AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Dam Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ; ಯಾವ ಡ್ಯಾಂನಲ್ಲಿ ಎಷ್ಟಿದೆ ನೀರು? ಇಲ್ಲಿದೆ ವಿವರ!

ಕರ್ನಾಟಕದ ಜಲಾಶಯಗಳ (ಆಗಸ್ಟ್ 24) ನೀರಿನ ಮಟ್ಟ: ಆಗಸ್ಟ್ 24 ರ ಇಂದಿನ ವರದಿಯಂತೆ ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಇಲ್ಲಿದೆ. ಆಲಮಟ್ಟಿ, ಬಸವಸಾಗರ ಹಾಗೂ ತುಂಗಭದ್ರಾ ಡ್ಯಾಂಗಳು ಭರ್ತಿಯಾಗುವ ಹಂತದಲ್ಲಿದ್ದು ಹರಿವು ಹೆಚ್ಚಾಗಿದೆ. ಕೆಆರ್‌ಎಸ್, ಕಬಿನಿ, ಲಿಂಗನಮಕ್ಕಿ ಹಾಗೂ ಭದ್ರಾ ಜಲಾಶಯಗಳ ಇಂದಿನ ಒಳಹರಿವು ಮತ್ತು ಹೊರಹರಿವಿನ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

Karnataka Dam Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ; ಯಾವ ಡ್ಯಾಂನಲ್ಲಿ ಎಷ್ಟಿದೆ ನೀರು? ಇಲ್ಲಿದೆ ವಿವರ!
ಹೇಮಾವತಿ ಜಲಾಶಯ
ಭಾವನಾ ಹೆಗಡೆ
|

Updated on: Aug 24, 2026 | 11:04 AM

Share

ಮುಖ್ಯಾಂಶಗಳು

  • ಬಸವಸಾಗರ ಮತ್ತು ಆಲಮಟ್ಟಿ ಜಲಾಶಯಗಳು ಭರ್ತಿಯಾಗಿದ್ದು ಅಪಾರ ನೀರು ಹೊರಗೆ ಹರಿಯುತ್ತಿದೆ.
  • ಕೆಆರ್‌ಎಸ್, ಕಬಿನಿ ಮತ್ತು ಹೇಮಾವತಿ ಡ್ಯಾಂಗಳಲ್ಲಿ ನೀರಿನ ಮಟ್ಟ ಸ್ಥಿರವಾಗಿ ಕಾಯ್ದುಕೊಳ್ಳಲಾಗಿದೆ.
  • ಲಿಂಗನಮಕ್ಕಿ ಜಲಾಶಯಕ್ಕೆ ದಿನದಿಂದ ದಿನಕ್ಕೆ ಭಾರಿ ಪ್ರಮಾಣದಲ್ಲಿ ಒಳಹರಿವು ಹೆಚ್ಚುತ್ತಿದೆ.

ಬೆಂಗಳೂರು, ಆಗಸ್ಟ್ 24: ರಾಜ್ಯಾದ್ಯಂತ ಮುಂಗಾರು ಮಳೆ ಮುಂದುವರಿದಿದ್ದು, ಪ್ರಮುಖ ಜಲಾಶಯಗಳಿಗೆ ನೀರಿನ ಹರಿವು ಏರಿಳಿತ ಕಾಣುತ್ತಿದೆ. ಕೆಆರ್‌ಎಸ್, ಕಬಿನಿ, ಆಲಮಟ್ಟಿ ಹಾಗೂ ಬಸವಸಾಗರ ಸೇರಿದಂತೆ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗುವ ಹಂತ ತಲುಪಿದ್ದು, ನದಿ ಮತ್ತು ಕಾಲುವೆಗಳಿಗೆ ನೀರನ್ನು ಹರಿಸಲಾಗುತ್ತಿದೆ. ಇಂದಿನ ಅಂಕಿ-ಅಂಶಗಳ ಪ್ರಕಾರ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ಒಳಹರಿವು ಹಾಗೂ ಹೊರಹರಿವಿನ ಸಂಪೂರ್ಣ ಮಾಹಿತಿ ಇಲ್ಲಿದೆ.

