AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Weather Today: ಶಿವಮೊಗ್ಗ, ಮೈಸೂರು, ಕೊಡಗು ಸೇರಿ ಕರ್ನಾಟಕದ 8 ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ಸಾಧ್ಯತೆ

Karnataka Rain: ಈಶಾನ್ಯ ಮುಂಗಾರಿನ ಆಗಮನದಿಂದ ಶಿವಮೊಗ್ಗ, ಕೊಡಗು, ಮೈಸೂರು ಸೇರಿದಂತೆ ಕರ್ನಾಟಕದ 8 ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗಲಿದೆ. ಹೀಗಾಗಿ, ಈ ಜಿಲ್ಲೆಗಳಲ್ಲಿ ಹಳದಿ ಅಲರ್ಟ್​ ಘೋಷಿಸಲಾಗಿದೆ.

Karnataka Weather Today: ಶಿವಮೊಗ್ಗ, ಮೈಸೂರು, ಕೊಡಗು ಸೇರಿ ಕರ್ನಾಟಕದ 8 ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ ಸಾಧ್ಯತೆ
ಮಳೆ
Follow us
TV9 Web
| Updated By: ಆಯೇಷಾ ಬಾನು

Updated on: Oct 27, 2021 | 7:06 AM

Karnataka Rain: ಕರ್ನಾಟಕದ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಮಳೆಯ ಅಬ್ಬರ ಹೆಚ್ಚಾಗಲಿದ್ದು, ಶಿವಮೊಗ್ಗ, ಮೈಸೂರು, ಮಂಡ್ಯ, ಚಿಕ್ಕಮಗಳೂರು, ಚಾಮರಾಜನಗರ, ಹಾಸನ, ರಾಮನಗರ, ಕೊಡಗು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಹಾಗೇ, ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇಂದು ಸಾಧಾರಣ ಮಳೆಯಾಗಲಿದೆ. ಉತ್ತರ ಕರ್ನಾಟಕದಲ್ಲೂ ಇಂದು ಮತ್ತು ನಾಳೆ ಮಳೆ ಮುಂದುವರೆಯಲಿದೆ.

ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಇನ್ನು 3 ದಿನ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಶಾನ್ಯ ಮುಂಗಾರು ಆಗಮನದಿಂದ ಕರ್ನಾಟಕದ ದಕ್ಷಿಣ ಭಾಗದಲ್ಲಿ ಇಂದಿನಿಂದ 3 ದಿನ ಮಳೆ ಹೆಚ್ಚಾಗಲಿದೆ. ಕರ್ನಾಟಕದಲ್ಲಿ ಇಂದಿನಿಂದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ರಾಮನಗರ, ಕೋಲಾರ, ಮಂಡ್ಯ, ಮೈಸೂರು ಮಳೆ ಹೆಚ್ಚಾಗಲಿದೆ.

ಕೇರಳದಲ್ಲಿ ಮತ್ತೆ ಮಳೆಯ ಆರ್ಭಟ ಹೆಚ್ಚಾಗಿದ್ದು, ಇಂದು 11 ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ. ಕಣ್ಣೂರು, ಕಾಸರಗೋಡು, ಅಲಪ್ಪುಳ, ತಿರುವನಂತಪುರಂ, ಕೊಲ್ಲಂ ಸೇರಿದಂತೆ 11 ಜಿಲ್ಲೆಗಳಲ್ಲಿ ಇಂದು ಯೆಲ್ಲೋ ಅಲರ್ಟ್​ ಇರಲಿದೆ. ಭಾರೀ ಮಳೆಯಿಂದ ಕೇರಳದ ಡ್ಯಾಂಗಳು ತುಂಬಿ ನಿಂತಿವೆ.

ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು, ಪುದುಚೇರಿ, ಕಾರೈಕಲ್, ಕೇರಳ ಮತ್ತು ಮಾಹೆಯ ಕೆಲವು ಭಾಗಗಳಲ್ಲಿ ಇಂದು ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಅದರಲ್ಲೂ ಕೇರಳ ಮತ್ತು ಮಾಹೆಯಲ್ಲಿ ಇಂದು ಗುಡುಗು ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ತಮಿಳುನಾಡು, ಪುದುಚೇರಿ, ಕಾರೈಕಲ್, ಕರಾವಳಿ ಕರ್ನಾಟಕ ಮತ್ತು ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಸಾಕಷ್ಟು ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಆಂಧ್ರಪ್ರದೇಶ, ಯಾನಂ ಮತ್ತು ಲಕ್ಷದ್ವೀಪದಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಗಂಗಾನದಿ ಪಶ್ಚಿಮ ಬಂಗಾಳ ಮತ್ತು ರಾಯಲಸೀಮಾದಲ್ಲಿ ಗುಡುಗು ಸಹಿತ ಪ್ರತ್ಯೇಕ ಮಳೆಯಾಗುವ ಸಾಧ್ಯತೆಯಿದೆ.

ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಇಂದಿನಿಂದ ಶನಿವಾರದವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಈಶಾನ್ಯ ಮಾನ್ಸೂನ್ ಬುಧವಾರ ದಕ್ಷಿಣ ಭಾರತದ ಪೂರ್ವ ಕರಾವಳಿಯಾದ್ಯಂತ ಮಳೆ ತರುವ ಸಾಧ್ಯತೆಯಿದೆ. ನೈಋತ್ಯ ಬಂಗಾಳ ಕೊಲ್ಲಿಯ ಮೇಲೆ ಪಶ್ಚಿಮಕ್ಕೆ ಚಲಿಸುವ ಚಂಡಮಾರುತದ ಪರಿಚಲನೆಯೊಂದಿಗೆ, ಗುರುವಾರದಿಂದ ಈ ವಾರಾಂತ್ಯದವರೆಗೆ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.

