ಕೋಲಾರ ಸರ್ಕಾರಿ ಕಚೇರಿಯಲ್ಲಿ ಕನ್ನಡದ ರಂಗು; ಎಲ್ಲರ ಗಮನ ಸೆಳೆಯುತ್ತಿದೆ ಅಧಿಕಾರಿಯ ಕನ್ನಡ ಪ್ರೇಮ

ಬಂಗಾರಪೇಟೆ ತಾಲೂಕು ಕಚೇರಿಯ ಒಳಗೆ ಕಾಲಿಟ್ಟರೆ ಸಾಕು ಹೊರಗಿನ ಆವರಣದಿಂದ ಹಿಡಿದು ಒಳಗಿನ ಎಲ್ಲಾ ವಿಭಾಗಗಳಲ್ಲಿ ಕನ್ನಡದ ನಾಮಫಲಕಗಳು ಗಮನ ಸೆಳೆಯುತ್ತವೆ.

ಕೋಲಾರ ಸರ್ಕಾರಿ ಕಚೇರಿಯಲ್ಲಿ ಕನ್ನಡದ ರಂಗು; ಎಲ್ಲರ ಗಮನ ಸೆಳೆಯುತ್ತಿದೆ ಅಧಿಕಾರಿಯ ಕನ್ನಡ ಪ್ರೇಮ
ತಾಲೂಕು ಕಚೇರಿಯಲ್ಲಿ ಕನ್ನಡ
Follow us
TV9 Web
| Updated By: sandhya thejappa

Updated on: May 01, 2022 | 4:01 PM

ಕೋಲಾರ: ಬಂಗಾರಪೇಟೆ (Bangarapet) ಇದು ಆಂಧ್ರ ಹಾಗೂ ತಮಿಳುನಾಡು ರಾಜ್ಯಗಳೊಂದಿಗೆ ತಮ್ಮ ಗಡಿಯನ್ನು ಹಂಚಿಕೊಂಡಿರುವ ತಾಲೂಕು. ಈ ಎರಡು ರಾಜ್ಯಗಳಿಗೆ ಕೇವಲ ಕೂಗಳತೆ ದೂರದಲ್ಲಿರುವ ಪ್ರದೇಶದಲ್ಲಿ ಜನರು ಹೆಚ್ಚಾಗಿ ತೆಲುಗು ಹಾಗೂ ತಮಿಳು ಭಾಷೆಗಳನ್ನು ಬಳಸುತ್ತಾರೆ. ಈ ಭಾಗದಲ್ಲಿ ಕನ್ನಡದ (Kannada) ಅಳಿವು ಉಳಿವಿನ ಪ್ರಶ್ನೆ ಮೂಡುತ್ತದೆ. ಹೀಗಿರುವಾಗ ಬಂಗಾರಪೇಟೆಯ ತಾಲೂಕು ಕಚೇರಿಯ ತಹಶೀಲ್ದಾರ್ ದಯಾನಂದ್ ತನ್ನ ಇಡೀ ಕಚೇರಿಯನ್ನು ಕನ್ನಡಮವಾಗಿಸಿದ್ದಾರೆ.

ತಾಲೂಕು ಕಚೇರಿಗೆ ಕಾಲಿಡುತ್ತಿದ್ದಂತೆ ಸ್ವಾಗತಿಸುತ್ತವೆ ಕನ್ನಡದ ಫಲಕಗಳು: ಬಂಗಾರಪೇಟೆ ತಾಲೂಕು ಕಚೇರಿಯ ಒಳಗೆ ಕಾಲಿಟ್ಟರೆ ಸಾಕು ಹೊರಗಿನ ಆವರಣದಿಂದ ಹಿಡಿದು ಒಳಗಿನ ಎಲ್ಲಾ ವಿಭಾಗಗಳಲ್ಲಿ ಕನ್ನಡದ ನಾಮಫಲಕಗಳು ಗಮನ ಸೆಳೆಯುತ್ತವೆ. ಸುಂದರ ಹಾಗೂ ಸ್ವಚ್ಛವಾದ ವಾತಾವರಣ ಜೊತೆಗೆ ಮರ ಗಿಡಗಳನ್ನು ಹಾಕಿ ಬಂದ ಜನರಿಗೆ ನೆರಳಲ್ಲಿ ಕುಳಿತುಕೊಳ್ಳುವಂತೆ ನಿರ್ಮಾಣ ಮಾಡಿದ್ದಾರೆ. ಕನ್ನಡ ಅಭಿಮಾನಿಯಾಗಿರುವ ತಹಶೀಲ್ದಾರ್ ದಯಾನಂದ್ ಕರ್ನಾಟಕದಲ್ಲಿ ಎಂದಿಗೂ ಕನ್ನಡಕ್ಕೇ ಸಾರ್ವಭೌಮತ್ವ ಇರಬೇಕು ಎನ್ನುತ್ತಾರೆ.