1. ಬಸವಸಾಗರ ಜಲಾಶಯ

ಗರಿಷ್ಠ ಮಟ್ಟ: 492.25 ಮೀಟರ್ ಇಂದಿನ ಮಟ್ಟ: 492.23 ಮೀಟರ್ ಒಳಹರಿವು: 20,000 ಕ್ಯೂಸೆಕ್ ಹೊರಹರಿವು: 18,000 ಕ್ಯೂಸೆಕ್

2. ತುಂಗಭದ್ರಾ ಜಲಾಶಯ

ಗರಿಷ್ಠ ಮಟ್ಟ: 1633.00 ಅಡಿ ಇಂದಿನ ಮಟ್ಟ: 1630.20 ಅಡಿ ಒಟ್ಟು ಸಂಗ್ರಹ ಸಾಮರ್ಥ್ಯ: 105.788 TMC ಇಂದಿನ ಸಂಗ್ರಹ: 94.819 TMC ಒಳಹರಿವು: 8,933 ಕ್ಯೂಸೆಕ್ (ಸರಾಸರಿ 8,981 ಕ್ಯೂಸೆಕ್) ಹೊರಹರಿವು: 8,809 ಕ್ಯೂಸೆಕ್ (ಕಾಲುವೆಗೆ 8,609 ಕ್ಯೂಸೆಕ್, ನದಿಗೆ 200 ಕ್ಯೂಸೆಕ್)

3. ಆಲಮಟ್ಟಿ ಜಲಾಶಯ

ಗರಿಷ್ಠ ಮಟ್ಟ: 519.60 ಮೀಟರ್ ಇಂದಿನ ಮಟ್ಟ: 519.50 ಮೀಟರ್ ಒಳಹರಿವು: 20,028 ಕ್ಯೂಸೆಕ್ ಹೊರಹರಿವು: 22,160 ಕ್ಯೂಸೆಕ್

4. ಹೇಮಾವತಿ ಜಲಾಶಯ

ಗರಿಷ್ಠ ಮಟ್ಟ: 2,922 ಅಡಿ (37 TMC) ಇಂದಿನ ಮಟ್ಟ: 2,915.04 ಅಡಿ (30.721 TMC) ಒಳಹರಿವು: 1,326 ಕ್ಯೂಸೆಕ್ ಹೊರಹರಿವು: ನದಿಗೆ 1,800 ಕ್ಯೂಸೆಕ್, ಕಾಲುವೆಗೆ 3,700 ಕ್ಯೂಸೆಕ್ ಕಳೆದ ವರ್ಷ ಇದೇ ದಿನ: 2,921.85 ಅಡಿ (36.958 TMC) ಒಳಹರಿವು 7,988 ಕ್ಯೂಸೆಕ್, ಹೊರಹರಿವು ನದಿಗೆ 3,650 ಕ್ಯೂಸೆಕ್ ಹಾಗೂ ಕಾಲುವೆಗೆ 5,125 ಕ್ಯೂಸೆಕ್ ಇತ್ತು.

5. ಕೆಆರ್‌ಎಸ್ ಜಲಾಶಯ

ಗರಿಷ್ಠ ಮಟ್ಟ: 124.80 ಅಡಿ (49.452 TMC) ಇಂದಿನ ಮಟ್ಟ: 108.26 ಅಡಿ ಇಂದಿನ ಸಂಗ್ರಹ: 30.008 TMC ಒಳಹರಿವು: 1,682 ಕ್ಯೂಸೆಕ್ ಹೊರಹರಿವು: 4,017 ಕ್ಯೂಸೆಕ್

6. ಕಬಿನಿ ಜಲಾಶಯ

ಗರಿಷ್ಠ ಮಟ್ಟ: 84.00 ಅಡಿ ಇಂದಿನ ಮಟ್ಟ: 72.34 ಅಡಿ ಇಂದಿನ ಸಂಗ್ರಹ: 12.85 TMC (ಲೈವ್ ಸ್ಟೋರೇಜ್: 3.04 TMC) ಒಳಹರಿವು: 8,260 ಕ್ಯೂಸೆಕ್ ಹೊರಹರಿವು: ಒಟ್ಟು 13,385 ಕ್ಯೂಸೆಕ್ (ನದಿಗೆ 11,725 ಕ್ಯೂಸೆಕ್, LBC ಕಾಲುವೆ 60, RBC ಕಾಲುವೆ 1,600 ಕ್ಯೂಸೆಕ್) ಮಳೆ ಪ್ರಮಾಣ: 28 ಮಿ.ಮೀ