ಇದನ್ನೂ ಓದಿ: Uttarakhand Rain: ಉತ್ತರಾಖಂಡದಲ್ಲಿ ಮಳೆಯಿಂದ ಸಾವನ್ನಪ್ಪಿದವರ ಸಂಖ್ಯೆ 76ಕ್ಕೆ ಏರಿಕೆ; 14 ಜನ ಇನ್ನೂ ನಾಪತ್ತೆ

Karnataka Weather Today: ಕರ್ನಾಟಕದ 19 ಜಿಲ್ಲೆಗಳಲ್ಲಿ ಇಂದಿನಿಂದ 3 ದಿನ ಮಳೆಯ ಅಬ್ಬರ

ತಮ್ಮ ಪಕ್ಷದ ಅಧ್ಯಕ್ಷರಿಗೆ ಮಾಲೆ ಹಾಕಿ, ಕಪಾಳಕ್ಕೆ ಬಾರಿಸಿದ ನಾಯಕ
ತಮ್ಮ ಪಕ್ಷದ ಅಧ್ಯಕ್ಷರಿಗೆ ಮಾಲೆ ಹಾಕಿ, ಕಪಾಳಕ್ಕೆ ಬಾರಿಸಿದ ನಾಯಕ
ನನ್ನ ವಯಸ್ಸು 35, ಶಿವಣ್ಣ ಚಿತ್ರರಂಗಕ್ಕೆ ಬಂದೇ 40 ವರ್ಷ ಆಗಿದೆ: ಧ್ರುವ
ನನ್ನ ವಯಸ್ಸು 35, ಶಿವಣ್ಣ ಚಿತ್ರರಂಗಕ್ಕೆ ಬಂದೇ 40 ವರ್ಷ ಆಗಿದೆ: ಧ್ರುವ
ಫೋಟೋ, ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಜಲಪಾತಗಳ ಬಂಡೆಗಳೇ ಆಗಬೇಕೇ?
ಫೋಟೋ, ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಜಲಪಾತಗಳ ಬಂಡೆಗಳೇ ಆಗಬೇಕೇ?
ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ: ಕಾಗೇರಿ
ರಾಜ್ಯ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ: ಕಾಗೇರಿ
ಅಪಾರ್ಟ್​ಮೆಂಟ್​​ನಲ್ಲಿ ಬೆಂಕಿ ಅವಘಡ; ಮಹಡಿಯಿಂದ ಹಾರಿದ ತಂದೆ, ಮಕ್ಕಳ ಸಾವು
ಅಪಾರ್ಟ್​ಮೆಂಟ್​​ನಲ್ಲಿ ಬೆಂಕಿ ಅವಘಡ; ಮಹಡಿಯಿಂದ ಹಾರಿದ ತಂದೆ, ಮಕ್ಕಳ ಸಾವು
ಅಪ್ಪು ಇದ್ದ ಕಡೆ ನಗುವಿಗೆಲ್ಲಿ ಕೊರತೆ, ಅಪ್ಪು ಹಳೆ ವಿಡಿಯೋ
ಅಪ್ಪು ಇದ್ದ ಕಡೆ ನಗುವಿಗೆಲ್ಲಿ ಕೊರತೆ, ಅಪ್ಪು ಹಳೆ ವಿಡಿಯೋ
ಜಾತಿಗಣತಿಯ ಮರುಸರ್ವೇ ಮಾಡಿಸಲು ಹೈಕಮಾಂಡ್ ಸೂಚಿಸಿದೆ: ಸಿದ್ದರಾಮಯ್ಯ
ಜಾತಿಗಣತಿಯ ಮರುಸರ್ವೇ ಮಾಡಿಸಲು ಹೈಕಮಾಂಡ್ ಸೂಚಿಸಿದೆ: ಸಿದ್ದರಾಮಯ್ಯ
ಶಾಂತಿಯುತವಾಗಿ ಹೋರಾಟ ಮಾಡುವ ವಾಟಾಳ್ ಇವತ್ತು ಭಿನ್ನವಾಗಿ ಕಂಡರು
ಶಾಂತಿಯುತವಾಗಿ ಹೋರಾಟ ಮಾಡುವ ವಾಟಾಳ್ ಇವತ್ತು ಭಿನ್ನವಾಗಿ ಕಂಡರು
ಸಿದ್ದರಾಮಯ್ಯ ಬಚಾವಾಗಲು ಸಾಧ್ಯವೇ ಇಲ್ಲ ಎಂದ ಸ್ನೇಹಮಯಿ ಕೃಷ್ಣ
ಸಿದ್ದರಾಮಯ್ಯ ಬಚಾವಾಗಲು ಸಾಧ್ಯವೇ ಇಲ್ಲ ಎಂದ ಸ್ನೇಹಮಯಿ ಕೃಷ್ಣ
ಜಾತಿ ಗಣತಿ ವರದಿ, ಕಾಲ್ತುಳಿತದ ಬಗ್ಗೆ CM-DCMಗೆ ಹೈಕಮಾಂಡ್ ಖಡಕ್​ ಸೂಚನೆ
ಜಾತಿ ಗಣತಿ ವರದಿ, ಕಾಲ್ತುಳಿತದ ಬಗ್ಗೆ CM-DCMಗೆ ಹೈಕಮಾಂಡ್ ಖಡಕ್​ ಸೂಚನೆ