AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಶಂಕೆ: ಬಡ ಮಹಿಳೆಯ ಶವವನ್ನು ಜೆಸಿಬಿಯಲ್ಲಿಟ್ಟು ಆಸ್ಪತ್ರೆಗೆ ಸಾಗಿಸಿದ ಜನರು

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಕುರುಟಹಳ್ಳಿ ಗ್ರಾಮದಲ್ಲಿ ಮಹಿಳೆ ಮೃತಪಟ್ಟಿದ್ದು, ಮಹಿಳೆಯ ಶವವನ್ನು ಜೆಸಿಬಿ ಬಕೆಟ್​ನಲ್ಲಿಟ್ಟು ಚಿಂತಾಮಣಿ ನಗರ ಆಸ್ಪತ್ರೆಯ ಶವಾಗಾರಕ್ಕೆ ಸಾಗಾಟ ಮಾಡಲಾಗಿದೆ. ಏಪ್ರಿಲ್ 29ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಕೊರೊನಾ ಇರಬಹುದೆಂಬ ಸಂಶಯದಿಂದ ಶವವನ್ನು ಜೆಸಿಬಿಯಲ್ಲಿ ಸಾಗಾಟ ಮಾಡಿರುವುದು ತಿಳಿದುಬಂದಿದೆ.

ಕೊರೊನಾ ಶಂಕೆ: ಬಡ ಮಹಿಳೆಯ ಶವವನ್ನು ಜೆಸಿಬಿಯಲ್ಲಿಟ್ಟು ಆಸ್ಪತ್ರೆಗೆ ಸಾಗಿಸಿದ ಜನರು
ಜೆಸಿಬಿ ಮೂಲಕ ಮೃತ ಮಹಿಳೆಯ ಶವ ಸಾಗಾಟ
Skanda
|

Updated on: May 04, 2021 | 10:10 AM

Share

ಚಿಕ್ಕಬಳ್ಳಾಪುರ: ಕೊರೊನಾ ಬಂದ ನಂತರ ಯಾರು ಯಾರನ್ನೂ ನಂಬುವಂತಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸೋಂಕು ಹುಟ್ಟುಹಾಕಿದ ಭಯ ಎಷ್ಟೋ ಅಮಾಯಕ ಜೀವಗಳ ಪಾಲಿಗೆ ಕಂಟಕ ಆಗಿದೆ. ಬದುಕುವ ಎಲ್ಲಾ ಸಾಧ್ಯತೆಗಳು ಇದ್ದರೂ ಸೂಕ್ತ ಸಮಯದಲ್ಲಿ, ಸೂಕ್ತ ಚಿಕಿತ್ಸೆ ಸಿಗದೆ ಜೀವ ಬಿಟ್ಟವರ ಸಂಖ್ಯೆ ದೊಡ್ಡದಿದೆ. ಸತ್ತ ನಂತರ ಗೌರವಯುತ ಅಂತ್ಯ ಸಂಸ್ಕಾರ ಕಾಣದವರ ಪಟ್ಟಿಯೂ ದೊಡ್ಡದಿದೆ. ಸ್ವತಃ ಕುಟುಂಬಸ್ಥರೇ ಹಣ ಕೊಟ್ಟು ಬೇರೆಯವರಿಂದ ಅಂತ್ಯ ಸಂಸ್ಕಾರ ಮಾಡಿಸುವಂತಹ ಸನ್ನಿವೇಶ ನಿರ್ಮಾಣವಾಗಿರುವ ಈ ಕಾಲಘಟ್ಟದಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದು ವಿಶ್ಲೇಷಿಸುವುದೂ ಕಷ್ಟವಾಗಿದೆ. ಚಿಕ್ಕಬಳ್ಳಾಪುರದಲ್ಲಿ ನಡೆದ ಘಟನೆಯೊಂದು ಇಂತಹದ್ದೇ ಸಂದಿಗ್ಧತೆಯನ್ನು ನೆನಪಿಸುತ್ತದೆ. ಕೊರೊನಾದಿಂದ ಮೃತಪಟ್ಟಿರಬಹುದು ಎಂಬ ಶಂಕೆಯ ಮೇಲೆ ಇಲ್ಲಿನ ಮಹಿಳೆಯೊಬ್ಬರ ಶವವನ್ನು ಜೆಸಿಬಿ ಮೂಲಕ ರವಾನಿಸಲಾಗಿದೆ.

