ಮೃತ ಅಪ್ಪ-ಅಮ್ಮನ ಹೆಸರಿನಲ್ಲಿ ನಕಲಿ ಮರಣ ಪ್ರಮಾಣಪತ್ರ ಸೃಷ್ಟಿ, ಆರೋಪಿಯ ವಿರುದ್ಧ FIR ದಾಖಲು: ಏನಿದು ಪ್ರಕರಣ?
ಆರೋಪಿಯ ತಂದೆ ಅಪ್ಪಯ್ಯ, 1971ರಲ್ಲಿ ಮೃತಪಟ್ಟಿದ್ದರೆ, ತಾಯಿ ಮಾಯಮ್ಮ 2016ರಲ್ಲಿ ಮೃತಪಟ್ಟಿದ್ದಾರೆ. ಇವರುಗಳ ಹೆಸರಿನಲ್ಲಿಯೇ ನಕಲಿ ಮರಣ ಪ್ರಮಾಣ ಪತ್ರ ತಯಾರಿಸಲಾಗಿದೆ. ಆರೋಪಿ ಮುತ್ತಪ್ಪ ವಿರುದ್ಧ ಚಂಗಪ್ಪ ಎಂಬುವರಿಂದ ತಹಶೀಲ್ದಾರ್ಗೆ ದೂರು ಸಲ್ಲಿಸಲಾಗಿತ್ತು.
ಮಡಿಕೇರಿ, ನವೆಂಬರ್ 17: ಆಸ್ತಿ ಕಬಳಿಸಲು ನಕಲಿ ಮರಣ ಪ್ರಮಾಣಪತ್ರ ( fake death certificate) ಸೃಷ್ಟಿಸಿದ್ದ ಆರೋಪಿಯ ವಿರುದ್ಧ ಪೊಲೀಸರು FIR ದಾಖಲಿಸಿದ್ದಾರೆ. ಮಡಿಕೇರಿ ತಾಲೂಕಿನ ಹೆಚ್.ಎ. ಮುತ್ತಪ್ಪ ಎಂಬಾತನ ವಿರುದ್ಧ ಎಫ್ಐಆರ್ ದಾಖಲಾಗಿದ್ದು (madikeri police), ಮೃತಪಟ್ಟ ತಂದೆ ಮತ್ತು ತಾಯಿಯ ಹೆಸರಲ್ಲಿ ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿಸಿದ್ದ ಎಂದು ದೂರಿನಲ್ಲಿ ದಾಖಲಿಸಲಾಗಿದೆ.
ಆಸ್ತಿ ಕಬಳಿಸುವ ಉದ್ದೇಶದಿಂದ ನಕಲಿ ಮರಣ ಪ್ರಮಾಣಪತ್ರ ಸೃಷ್ಟಿಸಲಾಗಿದ್ದು, ಅದನ್ನು ದೃಢೀಕರಿಸಲು ತಹಶೀಲ್ದಾರ್ ಸಹಿಯನ್ನು ಆರೋಪಿ ನಕಲು ಮಾಡಿದ್ದಾನೆ ಎನ್ನಲಾಗಿದೆ.
ಆರೋಪಿಯ ತಂದೆ ಅಪ್ಪಯ್ಯ, 1971ರಲ್ಲಿ ಮೃತಪಟ್ಟಿದ್ದರೆ, ತಾಯಿ ಮಾಯಮ್ಮ 2016ರಲ್ಲಿ ಮೃತಪಟ್ಟಿದ್ದಾರೆ. ಇವರುಗಳ ಹೆಸರಿನಲ್ಲಿಯೇ ನಕಲಿ ಮರಣ ಪ್ರಮಾಣ ಪತ್ರ ತಯಾರಿಸಲಾಗಿದೆ.
