ಚೆಕ್​ಪೋಸ್ಟ್ ಬಳಿ ಅಮಾಯಕರಿಗೆ ಕಿರುಕುಳ, ಹಣ ವಸೂಲಿ.. ರಾಯಲ್ಪಾಡು ಪೊಲೀಸ್ ಠಾಣೆ ಪಿಎಸ್ಐ ಅಮಾನತು

ಶ್ರೀನಿವಾಸಪುರ ಕ್ಷೇತ್ರದ ಶಾಸಕ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ಗೆ ಈ ಬಗ್ಗೆ ಸ್ಥಳೀಯರು ದೂರು ನೀಡಿದ್ದರು. ಪಿಎಸ್ಐ ನರಸಿಂಹ ಮೂರ್ತಿ ಅವರು ಸಾರ್ವಜನಿಕರಿಗೆ ಅನತ್ಯವಾಗಿ ಕಿರುಕುಳ ನೀಡಿ ಜನರಿಂದ ಹಣ ವಸೂಲಿ ಮಾಡುತಿದ್ದಾರೆ ಎಂದು ದೂರು ನೀಡಿದ್ದರು.

ಚೆಕ್​ಪೋಸ್ಟ್ ಬಳಿ ಅಮಾಯಕರಿಗೆ ಕಿರುಕುಳ, ಹಣ ವಸೂಲಿ.. ರಾಯಲ್ಪಾಡು ಪೊಲೀಸ್ ಠಾಣೆ ಪಿಎಸ್ಐ ಅಮಾನತು
ಪಿಎಸ್ಐ ನರಸಿಂಹಮೂರ್ತಿ

ಕೋಲಾರ: ಕೊರೊನಾ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲಾಕ್ಡೌನ್ ಹೇರಲಾಗಿದೆ. ವಾಹನಗಳ ಚಾಲನೆ, ಓಡಾಟಕ್ಕೆ ಕಟ್ಟುನಿಟ್ಟಿನ ನಿರ್ಬಂಧನೆಗಳನ್ನು ವಿಧಿಸಲಾಗಿದೆ. ಆದರೆ ಲಾಕ್ಡೌನ್ ಸಂದರ್ಭದಲ್ಲಿ ಆಂಧ್ರ ಹಾಗೂ ಕರ್ನಾಟಕ ಗಡಿಯ ಚೆಕ್ಪೋಸ್ಟ್ನಲ್ಲಿ ರೈತರ ವಾಹನಗಳನ್ನು ಹಿಡಿದು ಕಿರುಕುಳ ನೀಡುತ್ತಿದ್ದ ಆರೋಪದಲ್ಲಿ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕು ರಾಯಲ್ಪಾಡು ಪೊಲೀಸ್ ಠಾಣೆ ಪಿಎಸ್ಐ ನರಸಿಂಹಮೂರ್ತಿಯನ್ನು ಅಮಾನತು ಮಾಡಲಾಗಿದೆ.

ಶ್ರೀನಿವಾಸಪುರ ಕ್ಷೇತ್ರದ ಶಾಸಕ ಹಾಗೂ ಮಾಜಿ ಸ್ಪೀಕರ್ ರಮೇಶ್ ಕುಮಾರ್ಗೆ ಈ ಬಗ್ಗೆ ಸ್ಥಳೀಯರು ದೂರು ನೀಡಿದ್ದರು. ಪಿಎಸ್ಐ ನರಸಿಂಹ ಮೂರ್ತಿ ಅವರು ಸಾರ್ವಜನಿಕರಿಗೆ ಅನತ್ಯವಾಗಿ ಕಿರುಕುಳ ನೀಡಿ ಜನರಿಂದ ಹಣ ವಸೂಲಿ ಮಾಡುತಿದ್ದಾರೆ ಎಂದು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪಿಎಸ್ಐ ನರಸಿಂಹಮೂರ್ತಿಯನ್ನು ಅಮಾನತು ಮಾಡುವಂತೆ ಆಗ್ರಹಿಸಲಾಯಿತು.

ಅಲ್ಲದೆ ಪಿಎಸ್ಐ ನರಸಿಂಹಮೂರ್ತಿ ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೆಲವು ಜೂಜು ಅಡ್ಡೆಗಳಿಗೂ ಕುಮ್ಮಕ್ಕು ನೀಡಿ ಹಣ ವಸೂಲಿ ಮಾಡುತ್ತಿದ್ದರು ಎಂಬ ಆರೋಪ ಸಹ ಕೇಳಿ ಬಂದಿದೆ. ಹೀಗಾಗಿ ಕೇಂದ್ರ ವಲಯ ಐಜಿಪಿ ಚಂದ್ರಶೇಖರ್ ಕೂಡಲೇ ಪಿಎಸ್ಐ ನರಸಿಂಹಮೂರ್ತಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: Covid Diary : ಕವಲಕ್ಕಿ ಮೇಲ್ : ‘ಅವ್ರಿಗೊಂದ್ ಸಕ್ತಿ ಇಂಜೆಷನ್ ಹಾಕ್ರ, ಬಿಟ್ ಹೋಗುಕಾರು ಸಕ್ತಿ ಬೇಕಲೆ’