7. ಭದ್ರಾ ಜಲಾಶಯ

ಗರಿಷ್ಠ ಮಟ್ಟ (FRL): 186 ಅಡಿ (2,158.00 ಮೀ) ಒಟ್ಟು ಸಂಗ್ರಹ ಸಾಮರ್ಥ್ಯ: 71.535 TMC ಇಂದಿನ ಮಟ್ಟ: 175 ಅಡಿ 6 ಇಂಚು (2,147.50 ಮೀ) ಇಂದಿನ ಸಂಗ್ರಹ: 58.947 TMC ಒಳಹರಿವು: 4,580 ಕ್ಯೂಸೆಕ್ ಹೊರಹರಿವು: 205 ಕ್ಯೂಸೆಕ್ (ನದಿಸ್ಲೂಯಿಸ್ 100 ಕ್ಯೂಸೆಕ್, ಆವೀಕರಣ 105 ಕ್ಯೂಸೆಕ್) ಕಳೆದ ವರ್ಷ ಇದೇ ದಿನ: 184 ಅಡಿ 1 ಇಂಚು (69.139 TMC), ಒಳಹರಿವು 7,419 ಕ್ಯೂಸೆಕ್ ಹಾಗೂ ಹೊರಹರಿವು 6,215 ಕ್ಯೂಸೆಕ್ ಇತ್ತು.

8. ಲಿಂಗನಮಕ್ಕಿ ಜಲಾಶಯ

ಗರಿಷ್ಠ ಮಟ್ಟ: 1,819.00 ಅಡಿ ಇಂದಿನ ಮಟ್ಟ: 1,796.50 ಅಡಿ (57.70% ಸಂಗ್ರಹ) ಇಂದಿನ ಏರಿಕೆ: 0.30 ಅಡಿ ಒಳಹರಿವು: 13,606 ಕ್ಯೂಸೆಕ್ ಕಳೆದ ವರ್ಷ ಇದೇ ದಿನ: 1,817.00 ಅಡಿ (95.58% ಸಂಗ್ರಹ) ನೀರಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಸಿನಿಮಾ ಸೆನ್ಸಾರ್​​ಗೆ ಹೊಸ ಮಾರ್ಗಸೂಚಿ: ಇಲ್ಲಿದೆ ಪೂರ್ಣ ಮಾಹಿತಿ ವಿಡಿಯೋ
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಹೆಚ್.ಸಿ. ಮಹದೇವಪ್ಪ ಟಾಂಗ್
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಜಪಾನ್ ವಾಯುಪಡೆ ಮುಖ್ಯಸ್ಥರಿಂದ ಭಾರತದ ತೇಜಸ್ ಯುದ್ಧವಿಮಾನ ಹಾರಾಟ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
ಎಲಿಮಿನೇಷನ್​​​ಗೆ ಮುನ್ನ ಬಿಗ್​​ಬಾಸ್ ಮನೆಯಲ್ಲಿ ನಗುವೋ ನಗು: ವಿಡಿಯೋ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
‘ನೂರೇ ದಿನದಲ್ಲಿ ಭರವಸೆ ಮೂಡಿಸಿದ ನಾಯಕ ಡಿಕೆ ಶಿವಕುಮಾರ್‘​​: ಬಿಜೆಪಿ ನಾಯಕ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ಕರ್ನಾಟಕದಲ್ಲಿ ಫೈಜರ್ ಕಂಪನಿ ಔಷಧ ಮಾರಾಟಕ್ಕೆ ತಾತ್ಕಾಲಿಕ ತಡೆ
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ರಮಾನಾಥ ರೈ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಮಾಜಿ ಸಚಿವರು ಪಾರು
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ಬೀದರ್‌ನ ದಟ್ಟ ಅರಣ್ಯದಲ್ಲಿ ಪತ್ತೆಯಾಯ್ತು ಪುರಾತನ ವಿಷ್ಣು ದೇವಸ್ಥಾನ!
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ
ರಾತ್ರಿ ಸುರಿದ ಭಾರಿ ಮಳೆಗೆ ಆನೇಕಲ್ ತತ್ತರ: ಅಂಡರ್‌ಪಾಸ್​​ ಜಲಾವೃತ
ದೇವರ ಮೂರ್ತಿ ಎದುರಲ್ಲೇ ಕಿರಣ್ ಶಾಸ್ತ್ರಿ ಕಳ್ಳಾಟ; ಬಯಲು ಮಾಡಿದ ಸುದೀಪ್
ದೇವರ ಮೂರ್ತಿ ಎದುರಲ್ಲೇ ಕಿರಣ್ ಶಾಸ್ತ್ರಿ ಕಳ್ಳಾಟ; ಬಯಲು ಮಾಡಿದ ಸುದೀಪ್