AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Dam Water Level: ಮಲೆನಾಡಿನಲ್ಲಿ ಮಳೆ ಅಬ್ಬರ, ಡ್ಯಾಂಗಳ ಭರ್ತಿಗೆ ಕೆಲವೇ ಅಡಿ ಬಾಕಿ!

ಕರ್ನಾಟಕದ ಜಲಾಶಯಗಳ (ಆಗಸ್ಟ್ 25) ನೀರಿನ ಮಟ್ಟ: ರಾಜ್ಯದ ಮಲೆನಾಡು ಹಾಗೂ ಕರಾವಳಿ ಭಾಗಗಳಲ್ಲಿ ಭಾರಿ ಮಳೆಯಿಂದಾಗಿ ಕೆಆರ್‌ಎಸ್, ಹಾರಂಗಿ, ಭದ್ರಾ ಮತ್ತು ಆಲಮಟ್ಟಿ ಜಲಾಶಯಗಳಿಗೆ ಒಳಹರಿವು ಹೆಚ್ಚಿದೆ. ಆದರೆ CWRC ಸಂಸ್ಥೆಯು ತಮಿಳುನಾಡಿಗೆ ನೀರು ಬಿಡಲು ಆದೇಶಿಸಿದ್ದು, ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯದ ಪ್ರಮುಖ ಡ್ಯಾಂಗಳ ಇಂದಿನ ನೀರಿನ ಮಟ್ಟ ಇಲ್ಲಿದೆ.

Karnataka Dam Water Level: ಮಲೆನಾಡಿನಲ್ಲಿ ಮಳೆ ಅಬ್ಬರ, ಡ್ಯಾಂಗಳ ಭರ್ತಿಗೆ ಕೆಲವೇ ಅಡಿ ಬಾಕಿ!
ಆಲಮಟ್ಟಿ ಜಲಾಶಯ
ಭಾವನಾ ಹೆಗಡೆ
|

Updated on: Aug 25, 2026 | 11:11 AM

Share

ಮುಖ್ಯಾಂಶಗಳು

  • ಕಾವೇರಿ ನೀರು ನಿರ್ವಹಣಾ ಸಮಿತಿಯಿಂದ ತಮಿಳುನಾಡಿಗೆ ನೀರು ಬಿಡಲು ಆದೇಶ.
  • ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಜಲಾಶಯಗಳಿಗೆ ಹರಿವು ಹೆಚ್ಚಳ.
  • ತಮಿಳುನಾಡಿಗೆ ನೀರು ಹರಿಸುವ ಆದೇಶಕ್ಕೆ ರೈತ ಸಂಘಟನೆಗಳ ಆಕ್ರೋಶ.

ಬೆಂಗಳೂರು, ಆಗಸ್ಟ್ 25: ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮುಂಗಾರು ಮಳೆ ಮತ್ತೆ ಚುರುಕುಗೊಂಡಿದ್ದು, ಪ್ರಮುಖ ಜಲಾಶಯಗಳಿಗೆ ಒಳಹರಿವು ಹೆಚ್ಚಾಗಿದೆ. ಆದರೆ, ತಮಿಳುನಾಡಿಗೆ 15 ದಿನಗಳ ಕಾಲ ದಿನಕ್ಕೆ 9,000 ಕ್ಯೂಸೆಕ್‌ನಂತೆ ಸುಮಾರು 12 TMC ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ (CWRC) ಆದೇಶಿಸಿರುವುದು ಕಾವೇರಿಕೊಳ್ಳದ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕಾವೇರಿ ಜಲಾನಯನ ಪ್ರದೇಶದ 4 ಡ್ಯಾಂಗಳಲ್ಲಿ 80 TMC ಸಂಗ್ರಹವಿದ್ದರೂ 64 TMC ಮಾತ್ರ ಲಭ್ಯವಿದ್ದು, ನೀರು ಹರಿಸಿದರೆ ಭವಿಷ್ಯದಲ್ಲಿ ತೀವ್ರ ಕುಡಿಯುವ ನೀರಿನ ಅಭಾವ ಎದುರಾಗುವ ಆತಂಕ ಎದುರಾಗಿದೆ.

