ಶಂಕಿತ ಉಗ್ರರಾದ ಮಾಜ್, ಯಾಸೀನ್ ಜೊತೆ ಸಂಪರ್ಕ ಹೊಂದಿದ್ದ ಶಬ್ಬೀರ್ ಅರೆಸ್ಟ್: ಮತ್ತಷ್ಟು ಚುರುಕುಗೊಂಡ ತನಿಖೆ
ಗಂಗಾವತಿಯ ಬನ್ನಿಗಿಡ ಕ್ಯಾಂಪ್ನಲ್ಲಿ ಹೋಲ್ ಸೇಲ್ ಹಣ್ಣಿನ ಅಂಗಡಿ ಇಟ್ಟುಕೊಂಡಿದ್ದ ಆರೋಪಿ ಹಣ್ಣು ವ್ಯಾಪಾರದ ನೆಪದಲ್ಲಿ ಶಂಕಿತರೊಂದಿಗೆ ಸಂಪರ್ಕ ಹೊಂದಿದ್ದ ಅನುಮಾನ ವ್ಯಕ್ತವಾಗಿದೆ.
ಕೊಪ್ಪಳ: ಶಂಕಿತ ಉಗ್ರರಾದ ಮಾಜ್, ಯಾಸೀನ್ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಉಗ್ರರ ಜೊತೆ ಸಂಪರ್ಕ ಹೊಂದಿದ್ದ ಶಬ್ಬೀರ್ನನ್ನು ಶಿವಮೊಗ್ಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಆರೋಪಿ ಶಬ್ಬೀರ್ ಅರೆಸ್ಟ್ ಆಗಿದ್ದಾನೆ. ಗಂಗಾವತಿಯ ಬನ್ನಿಗಿಡ ಕ್ಯಾಂಪ್ನಲ್ಲಿ ಹೋಲ್ ಸೇಲ್ ಹಣ್ಣಿನ ಅಂಗಡಿ ಇಟ್ಟುಕೊಂಡಿದ್ದ ಆರೋಪಿ ಹಣ್ಣು ವ್ಯಾಪಾರದ ನೆಪದಲ್ಲಿ ಶಂಕಿತರೊಂದಿಗೆ ಸಂಪರ್ಕ ಹೊಂದಿದ್ದ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಶಂಕಿತ ಉಗ್ರನ ಬಂಧನಕ್ಕೆ ಸಂಬಂಧಿಸಿ ಗಂಗಾವತಿ ಪಟ್ಟಣದಲ್ಲಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿದ್ದು, ಇನ್ನೂ ಕೆಲವು ಶಂಕಿತ ಉಗ್ರರು ಇರುವ ಅನುಮಾನ ಇದೆ. ಶಂಕಿತ ಉಗ್ರ ಬಂಧನದಿಂದ ಜನರು ಭಯಭೀತರಾಗಿದ್ದಾರೆ. ಉನ್ನತ ತನಿಖಾ ತಂಡ ತನಿಖೆ ನಡೆಸಬೇಕು. ಶಾಂತಿ ಕದಡುವ ನಿಟ್ಟಿನಲ್ಲಿ ದುಷ್ಕೃತ್ಯ ಎಸಗುವ ಸಾಧ್ಯತೆ ಇದೆ. ಪೊಲೀಸ್ ಇಲಾಖೆ ವಿಶೇಷ ಕಾರ್ಯಾಚರಣೆ ಮಾಡಬೇಕು. ರಾಷ್ಟ್ರೀಯ ತನಿಖಾ ದಳದಿಂದ ಸಮಗ್ರ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
ಶಿವಮೊಗ್ಗ TO ಪಾಕಿಸ್ತಾನ.. ಬಂಧಿತರಿಗೆ ಪಾಕ್ ಲಿಂಕ್?
ಶಿವಮೊಗ್ಗದಲ್ಲಿ ಬಂಧಿತರಾದ ಶಂಕಿತ ಉಗ್ರರ ತನಿಖೆ ತೀವ್ರಗೊಂಡಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು ಮತ್ತು ದೆಹಲಿಯಿಂದ ಬಂದಿರೋ RAW ಅಧಿಕಾರಿಗಳು ಶಂಕಿತರ ವಿಚಾರಣೆ ನಡೆಸಿದ್ದಾರೆ. ಕೆಲ ದಿನಗಳ ಹಿಂದೆ ಶಂಕಿತರಾದ ಮಾಜ್ ಮತ್ತು ಸೈಯದ್ ಯಾಸೀನ್ ಮೊಬೈಲ್ ಹುಡುಕಾಡಿದಾಗ ಪಾಕಿಸ್ತಾನದ ಲಿಂಕ್ ಇರೋ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಇದನ್ನೂ ಓದಿ: Ghulam Nabi Azad: ಜಮ್ಮು ಕಾಶ್ಮೀರದಲ್ಲಿ ಇಂದೇ ಘೋಷಣೆಯಾಗುತ್ತಾ ಗುಲಾಂ ನಬಿ ಆಜಾದ್ ಹೊಸ ರಾಜಕೀಯ ಪಕ್ಷ?
