸ, ವಿವರ ಪ್ರಕಟಿಸಿ. ಸರ್ಕಾರವೇ ಔಷಧಿಯನ್ನು ಖರೀದಿಸಿ ಆಸ್ಪತ್ರೆಗಳಿಗೆ ನಿಗದಿತ ದರಕ್ಕೆ ನೀಡಲಿ. ರೆಮ್​ಡಿಸಿವರ್ ಸ್ಟಾಕಿಸ್ಟ್​ಗಳ ಮೇಲೆ‌ ಅಧಿಕಾರಿಗಳು ನಿಗಾ ಇಡಲಿ ಎಂದು ಸಲಹೆ ಮಾಡಿತು.

ರೆಮ್​ಡಿಸಿವರ್ ಬ್ಲಾಕ್ ಮಾರ್ಕೆಟ್​ನಲ್ಲಿ ಸೇಲ್ ಆಗ್ತಿದೆ ಎಂದು ನರ್ಸಿಂಗ್ ಇನ್​​ಸ್ಟಿಟ್ಯೂಟ್ಸ್​ ಅಧ್ಯಕ್ಷ ಶಿವಕುಮಾರ್ ಬರೆದಿರುವ ಪತ್ರವನ್ನು ಪ್ರಸ್ತಾಪಿಸಿದ ಹೈಕೋರ್ಟ್​, ಬೆಡ್, ಆಕ್ಸಿಜನ್ ಸಿಗುತ್ತಿಲ್ಲ ಎಂದು ಪತ್ರದಲ್ಲಿ ಮಾಹಿತಿಯಿದೆ. ಔಷಧಿಯ ಬ್ಲಾಕ್ ಮಾರ್ಕೆಟಿಂಗ್ ತಡೆಗಟ್ಟಲು ಅಗತ್ಯ ಕ್ರಮ ತೆಗೆದುಕೊಳ್ಳಿ ಎಂದು ಹೈಕೋರ್ಟ್​ ಸೂಚನೆ ನೀಡಿದೆ.

(Karnataka High court express displeasure over state govt handling of non covid patients)

ಇದನ್ನೂ ಓದಿ: Explainer: ಮಕ್ಕಳನ್ನೂ ಬಾಧಿಸುತ್ತಿದೆ ಕೊರೊನಾ; ನಿಮ್ಮ ಮನೆಯಲ್ಲಿ ಮಕ್ಕಳಿದ್ದರೆ ಈ ಸ್ಟೋರಿ‌ ಮಿಸ್ ಮಾಡದೇ ಓದಿ

ಇದನ್ನೂ ಓದಿ: Explainer: ಕೊವಿಡ್ ನಿರ್ವಹಣೆ ಕೈಪಿಡಿ, ನಿಮ್ಮ ಮನೆಯಲ್ಲಿಯೂ ಇರಲಿ ಈ ಆಪ್ತಮಿತ್ರ

Published On - 6:59 pm, Thu, 22 April 21

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM