ನಕಲಿ ದಾಖಲೆ ಸೃಷ್ಟಿಸಿ 8 ಎಕರೆ ಜಮೀನು ಲಪಟಾಯಿಸಲು ಯತ್ನಿಸಿದ್ದ 10 ಆರೋಪಿಗಳು ಅರೆಸ್ಟ್​

ನಕಲಿ ದಾಖಲೆ ಸೃಷ್ಟಿಸಿ 8 ಎಕರೆ 38 ಗುಂಟೆ ಜಮೀನನ್ನು ಲಪಟಾಯಿಸಲು ಹೊರಟಿದ್ದ 10 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕೋಲಾರ ಜಿಲ್ಲಾ ವರಿಷ್ಠಾಧಿಕಾರಿ ಡಿ. ದೇವರಾಜ್ ತಿಳಿಸಿದ್ದಾರೆ.

ನಕಲಿ ದಾಖಲೆ ಸೃಷ್ಟಿಸಿ 8 ಎಕರೆ ಜಮೀನು ಲಪಟಾಯಿಸಲು ಯತ್ನಿಸಿದ್ದ 10 ಆರೋಪಿಗಳು ಅರೆಸ್ಟ್​
ನಕಲಿ ದಾಖಲೆ ಸೃಷ್ಟಿಸಿ ಜಮೀನು ಲಪಟಾಯಿಸಲು ಯತ್ನಿಸಿದ್ದ 10 ಆರೋಪಿಗಳು ಅರೆಸ್ಟ್​
TV9kannada Web Team

| Edited By: sadhu srinath

Sep 21, 2022 | 5:49 PM

ಕೋಲಾರ: ನಕಲಿ ದಾಖಲೆ ಸೃಷ್ಟಿಸಿ 8 ಎಕರೆ 38 ಗುಂಟೆ ಜಮೀನನ್ನು ಲಪಟಾಯಿಸಲು ಹೊರಟಿದ್ದ 10 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕೋಲಾರ ಜಿಲ್ಲಾ ವರಿಷ್ಠಾಧಿಕಾರಿ ಡಿ. ದೇವರಾಜ್ ತಿಳಿಸಿದ್ದಾರೆ. ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಳಬಾಗಿಲು ತಾಲೂಕಿನ ದಾರೇನಹಳ್ಳಿ ಗ್ರಾಮದ ಸರ್ವೆ ನಂ. ೩೬/೧ ರಲ್ಲಿ ೧ ಎಕರೆ ೨೮ ಗುಂಟೆ, ೩೬/೨ ರಲ್ಲಿ ೬ ಎಕರೆ ೧ಗುಂಟೆ, ೩೩/೨ ರಲ್ಲಿ ೧ ಎಕರೆ ೯ ಗುಂಟೆ ಸೇರಿದಂತೆ ಒಟ್ಟು ೮ ಎಕರೆ ೩೮ ಗುಂಟೆ ಜಮೀನು ದೆಹಲಿ ಮೂಲದವರಾದ ಧರ್ಮನಾಥ ಕುನ್ವರ್ ಹೆಸರಲ್ಲಿದೆ. ಅವರು ಮೃತಪಟ್ಟಿದ್ದು ಅವರ ಮಗ ಮುಕೇಶ್ ಕುನ್ವರ್ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಮುಳಬಾಗಿಲು ತಹಶೀಲ್ದಾರ್ ಕಚೇರಿಯಲ್ಲಿ ಖಾತೆ ಮಾಡಿಸಿ ಕೊಳ್ಳಲು ಮುಕೇಶ್ ಸಬರ್ ವಾಲ್ ಎಂಬ ಆರೋಪಿ ಮತ್ತು ಕರ್ನಾಟಕ ರೈತ ಸೇನಾ ರಾಜ್ಯಾಧ್ಯಕ್ಷ ಕೃಷ್ಣಾರೆಡ್ಡಿ ಸೇರಿ ಇತರರು ಸಂಚು ರೂಪಿಸಿದ್ದರು ಎನ್ನಲಾಗಿದೆ.