ಶಂಕಿತ ಉಗ್ರ ಯಾಸೀನ್‌ಗೆ ಪಾಕಿಸ್ತಾನದ ಟೆರರ್ ಲಿಂಕ್ ಇತ್ತಾ ಅನ್ನೋ ಅನುಮಾನ ಬಂದಿತ್ತು. ಯಾಕಂದ್ರೆ, ಬಂಧಿತ ಯಾಸೀನ್ ಪಾಕ್‌ಗೆ ಹೋಗಿ ಬಂದಿರುವ ಶಂಕೆ ವ್ಯಕ್ತವಾಗಿದ್ದು, ಮೊಬೈಲ್ ಪರಿಶೀಲಿಸಿದಾಗ ಸ್ಫೋಟಕ ಸಂಗತಿ ಬಹಿರಂಗವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಇದೇ ಯಾಸೀನ್ ಪಾಕ್ ಬಗ್ಗೆಯೇ ಹೆಚ್ಚಾಗಿ ಸರ್ಚಿಂಗ್ ಮಾಡಿದ್ದ. ಹೀಗಾಗಿ ಯಾಸೀನ್ ಪಾಕಿಸ್ತಾನಕ್ಕೆ ಹೋಗಿದ್ದೆ ಆಗಿದ್ರೆ, ಯಾವ ಉದ್ದೇಶಕ್ಕೆ ಹೋಗಿದ್ದ. ಪಾಕಿಸ್ತಾನದಲ್ಲಿ ಯಾರನ್ನಾದ್ರೂ ಭೇಟಿಯಾಗಿದ್ನಾ ಅನ್ನೋದರ ಬಗ್ಗೆ ತನಿಖೆ ನೆಡಸಲಾಗ್ತಿದೆ.
ಶಂಕಿತ ಉಗ್ರರಾದ ಮಾಜ್ ಮತ್ತು ಯಾಸೀನ್ ಮೊಬೈಲ್ ಶೋಧಿಸಿದಾಗ ಕೇವಲ ವಿದೇಶಿ ಆ್ಯಪ್‌ಗಳೇ ಇರೋದು ಕಂಡು ಬಂದಿದೆ. ಅಲ್ಲದೇ, ವಿದೇಶಿ ಸರ್ವರ್ ಹೊಂದಿದ್ದ ಆ್ಯಪ್‌ಗಳನ್ನೇ ಬಳಸುತ್ತಿದ್ದ ಶಂಕಿತರ ಮೊಬೈಲ್‌ನಲ್ಲಿ 12ಕ್ಕೂ ಹೆಚ್ಚು ಮೆಸೆಂಜರ್ ಆ್ಯಪ್‌ಗಳಿದ್ವು ಅನ್ನೋದು ಗೊತ್ತಾಗಿದೆ. ವೈರ್ ಮತ್ತು ಸಿಗ್ನಲ್ ಹೆಸರಿನ ಆ್ಯಪ್‌ಗಳಿಂದಲೇ ಮಾಜ್ ಮತ್ತು ಯಾಸೀನ್ ವಿದೇಶದಲ್ಲಿರುವವರನ್ನ ಸಂಪರ್ಕ ಮಾಡ್ತಿದ್ರು. ಹೀಗಾಗಿ ಡಾರ್ಕ್‌ವೆಬ್ ಬಳಸುತ್ತಿದ್ರಾ ಅನ್ನೋ ಬಗ್ಗೆ ಪೊಲೀಸರು ತನಿಖೆ ನಡೆಸ್ತಿದ್ದಾರೆ.
ಬೆಂಕಿಪೊಟ್ಟಣದ ಮದ್ದಿನಿಂದ್ಲೇ ಬಾಂಬ್ ಟ್ರಯಲ್ ಬ್ಲಾಸ್ಟ್!
ಈ ಆರೋಪಿಗಳು ಬಾಂಬ್ ಟ್ರಯಲ್ ಬ್ಲಾಸ್ಟ್‌ಗೆ ಸ್ಫೋಟಕ ಮದ್ದು ಸಿಗದಿದ್ದಕ್ಕೆ ಬೆಂಕಿ ಪೊಟ್ಟಣದ ಮದ್ದನ್ನೇ ಬಳಸಿದ್ರಂತೆ. ಇದಕ್ಕಾಗಿ ಶಿವಮೊಗ್ಗದ ಗಾಂಧಿ ಬಜಾರ್‌ನಲ್ಲಿರೋ ರಾಮದೇವ ಪ್ರಾವಿಜನ್ ಸ್ಟೋರ್ ಹೋಗಿದ್ದ ಯಾಸೀನ್ ಬೆಂಕಿಪೊಟ್ಟಣ ಖರೀದಿಸಿದ್ದನಂತೆ. ಈ ಪ್ರಾವಿಜನ್ ಸ್ಟೋರ್‌ಗೆ ಕರೆತಂದು ಪೊಲೀಸರು ಮಹಜರು ನಡೆಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:09 am, Mon, 26 September 22