ಕಚೇರಿಯ ಒಳಗೂ ಜನರಿಗೆ ದಾರಿ ತೋರಿಸುತ್ತವೆ ಕನ್ನಡ ಫಲಕಗಳು: ತಾಲೂಕು ಕಚೇರಿಯ ಒಳಗೂ ಅಷ್ಟೇ, ಇಲ್ಲಿಗೆ ಬರುವ ಜನರಿಗೆ ಯಾವ ವಿಭಾಗ ಎಲ್ಲಿದೆ, ತಮಗೆ ಎಲ್ಲಿ ಕೆಲಸ ಆಗಬೇಕು ಯಾರ ಬಳಿ ಕೆಲಸ ಆಗಬೇಕು ಎಂದು ಜನರಿಗೆ ಗೊಂದಲವಾಗದಂತೆ ಪ್ರತಿಯೊಂದನ್ನೂ ಕನ್ನಡದಲ್ಲೇ ನಾಮ ಫಲಕ ಬರೆಸಿದ್ದಾರೆ. ಕಟ್ಟಡದ ಮೊಲದ ಮಹಡಿಯಲ್ಲಿ ಯಾವೆಲ್ಲಾ ಅಧಿಕಾರಿಗಳು ಸಿಗುತ್ತಾರೆ? ಕೆಳ ಮಹಡಿಯಲ್ಲಿ ಯಾರು ಸಿಗುತ್ತಾರೆ? ಹೀಗೆ ಎಲ್ಲಾ ಮಾಹಿತಿ ತಾಲೂಕು ಕಚೇರಿ ಪ್ರವೇಶ ಮಾಡುವ ಜನರಿಗೆ ಕನ್ನಡದ ಬರವಣಿಗೆಗಳು ಮಾಹಿತಿ ನೀಡಿ ಅವರನ್ನು ಸಂಬಂಧ ಪಟ್ಟ ಅಧಿಕಾರಿ ಬಳಿಗೆ ಕರೆದುಕೊಂಡು ಹೋಗುತ್ತವೆ.

ನ್ಯಾಯಾಲಯದ ಸಭಾಂಗಣಕ್ಕೆ ಅಂಬೇಡ್ಕರ್ ಹೆಸರು: ತಹಶೀಲ್ದಾರ್ ಅವರ ನ್ಯಾಯಾಲಯದ ಸಭಾಂಗಣಕ್ಕೆ ಅಂಬೇಡ್ಕರ್ ಅವರ ನೆನಪಿನಲ್ಲಿ ಭೀಮ ಸಭಾಂಗಣ ಎಂದು ಹೆಸರಿಟ್ಟು ಸಭಾಂಗಣದಲ್ಲಿ ಬೃಹತ್ತಾದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಹಾಕಿದ್ದಾರೆ. ಈ ಮೂಲಕ ಸಂವಿಧಾನ ಶಿಲ್ಪಿಗೂ ವಿಶೇಷ ಗೌರವ ನೀಡಿದ್ದಾರೆ. ಇದು ಸ್ಥಳೀಯ ಕನ್ನಡಾಭಿಮಾನಿಗಳು ಹಾಗೂ ಕನ್ನಡ ಮನಸ್ಸುಗಳಿಗೆ ಕನ್ನಡ ಹೋರಾಟಗಾರರ ಪ್ರಶಂಸೆಗೆ ಕಾರಣವಾಗಿದೆ.

ವರದಿ: ರಾಜೇಂದ್ರ ಸಿಂಹ

ಇದನ್ನೂ ಓದಿ

ಕೆನಡಾದ ಮಾರ್ಕಾಮ್‌ನಲ್ಲಿ ಸರ್ದಾರ್ ಪಟೇಲ್ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಇಂದು ರಾತ್ರಿ 9ಕ್ಕೆ ಮೋದಿ ಭಾಷಣ

‘ಚಿಕ್ಕ ವಯಸ್ಸಿನಲ್ಲೇ ಅಪ್ಪು ಸೂಪರ್​ ಸ್ಟಾರ್​’: ತಮ್ಮನ ನೆನಪುಗಳನ್ನು ಮತ್ತೆ ಮೆಲುಕು ಹಾಕಿದ ಶಿವಣ್ಣ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?