ಕೆಆರ್‌ಎಸ್ (KRS) ಜಲಾಶಯ

  • ಗರಿಷ್ಠ ಮಟ್ಟ: 124.80 ಅಡಿ
  • ಇಂದಿನ ಜಲಮಟ್ಟ: 108.20 ಅಡಿ
  • ಒಳಹರಿವು: 4,004 ಕ್ಯೂಸೆಕ್
  • ಹೊರಹರಿವು: 4,543 ಕ್ಯೂಸೆಕ್
  • ಗರಿಷ್ಠ ಸಾಮರ್ಥ್ಯ: 49.452 TMC
  • ಇಂದಿನ ನೀರು ಸಂಗ್ರಹ: 29.959 TMC (ಸುಮಾರು 30 TMC)

ಹೇಮಾವತಿ ಜಲಾಶಯ

  • ಗರಿಷ್ಠ ಮಟ್ಟ: 2,922 ಅಡಿ (37 TMC)
  • ಇಂದಿನ ಜಲಮಟ್ಟ: 2,914.84 ಅಡಿ (30.551 TMC)
  • ಒಳಹರಿವು: 3,588 ಕ್ಯೂಸೆಕ್
  • ಹೊರಹರಿವು: ನದಿಗೆ 1,800 ಕ್ಯೂಸೆಕ್
  • ಕಾಲುವೆಗೆ 3,700 ಕ್ಯೂಸೆಕ್

ಕಳೆದ ವರ್ಷ ಇದೇ ದಿನ 2,921.85 ಅಡಿ ನೀರಿತ್ತು

ಹಾರಂಗಿ ಜಲಾಶಯ

  • ಗರಿಷ್ಠ ಮಟ್ಟ: 2,859 ಅಡಿ
  • ಇಂದಿನ ಜಲಮಟ್ಟ: 2,858.45 ಅಡಿ
  • ಒಳಹರಿವು: 3,638 ಕ್ಯೂಸೆಕ್
  • ಹೊರಹರಿವು: 4,375 ಕ್ಯೂಸೆಕ್
  • ಇಂದಿನ ನೀರು ಸಂಗ್ರಹ: 8 TMC (2 TMC ಡೆಡ್ ಸ್ಟೋರೇಜ್)

ಆಲಮಟ್ಟಿ ಜಲಾಶಯ

  • ಗರಿಷ್ಠ ಮಟ್ಟ: 519.60 ಮೀಟರ್
  • ಇಂದಿನ ಜಲಮಟ್ಟ: 519.54 ಮೀಟರ್
  • ಒಳಹರಿವು: 27,062 ಕ್ಯೂಸೆಕ್
  • ಹೊರಹರಿವು: 19,018 ಕ್ಯೂಸೆಕ್

ಭದ್ರಾ ಜಲಾಶಯ

  • ಗರಿಷ್ಠ ಮಟ್ಟ: 186 ಅಡಿ 0 ಇಂಚು (2,158.0 ಅಡಿ)
  • ಇಂದಿನ ಜಲಮಟ್ಟ: 175 ಅಡಿ 11 ಇಂಚು (2,147.91 ಅಡಿ)
  • ಒಳಹರಿವು: 5,680 ಕ್ಯೂಸೆಕ್
  • ಹೊರಹರಿವು: 206 ಕ್ಯೂಸೆಕ್
  • ಒಟ್ಟು ಸಂಗ್ರಹ ಸಾಮರ್ಥ್ಯ: 71.535 TMC
  • ಇಂದಿನ ಸಂಗ್ರಹ: 59.420 TMC

ಲಿಂಗನಮಕ್ಕಿ ಜಲಾಶಯ

  • ಗರಿಷ್ಠ ಮಟ್ಟ: 1,819.00 ಅಡಿ
  • ಇಂದಿನ ಜಲಮಟ್ಟ: 1,796.80 ಅಡಿ
  • ಒಳಹರಿವು: 12,863 ಕ್ಯೂಸೆಕ್
  • ಶೇಕಡಾವಾರು ಸಂಗ್ರಹ: 58.16%

ಬಸವಸಾಗರ ಜಲಾಶಯ

  • ಗರಿಷ್ಟ ಮಟ್ಟ: 492.25 ಮೀಟರ್
  • ಇಂದಿನ ಮಟ್ಟ : 492.23 ಮೀಟರ್
  • ಒಳ ಹರಿವು: 20,000 ಕ್ಯೂಸೆಕ್
  • ಹೊರ ಹರಿವು : 18,000 ಕ್ಯೂಸೆಕ್