WOMAN CARRIED IN JCB

ಮಹಿಳೆಯ ಶವವನ್ನು ಜೆಸಿಬಿ ಮೂಲಕ ಸಾಗಿಸಿದ ದೃಶ್ಯ

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಕುರುಟಹಳ್ಳಿ ಗ್ರಾಮದಲ್ಲಿ ಮಹಿಳೆ ಮೃತಪಟ್ಟಿದ್ದು, ಮಹಿಳೆಯ ಶವವನ್ನು ಜೆಸಿಬಿ ಬಕೆಟ್​ನಲ್ಲಿಟ್ಟು ಚಿಂತಾಮಣಿ ನಗರ ಆಸ್ಪತ್ರೆಯ ಶವಾಗಾರಕ್ಕೆ ಸಾಗಾಟ ಮಾಡಲಾಗಿದೆ. ಏಪ್ರಿಲ್ 29ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಕೊರೊನಾ ಇರಬಹುದೆಂಬ ಸಂಶಯದಿಂದ ಶವವನ್ನು ಜೆಸಿಬಿಯಲ್ಲಿ ಸಾಗಾಟ ಮಾಡಿರುವುದು ತಿಳಿದುಬಂದಿದೆ. 12 ವರ್ಷದ ಓರ್ವ ಹೆಣ್ಣು ಮಗಳನ್ನು ಹೊಂದಿದ್ದ ಮಹಿಳೆ ಯಾವ ಕಾರಣದಿಂದ ಮೃತಪಟ್ಟಿದ್ದಾರೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಕೊರೊನಾ ಸೃಷ್ಟಿ ಮಾಡಿದ ಭಯದಿಂದಾಗಿ ಯಾರಾದರೂ ಅನಾರೋಗ್ಯಕ್ಕೀಡಾಗಿದ್ದಲ್ಲಿ, ಸಾವಿಗೀಡಾದಲ್ಲಿ ಹತ್ತಿರ ಹೋಗಲು ಜನ ಭಯ ಪಡುವುದು ಸಾಮಾನ್ಯವಾಗಿದೆ. ಆದರೆ, ಕಡೇಪಕ್ಷ ಆ್ಯಂಬುಲೆನ್ಸ್ ವ್ಯವಸ್ಥೆಯನ್ನಾಗಲೀ, ಬೇರೆ ಯಾವುದೇ ರೀತಿಯ ಸೂಕ್ತ ವಾಹನದ ಮೂಲಕವಾಗಲೀ ಶವ ಸಾಗಿಸುವಷ್ಟು ಮಾನವೀಯತೆ ತೋರಿಸಬಹುದಿತ್ತು ಎಂದು ಅನೇಕರು ಮರುಗಿದ್ದಾರೆ.

ಇದನ್ನೂ ಓದಿ: ಚಿತಾಗಾರ ತುಂಬಿದೆ: ಸ್ಮಶಾನಗಳ ಮುಂದೆಯೂ ಹೌಸ್​ಫುಲ್​ ಬೋರ್ಡ್​, ಬುಕ್ಕಿಂಗ್​ ಫುಲ್​ ಆದ ನಂತರ ಅವಕಾಶವಿಲ್ಲ 

Unemployment in India | ಕೊರೊನಾ ಭೀಕರತೆಗೆ ಮತ್ತೆ 70 ಲಕ್ಷ ಜನರಿಗೆ ಉದ್ಯೋಗ ನಷ್ಟ; ನಿರುದ್ಯೋಗ ದರ 4 ತಿಂಗಳ ಗರಿಷ್ಠ

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