2026-27ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪ್ರಕಟ: ಮುಖ್ಯಮಂತ್ರಿ ಚಂದ್ರುಗೆ ಜೀವಮಾನ ಸಾಧನೆ ಗೌರವ
Karnataka Nataka Academy Awards: ಕರ್ನಾಟಕ ನಾಟಕ ಅಕಾಡೆಮಿಯು 2026-27ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಿದೆ. ರಂಗಭೂಮಿ ಕ್ಷೇತ್ರದ ಸೇವೆಗಾಗಿ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರಿಗೆ ಪ್ರತಿಷ್ಠಿತ ಜೀವಮಾನ ಸಾಧನೆ ಗೌರವ ಪ್ರಶಸ್ತಿ ಲಭಿಸಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ 25 ಕಲಾವಿದರಿಗೆ ವಾರ್ಷಿಕ ಪ್ರಶಸ್ತಿಗಳು ಹಾಗೂ ಇತರೆ ದತ್ತಿನಿಧಿ ಪುರಸ್ಕಾರಗಳನ್ನು ಸಹ ಘೋಷಿಸಲಾಗಿದೆ.

ಬೆಂಗಳೂರು, ಆಗಸ್ಟ್ 20: ಕರ್ನಾಟಕ ನಾಟಕ ಅಕಾಡೆಮಿಯ (Karnataka Nataka Academy Awards) 2026-27ನೇ ಸಾಲಿನ ಜೀವಮಾನ ಸಾಧನೆ ಗೌರವ ಪ್ರಶಸ್ತಿ, ವಾರ್ಷಿಕ ಪ್ರಶಸ್ತಿ ಹಾಗೂ ವಿವಿಧ ದತ್ತಿನಿಧಿ ಪುರಸ್ಕೃತರ ಪಟ್ಟಿಯನ್ನು ಗುರುವಾರ ಪ್ರಕಟಿಸಿದೆ. ರಂಗಭೂಮಿ ಕ್ಷೇತ್ರದಲ್ಲಿ ದಣಿವರಿಯದೆ ಸೇವೆ ಸಲ್ಲಿಸಿದ ರಾಜ್ಯದ ಹಿರಿಯ ಮತ್ತು ಪ್ರತಿಭಾವಂತ ಕಲಾವಿದರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಮುಖ್ಯಮಂತ್ರಿ ಚಂದ್ರುಗೆ ಜೀವಮಾನ ಸಾಧನೆ ಗೌರವ
ಕನ್ನಡ ರಂಗಭೂಮಿ ಹಾಗೂ ಸಿನಿಮಾ ಕ್ಷೇತ್ರದಲ್ಲಿ ತಮ್ಮ ಅದ್ಭುತ ನಟನೆ ಮೂಲಕ ಮನೆಮಾತಾಗಿರುವ ಹಿರಿಯ ನಟ ಡಾ. ಮುಖ್ಯಮಂತ್ರಿ ಚಂದ್ರು ಅವರು ಈ ಬಾರಿಯ ಪ್ರತಿಷ್ಠಿತ ‘ಜೀವಮಾನ ಸಾಧನೆ ಗೌರವ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ.
25 ಸಾಧಕರಿಗೆ ವಾರ್ಷಿಕ ಪ್ರಶಸ್ತಿ ಗರಿ
ರಾಜ್ಯದ ವಿವಿಧ ಜಿಲ್ಲೆಗಳಿಂದ ರಂಗಭೂಮಿಗೆ ಗಣನೀಯ ಕೊಡುಗೆ ನೀಡಿದ 25 ಕಲಾವಿದರನ್ನು ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
- ವಿಶ್ವೇಶ್ವರಿ ಬಸವಲಿಂಗಯ್ಯ ಹಿರೇಮಠ (ಧಾರವಾಡ)
- ರಮೇಶ ತಿಪ್ಪಣ್ಣ ಚಿತ್ರಗಾರ (ಇಳಕಲ್, ಬಾಗಲಕೋಟೆ)
- ಶಿವಾನಂದ ತಗಡೂರು (ಬೆಂಗಳೂರು)
- ಆರ್. ರಾಮಕೃಷ್ಣ (ಚನ್ನಯ್ಯ) (ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ)