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
'ಬಿಗ್ ಬಾಸ್ ಅಗ್ನಿ ಪರೀಕ್ಷೆ'ಯಲ್ಲಿ ಹೈ-ವೋಲ್ಟೇಜ್ ಕಾದಾಟ
'ಬಿಗ್ ಬಾಸ್ ಅಗ್ನಿ ಪರೀಕ್ಷೆ'ಯಲ್ಲಿ ಹೈ-ವೋಲ್ಟೇಜ್ ಕಾದಾಟ
ಕರಾವಳಿಯಲ್ಲಿ ಇಂದು ಈದ್ ಮಿಲಾದ್: ದ.ಕ, ಉಡುಪಿ ಜಿಲ್ಲೆಗೆ ಸಾರ್ವತ್ರಿಕ ರಜೆ
ಕರಾವಳಿಯಲ್ಲಿ ಇಂದು ಈದ್ ಮಿಲಾದ್: ದ.ಕ, ಉಡುಪಿ ಜಿಲ್ಲೆಗೆ ಸಾರ್ವತ್ರಿಕ ರಜೆ
ಮಂಗಳ ಗೌರಿ ವ್ರತ, ಪ್ರದೋಷ ದಿನ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮಂಗಳ ಗೌರಿ ವ್ರತ, ಪ್ರದೋಷ ದಿನ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಆಯಿಲ್ ಟ್ಯಾಂಕರ್ ಪಲ್ಟಿ; ಎಣ್ಣೆ ಹಿಡಿಯಲು ಬಕೆಟ್ ಹಿಡಿದು ನುಗ್ಗಿದ ಜನ!
ಆಯಿಲ್ ಟ್ಯಾಂಕರ್ ಪಲ್ಟಿ; ಎಣ್ಣೆ ಹಿಡಿಯಲು ಬಕೆಟ್ ಹಿಡಿದು ನುಗ್ಗಿದ ಜನ!
'ರಾಮಾಯಣ' ಚಿತ್ರದ ಪೆನ್ಸಿಲ್ ಆರ್ಟ್
'ರಾಮಾಯಣ' ಚಿತ್ರದ ಪೆನ್ಸಿಲ್ ಆರ್ಟ್
ದೆಹಲಿಯಲ್ಲಿ ಧಾರಾಕಾರ ಮಳೆ; ಜಲಾವೃತಗೊಂಡ ರಸ್ತೆಗಳಲ್ಲಿ ಈಜಾಡಿದ ಮಕ್ಕಳು
ದೆಹಲಿಯಲ್ಲಿ ಧಾರಾಕಾರ ಮಳೆ; ಜಲಾವೃತಗೊಂಡ ರಸ್ತೆಗಳಲ್ಲಿ ಈಜಾಡಿದ ಮಕ್ಕಳು
ಕಾಶ್ಮೀರಿ ಪಂಡಿತರಿಗಿರುವ ಬೆದರಿಕೆ​ಗೆ ಕಳವಳ ವ್ಯಕ್ತಪಡಿಸಿದ ಒಮರ್ ಅಬ್ದುಲ್ಲಾ
ಕಾಶ್ಮೀರಿ ಪಂಡಿತರಿಗಿರುವ ಬೆದರಿಕೆ​ಗೆ ಕಳವಳ ವ್ಯಕ್ತಪಡಿಸಿದ ಒಮರ್ ಅಬ್ದುಲ್ಲಾ
‘ಅಪ್ಪು ಸರ್ ನೆನಪಿನಲ್ಲಿ ಗಡ್ಡ ಬಿಟ್ಟೆ’: ಭಾವುಕವಾಗಿ ಮಾತನಾಡಿದ ಎಂ.ಕೆ. ಮಠ
‘ಅಪ್ಪು ಸರ್ ನೆನಪಿನಲ್ಲಿ ಗಡ್ಡ ಬಿಟ್ಟೆ’: ಭಾವುಕವಾಗಿ ಮಾತನಾಡಿದ ಎಂ.ಕೆ. ಮಠ
‘ಟಾಕ್ಸಿಕ್’ ಸಿನಿಮಾಗೆ ಭರ್ಜರಿ ಬುಕಿಂಗ್; ಲೆಕ್ಕ ನೀಡಿದ ಪ್ರದರ್ಶಕ ಜಗದೀಶ್
‘ಟಾಕ್ಸಿಕ್’ ಸಿನಿಮಾಗೆ ಭರ್ಜರಿ ಬುಕಿಂಗ್; ಲೆಕ್ಕ ನೀಡಿದ ಪ್ರದರ್ಶಕ ಜಗದೀಶ್
9 ಗಂಟೆಗಳ ಶೋಧ: ಪ್ಲ್ಯಾನ್ ಮಾಡಿಯೇ ಎಸ್ಕೇಪ್ ಆದ್ರಾ ಜ್ಞಾನೇಂದ್ರ ಕುಮಾರ್?
9 ಗಂಟೆಗಳ ಶೋಧ: ಪ್ಲ್ಯಾನ್ ಮಾಡಿಯೇ ಎಸ್ಕೇಪ್ ಆದ್ರಾ ಜ್ಞಾನೇಂದ್ರ ಕುಮಾರ್?