ಇದನ್ನೂ ಓದಿ: ಹಾಸನ -ಆಸ್ತಿ ಕಬಳಿಸಲು ಬದುಕಿದ ವೃದ್ಧೆ ಮರಣ ಪ್ರಮಾಣ ಪತ್ರ ಮಾಡಿಸಿದ ಸಂಬಂಧಿಕರು, ದೂರು ದಾಖಲಿಸಿದ ಮಗ
ಆರೋಪಿ ಮುತ್ತಪ್ಪ ವಿರುದ್ಧ ಚಂಗಪ್ಪ ಎಂಬುವರಿಂದ ತಹಶೀಲ್ದಾರ್ಗೆ ದೂರು ಸಲ್ಲಿಸಲಾಗಿತ್ತು. ಅದರನ್ವಯ ಮಡಿಕೇರಿ ನಗರ ಠಾಣೆಗೆ ದೂರು ನೀಡಿದ ತಹಶೀಲ್ದಾರ್ ಪ್ರವೀಣ್ ಅವರು ಮುತ್ತಪ್ಪ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು, ತನಿಖೆ ನಡೆಸುವಂತೆ ಮಡಿಕೇರಿ ಪೊಲೀಸರಿಗೆ ಸೂಚಿಸಿದ್ದಾರೆ.
ನಕಲಿ ಬ್ಯಾಂಕ್ ಖಾತೆ ಸೃಷ್ಟಿಸಿ ವಹಿವಾಟು ನಡೆಸುತ್ತಿದ್ದ ಜಾಲ ಭೇದಿಸಿದ ಸಿಸಿಬಿ
ಎಲ್ಲೆಂದರಲ್ಲಿ ಆಧಾರ್, ಪಾನ್ ಕಾರ್ಡ್ ಕೊಡುವ ಜನರೇ ಎಚ್ಚರವಾಗಿರಿ. ಇಲ್ಲವಾದರೆ, ನಿಮ್ಮ ದಾಖಲೆಗಳಲ್ಲಿ ಬೇನಾಮಿ (ನಕಲಿ) ಬ್ಯಾಂಕ್ ಖಾತೆಗಳು ಸೃಷ್ಟಿಯಾಗುತ್ತದೆ. ಬೆಂಗಳೂರಿನಲ್ಲಿ ಇಂತಹ ನಕಲಿ ಖಾತೆಗಳನ್ನು ಸೃಷ್ಟಿ ಮಾಡುತ್ತಿದ್ದ ಜಾಲವನ್ನು ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಪತ್ತೆಹಚ್ಚಿ ಆರು ಮಂದಿಯನ್ನು ಬಂಧಿಸಿದ್ದಾರೆ.
ಕೇರಳ ಮೂಲದ ಆರೋಪಿಗಳಾದ ಸಮೀರ್, ಮಹಮ್ಮದ್ ಹಸನ್, ಅಮೂಲ್ ಬಾಬು, ಮಹಮ್ಮದ್ ಇರ್ಫಾನ್, ತಂಝೀಲ್, ಮಂಜುನಾಥ ಬಂಧಿತರು. ಜನರ ಕೆವೈಸಿ ಪಡೆದು ಬಳಿಕ ಬ್ಯಾಂಕ್ ಖಾತೆ ತೆರೆದು ವಹಿವಾಟು ನಡೆಸುತ್ತಿದ್ದರು.
5 ಸಾವಿರದಿಂದ 10,000 ರೂ. ಕೊಟ್ಟು ಕೆವೈಸಿ ಪಡೆಯುತ್ತಿದ್ದ ಆರೋಪಿಗಳು, ಆಧಾರ್, ಪಾನ್ ಕಾರ್ಡ್, ಒಂದು ಸಹಿಗೆ 10,000 ರೂ. ರೇಟ್ ಫಿಕ್ಸ್ ಮಾಡಿದ್ದರು. ಪ್ರತಿ ದಾಖಲಾತಿಗೆ ಹೊಸ ಸಿಮ್ ಬಳಸಿ ಖಾತೆ ತೆರೆಯುತ್ತಿದ್ದರು. ವಿದೇಶದಲ್ಲಿ ಕುಳಿತುಕೊಂಡೇ ಬೆಂಗಳೂರಿನಲ್ಲಿ ಬೇನಾಮಿ ಖಾತೆ ತೆರೆದು ವಹಿವಾಟು ನಡೆಸುತ್ತಿದ್ದರು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:30 pm, Fri, 17 November 23