- ಶ್ರೀಮತಿ ಅನುಸೂಯ ರೇವಣಸಿದ್ದಯ್ಯ ಹೊಸೂರುಮಠ (ಲಕ್ಕುಂಡಿ)
- ಅಯ್ಯಣ್ಣ ಸ್ವಾಮಿ ಹಿರೇಮಠ (ಕಲಬುರಗಿ)
- ಶ್ರೀಮತಿ ಫಜೀಯಮ್ಮ ಹೆಚ್.ಎಸ್. (ಸಾಗರ)
- ಮಲ್ಲಪ್ಪ ಭರಮಪ್ಪ ಕುರಿ (ಕೊಪ್ಪಳ)
- ಕೆ.ಬಿ. ಸ್ವಾಮಿ (ಮಂಡ್ಯ)
- ಶ್ರೀಮತಿ ಸುಶೀಲಾ ಹೆಗಡೆ ಮೂಡೇರು (ಸಿದ್ಧಾಪುರ, ಉತ್ತರ ಕನ್ನಡ)
- ರಾಜಕುಮಾರ್ ಎಸ್. (ಬೆಂಗಳೂರು ನಗರ)
- ಡಾ. ಎಂ. ಗಣೇಶ್ ಬೇಗೂರು (ಸಾಗರ)
- ಪ್ರದೀಪ್ ಚಂದ್ರ ಕುತ್ಪಾಡಿ (ಉಡುಪಿ)
- ಎನ್.ಟಿ. ಕೃಷ್ಣಪ್ಪ (ಬೆಂಗಳೂರು ನಗರ)
- ಪುರುಷೋತ್ತಮ ಹಂಡ್ಯಾಳ್ (ಬಳ್ಳಾರಿ)
- ಡಾ. ಎಸ್.ವಿ. ಸುಷ್ಮಾ (ಬೆಂಗಳೂರು ನಗರ)
- ಶ್ರೀಮತಿ ನಂದಾ ಹಳೆಮನೆ (ಮೈಸೂರು)
- ಶ್ರೀನಿವಾಸ್ (ರಾಮನಗರ)
- ಶ್ರೀಮತಿ ವೈ.ಎನ್. ಉಮಾ (ಯಲಹಂಕ, ಬೆಂಗಳೂರು ನಗರ)
- ಗದಿಗೆಯ್ಯ ಬಿ. ಹಿರೇಮಠ (ಬೈಲಹೊಂಗಲ)
- ಶ್ರೀಮತಿ ಜಿ. ಭಾರತಿ (ಹೊಸ್ಲಿಗಿ, ವಿಜಯನಗರ)
- ಶ್ರೀಮತಿ ಬಿ. ಸಾವಿತ್ರಮ್ಮ (ದಾವಣಗೆರೆ)
- ಎಂ.ಸಿ. ಶಿವರುದ್ರಪ್ಪ (ತುಮಕೂರು)
- ವೇಣುಗೋಪಾಲ್ ಕೆ. (ಬೆಂಗಳೂರು ನಗರ)
- ಎನ್.ಎಂ. ಲಕ್ಷ್ಮಯ್ಯ (ಮಾಲೂರು, ಕೋಲಾರ)
ದತ್ತಿ ಪುರಸ್ಕಾರ ಪುರಸ್ಕೃತರ ಪಟ್ಟಿ ಹೀಗಿದೆ
- ಎಸ್. ವಿ. ವೆಂಕಟಸುಬ್ಬಯ್ಯ ದತ್ತಿ ಪುರಸ್ಕಾರ: ಶ್ರೀ ಬಿ.ಜಿ. ಶ್ರೀಧರ್ (ಬೆಂಗಳೂರು ನಗರ)
- ಇ. ಆರ್. ಅರಿಶಿಣಗೋಡಿ ದತ್ತಿ ಪುರಸ್ಕಾರ: ಶ್ರೀ ಅಶ್ಫಾಕ್ ಹುಸೇನ್ ಹಾ. ಜಾಗೀರದಾರ್ (ವಿಜಯಪುರ)
- ಕೆ. ರಾಮಚಂದ್ರಯ್ಯ ದತ್ತಿ ಪುರಸ್ಕಾರ: ಡಾ. ಎಂ. ಚಂದ್ರಪ್ಪ (ಟಿ. ನರಸೀಪುರ, ಮೈಸೂರು)
- ಶ್ರೀಮತಿ ಮಾಲತಿಶ್ರೀ ಮೈಸೂರು ದತ್ತಿ ಪುರಸ್ಕಾರ: ಶ್ರೀ ದಯಾನಂದ ಚ ಬೆಳಗಿ (ಗದಗ)
- ನಟರತ್ನ ಚಿಂದೋಡಿ ವೀರಪ್ಪನವರ ದತ್ತಿ ಪುರಸ್ಕಾರ: ಶ್ರೀ ಗಂಗಾಧರ ರೆಡ್ಡಿ ಬಿ.ಆರ್. (ಕುಣಿಗಲ್, ತುಮಕೂರು)
- ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರ: ಶ್ರೀ ವೈ.ಎನ್. ಶಿವಣ್ಣ (ತುಮಕೂರು)
- ಕಲ್ಚರ್ಡ್ ಕಮೆಡಿಯನ್ ಕೆ. ಹಿರಣ್ಣಯ್ಯ ದತ್ತಿ ಪುರಸ್ಕಾರ: ಶ್ರೀಮತಿ ಚಂದ್ರಮ್ಮ (ಸಾಣೇಹಳ್ಳಿ, ಚಿತ್ರದುರ್ಗ)
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