ತಮ್ಮ ಜಮೀನಿನಲ್ಲಿ ಮರಗಳನ್ನು ಕಡಿದು ಹಾಕಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಆಗಸ್ಟ್​ 8 ರಂದು ಜಮೀನಿನ ಮೂಲ ವಾರಸುದಾರರಾದ ಧರ್ಮನಾಥ ಕನ್ವರ್ ಹಾಗೂ ಬ್ರಿಜ್ ಕಿಶೋರಿ ದೇವಿ ಮುಳಬಾಗಿಲು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಅದರಂತೆ ವಿಶೇಷ ತಂಡ ರಚಿಸಿ ತನಿಖೆಯನ್ನು ಕೈಗೊಂಡು ಪ್ರಕರಣವನ್ನು ಕೂಲಂಕಶವಾಗಿ ಪರಿಶೀಲಿಸಲಾಗಿತ್ತು. ಜಮೀನಿನ ನಿಜವಾದ ಮಾಲೀಕರಾದ ಧರ್ಮನಾಥ ಕುನ್ವರ್ ಮತ್ತು ಬ್ರಿಜ್ ಕಿಶೋರಿ ದೇವಿ ಅವರ ನಕಲಿ ಮರಣ ಪ್ರಮಾಣ ಪತ್ರ ಮತ್ತು ಇವರ ಮಗ ಮುಕೇಶ್ ಕುನ್ವರ್ ಅವರ ಆಧಾರ್ ಕಾರ್ಡ್, ಪಾನ್ ಕಾರ್ಡ್ ಗಳಿಗೆ ಆರೋಪಿ ಮುಕೇಶ್ ಸಬರ್ ವಾಲ್ ಫೋಟೋ ಹಾಕಿ ತಾನೇ ಧರ್ಮನಾಥ ಕುನ್ವರ್ ಅವರ ಮಗ ಎಂದು ಬಿಂಬಿಸುವಂತೆ ನಕಲಿ ಆಧಾರ್, ಪಾನ್ ಕಾರ್ಡ್ ಮತ್ತು ಇತರೆ ದಾಖಲಾತಿಗಳು ಸೃಷ್ಟಿ ಮಾಡಿಕೊಂಡಿದ್ದರು. ಅದರಿಂದ ಸದರಿ ಜಮೀನನ್ನು ಲಪಟಾಯಿಸಲು ಮುಂದಾಗಿದ್ದರು.

ದೆಹಲಿಯ ಹೋಟೆಲ್ ವೊಂದರಲ್ಲಿ ಕೆಲಸ ಮಾಡುವ ಆರೋಪಿ ಮುಖೇಶ್ ಸಬರ್ ವಾಲ್, ಸ್ಥಳೀಯ ಆರೋಪಿಗಳಾದ ಕೃಷ್ಣಾರೆಡ್ಡಿ, ರಮೇಶ್ ರೆಡ್ಡಿ, ಸಲಿಂ, ಮುರಳಿ ಕೃಷ್ಣ, ಮಂಜುನಾಥ, ಶ್ರೀನಿವಾಸ ರೆಡ್ಡಿ, ಶಿವಕುಮಾರ, ವೆಂಕಟೇಶಪ್ಪ, ನಾರಾಯಣಪ್ಪ ಮತ್ತು ಮಂಜುನಾಥ ಇವರು ಮೋಸದಿಂದ ಅಶೋಕ್ ಕುಮಾರ್ ಅವರಿಗೆ ನೋಂದಣಿ ಇಲ್ಲದ ಕ್ರಯದ ಕರಾರು ಮಾಡಿಕೊಟ್ಟು 49 ಲಕ್ಷ ರೂ ನಗದು ಹಣ ಹಾಗೂ 25 ಲಕ್ಷ ರೂ ಮೌಲ್ಯದ ಎರಡು ಚೆಕ್ಕುಗಳನ್ನು ಪಡೆದುಕೊಂಡು ಮೋಸ ಮಾಡಿದ್ದು, ಜಮೀನಿನಲ್ಲಿರುವ ಮರಗಳನ್ನು ಕಟಾವು ಮಾಡಿದ್ದಾರೆ. ಸದ್ಯ ಆರೋಪಿಗಳನ್ನು ಬಂಧಿಸಿರುವ ಕೋಲಾರ ಪೊಲೀಸರು, ಮುಂದಿನ ತನಿಖೆ ಕೈಗೊಂಡಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada