ಜನಪ್ರತಿನಿಧಿಗಳ ವಿರುದ್ಧ ಜನರ ಆಕ್ರೋಶ:
ಘಟನಾ ಸ್ಥಳಕ್ಕೆ ತಹಶೀಲ್ದಾರ್, ಎಸಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಧಿಕಾರಿಗಳು ಸಂತ್ರಸ್ತರನ್ನ ಈಗಾಗಲೇ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಜನರು, ಕಿಂಡಿ ಅಣೆಕಟ್ಟಿನಿಂದ ಕೃತಕ ಪ್ರವಾಹ ಸೃಷ್ಟಿಯಾಗಿದೆ. ಈ ಊರಿಗೆ ಅಣೆಕಟ್ಟಿನ ಅಗತ್ಯವೇ ಇರಲಿಲ್ಲ. ರಾಜಕಾರಣಿಗಳು ಸ್ವಾರ್ಥಕ್ಕಾಗಿ ಅಣೆಕಟ್ಟು ನಿರ್ಮಿಸಿದ್ದಾರೆ. ಇದರಿಂದಲೇ ಕೊಯನಾಡು ಗ್ರಾಮ ಜಲಾವೃತವಾಗಿದೆ ಎಂದು ಹೇಳುತ್ತಿದ್ದಾರೆ.
ಇದನ್ನೂ ಓದಿ: ಅಮರನಾಥ ಗುಹೆ ಬಳಿ ಮೇಘಸ್ಫೋಟ: ರಕ್ಷಣಾ ಕಾರ್ಯಾಚರಣೆಗೆ MEILನ ನೆರವು ಕೇಳಿದ ಸೇನೆ
ಹಲವೆಡೆ ಜಲದಿಗ್ಬಂಧನ:
ಮಡಿಕೇರಿ ತಾಲೂಕಿನ ಹಲವೆಡೆ ಜಲದಿಗ್ಬಂಧನ ಆಗಿದೆ. ಮುಕ್ಕೋಡ್ಲು ಗ್ರಾಮದ ಭದ್ರಕಾಳಿ ದೇವಸ್ಥಾನ ಜಲಾವೃತವಾಗಿದ್ದು, ಹೊದಕಾನ-ಮುಕ್ಕೋಡ್ಲು ರಸ್ತೆ ಸಂಪರ್ಕ ಕಡಿತವಾಗಿದೆ. ಇನ್ನು ಮುಕ್ಕೋಡ್ಲು ಭದ್ರಕಾಳಿ ದೇವಸ್ಥಾನದ ತೂಗು ಸೇತುವೆಗೆ ಹಾನಿಯಾಗಿದೆ.
ಹರಿಯುತ್ತಿರುವ ಕಾವೇರಿ ನದಿ:
ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಬೊಳಿಬಾಣೆ ಸಮೀಪ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಮಡಿಕೇರಿ ತಾಲೂಕಿನ ನಾಪೋಕ್ಲು-ಮೂರ್ನಾಡು ರಸ್ತೆ ಸಂಪರ್ಕ ಕಡಿತವಾಗಿ ವಾಹನ ಸವಾರರು ಪರದಾಡುವಂತಾಗಿದೆ.
4 ಮನೆಗಳು ಜಲಾವೃತ:
ಕಿಂಡಿ ಅಣೆಕಟ್ಟಿನಿಂದ 4 ಮನೆಗಳು ಜಲಾವೃತವಾಗಿವೆ. ಅಲ್ಲದೆ ಮಡಿಕೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮುಳುಗಡೆಯಾಗುವ ಭೀತಿ ಶುರುವಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಹಾಡಹಗಲೇ ಜ್ಯೋತಿಷಿ ಮನೆಗೆ ನುಗ್ಗಿ ದರೋಡೆ! ಮನೆಯಲ್ಲಿದ್ದ ಚಿನ್ನಾಭರಣ, 5 ಲಕ್ಷ ಹಣ ದೋಚಿ ಪರಾರಿ