ನಡೆದಾಡುವ ಕಾಡಿನ ನಿಘಂಟು ಎಂದೇ ಹೆಸರಾಗಿದ್ದ ಕೊಡಗಿನ ಕೆಎಂ ಚಿಣ್ಣಪ್ಪ ವಿಧಿವಶ
ನಡೆದಾಡುವ ಕಾಡಿನ ನಿಘಂಟು ಎಂದೇ ಹೆಸರಾಗಿದ್ದ ಕೊಡಗಿನ ಕೆ.ಎಂ. ಚಿಣ್ಣಪ್ಪ (84) ಅವರು ಅನಾರೋಗ್ಯದಿಂದ ಇಂದು ಬೆಳಗ್ಗೆ 11:20ರ ಗಂಟೆಗೆ ವಿಧಿವಶರಾಗಿದ್ದಾರೆ. ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ತಮ್ಮದೇ ಆದ ಕೊಡುಗೆ ನೀಡಿದ್ದ ಚಿಣ್ಣಪ್ಪ ಅವರ ಕಾರ್ಯವೈಖರಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮಾದರಿ ಆಗಿದ್ದರು.
ಬೆಂಗಳೂರು, ಫೆಬ್ರವರಿ 26: ನಡೆದಾಡುವ ಕಾಡಿನ ನಿಘಂಟು ಎಂದೇ ಹೆಸರಾಗಿದ್ದ ಕೊಡಗಿನ ಕೆ.ಎಂ. ಚಿಣ್ಣಪ್ಪ (KM Chinnappa) (84) ಅವರು ಅನಾರೋಗ್ಯದಿಂದ ಇಂದು ಬೆಳಗ್ಗೆ 11:20ರ ಗಂಟೆಗೆ ವಿಧಿವಶರಾಗಿದ್ದಾರೆ. ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. 1967ರಲ್ಲಿ ಕೆ.ಎಂ.ಚಿನ್ನಪ್ಪ ಅವರು ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದ (ನಾಗರಹೊಳೆ) ಅರಣ್ಯ ರೇಂಜ್ ಆಫೀಸರ್ ಆಗಿದ್ದರು. ತಮ್ಮ ವೃತ್ತಿ ಜೀವನದಲ್ಲಿ ಕಳಸಾಗಣಿಕ, ಗಾಂಜಾ ಬೆಳೆಯುವುದು ಹೀಗಿ ಅನೇಕ ಚಟುವಕೆಗಳನ್ನು ಪತ್ತೆ ಹಚ್ಚುವುದು ಅವರಿಗೆ ತುಂಬಾ ದಿನಗಳು ಬೇಕಾಗಲಿಲ್ಲ. ಇದನ್ನು ತಿಳಿದ ಅವರು ಇದು ಹೀಗೆಯೇ ಮುಂದುವರಿದರೆ ಮೂರು ದಶಕಗಳಲ್ಲಿ ನಾಗರಹೊಳೆಯಲ್ಲಿ ವನ್ಯಜೀವಿಗಳೇ ಇರುವುದಿಲ್ಲ ಎಂಬುವುದನ್ನು ಮನಗಂಡು ಅವರು ತಮ್ಮ ಜೀವನವನ್ನು ವನ್ಯಜೀವಿಗಳನ್ನು ರಕ್ಷಿಸಲು ನಿರ್ಧರಿಸಿದರು. ಅಷ್ಟೆ ಅಲ್ಲದೆ ಏಕಾಂಗಿಯಾಗಿ ಹೊರಾಡಿದ್ದಾರೆ.
