ಮನಸ್ಸಿನ ನೆಮ್ಮದಿಗಾಗಿಯೇ ಬರ್ತಾರೆ ಇಲ್ಲಿಗೆ ನೂರಾರು ಜನ! ಎಲ್ಲಿ?

ಕೋಲಾರ: ಅದೊಂದು ಪುರಾಣ ಪ್ರಸಿದ್ಧ ಸ್ಥಳ, ನೊಂದ ಮನಸ್ಸಿಗೆ ಮುದ ನೀಡುವ ಪ್ರದೇಶ. ತಮ್ಮ ಹತ್ತಾರು ಮಾನಸಿಕ ಒತ್ತಡಗಳನ್ನು ನಿವಾರಣೆ ಮಾಡುವ ಸ್ಥಳ. ಅಲ್ಲಿರುವ ಒಂದು ವಿಶೇಷ ಆಕರ್ಷಣೆಯಿಂದಲೇ ಜನ ಇಂದಿಗೂ ಅಲ್ಲಿಗೆ ಬರುತ್ತಾರೆ. ಬಂದ ಜನರ ತಮ್ಮ ಮನಸ್ಸಿನ ದುಗುಡ ದುಮ್ಮನಾಗಳನ್ನು ನಿವಾರಣೆ ಮಾಡಿಕೊಂಡು ಮುಗುಳ್ನಗೆಯಿಂದ ಹೋಗುತ್ತಾರೆ. ಬೃಹತ್ತಾದ ಆಲದಮರ, ಅಲ್ಲೇ ಪಕ್ಕದಲ್ಲಿರುವ ಸುಂದರವಾದ ಕಲ್ಯಾಣಿ. ಕಲ್ಯಾಣಿ ಸುತ್ತಲೂ ಖುಷಿಯಿಂದ ನಗುತ್ತಾ ಮೀನುಗಳಿಗೆ ಆಹಾರ ಹಾಕುತ್ತಿರುವ ಜನರು ಹಾಗೂ ಕಾಲೇಜು ವಿದ್ಯಾರ್ಥಿನಿಯರು. ಅಲ್ಲೇ ಗುಡು ಗುಡು […]

ಮನಸ್ಸಿನ ನೆಮ್ಮದಿಗಾಗಿಯೇ ಬರ್ತಾರೆ ಇಲ್ಲಿಗೆ ನೂರಾರು ಜನ! ಎಲ್ಲಿ?
Follow us
ಸಾಧು ಶ್ರೀನಾಥ್​
| Updated By:

Updated on: Jun 06, 2020 | 2:26 PM

ಕೋಲಾರ: ಅದೊಂದು ಪುರಾಣ ಪ್ರಸಿದ್ಧ ಸ್ಥಳ, ನೊಂದ ಮನಸ್ಸಿಗೆ ಮುದ ನೀಡುವ ಪ್ರದೇಶ. ತಮ್ಮ ಹತ್ತಾರು ಮಾನಸಿಕ ಒತ್ತಡಗಳನ್ನು ನಿವಾರಣೆ ಮಾಡುವ ಸ್ಥಳ. ಅಲ್ಲಿರುವ ಒಂದು ವಿಶೇಷ ಆಕರ್ಷಣೆಯಿಂದಲೇ ಜನ ಇಂದಿಗೂ ಅಲ್ಲಿಗೆ ಬರುತ್ತಾರೆ. ಬಂದ ಜನರ ತಮ್ಮ ಮನಸ್ಸಿನ ದುಗುಡ ದುಮ್ಮನಾಗಳನ್ನು ನಿವಾರಣೆ ಮಾಡಿಕೊಂಡು ಮುಗುಳ್ನಗೆಯಿಂದ ಹೋಗುತ್ತಾರೆ.

ಬೃಹತ್ತಾದ ಆಲದಮರ, ಅಲ್ಲೇ ಪಕ್ಕದಲ್ಲಿರುವ ಸುಂದರವಾದ ಕಲ್ಯಾಣಿ. ಕಲ್ಯಾಣಿ ಸುತ್ತಲೂ ಖುಷಿಯಿಂದ ನಗುತ್ತಾ ಮೀನುಗಳಿಗೆ ಆಹಾರ ಹಾಕುತ್ತಿರುವ ಜನರು ಹಾಗೂ ಕಾಲೇಜು ವಿದ್ಯಾರ್ಥಿನಿಯರು. ಅಲ್ಲೇ ಗುಡು ಗುಡು ಗುಟ್ಟುತ್ತಿರುವ ಪಾರಿವಾಳ ಗುಂಪು. ಇಂಥಹ ಸುಂದರ ಪ್ರಕೃತಿ ಸೌಂದರ್ಯ ದೃಶ್ಯಗಳು ನಮಗೆ ಕಾಣಸಿಗೋದು ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ನರಸಿಂಹತೀರ್ಥದಲ್ಲಿ.