ಚಿನ್ನಪ್ಪ ಅವರು 1941 ರಲ್ಲಿ ನಾಗರಹೊಳೆ ಸಮೀಪದ ಹಳ್ಳಿಯೊಂದರಲ್ಲಿ ಜನಿಸಿದರು. ಅವರ ತಂದೆ ಮೊದಲ ಮಹಾಯುದ್ಧದಲ್ಲಿ ಹೋರಾಡಿದ ಸೈನಿಕರು. ಚಿನ್ನಪ್ಪ ಅವರು ಹುಟ್ಟಿನಿಂದಲೇ ಪ್ರಕೃತಿಯೊಂದಿಗೆ ಬೆಳದವರು. ಮುಂದೆ ಅದರ ಬಗ್ಗೆ ಬಲವಾದ ಪ್ರೀತಿಯನ್ನು ಸಹ ಬೆಳೆಸಿಕೊಂಡರು. ನಾಗರಹೊಳೆ ಕಾಡುಗಳನ್ನು ಉಳಿಸಲು ಹೋರಾಡಿದವರಲ್ಲಿ ಇವರು ಯಾವಾಗಲೂ ಮುಂಚೂಣಿಯಲ್ಲಿದ್ದವರು.
ಇದನ್ನೂ ಓದಿ: ಕಾಡು ಪ್ರಾಣಿಗಳ ಭಾಗಗಳನ್ನ ಹಿಂದಿರುಗಿಸಲು ಗಡುವು ನೀಡಿದ ಸರ್ಕಾರ; ಕೊಡಗಿನವರಲ್ಲಿ ಸೃಷ್ಟಿಯಾದ ಆತಂಕ
ಕೆ.ಎಂ. ಚಿಣ್ಣಪ್ಪ ಅವರ ನಿಧನದ ಬಗ್ಗೆ ವಿಪಕ್ಷ ನಾಯಕ ಪ್ರತಿಪಕ್ಷ ನಾಯಕ ಆರ್. ಅಶೋಕ್ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನಡೆದಾಡುವ ಕಾಡಿನ ನಿಘಂಟು ಎಂದೇ ಹೆಸರಾಗಿದ್ದ ಕೊಡಗಿನ ಕೆ.ಎಂ. ಚಿಣ್ಣಪ್ಪ (84) ಅವರು ನಿಧನರಾಗಿದ್ದಾರೆ ಎಂಬ ಸುದ್ದಿ ತಿಳಿದು ಆಘಾತವಾಯಿತು. ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ತಮ್ಮದೇ ಆದ ಕೊಡುಗೆ ನೀಡಿದ್ದ ಚಿಣ್ಣಪ್ಪ ಅವರ ಕಾರ್ಯವೈಖರಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮಾದರಿ.
ಆರ್. ಅಶೋಕ್ ಟ್ವೀಟ್
ನಡೆದಾಡುವ ಕಾಡಿನ ನಿಘಂಟು ಎಂದೇ ಹೆಸರಾಗಿದ್ದ ಕೊಡಗಿನ ಕೆ.ಎಂ. ಚಿಣ್ಣಪ್ಪ (84) ಅವರು ನಿಧನರಾಗಿದ್ದಾರೆ ಎಂಬ ಸುದ್ದಿ ತಿಳಿದು ಆಘಾತವಾಯಿತು.
ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ತಮ್ಮದೇ ಆದ ಕೊಡುಗೆ ನೀಡಿದ್ದ ಚಿಣ್ಣಪ್ಪ ಅವರ ಕಾರ್ಯವೈಖರಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ… pic.twitter.com/80QDGfkCco
— R. Ashoka (ಆರ್. ಅಶೋಕ) (@RAshokaBJP) February 26, 2024
ಅನೇಕ ಸಲ ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಕಾಡು ಮತ್ತು ವನ್ಯಜೀವಿಗಳ ರಕ್ಷಣೆಯಲ್ಲಿ ತೊಡಗಿಸಿಕೊಂಡ ಚಿಣ್ಣಪ್ಪ ಅವರ ಹೆಸರು ಗಂಧದನಾಡಿನಲ್ಲಿ ಆದರ್ಶ ಪ್ರಾಯವಾಗಿರುತ್ತದೆ. ಅವರ ನಿಧನದಿಂದ ಅವರ ಕುಟುಂಬಕ್ಕೆ, ಪ್ರಕೃತಿ ಪ್ರಿಯರಿಗೆ ಹಾಗೂ ಅಭಿಮಾನಿಗಳಿಗೆ ಆಗಿರುವ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಸಂತಾಪ ಸೂಚಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:47 pm, Mon, 26 February 24