ನೆಮ್ಮದಿಗಾಗಿ ನೂರಾರು ಜನ ಬರ್ತಾರೆ: ನರಸಿಂಹತೀರ್ಥ ಇದೊಂದು ಪುರಾಣ ಪ್ರಸಿದ್ಧ ಸ್ಥಳ. ಇಲ್ಲಿ ಶ್ರೀಪಾದರಾಜರ ಮಠ, ಬೃಂದಾವನ ಜೊತೆಗೆ ನರಸಿಂಹಸ್ವಾಮಿ ದೇವಾಲಯವಿದೆ. ಇದರ ಪಕ್ಕದಲ್ಲೇ ಪುರಾತನ ಕಾಲದ ಬೃಹತ್ತಾದ ಕಲ್ಯಾಣಿಯೊಂದಿದೆ. ಇದು ಇಲ್ಲಿಗೆ ಬರುವ ಬಹುತೇಕ ಜನರ ಆಕರ್ಷಣೀಯ ಕೇಂದ್ರ. ಜೊತೆಗೆ ಪ್ರವಾಸಿಗರ ಮನಸ್ಸಿಗೆ ಮುದ ನೀಡುವ ಸ್ಥಳ. ಇಲ್ಲಿ ಜನರು ತಮ್ಮ ಮನಸ್ಸಿನ ನೆಮ್ಮದಿಗಾಗಿಯೇ ನಿತ್ಯ ನೂರಾರು ಜನ ಬರ್ತಾರೆ.

ಅಷ್ಟಕ್ಕೂ ಇಲ್ಲಿ ಅಂಥಾದೇನಿದೆ ಅಂದ್ರೆ ಇಲ್ಲಿ ಸುಂದರವಾದ ಕಲ್ಯಾಣಿ. ಆ ಕಲ್ಯಾಣಿಯಲ್ಲಿರುವ ಹತ್ತಾರು ಬಗೆಯ ಮೀನುಗಳು. ಜೊತೆಗೆ ಕಲ್ಯಾಣಿ ಮಧ್ಯದ ಗೋಪುರದಲ್ಲಿ ವಾಸವಾಗಿರುವ ನೂರಾರು ಪಾರಿವಾಳಗಳು. ಹಲವಾರು ಒತ್ತಡಗಳೊಂದಿಗೆ ಇಲ್ಲಿಗೆ ಬರುವ ಜನರಿಗೆ ಒತ್ತಡ ನಿವಾರಿಸಿ ಮನಸ್ಸಿಗೆ ನೆಮ್ಮದಿ ನೀಡುತ್ತವೆ. ಇಲ್ಲಿಗೆ ಬರುವ ಜನ ಒಂದಷ್ಟು ಕಡಲೆಪುರಿ ತೆಗೆದುಕೊಂಡು ಕಲ್ಯಾಣಿಯಲ್ಲಿರುವ ಮೀನುಗಳಿಗೆ ಹಾಕುತ್ತಾ ಸಮಯ ಕಳೆಯುತ್ತಾರೆ. ಸ್ವಲ್ಪಹೊತ್ತಿನಲ್ಲೇ ಅವರು ಮನಸ್ಸಿನ ಒತ್ತಡ ನಿವಾರಣೆಯಾಗಿ ನೆಮ್ಮದಿಯಿಂದ ತೆರಳುತ್ತಾರೆ.

ಮೀನಿನ ಕಲರವ, ತುಂಟಾಟ ನೋಡೋದೆ ಚೆಂದ: ಇಲ್ಲಿಗೆ ಕೇವಲ ಕಾಲೇಜು ವಿದ್ಯಾರ್ಥಿಗಳಷ್ಟೇ ಬರೋದಿಲ್ಲ. ಇಲ್ಲಿಗೆ ಪ್ರವಾಸಿಗರು, ರೈತರು ಸೇರಿದಂತೆ ಹಲವು ಬಗೆಯ ಜನರು ಬರ್ತಾರೆ. ಬಂದ ಜನ ದೇವರಿಗೆ ನಮಸ್ಕರಿಸಿ ನಂತರ ಕೆಲಹೊತ್ತು ಕಲ್ಯಾಣಿಯ ಸುತ್ತ ಮುತ್ತ ಕಾಲ ಕಳೆಯುತ್ತಾರೆ. ಇಲ್ಲಿರುವ ಬೃಹತ್ತಾದ ಆಲದ ಮರದಡಿ ವಿಶ್ರಾಂತಿ ಪಡೆದು ತಮ್ಮ ಹತ್ತಾರು ಬಗೆಯ ಮನಸ್ಸಿನ ದುಗುಡಗಳನ್ನು ನಿವಾರಿಸಿಕೊಂಡು ಹೋಗ್ತಾರೆ.

ಇಲ್ಲಿರುವ ಮೀನುಗಳಿಗೆ ಆಹಾರ ಹಾಕುತ್ತಾ ಆ ಮೀನಿನ ಕಲರವ, ಮೀನಿನ ತುಂಟಾಟ ನೋಡುತ್ತಲೇ ಹತ್ತಾರು ಬೇಸರಗಳನ್ನು ಮರೆತು ನೆಮ್ಮದಿಯಿಂದ ಕಾಲ ಕಳೆದು ತೆರಳುತ್ತಾರೆ.

ಈ ನರಸಿಂಹತೀರ್ಥ ಇಂದಿಗೆ ಕೇಲವ ಶ್ರೀಪಾದರಾಜರ ಮಠವಾಗಿ ಉಳಿದಿಲ್ಲ. ಬದಲಾಗಿ ಇಲ್ಲಿರುವ ಮೀನುಗಳು, ಪ್ರಕೃತಿ ಸೌಂದರ್ಯ ಇಲ್ಲಿಗೆ ಬರುವ ಪ್ರವಾಸಿಗರಿಗೂ ಹಾಗೂ ಜನರಿಗೆ ಭಕ್ತಿಯ ಜೊತೆಗೆ ನೆಮ್ಮದಿ ನೀಡುವ ಸ್ಥಳವಾಗಿ ಈ ಕ್ಷೇತ್ರದ ಪ್ರಾಮುಖ್ಯತೆ ಹಾಗೂ ಮಹತ್ವವನ್ನು ಹೆಚ್ಚಿಸಿಕೊಂಡಿದೆ.

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